- Home
- Entertainment
- TV Talk
- Bigg Boss ಮನೆಯಲ್ಲಿ ಮದ್ವೆ! ಲೇಡೀಸ್ ಮೇಕಪ್ರೂಮ್ಗೆ ನುಗ್ಗಿ ಹೀಗೆಲ್ಲಾ ಸೀಕ್ರೇಟ್ ರಿವೀಲ್ ಮಾಡೋದಾ ಗಿಲ್ಲಿ ನಟ?
Bigg Boss ಮನೆಯಲ್ಲಿ ಮದ್ವೆ! ಲೇಡೀಸ್ ಮೇಕಪ್ರೂಮ್ಗೆ ನುಗ್ಗಿ ಹೀಗೆಲ್ಲಾ ಸೀಕ್ರೇಟ್ ರಿವೀಲ್ ಮಾಡೋದಾ ಗಿಲ್ಲಿ ನಟ?
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟ ತಮ್ಮ ಕಾಮಿಡಿಯಿಂದಲೇ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಹುಡುಗಿಯರ ಮೇಕಪ್ ರೂಮ್ಗೆ ಎಂಟ್ರಿ ಕೊಟ್ಟು, ಮದುವೆಗೆ ರೆಡಿಯಾಗುವ ಬಗ್ಗೆ ಹಾಗೂ ಹುಡುಗರನ್ನು ಓರೆಗಣ್ಣಿನಿಂದ ನೋಡುವುದೇಕೆ ಎಂದು ಕಾಲೆಳೆದಿದ್ದಾರೆ.

ಗಿಲ್ಲಿ ಕಾಮಿಡಿ
ಬಿಗ್ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ನಟನ ಕಾಮಿಡಿ ಬಲು ಜೋರಾಗಿಯೇ ನಡೆಯುತ್ತಿದೆ. ಕೆಲವೊಮ್ಮೆ ಸೀರಿಯಸ್ ಸಂದರ್ಭಗಳಲ್ಲಿಯೂ ತಮಾಷೆ ಮಾಡಿ ಕೆಲವು ಸಹ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗುವುದೂ ಇದ್ದರೆ, ಇವರ ಕಾಮಿಡಿಯಿಂದ ಬಿಗ್ಬಾಸ್ ಮನೆ ಅಷ್ಟೇ ಖುಷಿಯಾಗಿರುವುದೂ ಉಂಟು.
ಕಾಮಿಡಿಯಿಂದಲೇ ರಂಜನೆ
ಒಟ್ಟಿನಲ್ಲಿ ಕಾಮಿಡಿಯಿಂದಲೇ ಎಲ್ಲರನ್ನೂ ರಂಜಿಸುತ್ತಾ, ಬಿಗ್ಬಾಸ್ ವೀಕ್ಷಕರ ಮನಸ್ಸಿನಲ್ಲಿ ಇವರೇ ವಿನ್ನರ್ ಎನ್ನುವಷ್ಟರ ಮಟ್ಟಿಗೆ ಗಿಲ್ಲಿ ನಟ (Bigg Boss 12 Winner) ಎನ್ನುವಷ್ಟರ ಮಟ್ಟಗೆ ಛಾಪು ಮೂಡಿಸಿದ್ದಾರೆ.
ಮದುವೆಗೆ ರೆಡಿ!
ಇದೀಗ ಅದೇ ತಮಾಷೆಯ ತುಣುಕೊಂದನ್ನು ಕಲರ್ಸ್ ವಾಹಿನಿ ಶೇರ್ ಮಾಡಿಕೊಂಡಿದೆ. ಇದರಲ್ಲಿ ಮದುವೆ ಮನೆಗೆ ಹುಡುಗಿಯರು ರೆಡಿ ಆಗ್ತಿರುವಂತೆ ಸೀನ್ ಕ್ರೀಯೇಟ್ ಮಾಡಿದ್ದಾರೆ ಗಿಲ್ಲಿ ನಟ.
ಮೇಕಪ್ ರೂಮ್ಗೆ ಎಂಟ್ರಿ
ಹುಡುಗಿಯರ ಮೇಕಪ್ ರೂಮ್ಗೆ ಎಂಟ್ರಿ ಕೊಟ್ಟಿರೋ ಗಿಲ್ಲಿ, ಸಾಕು ಮಾಡಿ ಮೇಕಪ್. ಮದುವೆಯ ಧಾರೆಗೆ ಟೈಮ್ ಆಗ್ತಿದೆ. ಇನ್ನೂ ಮೇಕಪ್ ಮುಗಿದಿಲ್ವಾ ಎಂದಿದ್ದಾರೆ.
ಇಷ್ಟೆಲ್ಲಾ ಯಾಕೆ ಮೇಕಪ್
ಸೋದರತ್ತೆಗೆ ಇಷ್ಟೆಲ್ಲಾ ಮೇಕಪ್ ಯಾಕೆ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಸ್ಪಂದನಾ ನಾನೇ ಕಳಶ ಹಿಡಿಯೋದಲ್ವಾ ಅದಕ್ಕೆ ಎಂದಿದ್ದಾರೆ. ಸುಮ್ಮನಿರದ ಗಿಲ್ಲಿ ಹುಡುಗರು ನೋಡಲಿ ಅಂತಾನೇ ಮೇಕಪ್ ಮಾಡ್ಕೋತೀರಾ ಎಂದಿದ್ದಾರೆ. ಅದಕ್ಕೆ ಸ್ಪಂದನಾ ಹುಡುಗರು ನೋಡಲಿ ಅಂತ ಅಲ್ಲ, ನಮಗೋಸ್ಕರ ಮಾಡು ಮೇಕಪ್ ಮಾಡಿಕೊಳ್ಳೋದು ಎಂದಿದ್ದಾರೆ.
16 ಮಂದಿ ಲೈನ್ ಹೊಡೀತಾರೆ
ಅದಕ್ಕೆ ಗಿಲ್ಲಿ ನಟ, ಒಂದು ಹುಡುಗಿಗೆ 16 ಮಂದಿ ಲೈನ್ ಹೊಡೀತಾ ಇರ್ತಾರೆ ಪಾಪ. ಯಾರನ್ನು ನೋಡ್ಬೇಕು, ಯಾರನ್ನು ಬಿಡ್ಬೇಕು ಎಂದು ಕೆಲವು ಸಲ ಹುಡುಗಿಯರಿಗೂ ಗೊತ್ತಾಗಲ್ಲ ಎಂದು ಮೇಕಪ್ ಸೀಕ್ರೇಟ್ ರಿವೀಲ್ ಮಾಡಿದ್ದಾರೆ.
ಓರೆಗಣ್ಣು ಯಾಕೆ ಮತ್ತೆ?
ನೀವು ಹುಡುಗರು ನೋಡೋದು ಬೇಡ ಅಂತ ಮೇಕಪ್ ಮಾಡಿಕೊಂಡ್ರೆ ಓರೆಗಣ್ಣಿನಿಂದ ನೋಡೋದು ಯಾಕೆ ಮತ್ತೆ ಎಂದು ತಮಾಷೆ ಮಾಡುತ್ತಾ ಹುಡುಗಿಯರ ಕಾಲೆಳೆದಿದ್ದಾರೆ! ಸುಮ್ಮನೇ ಹುಡುಗರು ಚೇರುಪಾರು ಜೋಡಿಸಿಕೊಂಡು ಇಡ್ತಾ ಇದ್ರೂ ಸುಮ್ಮನೇ ಹೋಗೋದು ಬಿಟ್ಟು, ಓರೆಗಣ್ಣಿನಿಂದ ನೋಡೋದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

