Amruthadhaare Serial Episode: 'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾಗೆ ಯಾವಾಗ ಮಗು ಹುಟ್ಟತ್ತೆ ಅಂತ ವೀಕ್ಷಕರು ಕುತೂಹಲದಿಂದ ಇದ್ದಾರೆ. ಇನ್ನೊಂದು ಕಡೆ ಕರ್ಣನ ಆಗಮನವೂ ಆಗಬೇಕಿದೆ. ಇಲ್ಲೇ ಏನಾದರೂ ವೀಕ್ಷಕರಿಗೆ ಸರ್ಪ್ರೈಸ್‌ ಸಿಕ್ಕರೆ ಹೇಗಿರುತ್ತದೆ? 

'ಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿಕಾ ತುಂಬು ಗರ್ಭಿಣಿ. ಭೂಮಿ ಮಗುವನ್ನು ಜೀವಸಮೇತ ಉಳಿಸೋದಿಲ್ಲ ಎಂದು ಶಕುಂತಲಾ ಒಂದು ಕಡೆ ಪಣ ತೊಟ್ಟಿದ್ದರೆ, ನನ್ನಿಂದ ಮಗಳು ಮಲ್ಲಿ ಜೀವನ ಹಾಳಾಯ್ತು ಅಂತ ರಾಜೇಂದ್ರ ಭೂಪತಿ ಚಿಂತೆಯಲ್ಲಿದ್ದಾನೆ. ಇನ್ನೊಂದು ಕಡೆ ಪ್ರಸಾರ ಆಗಬೇಕಿದ್ದ 'ಕರ್ಣ' ಬರೋದು ಕೂಡ ಲೇಟ್‌ ಆಗಿದೆ. ಆದರೆ ಇಲ್ಲೊಂದು ಟ್ವಿಸ್ಟ್‌ ಕೊಡಬಹುದು. ಅಮೃತಧಾರೆಯಲ್ಲಿ ಇದೀಗ ಡೆಲಿವರಿ ಸೀನ್ ಬರಬೇಕಾಗಿದ್ದು, ಡಾ.ಕರ್ಣ ಭೂಮಿಕಾಗೆ ಡಾಕ್ಟರ್ ಆಗಿ ಬರಬಹುದು ಅನ್ನೋ ಗೆಸ್‌ನಲ್ಲಿದ್ದಾರೆ ವೀಕ್ಷಕರು. ಹುಟ್ಟುವ ಮಗು ಏನನ್ನುವ ಕ್ಯುರಿಯೋಸಿಟಿ ಕಂಟಿನ್ಯೂ ಆಗಿದೆ.

ಒಂದು ಧಾರಾವಾಹಿಯಲ್ಲಿ ಇನ್ನೊಬ್ಬರ ಆಗಮನ!

ಒಂದು ಧಾರಾವಾಹಿಯಲ್ಲಿದ್ದವರು ಅದೇ ವಾಹಿನಿಯ ಇನ್ನೊಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳೋದು ಹೊಸ ವಿಷಯವೇನಲ್ಲ. ಕೆಲ ದಿನಗಳ ಹಿಂದೆ 'ಸೀತಾರಾಮ' ಧಾರಾವಾಹಿಯಲ್ಲಿ ಶ್ರಾವಣಿ, ಸುಬ್ರಹ್ಮಣ್ಯ ಕಾಣಿಸಿಕೊಂಡಿದ್ದರು. 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ 'ಲಕ್ಷ್ಮೀ ನಿವಾಸ' ಧಾರಾವಾಹಿ ವೆಂಕಿ ಆಗಮನವಾಗಿತ್ತು. ಜೈ ದೇವ್ ಮತ್ತೊಬ್ಬಳಿಗೆ ತಾಳಿ ಕಟ್ಟಲು ಮುಂದಾದಾಗ, ಮಲ್ಲಿಗೆ ನೆರವಾಗಲು ಶ್ರಾವಣಿಯ ಆಗಮನವಾಗಿತ್ತು. ಹೀಗೆ 'ಅಮೃತಧಾರೆ' ಧಾರಾವಾಹಿಯಲ್ಲಿ ಗೈನಾಕಾಲಜಿಸ್ಟ್ 'ಕರ್ಣ' ಬರಬಹುದು ಎನ್ನಲಾಗುತ್ತಿದೆ. ವೀಕ್ಷಕರು ಗೆಸ್ ಮಾಡುವಂತೆ ಕಥೆ ಸಾಗುವುದರಿಂದ ಹೀಗಾದರೆ ಏನೂ ಆಶ್ಚರ್ಯವೇನಿಲ್ಲ ಬಿಡಿ.

ಕರ್ಣನೇ ಡೆಲಿವರಿ ಮಾಡಸ್ತಾನಾ?

ಹೌದು, 'ಅಮೃತಧಾರೆ' ಧಾರಾವಾಹಿಯಲ್ಲಿ 'ಕರ್ಣ' ಬರೋದಿಕ್ಕೆ ಒಳ್ಳೆಯ ಅವಕಾಶ ಇದೆ. ಕರ್ಣ ಗೈನಕಾಲಜಿಸ್ಟ್.‌ ಇನ್ನು ಭೂಮಿಕಾ ಕೂಡ ಮಗುವಿಗೆ ಜನ್ಮ ಕೊಡೋಕೆ ರೆಡಿ ಇದ್ದಾಳೆ. ಹೀಗಾಗಿ ಕರ್ಣನಿಂದಲೇ ಭೂಮಿಕಾ ಡೆಲಿವರಿ ಆದರೆ ಹೇಗಿರುತ್ತದೆ? ಹೀಗೊಂದು ಚರ್ಚೆ ಸೋಶಿಯಲ್‌ ಮೀಡಿಯಾದಲ್ಲಿ ಶುರು ಆಗುತ್ತಿದೆ. ಧಾರಾವಾಹಿ ಕಥೆ ಹೀಗೆ ಸಾಗಲಿದೆ ಎಂದು ಹೇಳೋಕೆ ಆಗದು. ಇವೆಲ್ಲವೂ ವಾಹಿನಿಯ ಕೈಯಲ್ಲಿರುತ್ತದೆ.

ವೀಕ್ಷಕರಿಗೆ ಹಬ್ಬ

ಅಮೃತಧಾರೆ ಹಾಗೂ ಕರ್ಣನ ಕಾಂಬಿನೇಶನ್‌ನಲ್ಲಿ ಎಪಿಸೋಡ್‌ ಪ್ರಸಾರ ಆದರೆ ಮಾತ್ರ ನಿಜಕ್ಕೂ ವೀಕ್ಷಕರಿಗೆ ಹಬ್ಬ ಎಂದು ಹೇಳಬಹುದು. ಇನ್ನು ಭೂಮಿಕಾಗೆ ಗಂಡು ಮಗು ಹುಟ್ಟುತ್ತೋ ಅಥವಾ ಹೆಣ್ಣು ಮಗು ಹುಟ್ಟುತ್ತೋ ಎನ್ನುವ ಕುತೂಹಲ ಕೂಡ ಇದೆ. ಇನ್ನೊಂದು ಕಡೆ ಭೂಮಿಕಾಗೆ ಅವಳಿ ಮಕ್ಕಳು, ಅದೂ ಗಂಡು ಹಾಗೂ ಹೆೆಣ್ಣಾಗಲಿ ಎನ್ನೋದು ಕೆಲವು ಧಾರಾವಾಹಿ ಪ್ರಿಯರ ಆಸೆಯೂ ಹೌದು. ಆ ಮೂಲಕ ಕಥೆ ಹೇಗೆ ಸಾಗುತ್ತೆ ಎನ್ನುವುದನ್ನು ಕಾದು ನೋಡಬೇಕು.?

ಮಗುವಿನ ಆಗಮನಕ್ಕೂ ಸಮಸ್ಯೆ!

ಗೌತಮ್‌ಗೆ 45 ವರ್ಷ, ಭೂಮಿಕಾಗೆ 35 ವರ್ಷ ಆದಬಳಿಕ ಈ ಜೋಡಿ ಮದುವೆ ಆಗಿದೆ. ಮನೆಯವರ ಖುಷಿಗೋಸ್ಕರ ಇವರಿಬ್ಬರು ಮದುವೆಯಾಗಿ ಆಮೇಲೆ ಪ್ರೀತಿಯಲ್ಲಿ ಬಿದ್ದರು. ಮಗುಗೋಸ್ಕರ ಹಂಬಲಿಸುತ್ತಿದ್ದ ಈ ಜೋಡಿಗೆ ಆರಂಭದಲ್ಲಿ ಒಂದಷ್ಟು ಸಮಸ್ಯೆಗಳು ಎದುರಾಗಿತ್ತು. ಕೊನೆಗೂ ಭೂಮಿ ಗರ್ಭಿಣಿಯಾದಳು.

ಕರ್ಣ ಬರೋದು ಯಾವಾಗ?

ಬೇರೆ ವಾಹಿನಿಯ ಶೋವೊಂದರಲ್ಲಿ ಭವ್ಯಾ ಗೌಡ ಭಾಗವಹಿಸಿದ್ದರು. ಈ ಒಪ್ಪಂದ ಇನ್ನೂ ಮುಗಿದಿಲ್ಲ. ಹೀಗಿರುವಾಗಲೇ ಅವರು ಜೀ ಕನ್ನಡ ವಾಹಿನಿಯ 'ಕರ್ಣ 'ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಹೀಗಾಗಿ ಇನ್ನೊಂದು ವಾಹಿನಿ ಕಾನೂನಿನ ಮೊರೆ ಹೋಗಿದೆ ಎನ್ನಲಾಗಿದೆ. ಜೂನ್‌ 16ಕ್ಕೆ ಪ್ರಸಾರ ಆಗಬೇಕಿದ್ದ 'ಕರ್ಣ' ಸದ್ಯಕ್ಕೆ ಮುಂದೂಡಲ್ಪಟ್ಟಿದೆ ಅಷ್ಟೇ. ಆದರೆ 'ಕರ್ಣ' ಬರೋದು ಪಕ್ಕಾ ಎಂದು ವಾಹಿನಿಯು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದೆ. ಆದರೆ ಡೇಟ್‌ ಇನ್ನೂ ಫಿಕ್ಸ್‌ ಆದಂತಿಲ್ಲ. 

ಅಮೃತಧಾರೆ ಧಾರಾವಾಹಿ ಕಥೆ ಏನು?

ಗೌತಮ್‌ ದಿವಾನ್‌ ಆಗರ್ಭ ಶ್ರೀಮಂತ. ಇವನ ಮಲತಾಯಿ ಶಕುಂತಲಾಳಿಂದ ಅವನಿಗೆ ಮದುವೆಯೇ ಆಗೋದಿಲ್ಲ. ಆಮೇಲೆ ವಿಧಿ ಆಡಿದ ಆಟದಿಂದ ಭೂಮಿಕಾ ಜೊತೆ ಗೌತಮ್‌ ಮದುವೆ ಆಗಿ, ಇವರಿಬ್ಬರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದು ಕಡೆ ಗೌತಮ್‌ ಮಗು ಮುಗಿಸಲು ಶಕುಂತಲಾ ರೆಡಿಯಾಗಿದ್ದಾಳೆ. ಮಲ್ಲಿಯನ್ನು ಮದುವೆ ಆಗಿದ್ರೂ ಜಯದೇವ್‌, ದಿಯಾಳನ್ನು ಮದುವೆ ಆಗಿದ್ದಾನೆ. ಮಲ್ಲಿಯೇ ತನ್ನ ಮಗಳು ಎನ್ನೋದು ಈಗ ರಾಜೇಂದ್ರ ಭೂಪತಿಗೆ ಗೊತ್ತಾಗಿದೆ. ಗೌತಮ್‌ ಮೇಲಿನ ದ್ವೇಷಕ್ಕೆ ರಾಜೇಂದ್ರ ಭೂಪತಿಯೇ ಜಯದೇವ್‌ಗೆ ಇನ್ನೊಂದು ಮದುವೆ ಮಾಡಿಸಿದ್ದನು. ಈಗ ಅವನಿಗೆ ಸತ್ಯ ಗೊತ್ತಾಗಿದ್ದು, ಬೇಸರದಲ್ಲಿದ್ದಾನೆ.

ಪಾತ್ರಧಾರಿಗಳು

ಗೌತಮ್-‌ ರಾಜೇಶ್‌ ನಟರಂಗ

ಭೂಮಿಕಾ- ಛಾಯಾ ಸಿಂಗ್‌

ಶಕುಂತಲಾ- ವನಿತಾ ವಾಸು

ಜಯದೇವ್-‌ ರಾಣವ್‌

ಮಲ್ಲಿ- ಅನ್ವಿತಾ ಸಾಗರ್‌