- Home
- Entertainment
- TV Talk
- Amruthadhaare Serial: ಜೈದೇವ್ ದುರ್ಬುದ್ಧಿ ತೋರಿಸಿದ್ರೂ ಪವರ್ ಫುಲ್ ನಟನೆಗೆ ವೀಕ್ಷಕರು ಫಿದಾ
Amruthadhaare Serial: ಜೈದೇವ್ ದುರ್ಬುದ್ಧಿ ತೋರಿಸಿದ್ರೂ ಪವರ್ ಫುಲ್ ನಟನೆಗೆ ವೀಕ್ಷಕರು ಫಿದಾ
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ತನ್ನ ದುರ್ಬುದ್ಧಿಯನ್ನು ತೋರಿ ಗೌತಮ್ ದಿವಾನ್ ಗೆ ಎದುರಾಡುತ್ತಿದ್ದರೆ, ಜನರು ಜೈದೇವ್ ನಟನೆ ನೋಡಿ ವಾರೆ ವಾ ಎನ್ನುತ್ತಿದ್ದಾರೆ.

ಝೀ ಕನ್ನಡದ ಜನಪ್ರಿಯ ವಾಹಿನಿ ಅಮೃತಧಾರೆಯಲ್ಲಿ (Amruthadhaare) ಸದ್ಯ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರುತ್ತಿದೆ. ಭೂಮಿಕಾಗೆ ಸವಾಲು ಹಾಕಿ ಹೋಗುವ ಜೈದೇವ್, ತನ್ನ ಮನೆಯಲ್ಲಿಯೇ ದಿಯಾ ಜೊತೆ ಸಪ್ತಪದಿ ತುಳಿಯೋದಕ್ಕೆ ಸಕಲ ಸಿದ್ಧತೆ ಮಾಡಿಕೊಂಡು, ಕಾಯುತ್ತಿದ್ದರೆ, ಗೌತಮ್ ದಿವಾನ್ ಬಂದು ಜೈದೇವ್ ಗೆ ಮಂಗಳಾರತಿ ಮಾಡಿ, ಕೊನೆಗೆ ಸರಿ ತಾಳಿ ಕಟ್ಟು ಎಂದಿದ್ದಾರೆ.
ಅಪ್ಪನನ್ನೆ ಬಾಯಿಗೆ ಬಂದಂತೆ ಬಯ್ಯುತ್ತಾ, ಎಲ್ಲಾ ಆಸ್ತಿಯನ್ನು ನಿನ್ನ ಹೆಸರಿಗೆ ಬರೆದಿದ್ದಾರೆ, ನಮಗೆ ಏನು ಬರೆಯಲೇ ಇಲ್ಲ ಎನ್ನುತ್ತಾ ಕಿರುಚಾಡುತ್ತಿದ್ದರೆ, ಗೌತಮ್, ನಿನಗೆ ಆಸ್ತಿ ತಾನೇ ಬೇಕಾಗಿರೋದು, ಎನ್ನುತ್ತಾ ಕಾಗದ ಪತ್ರವನ್ನು ತಂದು ಜೈದೇವ್ ಮುಖದ ಮೇಲೆ ಎಸೆದು, ಆತನನ್ನು ಮನೆಯಿಂದ ಹೊರ ಹಾಕುತ್ತಾನೆ.
ಕಳೆದ ಎರಡು ದಿನಗಳಿಂದ ಜೈದೇವ್ ನೀಚ ಮುಖವಾಡ ಬಿಳುಚಿಕೊಂಡು, ತಾನೆಷ್ಟು ಕೆಟ್ಟವನು ಅನ್ನೋದನ್ನು ಅವನ ಬಾಯಿಯಿಂದಲೆ, ಆತನ ಮಾತಿನಿಂದಲೇ ಗೊತ್ತಾಗಿದೆ. ಒಂದಕ್ಕಿಂತ ಒಂದು ಖಡಕ್ ಡೈಲಾಗ್ ಗಳನ್ನು ಹೇಳಿ, ಎದುರಿನವರ ಬಾಯಿ ಮುಚ್ಚಿಸುತ್ತಿರುವ ಜೆಡಿ ನಟನೆ ನೋಡಿ ವೀಕ್ಷಕರಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಜೈದೇವ್ ನಟನೆ (Jaidev Acting) ಬೆಂಕಿ, ಜೈದೇವ್ ಸೂಪರ್, ರಾನವ್ (Raanav Gowda)ಅವರ ಅದ್ಭುತ ನಟನೆ! ನಿಮ್ಮ ಧ್ವನಿ, ಸಂಭಾಷಣೆ ಮತ್ತು ಆಕ್ಟಿಂಗ್ ಎಲ್ಲವೂ ಪರ್ಫೆಕ್ಟ್. ಯಾವುದೇ ಧಾರಾವಾಹಿಯಲ್ಲಿ ಬೇರೆ ಯಾವುದೇ ಖಳನಾಯಕ ನಿಮ್ಮ ಹತ್ತಿರಕ್ಕೂ ಬರುವುದಿಲ್ಲ ಎಂದಿದ್ದಾರೆ.
ಜೈ ದೇವ್ ವಿಲನ್ ಆದ್ರೂ ಕೂಡ, ಈ ಸೀರಿಯಲ್ ಗೆ ಹೀರೋನೆ, ಅವರೆ ನಟನೆ ಸೂಪರ್. ಜೈ ದೇವ್ ಅಂದ್ರೆ ಆಕ್ಟಿಂಗ್ ಕಿಂಗ್, ಅವರ ನಟನೆಗೆ ಜೈ ಜೈ ಎಂದಿದ್ದಾರೆ. ಒಟ್ಟಲ್ಲಿ ಜೈದೇವ್ ನಟನೆಗೆ ಜನರು ಚಪ್ಪಾಳೆ ತಟ್ಟುತ್ತಿದ್ದಾರೆ. ಅವರ ಗಟ್ಟಿತನ ಆ ಸ್ಟ್ರಾಂಗ್ ಮಾತುಗಳು, ಕಣ್ಣಿನಲ್ಲಿನ ಆಕ್ರೋಶ ಎಲ್ಲವೂ ಪರ್ಫೆಕ್ಟ್ ವಿಲನ್ ಪಾತ್ರಕ್ಕೆ ಸೂಕ್ತವಾಗಿದೆ.
ಅಂದ ಹಾಗೆ ಸದ್ಯ ವಿಲನ್ ಅಂಕಲ್ (villain uncle) ಸಮ್ಮುಖದಲ್ಲಿ ಜೈದೇವ್ ಮತ್ತು ದಿಯಾ ಮದುವೆ ಹೇಗೂ ನಡೆಯಿತು. ಇನ್ನೊಂದು ಕಂಡೆ ಮಲ್ಲಿಗೆ ಮಗಳು ಅನ್ನೋದನ್ನು ಭೂಪತಿಗೆ ಹೇಳಿಯೂ ಆಯ್ತು. ಮುಂದೇ ಏನಾಗುತ್ತೆ. ಭೂಪತಿ ಜೈದೇವ್ ನನ್ನು ಸುಮ್ನೆ ಬಿಡ್ತಾನಾ? ವಿಲನ್ ಅಂಕಲ್ ಮಗಳೇ ಮಲ್ಲಿ ಅನ್ನೋದು ಗೊತ್ತಾದ ಮೇಲೆ ಜೈದೇವ್ ಏನು ಮಾಡ್ತಾನೆ ಅನ್ನೋದನ್ನು ಕಾದು ನೋಡಬೇಕು.