Asianet Suvarna News Asianet Suvarna News

ಸದಾ ನಿದ್ರೆ ಮಾಡುವ ಹಳ್ಳಿ: ಏನೀ ಗ್ರಾಮದ ವಿಚಿತ್ರ ಕಾಯಿಲೆ?

ಕಝಾಕಿಸ್ತಾನದ ಕಲಾಚಿ ಗ್ರಾಮದಲ್ಲಿ ಜನರು ಇದ್ದಕ್ಕಿದ್ದಂತೆ ನಿದ್ರೆಗೆ ಜಾರುತ್ತಾರೆ, ಕೆಲವೊಮ್ಮೆ ದಿನಗಟ್ಟಲೆ ನಿದ್ದೆ ಮಾಡುತ್ತಾರೆ. ಈ ರೋಗದ ನಿಗೂಢತೆ ಇತ್ತೀಚೆಗೆ ಬಗೆಹರಿದಿದ್ದು, ಯುರೇನಿಯಂ ಗಣಿಗಾರಿಕೆಯಿಂದ ಹೊರಹೊಮ್ಮುವ ಇಂಗಾಲದ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್‌ಗಳು ಇದಕ್ಕೆ ಕಾರಣ ಎಂದು ಕಂಡುಬಂದಿದೆ.

Why the people of this villages suddenly fall asleep while walking bni
Author
First Published Aug 27, 2024, 10:58 AM IST | Last Updated Aug 27, 2024, 11:23 AM IST

ಕೆಲವು ರಹಸ್ಯಗಳು ಬಯಲಾಗುವುದಿಲ್ಲ. ಇನ್ನು ಕೆಲವು ಬಯಲಾದರೂ ಅವುಗಳ ಹಿಂದಿನ ನಿಗೂಢತೆ ಹಾಗೂ ವಿಷಾದ ಹಾಗೇ ಉಳಿದೇ ಇರುತ್ತದೆ. ಅಂಥ ನಿಗೂಢ ಸಂಗತಿಗಳಲ್ಲಿ ಒಂದು, ಕಝಾಕಿಸ್ತಾನದ ಒಂದು ಹಳ್ಳಿಯ ಕತೆ. ಇಲ್ಲಿನ ಜನ ಇದ್ದಕ್ಕಿದ್ದಂತೆ  ಎಲ್ಲೆಂದರಲ್ಲಿ ಬಿದ್ದು ನಿದ್ದೆ ಮಾಡಿಬಿಡುತ್ತಾರೆ. ಕೆಲವೊಮ್ಮೆ ಕೆಲವರು ಐದಾರು ದಿನ ಹಾಗೇ ನಿದ್ರೆ ಹೋಗಿಬಿಡುತ್ತಾರೆ. ಇದು ಬಹುಕಾಲ ವಿಜ್ಞಾನಿಗಳಿಗೆ, ವೈದ್ಯರಿಗೆ ಬಗೆಹರಿಸಲಾಗದ ಸಂಗತಿಯಾಗಿ ಉಳಿದಿತ್ತು.  

ಈ ಪ್ರಪಂಚ ಅನೇಕ ಅದ್ಭುತಗಳು ಮತ್ತು ರಹಸ್ಯಗಳಿಂದ ತುಂಬಿದೆ. ವಿಜ್ಞಾನವೂ ಅರಗಿಸಿಕೊಳ್ಳಲಾಗದ ಹಲವು ರಹಸ್ಯಗಳು ಈ ಭೂಮಿಯಲ್ಲಿವೆ. ಅಂತಹ ಒಂದು ನಿಗೂಢ ಹಳ್ಳಿಯ ಬಗ್ಗೆ ಇಂದು ನಾವು ತಿಳಿಯೋಣ. ವಾಸ್ತವವಾಗಿ ಇವು ಎರಡು ಹಳ್ಳಿಗಳು. ಇಲ್ಲಿನ ಮನೆಗಳು ಹಾಗೂ ಜನರ ಸಂಖ್ಯೆ ಹೆಚ್ಚೇನಲ್ಲ. ರಮ್ಯವಾದ ಪ್ರಕೃತಿ ಸೌಂದರ್ಯದ ನಡುವೆ ಇರುವ ಈ ಗ್ರಾಮಗಳ ಜನಸಂಖ್ಯೆ ಸುಮಾರು ಇನ್ನೂರು. ವಿಚಿತ್ರ ಏನೆಂದರೆ ಈ ಗ್ರಾಮದ ಜನರು ಎಲ್ಲೇ ಇದ್ದರೂ, ನಡೆದುಕೊಂಡು ಹೋಗುವಾಗಲೋ, ಕುಳಿತಲ್ಲೇ ಕುಳಿತಿರುವಾಗಲೋ, ಮಾತನಾಡುತ್ತಿರುವಾಗಲೋ,  ಇದ್ದಕ್ಕಿದ್ದಂತೆ ನಿದ್ರೆಗೆ ಜಾರುತ್ತಾರೆ. ಅಷ್ಟೇ ಅಲ್ಲ ಈ ಗ್ರಾಮದ ಜನರು ಕೆಲವೊಮ್ಮೆ ದಿನಗಟ್ಟಲೆ, ವಾರಗಟ್ಟಲೆ ನಿದ್ದೆ ಮಾಡುತ್ತಾರೆ!

ಇದು ಕಜಕಿಸ್ತಾನದ ಗ್ರಾಮ. ಇದರ ಹೆಸರು ಕಲಾಚಿ. ಇದು ಪ್ರಪಂಚದ ಈ ವಿಚಿತ್ರ ಸಂಭವಕ್ಕೆ ಹೆಸರುವಾಸಿ. ಈ ಹಳ್ಳಿಯಲ್ಲಿ ಜನ ಥಟ್ಟನೆ ನಿದ್ದೆಗೆ ಜಾರುತ್ತಾರೆ. ದಿನಗಟ್ಟಲೆ ಮಲಗುತ್ತಾರೆ. ಈ ಅಸ್ಪಷ್ಟ ರೋಗವು ವಿಜ್ಞಾನಿಗಳು ಮತ್ತು ಸಂಶೋಧಕರನ್ನು ವರ್ಷಗಳಿಂದ ಗೊಂದಲಗೊಳಿಸಿದೆ. ಕಲಾಚಿ ಗ್ರಾಮದಲ್ಲಿ ವಾಸಿಸುವ ಹಲವು ಮಂದಿ ಎಚ್ಚರಿಕೆಯಿಲ್ಲದೆ ಗಂಟೆಗಳು ಅಥವಾ ದಿನಗಳವರೆಗೆ ನಿದ್ರಿಸುತ್ತಾರೆ. ಈ ನಿದ್ರೆ ಸಾಮಾನ್ಯ ನಿದ್ರೆಯಲ್ಲ, ಗಾಢವಾದ ನಿದ್ರೆ. ಆ ಸಮಯದಲ್ಲಿ ಅವರು ಸಂಪೂರ್ಣವಾಗಿ ಪ್ರಜ್ಞಾಹೀನರಾಗುತ್ತಾರೆ. ಮತ್ತೊಂದು ವಿಚಿತ್ರವೆಂದರೆ ಅವರು ಎದ್ದ ನಂತರ ಅವರು ಎಲ್ಲಿದ್ದರು ಮತ್ತು ಯಾವಾಗ ಮಲಗಿದರು ಎಂದು ಅವರಿಗೆ ನೆನಪಿರುವುದಿಲ್ಲ!

ಇದೊಂದು ಕಾಯಿಲೆ ಎಂದು ಸಂಶೋಧಕರು ಅಂದಾಜಿಸಿದರು. ಆದರೆ ಈ ರೋಗದ ನಿಖರವಾದ ಕಾರಣ ದೀರ್ಘಕಾಲದವರೆಗೆ ತಿಳಿಯಲಿಲ್ಲ. ಇದರ ಬಗ್ಗೆ ಅನೇಕ ಸಿದ್ಧಾಂತಗಳು ಮತ್ತು ಊಹೆಗಳಿವೆ. ಕೆಲವು ಸಂಶೋಧಕರು ಹಳ್ಳಿಯಲ್ಲಿನ ಕೆಲವು ಡಾರ್ಕ್ ವಸ್ತು ಅಥವಾ ಅನಿಲ ರೋಗಕ್ಕೆ ಕಾರಣವಾಗಿರಬಹುದು ಎಂದು ಭಾವಿಸಿದ್ದರು. ಯಾವುದಾದರೂ ಅಜ್ಞಾತ ವೈರಸ್ ಕಾಯಿಲೆಗೆ ಕಾರಣ ಇರಬಹುದು ಎಂದು ಕೆಲವರು ಭಾವಿಸಿದರು.

ಆದರೆ ಈ ರೋಗವು ಗ್ರಾಮಸ್ಥರ ಜೀವನವನ್ನು ಬಹಳ ಬಾಧಿಸಿದೆ. ಜನ ತಮ್ಮ ಕೆಲಸಗಳನ್ನು ಸರಾಗವಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇವರ ಸಾಮಾಜಿಕ ಜೀವನ ನರಳುತ್ತಿತ್ತು. ಇದರಿಂದ ಆರ್ಥಿಕ ಪರಿಸ್ಥಿತಿಯೂ ಹದಗೆಡುತ್ತಿತ್ತು.

ಇದೊಂದು ಟಿಕೆಟ್‌ ಇದ್ರೆ ಸಾಕು.. 56 ದಿನಗಳ ಕಾಲ ರೈಲಿನಲ್ಲಿ ಇಡೀ ಭಾರತವನ್ನು ಸುತ್ತಬಹುದು..ಇದನ್ನು ಬುಕ್‌ ಮಾಡೋದು ಹೇಗೆ?

ಈ ನಿದ್ರಾ ಅನಾಹುತಕ್ಕೆ ಕಾರಣವೇನೆಂಬುದು ವಿಜ್ಞಾನಿಗಳಿಗೆ ಹಲವು ದಿನಗಳಿಂದ ಅರ್ಥವಾಗಿರಲಿಲ್ಲ. ಕೊನೆಗೂ ಈ ನಿಗೂಢತೆ ಇತ್ತೀಚೆಗೆ ಬಗೆಹರಿದಂತಿದೆ. ಇಲ್ಲೇ ಹತ್ತಿರದ ಯುರೇನಿಯಂ ಗಣಿಗಾರಿಕೆಯೇ ಇದಕ್ಕೆ ಕಾರಣ ಎಂದು ಕಜಕಿಸ್ತಾನದ ಹಿಂದಿನ ಉಪ ಪ್ರಧಾನಿ ಬರ್ಡಿಬೆಕ್ ಸಪರ್ಬೆವ್ ಹೇಳಿದ್ದಾರೆ. ಇಲ್ಲಿನ ಎಲ್ಲಾ ನಿವಾಸಿಗಳ ವೈದ್ಯಕೀಯ ಪರೀಕ್ಷೆ ಮಾಡಿ, ಅದರ ಫಲಿತಾಂಶಗಳನ್ನು ವಿಶ್ಲೇಷಿಸಿದ ನಂತರ, ಸಂಶೋಧಕರು ಗಾಳಿಯಲ್ಲಿ ಇಂಗಾಲದ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್‌ಗಳ ಮಟ್ಟ ಹೆಚ್ಚಿರುವುದೇ ಇದಕ್ಕೆ ಕಾರಣ ಎಂದು ಅಂದಾಜಿಸಿದರು.

ಸದ್ಯ ಇಲ್ಲಿನ ಯುರೇನಿಯಂ ಗಣಿಗಳನ್ನು ಮುಚ್ಚಲಾಗಿದೆ. ಈ ಭಾಗದ ಜನರನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಈ ಗ್ರಾಮದಲ್ಲಿ ಸದ್ಯ ಯಾರೂ ವಾಸವಿಲ್ಲದಂತೆ ಮಾಡಲಾಗಿದೆ. ಇಲ್ಲಿಂದ ಹೊರಗೆ ಹೋದವರು ಈ ಸ್ಲೀಪೀ ಕಾಯಿಲೆಯಿಂದ ಮತ್ತೆ ನರಳಿದ್ದಾರೆಯೇ ಅಥವಾ ಗುಣಮುಕ್ತರಾದರೇ ಎಂಬುದು ಗೊತ್ತಾಗಿಲ್ಲ. 

ನೀವೂ ಇದರಿಂದ ತಿಳಿದುಕೊಳ್ಳಬೇಕಾದ್ದೇನೆಂದರೆ, ನಿಮ್ಮ ಸುತ್ತಮುತ್ತ ವಾತಾವರಣದಲ್ಲಿ ಇಂಗಾಲದ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್‌ಗಳ ಮಟ್ಟ ಅಧಿಕವಾಗಿದ್ದರೆ, ಯಾವಾಗಲೂ ನಿದ್ರೆಯ ಫೀಲ್ ಬರುತ್ತಾ ಇರಬಹುದು. ಇದರ ಬಗ್ಗೆ ಎಚ್ಚರವಾಗಿರಿ. 

ತಾಜ್‌ಮಹಲ್ ಮುಂದೆ ರೀಲ್ಸ್ ಮಾಡಿ, ಭಾರತಕ್ಕೆ ಬರಬೇಡಿ ಅಂತ ಹೇಳಿದ್ಯಾಕೆ ವಿದೇಶಿ ಮಹಿಳೆ?
 

Latest Videos
Follow Us:
Download App:
  • android
  • ios