ರಾಜೇಂದ್ರ ಭೂಪತಿ ತನ್ನ ಮಗಳು ಮಲ್ಲಿ ಅಂತ ಗೊತ್ತಿಲ್ಲದೆ ಜಯದೇವ್ ಜೊತೆ ಮದುವೆ ಮಾಡಿದ್ದಾನೆ. ಮದುವೆಯ ನಂತರ ಸತ್ಯ ತಿಳಿದ ಭೂಪತಿಗೆ ಬೇಸರವಾಗಿದೆ. ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನಾ?

'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಮೇಲಿನ ದ್ವೇಷಕ್ಕೆ ರಾಜೇಂದ್ರ ಭೂಪತಿ ಈಗ ಅವನ ಮಗಳ ಜೀವನವನ್ನೇ ಬಲಿ ಕೊಟ್ಟಿದ್ದಾನೆ. ಮಲ್ಲಿ ತನ್ನ ಮಗಳು ಅಂತ ಅರಿಯದೆ, ಭೂಪತಿಯು ಜಯದೇವ್-‌ಮಲ್ಲಿ ಮದುವೆಗೆ ಮುಹೂರ್ತ ಇಟ್ಟಿದ್ದನು. ಇವರಿಬ್ಬರ ಮದುವೆಯಾದ ಬಳಿಕ ಮಲ್ಲಿ ತನ್ನ ಮಗಳು ಎನ್ನೋದು ಅವನಿಗೆ ಗೊತ್ತಾಗಿದೆ. ಈ ಬೇಜಾರಿನಲ್ಲಿ ಅವನು ಸತ್ತು ಹೋಗ್ತಾನಾ?

ಮೊದಲು ಸತ್ಯ ಗೊತ್ತಾಗಲಿಲ್ಲ!

ಇಷ್ಟು ವರ್ಷಗಳಿಂದ ತನ್ನ ಮಗಳು ಸತ್ತು ಹೋದಳು, ನನ್ನ ವಂಶ ನಿರ್ವಂಶವಾಯ್ತು ಅಂತ ರಾಜೇಂದ್ರ ಭೂಪತಿಯು ಗೌತಮ್‌ ದಿವಾನ್‌ ಮೇಲೆ ಕಿಡಿ ಕಾರುತ್ತಿದ್ದನು. ನನ್ನ ತಪ್ಪು ಏನೂ ಇಲ್ಲ ಅಂತ ಗೌತಮ್‌ ಎಷ್ಟೇ ಸಲ ಹೇಳಿದರೂ ಕೂಡ ರಾಜೇಂದ್ರ ಕೇಳಲಿಲ್ಲ. ರಾಜೇಂದ್ರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತಾತನೊಬ್ಬ ಅವನ ಮಗಳನ್ನು ಬಚ್ಚಿಟ್ಟು ಸಾಕಿದ್ದ. ಈ ವಿಷಯ ರಾಜೇಂದ್ರನಿಗೆ ಗೊತ್ತೇ ಆಗಲಿಲ್ಲ.

ಟೈಮ್ ಫುಲ್‌ ಖರಾಬ್‌

ಗೌತಮ್‌ ಸಹೋದರ ಜಯದೇವ್‌ ಜೊತೆ ಮಲ್ಲಿ ಮದುವೆ ನಡೆದಿತ್ತು. ಗೌತಮ್‌ ಹಾಗೂ ದಿಯಾ ಅಕ್ರಮ ಸಂಬಂಧ ಹೊಂದಿರೋದು ಕೂಡ ಗೌತಮ್‌ಗೆ ಗೊತ್ತಿತ್ತು. ರಾಜೇಂದ್ರ ಭೂಪತಿ ಮಗಳು ಮಲ್ಲಿ ಎನ್ನೋದು ಕೂಡ ಇತ್ತೀಚೆಗೆ ಗೌತಮ್‌ಗೆ ಗೊತ್ತಾಗಿತ್ತು. ಎಲ್ಲ ವಿಷಯವನ್ನು ಒಂದೊಳ್ಳೆ ಸಮಯ ಬಂದಾಗ ಹೇಳೋಣ ಅಂತ ಡುಮ್ಮಸರ್‌ ಕಾಯುತ್ತಿದ್ದರು. ಆದರೆ ಈಗ ಟೈಮ್‌ ಮಾತ್ರ ಫುಲ್‌ ಖರಾಬ್‌ ಆಗಿದೆ.

ರಾಜೇಂದ್ರ ಭೂಪತಿ ಸಾಯುತ್ತಾನಾ?

ಜಯದೇವ್‌ ಹಾಗೂ ದಿಯಾ ಮದುವೆ ನಿಲ್ಲಿಸಬೇಕು ಅಂತ ಗೌತಮ್‌ ಪ್ರಯತ್ನಪಟ್ಟರೂ ಆಗಲಿಲ್ಲ. ಜಯದೇವ್‌ ಬದಲಾಗೋದಿಲ್ಲ ಅಂತ ಅವನು ಏನು ಬೇಕಿದ್ರೂ ಮಾಡಿಕೋ ಅಂತ ಹೇಳಿ, ಅವನ ಪಾಲಿನ ಆಸ್ತಿ ಕೊಟ್ಟು ಮನೆಯಿಂದ ಹೊರಗಡೆ ಹಾಕಿದ್ದಾನೆ. ಆ ಬಳಿಕ ರಾಜೇಂದ್ರ ಭೂಪತಿಗೆ ತನ್ನ ಮಗಳು ಮಲ್ಲಿ, ನನ್ನಿಂದಲೇ ಅವಳ ಜೀವನ ಹಾಳಾಯ್ತು ಅಂತ ಅನಿಸಿದೆ. ಜಯದೇವ್‌ ಬಳಿ ಎಲ್ಲ ವಿಷಯ ಹೇಳಿದರೂ ಕೂಡ ಅವನು ಮಾತ್ರ ಮಲ್ಲಿ ಜೊತೆ ಬದುಕೋಕೆ ರೆಡಿ ಇಲ್ಲ. ಇನ್ನೊಂದು ಕಡೆ ಮಲ್ಲಿ ಕೂಡ ರಾಜೇಂದ್ರ ಭೂಪತಿಯನ್ನು ತನ್ನ ತಂದೆ ಅಂತ ಒಪ್ಪಿಕೊಳ್ಳೋಕೆ ರೆಡಿ ಇಲ್ಲ. ಈ ಕಾರಣಕ್ಕೆ ಅವನಿಗೆ ಬೇಸರ ಆಗಿದೆ. ರಾಜೇಂದ್ರ ಭೂಪತಿಯು ಗುಂಡು ಹಾರಿಸಿ ತನ್ನ ಜೀವವನ್ನು ಕಳೆದುಕೊಳ್ಳೋಕೆ ರೆಡಿ ಆಗಿದ್ದಾನೆ. ಹಾಗಾದರೆ ಭೂಪತಿ ಸಾ*ಯುತ್ತಾನಾ? ಅವನ ಪಾತ್ರ ಅಂತ್ಯ ಆಗತ್ತಾ? ಯಾರಾದರೂ ಅವನನ್ನು ಕಾಪಾಡ್ತಾರಾ?

ಭೂಮಿಕಾಗೆ ಯಾವ ಮಗು ಹುಟ್ಟತ್ತೆ?

ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಸಿಕ್ಕಾಪಟ್ಟೆ ಕುತೂಹಲಭರಿತ ಆಗೋದಂತೂ ಪಕ್ಕಾ. ಇನ್ನು ದುಷ್ಟೆ ಶಕುಂತಲಾಳಿಂದ ಬಚಾವ್‌ ಆಗಿ ಭೂಮಿಕಾ ಮಗುವಿಗೆ ಜನ್ಮ ಕೊಡ್ತಾಳಾ? ಭೂಮಿಕಾಗೆ ಗಂಡೋ ಅಥವಾ ಹೆಣ್ಣೋ? ಅಥವಾ ಅವಳಿ ಹುಟ್ಟತ್ತಾ ಎನ್ನುವ ಪ್ರಶ್ನೆಯೂ ಎದ್ದಿದೆ.

ಧಾರಾವಾಹಿ ಕಥೆ ಏನು?

ಗೌತಮ್‌ ಹಾಗೂ ಭೂಮಿಕಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗೌತಮ್‌ ಆಸ್ತಿ ಹೊಡೆಯೋಕೆ ಅವನ ಮಲತಾಯಿ ಶಕುಂತಲಾ, ಮಲಸಹೋದರ ಜಯದೇವ್‌ ರೆಡಿ ಆಗಿದ್ದನು. ಈಗ ಜಯದೇವ್‌ ಅಸಲಿ ಬುದ್ಧಿ ಏನು ಎನ್ನೋದು ಗೌತಮ್‌ಗೆ ಗೊತ್ತಾಗಿದೆ. ಜಯದೇವ್‌, ದಿಯಾ ಮದುವೆ ಆಗಿದೆ. ಗಂಡ ಇನ್ನೊಂದು ಮದುವೆ ಆಗಿದ್ದಕ್ಕೆ ಮಲ್ಲಿ ಏನು ಮಾಡ್ತಾಳೋ ಏನೋ!

ಪಾತ್ರಧಾರಿಗಳು

ಗೌತಮ್-‌ ರಾಜೇಶ್‌ ನಟರಂಗ, ಭೂಮಿಕಾ ಸದಾಶಿವ- ಛಾಯಾ ಸಿಂಗ್‌, ಶಕುಂತಲಾ-ವನಿತಾ ವಾಸು, ಜಯದೇವ್-ರಾಣವ್‌ ಗೌಡ, ಮಲ್ಲಿ-ಅನ್ವಿತಾ ಸಾಗರ್‌