- Home
- Entertainment
- ಸೂಪರ್ ಸ್ಟಾರ್ಸ್ಗೆ ತಟ್ಟಿದ ಮಳೆ ರೌದ್ರಾವತಾರ: ಅಮಿತಾಭ್, ಅಜಯ್ ದೇವಗನ್ ನೂರಾರು ಕೋಟಿ ಬಂಗ್ಲೆ ಜಲಾವೃತ
ಸೂಪರ್ ಸ್ಟಾರ್ಸ್ಗೆ ತಟ್ಟಿದ ಮಳೆ ರೌದ್ರಾವತಾರ: ಅಮಿತಾಭ್, ಅಜಯ್ ದೇವಗನ್ ನೂರಾರು ಕೋಟಿ ಬಂಗ್ಲೆ ಜಲಾವೃತ
ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ಅಜಯ್ ದೇವಗನ್ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಮನೆಗಳೂ ಜಲಾವೃತವಾಗಿವೆ.

ನಿಯಮ ಪಾಲಿಸಲೇಬೇಕು
ಮನೆಯನ್ನು ಕಟ್ಟುವಾಗ ಅದಕ್ಕೆ ಅದರದ್ದೇ ಆದ ನಿಯಮಗಳನ್ನು ಪಾಲಿಸಲೇಬೇಕು. ಮನೆಯ ಆಸು-ಪಾಸು ಹೇಗಿರಬೇಕು ಎಂಬ ನಿಯಮವೂ ಇದೆ, ಜೊತೆಗೆ ರಾಜಕಾಲುವೆ ಮೇಲೆ ಕಟ್ಟಲೇಬಾರದು ಎಂದು ಇದಾಗಲೇ ಪ್ರತಿಬಾರಿಯ ಮಳೆಗಾಲ ತೋರಿಸಿಕೊಡುತ್ತಲೇ ಇದೆ. ಇದರ ಹೊರತಾಗಿಯೂ ಸ್ಟಾರ್ ನಟರು, ರಾಜಕಾರಣಿಗಳು ಸೇರಿದಂತೆ ಸಾಮಾನ್ಯ ಜನರೂ ಈ ತಪ್ಪನ್ನು ಮಾಡುತ್ತಲೇ ಇರುತ್ತಾರೆ.
ಅಕ್ರಮ ಸಕ್ರಮ
ಅದರಲ್ಲಿಯೂ ಅಧಿಕಾರಿಗಳಿಗೆ ಒಂದಿಷ್ಟು ಲಂಚ ಕೊಟ್ಟರೆ ಅಕ್ರಮ ಎಲ್ಲವೂ ಸಕ್ರಮ ಆಗುತ್ತಿದೆ. ಆದರೆ ಪ್ರಕೃತಿಗೆ ಲಂಚ ಇಲ್ಲವಲ್ಲ, ಪ್ರಕೃತಿಯನ್ನು ವಿರೋಧಿಸಿ, ನಿಯಮವನ್ನು ಪಾಲನೆ ಮಾಡದೇ ಮನೆ ಕಟ್ಟಿದರೆ, ಪ್ರಕೃತಿ ಏನನ್ನೂ ನೋಡುವುದಿಲ್ಲ. ತನ್ನ ಕೆಲಸ ತಾನು ಮಾಡಿಬಿಡುತ್ತದೆ. ಅದೇ ರೀತಿ, ಇದೀಗ ಮುಂಬೈನ ಮಳೆ 50 ಕೋಟಿ ಬೆಲೆಬಾಳುವ ಅಮಿತಾಭ್ ಬಚ್ಚನ್ ಮತ್ತು ಅಜಯ್ ದೇವಗನ್ ಅವರ ಮನೆಯೊಳಕ್ಕೆ ನುಗ್ಗಿದ್ದು, ತನ್ನ ಪ್ರಭಾವವನ್ನು ತೋರಿಸಿಬಿಟ್ಟಿದೆ!
ಮುಂಬೈನಲ್ಲಿ ಧಾರಾಕಾರ ಮಳೆ
ಇದಾಗಲೇ ಮುಂಬೈನಲ್ಲಿ ಮಳೆ ಜನಜೀವನವನ್ನು ಅಸ್ತವ್ಯಸ್ತ ಮಾಡಿಬಿಟ್ಟಿದೆ. ನೀರಿನ ಹರಿವು ಜನರ ದೈನಂದಿನ ಜೀವನವನ್ನು ಹೈರಾಣ ಮಾಡಿದೆ. ಮೊನ್ನೆ ಬುಧವಾರದ ಸುರಿದ ಧಾರಾಕಾರ ಮಳೆಗೆ ನಲುಗಿದ ಬಡ ಜೀವಗಳು ಅದೆಷ್ಟೋ. ಜೋಪಡಿಯಲ್ಲಿ, ಗುಡಿಸಲುಗಳಲ್ಲಿ ವಾಸವಾಗಿದ್ದವರ ಕಣ್ಣೀರು ಒಂದೆಡೆಯಾದರೆ, ಅದೇ ಇನ್ನೊಂದೆಡೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ 50 ಕೋಟಿಯ ಜನಕ್ ಮತ್ತು ಅಜಯ್ ದೇವಗನ್ ಅವರ ಶಿವಶಕ್ತಿ ಕೂಡ ಜಲಾವೃತವಾಗಿದೆ. ಪ್ರಸಿದ್ಧ ಸೆಲೆಬ್ರಿಟಿಗಳ ಮನೆಗಳ ಸ್ಥಿತಿ ಇಷ್ಟೊಂದು ಭೀಕರವಾಗಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ, ಮತ್ತು ಸಾರ್ವಜನಿಕರ ಸ್ಥಿತಿ ಏನು ಎಂದು ಜನರು ಪ್ರಶ್ನಿಸುವಂತಾಗಿದೆ.
50 ಕೋಟಿಯ ಮನೆ
ಇತ್ತೀಚೆಗೆ, ಸಾಮಾಜಿಕ ಮಾಧ್ಯಮದ ಪ್ರಭಾವಿಯೊಬ್ಬರು ಅಮಿತಾಭ್ ಬಚ್ಚನ್ ಅವರ "ಜನಕ್" ಬಂಗಲೆಗೆ ಭೇಟಿ ನೀಡಿ ಆ ಪ್ರದೇಶದ ಪ್ರಸ್ತುತ ಸ್ಥಿತಿಯನ್ನು ತೋರಿಸಿದರು. ಭಾರೀ ಮಳೆಯ ಸಮಯದಲ್ಲಿ, ಹಿರಿಯ ನಟನ ಮನೆ ಮೊಣಕಾಲುದ್ದ ನೀರು ಬಂದು, ಮಳೆನೀರು ಮನೆಯ ಒಳಗೆ ಹರಿಯುತ್ತಿರುವುದು ಕಂಡುಬಂದಿದೆ. "ಭಾರಿ ಮಳೆಯ ನಡುವೆ ಮಳೆನೀರು ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪ್ರಸಿದ್ಧ ಜುಹು ಬಂಗಲೆಗೆ ಪ್ರವೇಶಿಸಿದೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಶೇರ್ ಮಾಡಲಾಗಿದೆ. ಇಡೀ ಬಂಗಲೆ ನೀರಿನಿಂದ ತುಂಬಿದೆ. ಇದು ಅಮಿತಾಭ್ ಬಚ್ಚನ್ ಅವರ ಎರಡನೇ ಮನೆ.
ಅಜಯ್ ದೇವಗನ್ ಮನೆಯದ್ದೂ ಇದೇ ಸ್ಥಿತಿ
ಅದೇ ರೀತಿ ನಟ ಅಜಯ್ ದೇವಗನ್ ಅವರ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮನೆಗೂ ಇದೇ ಸ್ಥಿತಿ ಆಗಿದೆ. ಅಂದಹಾಗೆ ಅಮಿತಾಭ್ ಬಚ್ಚನ್ ಅವರ ಜುಹು ಬಂಗಲೆ "ಜನಕ್" ಪ್ರವಾಹಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಈ ಘಟನೆ ಹಿಂದೆಯೂ ಸಂಭವಿಸಿದೆ. ಬಹುಶಃ ನಿಯಮಾನುಸಾರ ಸೆಟ್ಬ್ಯಾಕ್ ಬಿಡದೇ ಇದ್ದರೆ, ರಾಜಕಾಲುವೆ ಮೇಲೆ ನಿರ್ಮಾಣವಾಗಿದ್ದರೆ, ಅಥವಾ ಸರಿಯಾದ ಸ್ಥಳದಲ್ಲಿ ಬಂಗ್ಲೆ ನಿರ್ಮಾಣವಾಗದೇ ಇದ್ದರೆ ಈ ರೀತಿ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ತಜ್ಞರು ಹೇಳೋದೇನು?
ಬಹುಶಃ ನಿಯಮಾನುಸಾರ ಸೆಟ್ಬ್ಯಾಕ್ ಬಿಡದೇ ಇದ್ದರೆ, ರಾಜಕಾಲುವೆ ಮೇಲೆ ನಿರ್ಮಾಣವಾಗಿದ್ದರೆ, ಅಥವಾ ಸರಿಯಾದ ಸ್ಥಳದಲ್ಲಿ ಬಂಗ್ಲೆ ನಿರ್ಮಾಣವಾಗದೇ ಇದ್ದರೆ ಈ ರೀತಿ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

