- Home
- Entertainment
- TV Talk
- 'ಕರ್ಣ'ನ ಹುಟ್ಟುಹಬ್ಬ: ಯುವತಿಯರ ಹೃದಯ ಕದ್ದ ಕಿರಣ್ ರಾಜ್ ವಯಸ್ಸೆಷ್ಟು? ನಟನ ರೋಚಕ ಲವ್ ಸ್ಟೋರಿ
'ಕರ್ಣ'ನ ಹುಟ್ಟುಹಬ್ಬ: ಯುವತಿಯರ ಹೃದಯ ಕದ್ದ ಕಿರಣ್ ರಾಜ್ ವಯಸ್ಸೆಷ್ಟು? ನಟನ ರೋಚಕ ಲವ್ ಸ್ಟೋರಿ
ಕಿರುತೆರೆ ನಟ ಕಿರಣ್ ರಾಜ್ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ಗೂಗಲ್ ಪ್ರಕಾರ 33ನೇ ವಸಂತಕ್ಕೆ ಕಾಲಿಟ್ಟಿರುವ ಅವರ ಹಿನ್ನೆಲೆ, ಮದುವೆಯ ಕುರಿತಾದ ಹಾಸ್ಯ ಪ್ರಸಂಗಗಳು ಮತ್ತು ನಿಜ ಜೀವನದಲ್ಲಿಯೂ ಅವರು 'ಕರ್ಣ'ನಾಗಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.

ಕರ್ಣನಿಗೆ ವಯಸ್ಸೆಷ್ಟು?
'ಕಿರಣ್ ರಾಜ್' ಎಂದರೆ ಬಹುತೇಕ ಜನರಿಗೆ ಅರ್ಥವಾಗಲಿಕ್ಕಿಲ್ಲ. ಆದರೆ ಕರ್ಣ ಸೀರಿಯಲ್ ನಾಯಕ ಎಂದರೆ ಸಾಕು, ಸೀರಿಯಲ್ ಪ್ರೇಮಿಗಳ ಅದರಲ್ಲಿಯೂ ಬಹುತೇಕ ಯುವತಿಯರ ಕಣ್ಣುಗಳು ಅರಳುತ್ತವೆ. ಕಿರುತೆರೆಯ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದು ಎನ್ನಿಸಿಕೊಂಡಿರುವ ನಟ ಕಿರಣ್ ರಾಜ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಗೂಗಲ್ ದಾಖಲೆಯ ಪ್ರಕಾರ, ಕಿರಣ್ ರಾಜ್ ಅವರು ಹುಟ್ಟಿದ್ದು 1993 ಜುಲೈ 5ರಂದು. ಗೂಗಲ್ ದಾಖಲೆಯನ್ನು ಪರಿಗಣನೆಗೆ ತೆಗೆದುಕೊಂಡೆ (ಕೆಲವೊಮ್ಮೆ ಗೂಗಲ್ನಲ್ಲಿ ತಪ್ಪಾಗಿಯೂ ತೋರಿಸುವುದು ಇದೆ!) ಕರ್ಣನಿಗೆ ಇಂದು 33ರ ಹುಟ್ಟುಹಬ್ಬದ ಸಂಭ್ರಮ. ಇವರ ಹುಟ್ಟುಹಬ್ಬಕ್ಕೆ ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ವಿಶೇಷವಾಗಿ ಶುಭಾಶಯ ಕೋರಿದೆ.
ನಟನ ಹಿನ್ನೆಲೆ
ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.
ರೋಚಕ ಲವ್ ಸ್ಟೋರಿ
ಇದೇ ವೇಳೆ ಕರ್ಣ ಉರ್ಫ್ ನಟ ಕಿರಣ್ ರಾಜ್ ಅವರ ಲವ್ ಸ್ಟೋರಿ ಕೂಡ ರೋಚಕವಾಗಿದೆ. ಕಿರಣ್ ರಾಜ್ ಅವರು ನಟಿಸಿರುವ ಸೀರಿಯಲ್ಗಳಲ್ಲಿ ಇಬ್ಬರಿಬ್ಬರು ನಾಯಕಿಯರು ಇರ್ತಾರೆ. ಕರ್ಣ ಸೀರಿಯಲ್ನಲ್ಲಿ ಕೂಡ ನಿತ್ಯಾ ಮತ್ತು ನಿಧಿ ಇದ್ದು, ಸದ್ಯ ನಿಧಿಯನ್ನು ಮದ್ವೆಯಾಗಿದ್ದಾರೆ. ಆದರೆ ರಿಯಲ್ ಲೈಫ್‌ನಲ್ಲಿ ಮಾತ್ರ ಕರ್ಣ ಅಂದ್ರೆ ಕಿರಣ್ ರಾಜ್ ಅವರ ಬ್ಯಾಚುಲರ್ ಆಗಿದ್ದು, ಮದುವೆ ಯಾವಾಗ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ.
ಮದುವೆಯ ಹಾಸ್ಯ
ಈ ಬಗ್ಗೆ ಹಿಂದೊಮ್ಮೆ ಸಂದರ್ಶನದಲ್ಲಿ ಹಾಸ್ಯದ ಘಟನೆಗಳನ್ನು ನೆನಪಿಸಿಕೊಂಡಿದ್ದರು ಕಿರಣ್ ರಾಜ್. ನನ್ನ ಮಗಳನ್ನು ಮದುವೆಯಾಗು ಎಂದು ಹಲವರು ಸತಾಯಿಸುವ ಕುರಿತು ಹೇಳಿಕೊಂಡಿದ್ದರು. ಶೂಟಿಂಗ್ ಸೆಟ್‌ನಲ್ಲಿ ಬರುವ ಕೆಲವರು ನನ್ನ ಮಗಳನ್ನು ಮದುವೆಯಾಗು ಎನ್ನುತ್ತಾರೆ. ನನ್ನ ಹಿಂದೆ ಮುಂದೆ ಗೊತ್ತಿರಲ್ಲ. ನಟನಾಗಿರುವ ಕಾರಣ ಹೀಗೆ ಹೇಳುತ್ತಾರೆ. ತಮ್ಮ ಮಗಳನ್ನು ಮದುವೆ ಮಾಡಿಸಲು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರೆ ನನ್ನ ಮೇಲೆ ಇಷ್ಟೊಂದು ಅಭಿಮಾನ ಇಟ್ಟಿದ್ದಾರೆ ಎನ್ನುವ ಖುಷಿಯಾಗುತ್ತದೆ ಎಂದಿದ್ದರು ಕಿರಣ್ ರಾಜ್.
ಲವ್ ಮ್ಯಾರೇಜೋ, ಅರೇಂಜೋ
ಲವ್ ಮ್ಯಾರೇಜೋ, ಅರೇಂಜೋ ಎಂದು ಕೇಳಿದ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಕಿರಣ್ ರಾಜ್. ಒಂದು ವಯಸ್ಸಿನವರೆಗೆ ಮನೆಯವರು ಹುಡುಗಿ ನೋಡ್ತೇನೆ ಅಂದ್ರು ನಾನು ಬೇಡ ಎಂದೆ. ಈಗ ಅಪ್ಪ-ಅಮ್ಮ ಕೈಎತ್ತುಬಿಟ್ಟಿದ್ದಾರೆ. ಆದ್ದರಿಂದ ಸದ್ಯ ಇರೋ ಆಪ್ಷನ್ ಲವ್ ಮ್ಯಾರೇಜ್ ಮಾತ್ರ ಎಂದಿದ್ದಾರೆ.
ನಿಜ ಜೀವನದಲ್ಲಿಯೂ ಕರ್ಣನೇ
ಅಷ್ಟಕ್ಕೂ ಕಿರಣ್ ರಾಜ್ ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್ ರಾಜ್ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

