ಪ್ರತಿಯೊಂದು ವಾಹನದ ಟೈಯರ್ ಮೇಲಿರುವ ಸಂಖ್ಯೆ ಮತ್ತು ಅಕ್ಷರಗಳು ಅದರ ಅಗಲ, ಆಕಾರ, ರಿಮ್ ಗಾತ್ರ ಮತ್ತು ವೇಗದ ಮಿತಿಯನ್ನು ಸೂಚಿಸುತ್ತವೆ. ವಿಶೇಷವಾಗಿ ಕೊನೆಯಲ್ಲಿರುವ ಅಕ್ಷರಗಳು ಟೈಯರ್‌ನ ಗರಿಷ್ಠ ವೇಗದ ಸಾಮರ್ಥ್ಯವನ್ನು ತಿಳಿಸುತ್ತವೆ. ಈ ಮಿತಿಯನ್ನು ಮೀರಿದರೆ ಅಪಘಾತ ಸಂಭವಿಸುವ ಅಪಾಯವಿರುತ್ತದೆ.
ಇಂದು ಭಾರತದಲ್ಲಿ ಬಹುತೇಕ ಎಲ್ಲರ ಮನೆಯಲ್ಲಿಯೂಒಂದಲ್ಲೊಂದು ವಾಹನ ಇದ್ದೇ ಇದೆ. ವಾಹನ ಇರದ ಮನೆ ಸಿಕ್ಕಾಪಟ್ಟೆ ವಿರಳ ಎನ್ನಬಹುದೇನೋ. ಇನ್ನು ನಗರ ಪ್ರದೇಶಗಳಲ್ಲಿ ಕನಿಷ್ಠ 2-3 ವಾಹನಗಳು ಇದ್ದೇ ಇರುತ್ತವೆ. ಇವುಗಳ ಟೈಯರ್ಪಂಚರ್ ಆದಾಗ ಅಥವಾ ಏನಾದರೂ ಸಮಸ್ಯೆ ಉಂಟಾದಾಗ, ಟೈಯರ್ಬದಲಿಸುವುದು ಸಹಜ. ಪ್ರತಿಯೊಂದು ವಾಹನಕ್ಕೂ ಅವುಗಳ ಜಾತಿಗೆ ಅನುಗುಣವಾಗಿ ಅವವೇ ಟೈಯರ್ಹಾಕಬೇಕಾಗುತ್ತದೆ. ಆದರೆ ಹೀಗಿದ್ದರೂ, ಟೈಯರ್ಮೇಲಿರುವ ಕಂಪೆನಿಗಳ ಹೆಸರನ್ನು ಹೆಚ್ಚಾಗಿ ವಾಹನ ಸವಾರರು ನೋಡುತ್ತಾರೆಯೇ ವಿನಾ ಅವುಗಳ ಮೇಲಿರುವ ಅಕ್ಷರಗಳ ಕಡೆ ಗಮನ ಹರಿಸುವುದೇ ಇಲ್ಲ.
ನಿಮಗೆ ಗೊತ್ತಾ? ಪ್ರತಿಯೊಂದು ಟೈಯರ್ ಮೇಲೆ ಇರುವ ಅಕ್ಷರಗಳು ಆ ಟೈಯರ್‌ನ ಆಯಸ್ಸು ಸೇರಿದಂತೆ ಅವುಗಳ ಜಾತಕವನ್ನೇ ತೆರೆದಿಡುತ್ತದೆ. ಅದರಲ್ಲಿಯೂ ಹೆಚ್ಚಾಗಿ ಈ ಅಕ್ಷರಗಳ ಪೈಕಿ ಕೊನೆಯಲ್ಲಿ ಬರೆದಿರುವ L.M.N ಇತ್ಯಾದಿ ಅಕ್ಷರಗಳು ಆ ಟೈಯರ್ ಗಂಟೆಗೆ ಎಷ್ಟು ವೇಗ ಹೋಗಬಲ್ಲ ಕೆಪ್ಯಾಸಿಟಿ ಹೊಂದಿದೆ ಎನ್ನುವುದನ್ನು ತೋರಿಸುತ್ತದೆ. ಇದರ ಅರ್ಥ ನೀವು ಅದಕ್ಕಿಂತ ಹೆಚ್ಚಿಗೆ ಹೋದರೆ ಅಲ್ಲಿ ಅಪಘಾತ ಆಗೋದು ಗ್ಯಾರೆಂಟಿ
ಹಾಗಿದ್ದರೆ, ವಾಹನಗಳಲ್ಲಿನ ಟೈಯರ್ ಏನನ್ನು ಸೂಚಿಸುತ್ತದೆ ಎನ್ನೋದನ್ನು ನೋಡೋಣ.
195/65R15 91V ಎಂದು ನಿಮ್ಮ ಟೈಯರ್ ಮೇಲೆ ಇದೆ ಎಂದುಕೊಳ್ಳಿ.
ಅಗಲ:
ಇದರಲ್ಲಿ ಮೊದಲ ಮೂರು ಸಂಖ್ಯೆ ಅರ್ಥಾತ್ 195 ಎನ್ನುವುದು, ನಿಮ್ಮ ಟೈರ್‌ನ ವಿಭಾಗದ ಅಗಲ ಮಿಲಿಮೀಟರ್‌ಗಳಲ್ಲಿ, ಒಳಗಿನ ಪಾರ್ಶ್ವಗೋಡೆಯಿಂದ ಹೊರಗಿನ ಪಾರ್ಶ್ವಗೋಡೆಯವರೆಗೆ ಇದೆ ಎಂದರ್ಥ.
ಆಕಾರ ಅನುಪಾತ:
ಮುಂದಿನ ಎರಡು ಸಂಖ್ಯೆ ಅರ್ಥಾತ್ 65 ಎನ್ನೋದು ಟೈಯರ್‌ನ ಆಕಾರದ ಅನುಪಾತ ಹೇಳುತ್ತದೆ. ಇದರ ಅರ್ಥ, ಟ್ರೆಡ್‌ನ ತಳದಿಂದ ರಿಮ್‌ವರೆಗಿನ ನಿಮ್ಮ ಟೈರ್‌ನ ಎತ್ತರ, ಟ್ರೆಡ್ ಅಗಲದ ಶೇಕಡಾವಾರು 65% ಇದೆ ಎಂದರ್ಥ.
ಟೈರ್ ನಿರ್ಮಾಣ:
ಮುಂದಿನ ಅಕ್ಷರ ಅರ್ಥಾತ್ R, ನಿಮ್ಮ ಟೈರ್ ಅನ್ನು ನಿರ್ಮಿಸಲು ಬಳಸುವ ವಿಧಾನ ಸೂಚಿಸುತ್ತದೆ. ಉದಾಹರಣೆ: R, ರೇಡಿಯಲ್ ಪ್ಲೈ ನಿರ್ಮಾಣಕ್ಕಾಗಿ. ಇದು ಪ್ರಯಾಣಿಕರ ಟೈರ್‌ಗಳಿಗೆ ನಿರ್ಮಾಣದ ಅತ್ಯಂತ ಸಾಮಾನ್ಯ ವಿಧಾನವಾಗಿದೆ.
ರಿಮ್:
ಮುಂದಿನ ಎರಡು ಅಕ್ಷರ ಅರ್ಥಾತ್ 15, ಚಕ್ರ ರಿಮ್‌ನ ವ್ಯಾಸವು ಇಂಚುಗಳಲ್ಲಿ ವಿವರಿಸುತ್ತದೆ. ನೀವು ಅಸ್ತಿತ್ವದಲ್ಲಿರುವ ಟೈರ್‌ಗಳಿಗೆ ಚಕ್ರಗಳನ್ನು ಖರೀದಿಸುತ್ತಿದ್ದರೆ, ಇದು ನಿಮಗೆ ಅಗತ್ಯವಿರುವ ಗಾತ್ರವಾಗಿದೆ.
ಲೋಡ್ ಸೂಚ್ಯಂಕ ಮತ್ತು ವೇಗ ಚಿಹ್ನೆ
ನಿಮ್ಮ ಟೈರ್ ಸುರಕ್ಷಿತವಾಗಿ ಕಾರ್ಯನಿರ್ವಹಿಸಬಹುದಾದ ಗರಿಷ್ಠ ಲೋಡ್ ಸಾಮರ್ಥ್ಯ ಎಷ್ಟಿದೆ ಎನ್ನೋದನ್ನು ಮುಂದಿನ ಎರಡು ಅಕ್ಷರ ತೋರಿಸುತ್ತದೆ. ಇದರಲ್ಲಿ 91 ಎನ್ನುವುದು.
ಪ್ರತಿ ಗಂಟೆಗೆ ಕಿಲೋ ಮೀಟರ್
ಕೊನೆಯ ಅಕ್ಷರ, ನಿಮ್ಮ ಟೈಯರ್ ಪ್ರತಿಗಂಟೆಗೆ ಎಷ್ಟು ಕಿಲೋಮೀಟರ್ ಓಡಿಸಬೇಕು ಎನ್ನುವುದು. ಅದರ ವಿವರ ಇಲ್ಲಿದೆ:
L ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 120 ವೇಗ
M ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 130 ವೇಗ
N ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 140 ವೇಗ
P ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 150 ವೇಗ
Q ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 160 ವೇಗ
R ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 170 ವೇಗ
S ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 180 ವೇಗ
T ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 190 ವೇಗ
H ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 210 ವೇಗ
V ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 240 ವೇಗ
W ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 270 ವೇಗ
Y ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 300 ವೇಗ
ZR ಇದ್ದರೆ ಪ್ರತಿ ಗಂಟೆಗೆ ಕಿಲೋ ಮೀಟರ್ 240+ ವೇಗ






