MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಈ ಪ್ರದೇಶದ ಜನರು ಭೂಮಿ ಮೇಲಲ್ಲ, ಅಡಿಯಲ್ಲಿ ವಾಸಿಸ್ತಾರೆ, ಏನಕ್ಕೆ?

ಈ ಪ್ರದೇಶದ ಜನರು ಭೂಮಿ ಮೇಲಲ್ಲ, ಅಡಿಯಲ್ಲಿ ವಾಸಿಸ್ತಾರೆ, ಏನಕ್ಕೆ?

ದಕ್ಷಿಣ ಆಸ್ಟ್ರೇಲಿಯಾದಲ್ಲೊಂದು ಭೂಗತ ನಗರವಿದೆ, ಅಲ್ಲಿ 1500 ಕ್ಕೂ ಹೆಚ್ಚು ಮನೆಗಳಿವೆ. ನೀವು ನೆಲದ ಮೇಲಿನ ಪ್ರತಿಯೊಂದು ಸೌಲಭ್ಯವನ್ನು ಆ ಭೂಗತ ಜಗತ್ತಿನಲ್ಲಿ ನೋಡಬಹುದು, ಬನ್ನಿ ಈ ಸ್ಥಳದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ.  

2 Min read
Suvarna News
Published : Oct 11 2023, 05:23 PM IST
Share this Photo Gallery
  • FB
  • TW
  • Linkdin
  • Whatsapp
17

ನೀವು ಪ್ರಪಂಚದಾದ್ಯಂತ ಅನೇಕ ಸ್ಥಳಗಳನ್ನು ನೋಡಿರಬಹುದು, ವಿಶ್ವದ ಅತಿ ಎತ್ತರದ ಕಟ್ಟಡವನ್ನು ಹೊಂದಿರುವ ಸ್ಥಳ, ವಿಶ್ವದ ಅತಿ ಎತ್ತರದ ಪ್ರತಿಮೆ ಇರುವ ಸ್ಥಳ. ಆದರೆ ಇಡೀ ನಗರವು ನೆಲದ ಒಳಗೆ ವಾಸಿಸುವ (underground city) ನಗರದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಈ ನಗರದಲ್ಲಿ ಮನೆ ಮಾತ್ರವಲ್ಲ, ಸೂಪರ್ ಮಾರ್ಕೆಟ್ ಗಳು, ಹೋಟೆಲ್ಸ್, ಚರ್ಚ್‌ಗಳು, ಅಂಗಡಿಗಳು ಎಲ್ಲವೂ ಭೂಮಿಯ ಅಡಿಯಲ್ಲಿದೆ. ಅಲ್ಲಿ ಎಲ್ಲಾ ಸೌಲಭ್ಯಗಳು ಸಹ ಲಭ್ಯವಿದೆ. 

27

ಇಡೀ ಊರಿಗೆ ಊರೇ ಭೂಮಿಯ ಅಡಿಯಲ್ಲಿ ವಾಸಿಸುತ್ತೆ ಅನ್ನೋದು ಅಚ್ಚರಿಯ ಸಂಗತಿಯಲ್ಲವೇ? ಆದರೆ ಇದು ನಿಜ, ದಕ್ಷಿಣ ಆಸ್ಟ್ರೇಲಿಯಾದ (South Australia) ಮರುಭೂಮಿಯಲ್ಲಿ ನೆಲದ ಕೆಳಗೆ ನೆಲೆಸಿರುವ ಒಂದು ನಗರವಿದೆ. ಈ ವಿಶಿಷ್ಟ ನಗರದ ಹೆಸರು ಕೂಬರ್ ಪ್ಯಾಡಿ. ಹಾಗಾದರೆ ಈ ಭೂಗತ ನಗರದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.
 

37

ವಿಶ್ವದ ಒಪೆಲ್ ರಾಜಧಾನಿ
ಕೂಬರ್ ಪ್ಯಾಡಿ (Coober Pedy) ನಗರದ ಬಗ್ಗೆ ಹೇಳೋದಾದ್ರೆ, ಈ ನಗರ ಇರುವ ಸ್ಥಳದಲ್ಲಿ ಅನೇಕ ಓಪಲ್ ಗಣಿಗಳಿವೆ. ಓಪಲ್ ನ ಖಾಲಿ ಗಣಿಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಇದನ್ನು ತುಂಬಾ ದುಬಾರಿ ರತ್ನದ ಕಲ್ಲು ಎಂದೂ ಕರೆಯಲಾಗುತ್ತದೆ ಮತ್ತು ಈ ಕಲ್ಲನ್ನು ಉಂಗುರದಲ್ಲಿ ಹಾಕುವ ಮೂಲಕ ಧರಿಸಲಾಗುತ್ತದೆ. ಈ ಕಾರಣದಿಂದಾಗಿ, ಈ ನಗರವನ್ನು 'ವಿಶ್ವದ ಒಪೆಲ್ ಕ್ಯಾಪಿಟಲ್ ಎಂದೂ ಕರೆಯಲಾಗುತ್ತದೆ.

47

ಭೂಗತರಾಗಲು ಕಾರಣ
ಕೂಬರ್ ಪ್ಯಾಡಿಯಲ್ಲಿ ಗಣಿಗಾರಿಕೆ ಕಾರ್ಯವನ್ನು 1915 ರಲ್ಲಿ ಪ್ರಾರಂಭಿಸಲಾಯಿತು. ಮರುಭೂಮಿ (desert) ಪ್ರದೇಶವಾಗಿರುವುದರಿಂದ, ತಾಪಮಾನವು ಬೇಸಿಗೆಯಲ್ಲಿ ಗಮನಾರ್ಹವಾಗಿ ಹೆಚ್ಚಾಗುತ್ತದೆ ಮತ್ತು ಚಳಿಗಾಲದಲ್ಲಿ ಗಮನಾರ್ಹವಾಗಿ ಇಳಿಯುತ್ತದೆ. ಹವಾಮಾನದ ಈ ಮನಸ್ಥಿತಿಯೊಂದಿಗೆ ಜನರು ಬದುಕುವುದು ತುಂಬಾ ಕಷ್ಟ. ಈ ಸಮಸ್ಯೆಯನ್ನು ತೊಡೆದು ಹಾಕಲು, ಜನರು ಗಣಿಗಾರಿಕೆ ನಂತರ ಖಾಲಿ ಗಣಿಗಳಲ್ಲಿ ನೆಲೆಸಲು ಪ್ರಾರಂಭಿಸಿದರು.
 

57

1500 ಮನೆಗಳಿವೆ.
ಈ ಪ್ರದೇಶದಲ್ಲಿ ಸುಮಾರು 1500 ಮನೆಗಳಿವೆ, ಅವು ಹೊರಗಿನಿಂದ ತುಂಬಾ ಸಾಮಾನ್ಯವೆಂದು ಕಾಣುತ್ತವೆ, ಆದರೆ ಈ ಮನೆಗಳ ಒಳಗೆ ಎಲ್ಲಾ ಸೌಕರ್ಯಗಳನ್ನು ಕಾಣಬಹುದು. ನೆಲದ ಕೆಳಗೆ ನಿರ್ಮಿಸಲಾದ ಈ ಮನೆಗಳಲ್ಲಿ ತುಂಬಾ ಬಿಸಿ ಅಥವಾ ಶೀತ ಇರೋದೇ ಇಲ್ಲ. ಬೇಸಿಗೆಯಲ್ಲಿ, ಇಲ್ಲಿನ ಜನರಿಗೆ ಎಸಿ ಕೂಲರ್ ಗಳ (AC cooler) ಅಗತ್ಯವಿಲ್ಲ ಮತ್ತು ಚಳಿಗಾಲದಲ್ಲಿ ಅವರು ಇಲ್ಲಿ ಹೀಟರ್ ಬಳಸುತ್ತಾರೆ.

67

ಚಲನಚಿತ್ರಗಳನ್ನು ಸಹ ಇಲ್ಲಿ ಚಿತ್ರೀಕರಿಸಲಾಗಿದೆ
ಈ ನಗರದ ಜನರ ಜೀವನಶೈಲಿ ಸಾಕಷ್ಟು ವಿಭಿನ್ನವಾಗಿದೆ, ಇದು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದಲ್ಲದೆ, ಹಾಲಿವುಡ್ ಚಲನಚಿತ್ರಗಳನ್ನು (Hollywood films)  ಸಹ ಈ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. 2000ನೇ ಇಸವಿಯಲ್ಲಿ ತೆರೆಕಂಡ 'ಪಿಚ್ ಬ್ಲ್ಯಾಕ್' ಚಿತ್ರದ ಚಿತ್ರೀಕರಣ ಇಲ್ಲಿಯೇ ನಡೆಯಿತು. ಚಿತ್ರೀಕರಣದ ನಂತರ, ನಿರ್ಮಾಣವು ಚಿತ್ರದಲ್ಲಿ ಬಳಸಲಾದ ಆಕಾಶ ನೌಕೆಯನ್ನು ಇಲ್ಲಿ ಬಿಟ್ಟಿದ್ದರು, ಇದು ಈಗ ಜನರ ಆಕರ್ಷಣೆಯ ಕೇಂದ್ರ. ಇಲ್ಲಿ ನಿರ್ಮಿಸಲಾದ ಹೈಬ್ರಿಡ್ ಇಂಧನ ವಿದ್ಯುತ್ ಸ್ಥಾವರವು ನಗರದ 70 ಪ್ರತಿಶತದಷ್ಟು ವಿದ್ಯುತ್ ಅಗತ್ಯಗಳನ್ನು ಪೂರೈಸುತ್ತದೆ.

77

ಅಗತ್ಯ ಸೌಲಭ್ಯಗಳಿವೆ
ಕೂಬರ್ ಪ್ಯಾಡಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅಂಡರ್ ಗ್ರೌಂಡ್ ಹೋಟೆಲ್ ಸಹ ಇದೆ. ಪ್ರವಾಸಿಗರು ಇಲ್ಲಿ ರಾತ್ರಿ ತಂಗಲು 12 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಪಾವತಿಸಬೇಕಾಗುತ್ತದೆ. ಈ ಪಟ್ಟಣವು ಉತ್ತಮ ಕ್ಲಬ್ ಗಳು, ಪೂಲ್ ಆಟಗಳಿಗಾಗಿ ಟೇಬಲ್ ಗಳು, ಡಬಲ್ ಹಾಸಿಗೆಗಳು ಮತ್ತು ಸಿಂಗಲ್ ಬೆಡ್ ಗಳನ್ನು ಹೊಂದಿರುವ ಕೊಠಡಿಗಳನ್ನು ಹೊಂದಿದೆ. ಸೋಫಾಗಳು ಮತ್ತು ಅಡುಗೆ ಮನೆಗಳಲ್ಲಿಯೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಾಣಬಹುದು.

About the Author

SN
Suvarna News
ಪ್ರವಾಸ
ಆಸ್ಟ್ರೇಲಿಯಾ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved