ಖಾಟು ಶ್ಯಾಮ್ ದೇಗುಲದ ಬಳಿ ಪತ್ರಕರ್ತೆಯೊಬ್ಬರ ಕುಟುಂಬಕ್ಕೆ ಅಹಿತಕರ ಘಟನೆ ಎದುರಾಗಿದೆ. ತಾಯಿಯ ಅನಾರೋಗ್ಯದ ಕಾರಣ ಹತ್ತಿರದ ಹೋಟೆಲ್‌ನ ಶೌಚಾಲಯ ಬಳಸಲು ಕೇಳಿಕೊಂಡಾಗ, ಹೋಟೆಲ್ ಸಿಬ್ಬಂದಿ ಬರೋಬ್ಬರಿ 805 ರೂಪಾಯಿ ಚಾರ್ಜ್‌  ಮಾಡಿದ್ದಾರೆ. ಈ ಮಾನವೀಯತೆ ರಹಿತ ಕೃತ್ಯಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಜನರ ದೌರ್ಬಲ್ಯವನ್ನು ಅನೇಕರು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ತಾರೆ. ಹಣ (money) ಮಾಡುವ ಆತುರದಲ್ಲಿ ಮಾನವೀಯತೆ ಮರೆಯುತ್ತಾರೆ. ಪ್ರವಾಸಿ ತಾಣಗಳಲ್ಲಿ ಇಂಥ ಪರಿಸ್ಥಿತಿಯನ್ನು ಅನೇಕರು, ಅನೇಕ ಬಾರಿ ಎದುರಿಸ್ತಾರೆ. ಹಣ್ಣು, ಜ್ಯೂಸ್, ಬಟ್ಟೆ ಸೇರಿದಂತೆ ಎಲ್ಲ ಸೇವೆಗೆ ದೇವಸ್ಥಾನ (temple) ಅಥವಾ ಪ್ರವಾಸಿ ಸ್ಥಳದಲ್ಲಿ ದುಬಾರಿ ಹಣ ಪಾವತಿ ಮಾಡ್ಬೇಕು. ಅನಿವಾರ್ಯ ಎನ್ನುವ ಕಾರಣಕ್ಕೆ ಪ್ರವಾಸಿಗರು ಹಣ ನೀಡ್ತಾರೆ. ಈಗ ಮತ್ತೊಂದು ಘಟನೆ ಇದಕ್ಕೆ ಸಾಕ್ಷ್ಯವಾಗಿದೆ. ರಾಜಸ್ಥಾನದ ಪ್ರಸಿದ್ಧ ಖಾಟು ಶ್ಯಾಮ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮಹಿಳೆ ತನ್ನ ಕೆಟ್ಟ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಪತ್ರಕರ್ತೆ ತನ್ನ ಕುಟುಂಬ ಎದುರಿಸಿದ ಸಮಸ್ಯೆಯನ್ನು ಲಿಂಕ್ಡ್ ಇನ್ (LinkedIn ) ನಲ್ಲಿ ವಿವರವಾಗಿ ವಿವರಿಸಿದ್ದಾಳೆ. ಕೆಲವೇ ನಿಮಿಷ ಶೌಚಾಲಯ ಬಳಸಿದ್ದಕ್ಕಾಗಿ ಅವರು ಒಂದು ನೂರು, ಎರಡು ನೂರಲ್ಲ ಬರೋಬ್ಬರಿ 805 ರೂಪಾಯಿ ಪಾವತಿಸಬೇಕಾದ ಸ್ಥಿತಿ ಎದುರಾಗಿತ್ತು.

ಪತ್ರಕರ್ತೆ (Journalist) ತನ್ನ ಕುಟುಂಬದ ಜೊತೆ ಬೆಳಿಗ್ಗೆ 6 ಗಂಟೆಗೆ ಹೋಟೆಲ್ನಿಂದ ಹೊರಟಿದ್ದಳು. ಸರಿಯಾಗಿ 7 ಗಂಟೆಗೆ ದೇವಾಲಯ ತಲುಪಿದ್ದರು. ಅಲ್ಲಿ ಸಾಮಾನ್ಯ ದರ್ಶನ ಸಾಲಿನಲ್ಲಿ ಎಲ್ಲರೂ ನಿಂತಿದ್ದರು. ಅಷ್ಟರವರೆಗೆ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದ್ರೆ ಅವರ ತಾಯಿಗೆ ಇದ್ದಕ್ಕಿದ್ದ ಹಾಗೆ ಆರೋಗ್ಯ ಹದಗೆಟ್ಟಿತ್ತು. ವಾಕರಿಕೆ, ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿತ್ತು. ಸ್ಥಿತಿ ಗಂಭೀರವಾಗ್ತಿದ್ದಂತೆ ಅವರು ಶೌಚಾಲಯ (toilet)ಕ್ಕೆ ಹೋಗೋದು ಅನಿವಾರ್ಯವಾಗಿತ್ತು. ದೇವಾಲಯದ ಆವರಣದಲ್ಲಿ ಸರಿಯಾದ ಸೌಲಭ್ಯವಿರಲಿಲ್ಲ. ಯಾವುದೇ ಶೌಚಾಲಯ ಸಿಗದ ಕಾರಣ, ಕುಟುಂಬದ ಸದಸ್ಯರು ಹತ್ತಿರದ ಹೋಟೆಲ್ಗೆ ಹೋದ್ರು. ಕೆಲವು ನಿಮಿಷಗಳ ಕಾಲ ಶೌಚಾಲಯಕ್ಕೆ ಹೋಗಲು ಅವಕಾಶ ನೀಡುವಂತೆ ರಿಸೆಪ್ಷನ್ನಲ್ಲಿ ವಿನಂತಿಸಿದ್ರು. ಆದರೆ ಹೋಟೆಲ್ ಸಿಬ್ಬಂದಿ ಯಾವುದೇ ಸಹಾನುಭೂತಿಯಿಲ್ಲದೆ ಶೌಚಾಲಯ ಬಳಸಲು ಹಣ ಕೇಳಿದ್ದಾರೆ.

₹565ಕ್ಕೆ ಒಂದು ಬಾಳೆಹಣ್ಣು! ಇದು ವಿಶ್ವದ ಅತಿ ದುಬಾರಿ ವಿಮಾನ

ಅನಿವಾರ್ಯ ಪರಿಸ್ಥಿತಿಯಲ್ಲಿ ಮಹಿಳೆ ಕುಟುಂಬ ಹಣ ನೀಡಲು ಸಿದ್ಧವಾಗಿದೆ. ಆದ್ರೆ ಹೊಟೇಲ್ ಸಿಬ್ಬಂದಿ ಹೇಳಿದ ಶುಲ್ಕ ಮಾತ್ರ ಬೆರಗಾಗಿಸಿದೆ. ಹೊಟೇಲ್ ಸಿಬ್ಬಂದಿ (Hotel staff) ಎರಡು ಬಾರಿ ಆಲೋಚನೆ ಮಾಡದೆ 805 ರೂಪಾಯಿ ನೀಡುವಂತೆ ಕೇಳಿದೆ. ಎಲ್ಲ ಡಿಟೇಲ್ಸ್ ನೀಡಿದ್ರೂ ಹೊಟೇಲ್ ಸಿಬ್ಬಂದಿ ಯಾವುದೇ ಕರುಣೆ ತೋರಲಿಲ್ಲ. 805 ರೂಪಾಯಿ ಪಾವತಿಸಿದ್ರೆ ಮಾತ್ರ ಶೌಚಾಲಯಕ್ಕೆ ಹೋಗುವ ಅವಕಾಶ ನೀಡ್ತೇವೆ ಎಂದಿದ್ದಲ್ಲದೆ ಬಿಲ್ ಕೂಡ ನೀಡಿತು. 

3 ವರ್ಷಗಳ ಕಾಯುವಿಕೆಯ ನಂತರ ಭಾರತೀಯಳಾದ ಖುಷಿ: ರಷ್ಯನ್

ರೆಡ್ಡಿಟ್ ನಲ್ಲಿ ಮಹಿಳೆ ತನ್ನ ಅನುಭವವನ್ನು ವಿವರಿಸಿದೆ. ಇದು ಮಾನವೀಯತೆ? ಶೌಚಾಲಯ ಬಳಸಲು ಕೇವಲ 805 ರೂಪಾಯಿ. ದಯೆ ಮತ್ತು ನಂಬಿಕೆಯನ್ನು ಹುಡುಕಿಕೊಂಡು ನಾವು ಬರುವ ಪವಿತ್ರ ಸ್ಥಳದ ಬಳಿ ಇಂತಹ ಅನುಭವ ತುಂಬಾ ದುಃಖಕರವಾಗಿದೆ ಎಂದು ಬರೆದಿದ್ದಾಳೆ. ಲಿಂಕ್ಡ್ ಇನ್ ಪೋಸ್ಟ್ ಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆ ಬಂದಿದೆ. ಹೊಟೇಲ್ ಈ ಕ್ರಮಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು 1867 ರ ಇನ್ಸ್ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದು ಹೋಟೆಲ್ ಅಥವಾ ಲಾಡ್ಜ್ಗಳು ಯಾರಿಗೂ ಕುಡಿಯುವ ನೀರು ಮತ್ತು ಶೌಚಾಲಯ ಬಳಕೆಗೆ ನಿರಾಕರಿಸುವಂತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ಬಂಡವಾಳಶಾಹಿಯ ತೀವ್ರ ಉದಾಹರಣೆ ಎಂದು ಕರೆದಿದ್ದಾರೆ. ಭವಿಷ್ಯದಲ್ಲಿ ನಾವು ಗಾಳಿಗೂ ಶುಲ್ಕ ವಿಧಿಸಬೇಕಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.