BBK 12 Winner Name: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗಿಲ್ಲಿ ನಟ ಅವರು ಟ್ರೋಫಿ ಗೆಲ್ಲಲಿ, ಬಿಡಲಿ ಅವರ ಮುಂದಿನ ಜೀವನ ಚೆನ್ನಾಗಿರುವ ಆದಾಯ ಹುಡುಕಿಕೊಂಡು ಬಂದಾಯ್ತು. ಹಾಗಾದರೆ ಏನದು?

'ಬಿಗ್ ಬಾಸ್ ಕನ್ನಡ ಸೀಸನ್ 12' ರಿಯಾಲಿಟಿ ಶೋ ಗ್ರಾಂಡ್ ಫಿನಾಲೆಗೆ ಒಂದೇ ವಾರ ಬಾಕಿ ಉಳಿದಿದೆ. ಆರಂಭದ ಮೂರು ವಾರಗಳಲ್ಲಿ ದೊಡ್ಮನೆಯಲ್ಲಿದ್ದವರಲ್ಲಿ ಗಿಲ್ಲಿ ನಟ ಬೆಸ್ಟ್‌, ಟ್ರೋಫಿ ಗೆಲ್ಲುವ ಸಾಧ್ಯತೆ ಇದೆ ಎಂಬ ಡೌಟ್‌ ಬಂದಿತ್ತು. ಇತ್ತೀಚೆಗಂತೂ ಗಿಲ್ಲಿ ನಟ ಅವರು ಒನ್‌ ಮ್ಯಾನ್‌ ಶೋ ಎನ್ನೋ ಥರ ಬಿಗ್‌ ಬಾಸ್‌ ಮನೆಯಲ್ಲಿದ್ದರು.

ಗಿಲ್ಲಿ ನಟನ ಜನಪ್ರಿಯತೆ ಹೆಚ್ಚಾಯ್ತು!

ಬಹುತೇಕರು ಗಿಲ್ಲಿ ನಟ ಅವರೇ ಬಿಗ್‌ ಬಾಸ್‌ ಗೆಲ್ಲಬಹುದು ಎನ್ನುತ್ತಿದ್ದಾರೆ. ಈ ಬಗ್ಗೆ ಹೆಚ್ಚು ನಿರೀಕ್ಷೆಗಳಿವೆ. ಇದರ ಮಧ್ಯೆಯೇ, ಗಿಲ್ಲಿ ನಟನ ಜನಪ್ರಿಯತೆ, ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಮತ್ತು ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಈ ಮಧ್ಯೆ ಅವರು ದರ್ಶನ್‌ ತೂಗುದೀಪ ಅವರ ‘ದಿ ಡೆವಿಲ್’‌ ಸಿನಿಮಾದಲ್ಲಿ ನಟಿಸಿದ್ದು ಕೂಡ ಗೊತ್ತಾಯ್ತು.

ಜನರ ಮನಸ್ಸು ಗೆದ್ದರು

ಬಿಗ್‌ ಬಾಸ್‌ ಎನ್ನುವ ಅತಿ ದೊಡ್ಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಗಿಲ್ಲಿ ನಟ ಅವರಿಗೆ ಅವಕಾಶಗಳು ಹೆಚ್ಚಾಗಿವೆ, ಸೋಶಿಯಲ್‌ ಮೀಡಿಯಾ ಫಾಲೋವರ್ಸ್ ಜೊತೆಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿ ಪಡೆಯುತ್ತಾರೋ ಇಲ್ಲವೋ ಅಥವಾ ಶೋ ಗೆಲ್ಲಲಿ, ಬಿಡಲಿ, ಆದರೆ ಒಂದು ಕಡೆ ಜನರ ಮನಸ್ಸನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಅವರ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಮೂಲಕವೇ ಹೆಚ್ಚು ಹಣವನ್ನು ಗಳಿಸಬಹುದಾಗಿದೆ.

ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಹೆಚ್ಚಳ

ಬಿಗ್ ಬಾಸ್‌ ಶೋ ಹೋಗುವ ಮೊದಲು ಗಿಲ್ಲಿಗೆ ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ ಫಾಲೋವರ್ಸ್ ಇದ್ದರು. ಈಗ ಅದು 10 ಲಕ್ಷಕ್ಕೆ (ಮಿಲಿಯನ್) ಏರಿಕೆಯಾಗಿದೆ. ಒಂದೇ ದಿನ ಗಿಲ್ಲಿ ಅವರಿಗೆ 10 ಸಾವಿರ ಫಾಲೋವರ್ಸ್‌ ಬಂದಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಕೂಡ ಮೂಡಿದೆ. ಅಶ್ವಿನಿ ಅವರ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಇದ್ದಕ್ಕಿದ್ದಂತೆ ಎರಡು ಸಾವಿರ ಕಡಿಮೆ ಆಗಿತ್ತು. ಇವೆಲ್ಲ ಫೇಕ್‌ ಅಕೌಂಟ್‌ಗಳ ಮಾಯೆಯಿರಬಹುದಾ ಎಂಬ ಪ್ರಶ್ನೆ ಕೂಡ ಕಾಡಿದೆ.

ಇನ್‌ಸ್ಟಾಗ್ರಾಮ್‌ನಿಂದ ಬರುವ ಹಣ

ಇನ್ನುಮುಂದೆ ಗಿಲ್ಲಿ ನಟ ಇನ್‌ಸ್ಟಾಗ್ರಾಂನಲ್ಲಿಯೇ 'ಬಿಗ್ ಬಾಸ್' ಬಹುಮಾನದ ಮೊತ್ತಕ್ಕಿಂತ ಜಾಸ್ತಿ ಗಳಿಸಬಹುದು ಎನ್ನಲಾಗುತ್ತಿದೆ. ಗಿಲ್ಲಿ ಈಗಾಗಲೇ ನಟಿಸಿದ 'ಸೂಪರ್ ಹಿಟ್', 'ಸರಕಾರಿ ಶಾಲೆ ಎಚ್' ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಎಷ್ಟೋ ಜನರು ಸೋಶಿಯಲ್‌ ಮೀಡಿಯಾ ಖಾತೆಯಿಂದಲೇ ತಿಂಗಳಿಗೆ ಎರಡು ಲಕ್ಷ ರೂಪಾಯಿ ಹಣ ಸಂಪಾದನೆಯನ್ನು ಮಾಡುತ್ತಿದ್ದಾರೆ. ಈಗ ಬಿಗ್‌ ಬಾಸ್‌ ಮೂಲಕ ಜನಪ್ರಿಯತೆ ಹೆಚ್ಚಿಕೊಂಡ ಗಿಲ್ಲಿ ನಟನಿಗೆ ಈಗ ಇನ್‌ಸ್ಟಾಗ್ರಾಮ್‌ ದೊಡ್ಡ ಬೋನಸ್‌ ಎನ್ನಬಹುದು.

ಅವಕಾಶಗಳು ಹೆಚ್ಚಾಗಲಿವೆ

ಬಿಗ್ ಬಾಸ್ ಬಳಿಕ ಗಿಲ್ಲಿ ನಟ ಅವರಿಗೆ ಸಿನಿಮಾ, ಧಾರಾವಾಹಿ, ವೆಬ್ ಸಿರೀಸ್ ಮತ್ತು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಅವಕಾಶ ಬರುತ್ತವೆ. ಇದರ ಮಧ್ಯೆ ಅವರು ಶಾಪ್‌ ಉದ್ಘಾಟನೆ, ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದರೆ ಒಂದು ದಿನಕ್ಕೆ ಇಂತಿಷ್ಟು ಎಂದು ಸಂಭಾವನೆ ಕೂಡ ಕೊಡುತ್ತಾರೆ. ಇದರ ಜೊತೆಗೆ ಕೆಲವು ಬ್ರಾಂಡ್ ಎಂಡೋರ್ಸ್‌ಮೆಂಟ್ ಕೂಡ ಗಿಲ್ಲಿ ಜೊತೆ ಟೈ ಅಪ್‌ ಮಾಡಿಕೊಳ್ಳುತ್ತವೆ. ಗಿಲ್ಲಿ ನಟ ಬಿಗ್ ಬಾಸ್‌ ಶೋ ಗೆದ್ದರೆ 50 ಲಕ್ಷ ರೂ. ನಗದು ಸಿಗುವುದು, ಅದರಲ್ಲಿ ಒಂದಿಷ್ಟು Tax, Gst ಎಂದು ಕಟ್‌ ಆಗುತ್ತದೆ. ಅದಾದ ಬಳಿಕ ಒಂದು ಕಾರ್‌ ಕೂಡ ಸಿಗುವುದು. ಇನ್‌ಸ್ಟಾಗ್ರಾಂನಲ್ಲಿ ಎಷ್ಟು ಫಾಲೋವರ್ಸ್‌ ಇದ್ದಾರೆ ಎಂಬುದರ ಮೇಲೆ ಬ್ಯಾಂಡ್ ಎಂಡೋರ್ಸ್‌ಮೆಂಟ್‌ ಹಣ ನೀಡುವುದು.

ಎಷ್ಟು ಹಣ ಸಿಗುತ್ತದೆ?

ಈಗ ಗಿಲ್ಲಿಗೆ 1 ಮಿಲಿಯನ್ ಫಾಲೋವರ್ಸ್ ಇರುವ ಕಾರಣಕ್ಕೆ, ಅವರ ಪ್ರತಿ ಬ್ರಾಂಡ್ ಎಂಡೋರ್ಸ್‌ಮೆಂಟ್‌ಗೆ 2 ರಿಂದ 15 ಲಕ್ಷ ರೂ. ಸಿಕ್ಕಿರೂ ಆಶ್ಚರ್ಯವಿಲ್ಲ. ಇದರ ಜೊತೆಗೆ ಬಿಗ್‌ ಬಾಸ್‌ ಮುಗಿದ್ಮೇಲೂ ಕೂಡ ಆ ಕ್ರೇಜ್‌ ಉಳಿಸಿಕೊಂಡು ಹೋಗೋದು ಮುಂದಿರುವ ಸವಾಲು ಆಗಿದೆ. ಒಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ ಇಂತಿಷ್ಟು ಎಂದು ಕೂಡ ಹಣ ಕೊಡುತ್ತಾರೆ.