Travel Tips: ಸೋಲೋ ಟ್ರಿಪ್ ಹೋಗೋ ಮಹಿಳೆಯರಿಗೆ ಇವು ಅಸುರಕ್ಷಿತ ಜಾಗ !
ಏಕಾಂಗಿಯಾಗಿ ದೇಶ – ವಿದೇಶ ಸುತ್ತುವುದ್ರಿಂದ ಅನೇಕ ವಿಷ್ಯಗಳನ್ನು ಅರಿಯಬಹುದು. ಈಗಿನ ದಿನಗಳಲ್ಲಿ ಈ ಸೋಲೋ ಟ್ರಿಪ್ ಪ್ರಸಿದ್ಧಿ ಪಡೆಯುತ್ತಿದೆ. ಆದ್ರೆ ಎಲ್ಲಿಗೆ ಹೋದ್ರೆ ನಾವು ಸುರಕ್ಷಿತ ಎಂಬುದನ್ನು ಅರಿತು ಮಹಿಳೆ ಟ್ರಿಪ್ ಪ್ಲಾನ್ ಮಾಡೋದು ಬೆಸ್ಟ್.
ಸೋಲೋ ಟ್ರಿಪ್ ಈಗಿನ ಜನರಿಗೆ ಇಷ್ಟವಾಗ್ತಿದೆ. ಇದು ಪ್ಯಾಶನ್ ಕೂಡ ಹೌದು. ಪ್ರಯಾಣದಲ್ಲಿ ಆಸಕ್ತಿಯಿರುವ ಜನರು ದೇಶ – ವಿದೇಶವನ್ನು ಏಕಾಂಗಿಯಾಗಿ ಸುತ್ತಾಡಿ ತಮ್ಮ ಅನುಭವವನ್ನು ಹಂಚಿಕೊಳ್ತಾರೆ. ಈಗ ಮಹಿಳೆಯರು ಕೂಡ ಸೋಲೋ ಟ್ರಿಪ್ ಇಷ್ಟಪಡಲು ಶುರು ಮಾಡಿದ್ದಾರೆ. ಏಕಾಂಗಿ ಪ್ರವಾಸ ಸಾಕಷ್ಟು ಅನುಭವವನ್ನು ನೀಡುತ್ತದೆ. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಇದು ನೆರವಾಗುತ್ತದೆ. ಆ ಅನುಭವಗಳು ನಿಮ್ಮ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತವೆ.
ಏಕಾಂಗಿಯಾಗಿ ಪ್ರಯಾಣ ಬೆಳೆಸುವ ಅನೇಕ ಮಹಿಳೆಯರು ತಮ್ಮ ವಿಡಿಯೋ (Video) ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾರೆ. ಈಗ್ಲೂ ಎಲ್ಲ ಕಡೆ ಮಹಿಳೆಯರು ಸುಕ್ಷಿತವಲ್ಲ. ಕೆಲವು ಪ್ರದೇಶದಲ್ಲಿ ಪುರುಷರು ಏಕಾಂಗಿಯಾಗಿ ಓಡಾಡಿದಂತೆ ಮಹಿಳೆಯರು ಓಡಾಡಲು ಸಾಧ್ಯವಿಲ್ಲ. ಪ್ರಪಂಚವನ್ನು ಸುತ್ತಿದ ಹುಡುಗಿಯೊಬ್ಬಳು ಮಹಿಳೆಯರಿಗೆ ಪ್ರಯಾಣಿಸಲು ಯಾವ 4 ನಗರಗಳು ಅಸುರಕ್ಷಿತವಾಗಿವೆ ಎಂಬುದನ್ನು ಹೇಳಿದ್ದಾಳೆ.
ನೀರಿನ ಮಧ್ಯೆ ಗುಹೆಯೊಳಗೆ ನೆಲೆಗೊಂಡಿರುವ ಈ ಶಿವಲಿಂಗ ನೋಡಲೆರಡು ಕಣ್ಣು ಸಾಲದು
ಟಿಕ್ ಟಾಕ್ (Tik Tok) ನಲ್ಲಿ ತನ್ನ 301,500 ಫಾಲೋವರ್ಸ್ ಮುಂದೆ ತನ್ನ ಅನುಭವವನ್ನು ಹಂಚಿಕೊಂಡಿರುವ ಕ್ಲೋಯ್ ಜೇಡ್, ನಾಲ್ಕು ದೇಶಗಳನ್ನು ಹೈಲೈಟ್ ಮಾಡಿದ್ದಾಳೆ. ಕ್ಲೋಯ್ ಜೇಡ್ ಇದುವರೆಗೆ 112 ದೇಶಗಳಿಗೆ ಭೇಟಿ ನೀಡಿದ್ದಾಳೆ. ಅದರಲ್ಲಿ ನಾಲ್ಕು ದೇಶಗಳಲ್ಲಿ ಪ್ರಯಾಣ ಬೆಳೆಸಲು ಹೆಚ್ಚು ಭಯಪಟ್ಟಿರುವುದಾಗಿ ಕ್ಲೋಯ್ ಜೇಡ್ ಹೇಳಿದ್ದಾಳೆ.
ಕ್ಲೋಯ್ ಜೇಡ್ ಪಟ್ಟಿ ಮಾಡಿರುವ ಅಸುರಕ್ಷಿತ ಸ್ಥಳಗಳಲ್ಲಿ ಪ್ಯಾರಿಸ್ (Paris )ಕೂಡ ಸೇರಿದೆ. ಮರಕೇಶ್, ಪಟ್ಟಾಯ, ಬೆಲ್‌ಗ್ರೇಡ್, ಕ್ಲೋಯ್ ಜೇಡ್ ಅಸುರಕ್ಷಿತ ಪಟ್ಟಿಯಲ್ಲಿ ಸೇರಿದೆ.
ಈ ಪ್ರದೇಶದ ಜನರು ಭೂಮಿ ಮೇಲಲ್ಲ, ಅಡಿಯಲ್ಲಿ ವಾಸಿಸ್ತಾರೆ, ಏನಕ್ಕೆ?
ಫ್ರಾನ್ಸ್ ನ ಪ್ಯಾರಿಸ್ ಗೆ ಕ್ಲೋಯ್ ಜೇಡ್ ಆರು ಬಾರಿ ಭೇಟಿ ನೀಡಿದ್ದಾಳೆ. ಆದರೆ ಮೊದಲ ಬಾರಿ ಪ್ರಯಾಣ ಬೆಳೆಸಿದಾಗ ಅನುಭವ ಕೆಟ್ಟದಾಗಿತ್ತು ಎಂದು ಕ್ಲೋಯ್ ಜೇಡ್ ಹೇಳಿದ್ದಾಳೆ. ೨೨ ವರ್ಷದಲ್ಲಿದ್ದಾಗ ಆಕೆ ಅಲ್ಲಿಗೆ ಭೇಟಿ ನೀಡಿದ್ದಳಂತೆ. ವ್ಯಕ್ತಿಯೊಬ್ಬ ಈಕೆ ಜೊತೆ ಡ್ರಿಂಕ್ ಸೇವನೆ ಮಾಡಿದ ನಂತ್ರ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದನಂತೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಕ್ಲೋಯ್, ಹೊಟೇಲ್ ರೂಮಿಗೆ ಬಂದು ಬೆವರಿದ್ದಳಂತೆ. ಡ್ರಿಂಕ್ ನಲ್ಲಿ ಏನಾದ್ರೂ ಬೆರೆಸಿ ನೀಡಿದ್ರೆ ಎಂಬ ಭಯಕ್ಕೆ ಮಲಗಲೂ ಆಕೆ ಭಯಪಟ್ಟಿದ್ದಳಂತೆ.
ಪಟ್ಟಿಯಲ್ಲಿ ಇರುವ ಎರಡನೇ ಹೆಸರು ಮೊರಾಕೊದ ಮುರಕೇಶ್. ಇದು ಕೂಡ ಏಕಾಂಗಿಯಾಗಿ ಪ್ರಯಾಣ ಬೆಳೆಸುವ ಮಹಿಳೆಯರಿಗೆ ಅಷ್ಟು ಸುರಕ್ಷಿತವಲ್ಲ ಎನ್ನುತ್ತಾಳೆ ಕ್ಲೋಯ್. ಮುರಕೇಶ್ ನಲ್ಲಿ ಕ್ಲೋಯ್ ಆರಾಮವಾಗಿ ಓಡಾಡಿದ್ದಾಳೆ. ಅಲ್ಲಿನ ಪರಿಸರ ಹಾಗೂ ಆ ದಿನಗಳನ್ನು ನಾನು ತುಂಬಾ ಎಂಜಾಯ್ ಮಾಡಿದ್ದೇನೆ. ಆದ್ರೆ ನನ್ನ ಜೊತೆಗಿದ್ದ ಟರ್ಕಿಶ್ ಫ್ರೆಂಡ್ ತುಂಬಾ ಭಯಪಡುತ್ತಿದ್ದಳು. ಈ ನಗರ ತುಂಬಾ ಹಳೆಯದಾಗಿದೆ. ಅಲ್ಲಿ ಬೀದಿಗಳು ತುಂಬಾ ಕಿರಿದಾಗಿದೆ. ಹುಡುಗಿಯರು ಕತ್ತಲಲ್ಲಿ ಓಡಾಡಲು ಭಯವಾಗುತ್ತದೆ ಎಂದಿದ್ದಾಳೆ.
ಪಟ್ಟಾಯ ಹೊರತುಪಡಿಸಿ ಥೈಲ್ಯಾಂಡ್ ತುಂಬಾ ಇಷ್ಟ ನನಗೆ ಎಂದು ಕ್ಲೋಯ್ ಹೇಳಿದ್ದಾಳೆ. ಇಲ್ಲಿ ಪ್ರವಾಸಕ್ಕೆ ಬರುವ ವಿದೇಶಿ ಪುರುಷರು, ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಇದು ಅನಾನುಕೂಲತೆಯನ್ನುಂಟು ಮಾಡುತ್ತದೆ. ಮಹಿಳೆಯರ ದೃಷ್ಟಿಯಿಂದ ಪಟ್ಟಾಯ ಅಸುರಕ್ಷಿತ ಎಂದು ಕ್ಲೋಯ್ ಹೇಳಿದ್ದಾಳೆ.
ಕೊನೆಯಲ್ಲಿ ಬೆಲ್ಗ್ರೇಡ್, ಸೆರ್ಬಿಯಾದ ಸುಂದರ ನಗರ ಎಂದು ಹೆಸರು ಪಡೆದಿದೆ. ಇಲ್ಲಿನ ಜನರಲ್ಲಿ ಪ್ರೀತಿ, ಭ್ರಾತೃತ್ವ ಇಲ್ಲ ಎಂಬ ಭಾವನೆ ಮೂಡಿದೆ ಎಂದು ಕ್ಲೋಯ್ ಹೇಳಿದ್ದಾರೆ. ತನಗೆ ಕೆಟ್ಟದ್ದೇನೂ ಆಗಿಲ್ಲವಾದರೂ, ತಾನು ದೇಶವನ್ನು ಪ್ರವೇಶಿಸಿದ ಕ್ಷಣದಿಂದ ಅಸಮ್ಮತಿಯನ್ನು ಅನುಭವಿಸಿದ್ದೇನೆ ಎಂದು ಕ್ಲೋಯ್ ಹೇಳಿದ್ದಾಳೆ. ಒಟ್ಟಾರೆಯಾಗಿ ಕ್ಲೋಯ್ ನಿಜವಾಗಿಯೂ ಅಮೆರಿಕನ್ನರನ್ನು ಇಷ್ಟಪಡಲಿಲ್ಲ ಎಂದು ಹೇಳಿದ್ದಾಳೆ.