- Home
- Entertainment
- Sandalwood
- ಸ್ಯಾಂಡಲ್‌ವುಡ್ ಸ್ಟಾರ್ ನಟರೆಲ್ಲಾ ಒಂದೇ ಫ್ರೇಮ್‌ನಲ್ಲಿ ಇದ್ರೆ ಹೇಗಿರತ್ತೆ? ಫ್ಯಾನ್ಸ್ ಕನಸು ನನಸಾದ ಕ್ಷಣದ ಫೋಟೋಗಳು
ಸ್ಯಾಂಡಲ್‌ವುಡ್ ಸ್ಟಾರ್ ನಟರೆಲ್ಲಾ ಒಂದೇ ಫ್ರೇಮ್‌ನಲ್ಲಿ ಇದ್ರೆ ಹೇಗಿರತ್ತೆ? ಫ್ಯಾನ್ಸ್ ಕನಸು ನನಸಾದ ಕ್ಷಣದ ಫೋಟೋಗಳು
ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಿವರಾಜ್ಕುಮಾರ್, ಪುನೀತ್ ರಾಜ್‌ಕುಮಾರ್, ಯಶ್, ಸುದೀಪ್, ದರ್ಶನ್, ಮತ್ತು ಉಪೇಂದ್ರರಂತಹ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಟಾರ್ ನಟರಿವರು
ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಎಂಬ ಮಾತು ಬಂದಾಗ ಹಲವರ ಹೆಸರು ಕಣ್ಮುಂದೆ ಬರುವುದು ಉಂಟು. ಕಳೆದೊಂದು ದಶಕದ ಮಾತಿನಲ್ಲಿ ಹೇಳುವುದಾದರೆ, ಶಿವರಾಜ್ಕುಮಾರ್ ಪುನೀತ್ ರಾಜ್, ಯಶ್, ಸುದೀಪ್, ದರ್ಶನ್, ಉಪೇಂದ್ರ ಇವರ ಹೆಸರು ಮುನ್ನೆಲೆಗೆ ಬರುವುದು.
ಒಟ್ಟಿಗೇ ಸಿಗಲಾರರು
ಇವರ ಪೈಕಿ ಕೆಲವು ಸ್ಟಾರ್ ನಟರು ಒಟ್ಟಿಗೇ ಕೆಲಸ ಮಾಡಿರಬಹುದು. ಆದರೆ ಒಂದೇ ಫ್ರೇಮ್‌ನಲ್ಲಿ ಎಲ್ಲಾ ನಟರನ್ನು ನೋಡುವುದು ಕಷ್ಟವೇ ಎನ್ನಬಹುದು. ಕೆಲವು ಮದುವೆ ಸಮಾರಂಭಗಳಲ್ಲಿ ಅಲ್ಲಿ ಅಲ್ಲಿ ಕಾಣಿಸಿಕೊಂಡರೂ ಎಲ್ಲರೂ ಒಟ್ಟಿಗೇ ಇರುವುದು ಕಷ್ಟವೇ.
ಕನಸು ಸಾಕಾರ
ಹೇಳಿ ಕೇಳಿ ಇದು ಎಐ ಯುಗ. ನಿಜ ಜೀವನದಲ್ಲಿ ಸಾಕಾರ ಮಾಡಲಾಗದೇ ಇರುವುದನ್ನೆಲ್ಲಾ ಈ ಕೃತಕ ಬುದ್ಧಿಮತ್ತೆ ಸಾಕಾರಗೊಳಿಸುತ್ತದೆ. ಯಾರನ್ನು ಹೇಗೆ ಬೇಕಾದರೂ ಬಿಂಬಿಸುತ್ತದೆ.
ಎಲ್ಲಾ ಸ್ಟಾರ್ ನಟರೂ ಒಟ್ಟಿಗೇ
ಇದೀಗ ಮೇಲೆ ಹೇಳಿದ ಎಲ್ಲಾ ನಟರ ಅಭಿಮಾನಿಗಳ ಕನಸನ್ನು ಸಾಕಾರಗೊಳಿಸುವಂಥ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿದ್ಧಾರ್ಥ್ ಎಡಿಟ್ಸ್ ಎನ್ನುವವರು ಶೇರ್ ಮಾಡಿರುವ ಈ ವಿಡಿಯೋದಲ್ಲಿ ಈ ಎಲ್ಲಾ ಸ್ಟಾರ್ ನಟರನ್ನು ಒಟ್ಟಿಗೇ ಕಾಣಬಹುದಾಗಿದೆ.
ಒಂದೇ ಫ್ರೇಮ್‌ನಲ್ಲಿ
ಒಂದು ಫ್ರೇಮ್‌ನಲ್ಲಿ ಎಲ್ಲರೂ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತಿದ್ದರೆ, ಮತ್ತೊಂದು ಫ್ರೇಮ್‌ನಲ್ಲಿ ಪುನೀತ್ ರಾಜ್ ಮೊಬೈಲ್ ಹಿಡಿದಿದ್ದು, ಉಳಿದವರು ಸುಮ್ಮನೇ ನೋಡುತ್ತಿದ್ದಾರೆ.
ವಿವಿಧ ಸುಂದರ ದೃಶ್ಯಗಳು
ಇನ್ನೊಂದರಲ್ಲಿ ಟೀ ಸೇವನೆ ಮಾಡುತ್ತಿದ್ದಾರೆ, ಮತ್ತೊಂದರಲ್ಲಿ ಡಿನ್ನರ್ ಮಾಡುತ್ತಿದ್ದಾರೆ. ಮತ್ತೆ ಕ್ಯಾಂಪ್ ಫೈರ್ನಲ್ಲಿ ಒಂದು ದೃಶ್ಯ, ನದಿ ತೀರದಲ್ಲಿ ಇನ್ನೊಂದು ದೃಶ್ಯ, ಒಂದರಲ್ಲಿ ಓಡಿ, ಇನ್ನೊಂದರಲ್ಲಿ ಸೈಕ್ಲಿಂಗ್ ಹೀಗೆ ಹಲವಾರು ಬಗೆಯನ್ನು ಇದರಲ್ಲಿ ಕಾಣಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

