MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಇದೊಂದು ಟಿಕೆಟ್‌ ಇದ್ರೆ ಸಾಕು.. 56 ದಿನಗಳ ಕಾಲ ರೈಲಿನಲ್ಲಿ ಇಡೀ ಭಾರತವನ್ನು ಸುತ್ತಬಹುದು..ಇದನ್ನು ಬುಕ್‌ ಮಾಡೋದು ಹೇಗೆ?

ಇದೊಂದು ಟಿಕೆಟ್‌ ಇದ್ರೆ ಸಾಕು.. 56 ದಿನಗಳ ಕಾಲ ರೈಲಿನಲ್ಲಿ ಇಡೀ ಭಾರತವನ್ನು ಸುತ್ತಬಹುದು..ಇದನ್ನು ಬುಕ್‌ ಮಾಡೋದು ಹೇಗೆ?

ಭಾರತೀಯ ರೈಲ್ವೆಯಲ್ಲಿ ಇಂದು ವಿಶೇಷ ಸರ್ವೀಸ್‌ ಇದೆ. ಒದೇ ರೈಲು ಟಿಕೆಟ್‌ನೊಂದಿಗೆ 56 ದಿನಗಳವರೆಗೆ ಪ್ರಯಾಣಿಸಲು ನಿಮಗೆ ಅನುಕೂಲವಾಗುತ್ತದೆ. ಅಸಲಿಗೆ ಈ ಟಿಕೆಟ್ ಏನು, ಬೆಲೆ ಎಷ್ಟು, ಹೇಗೆ ಬುಕಿಂಗ್ ಮಾಡಿಕೊಳ್ಳುವುದು ಎಂಬ ವಿಧಾನವನ್ನು ಇಲ್ಲಿದೆ ನೋಡಿ.. 

1 Min read
Author : Asianetnews Kannada Stories
Published : Aug 26 2024, 04:08 PM IST
Share this Photo Gallery
  • FB
  • TW
  • Linkdin
  • Whatsapp
15

ಭಾರತೀಯ ರೈಲ್ವೆ ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ಸಾಗಿಸುತ್ತಿದೆ. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಹಲವಾರು  ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೆ, ರೈಲ್ವೆ ಒದಗಿಸುವ ಹಲವು ಸೇವೆಗಳ ಬಗ್ಗೆ ಬಹಳಷ್ಟು ಪ್ರಯಾಣಿಕರಿಗೆ ತಿಳಿದಿಲ್ಲ. ಅದೇ ರೀತಿ, ಬಹಳ ಕಡಿಮೆ ಜನರಿಗೆ ಮಾತ್ರ ತಿಳಿದಿರುವ ಸೇವೆಗಳಲ್ಲಿ ಸರ್ಕ್ಯುಲರ್ ಜರ್ನಿ ಟಿಕೆಟ್ (Circular Journey Ticket) ಕೂಡ ಒಂದು.

25

ಭಾರತೀಯ ರೈಲ್ವೆ ವೆಬ್‌ಸೈಟ್‌ನಿಂದ ಪಡೆದ ಮಾಹಿತಿಯ ಪ್ರಕಾರ, ರೈಲ್ವೆ ಸರ್ಕ್ಯುಲರ್ ಜರ್ನಿ ಟಿಕೆಟ್ ಎಂಬ ವಿಶೇಷ ಟಿಕೆಟ್ ಅನ್ನು ನೀಡುತ್ತದೆ. ಈ ಟಿಕೆಟ್‌ನೊಂದಿಗೆ ರೈಲು ಪ್ರಯಾಣಿಕರು 8 ವಿವಿಧ ನಿಲ್ದಾಣಗಳಿಂದ ಒಂದು ಟಿಕೆಟ್‌ನಲ್ಲಿ 56 ದಿನಗಳವರೆಗೆ ಪ್ರಯಾಣಿಸಬಹುದು. ಈ ಅವಧಿಯಲ್ಲಿ ನೀವು ಹಲವಾರು ರೈಲುಗಳನ್ನು ಹತ್ತಬಹುದು. ಸಾಮಾನ್ಯವಾಗಿ ಯಾತ್ರಿಕರು ಅಥವಾ ಪ್ರವಾಸಿಗರು ಈ ರೈಲ್ವೆ ಟಿಕೆಟ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ.
 

35

ನೀವು ವಿವಿಧ ನಿಲ್ದಾಣಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಿದರೆ ಹೆಚ್ಚು  ಖರ್ಚಾಗುತ್ತದೆ. ಆದರೆ ಸರ್ಕ್ಯುಲರ್ ಜರ್ನಿ ಟಿಕೆಟ್‌ಗಳು 'ಟೆಲಿಸ್ಕೋಪ್ ಶುಲ್ಕ'ದ ಪ್ರಯೋಜನವನ್ನು ನೀಡುತ್ತವೆ, ಇದು ಸಾಮಾನ್ಯ ಪಾಯಿಂಟ್-ಟು-ಪಾಯಿಂಟ್ ಶುಲ್ಕಗಳಿಗಿಂತ ಕಡಿಮೆಯಾಗಿರುತ್ತದೆ. ಯಾವುದೇ ದರ್ಜೆಯಲ್ಲಿ ಪ್ರಯಾಣಿಸಲು ಸರ್ಕ್ಯುಲರ್ ಜರ್ನಿ ಟಿಕೆಟ್‌ಗಳನ್ನು ಖರೀದಿಸಬಹುದು.
 

45

ನೀವು ಉತ್ತರ ರೈಲ್ವೆಯಲ್ಲಿ ನವದೆಹಲಿಯಿಂದ ಕನ್ಯಾಕುಮಾರಿಗೆ ಒಂದು ಸರ್ಕ್ಯುಲರ್ ಜರ್ನಿ ಟಿಕೆಟ್ ಅನ್ನು ಬುಕ್ ಮಾಡಿದ್ದೀರಿ ಎಂದು ಭಾವಿಸೋಣ, ಆಗ ನಿಮ್ಮ ಪ್ರಯಾಣ ನವದೆಹಲಿಯಿಂದ ಪ್ರಾರಂಭವಾಗುತ್ತದೆ. ಮತ್ತೆ  ನವದೆಹಲಿಯಲ್ಲೇ ಕೊನೆಗೊಳ್ಳುತ್ತದೆ. ಮಥುರಾದಿಂದ ಮುಂಬೈ ಸೆಂಟ್ರಲ್, ಮರ್ಮಗೋವಾ, ಮೈಸೂರು, ಬೆಂಗಳೂರು ನಗರ, ಊಟಿ, ತಿರುವನಂತಪುರಂ ಸೆಂಟ್ರಲ್ ಮೂಲಕ ಕನ್ಯಾಕುಮಾರಿ ತಲುಪಿ ಮತ್ತೆ ಅದೇ ಮಾರ್ಗದಲ್ಲಿ ನವದೆಹಲಿಗೆ ತಲುಪಬೇಕು.
 

55

ಸರ್ಕ್ಯುಲರ್ ಜರ್ನಿ ಟಿಕೆಟ್  ಮಾನ್ಯತೆಯ ಅವಧಿ 56 ದಿನಗಳು. ರೌಂಡ್ ಟ್ರಿಪ್ ಟಿಕೆಟ್‌ಗಳನ್ನು ನೇರವಾಗಿ ಟಿಕೆಟ್ ಕೌಂಟರ್‌ನಿಂದ ಖರೀದಿಸಲು ಸಾಧ್ಯವಿಲ್ಲ. ಇದಕ್ಕಾಗಿ ಮೊದಲು ಅರ್ಜಿ ಸಲ್ಲಿಸಬೇಕು. ನೀವು ನಿಮ್ಮ ಪ್ರಯಾಣ ಮಾರ್ಗದ ಬಗ್ಗೆ ಮಾಹಿತಿಯನ್ನು ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಅಥವಾ ನಿಲ್ದಾಣ ವ್ಯವಸ್ಥಾಪಕರೊಂದಿಗೆ ಹಂಚಿಕೊಳ್ಳಬೇಕು.
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Asianetnews Kannada Stories
ಭಾರತೀಯ ರೈಲ್ವೆ
ಐಆರ್‌ಸಿಟಿಸಿ

Latest Videos
Recommended Stories
Recommended image1
ಲವ್ ಮ್ಯಾರೇಜ್‌ಗೆ ಮನೆಯವರು ಒಪ್ಪುತ್ತಿಲ್ಲವೇ? ಈ ದೇವಸ್ಥಾನಕ್ಕೆ ಭೇಟಿ ನೀಡಿ, ಎಲ್ಲವೂ ಸುಸೂತ್ರವಾಗುವುದು
Recommended image2
ಬಡವರೇ ಇಲ್ಲದ ದೇಶ ಇದು, ಕಷ್ಟದ ಸಮಯದಲ್ಲಿ ಸರ್ಕಾರವೇ ತುಂಬಿಸುತ್ತೆ ಜನರ ಜೇಬು!
Recommended image3
ಐಷಾರಾಮಿ ಹೋಟೆಲ್‌ಗಿಂತಲೂ ಚಂದ ಈ ರೈಲ್ವೆ ಸ್ಟೇಷನ್ ವಾಸ್ತವ್ಯ! ನೀಲಗಿರಿ ತಪ್ಪಲಿನಲ್ಲಿ 'ರಾಜಮನೆತನದ' ಅನುಭವ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved