Sun Never Sets : ಈ 6 ಸ್ಥಳಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ; ರಾತ್ರಿ 2 ಗಂಟೆಯಾದ್ರೂ ಏನು ಅನ್ಸಲ್ಲ..!
ಬೆಳಗ್ಗೆ ಉದಯಿಸುವ ಸೂರ್ಯ ಸಂಜೆ ಮುಳುಗುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ನಮ್ಮ ಭೂಮಿ ಮೇಲೆ ಕೆಲವು ದಿನಗಳ ಕಾಲ ಸೂರ್ಯಾಸ್ತವೇ ಆಗದ ಸ್ಥಳಗಳು ಇವೆ ಎಂದರೆ ನೀವು ನಂಬಲೇಬೇಕು. ಹೌದು ಅಲ್ಲಿ ಸುಮಾರು 70 ದಿನಗಳಿಗಿಂತ ಹೆಚ್ಚು ಕಾಲ ಸೂರ್ಯಾಸ್ತವೇ ಆಗಲ್ಲ. ಈ ಆರು ಅಚ್ಚರಿ ಸ್ಥಳಗಳ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ.
ಫಿನ್‌ಲ್ಯಾಂಡಿನ ಹಲವೆಡೆ ಬೇಸಿಗೆಯಲ್ಲಿ ಸೂರ್ಯಾಸ್ತ ಆಗುವುದಿಲ್ಲ. ಸುಮಾರು 73 ದಿನಗಳವರೆಗೆ ಇಲ್ಲಿ ಸೂರ್ಯ ನಿರಂತರ ಬೆಳಗುತ್ತಿರುತ್ತಾನೆ. ಚಳಿಗಾಲದ ಸಮಯದಲ್ಲಿ ಇಲ್ಲಿ ಸೂರ್ಯನೇ ಬೆಳಕೇ ಇರುವುದಿಲ್ಲ.
ಯುರೋಪಿನ ಅತೀದೊಡ್ಡ ದ್ವೀಪವಾದ ಐಸ್ಲ್ಯಾಂಡ್‌ನಲ್ಲಿ ಒಂದು ತಿಂಗಳು ಸೂರ್ಯಾಸ್ತ ಆಗಲ್ಲ. ಜೂನ್‌ನಲ್ಲಿ ಐಸ್ಲ್ಯಾಂಡ್‌ನಲ್ಲಿ ಉದಯಿಸಿದ ಸೂರ್ಯ ಮುಳುಗುವುದೇ ಇಲ್ಲ. ಇದು ಸೊಳ್ಳೆಗಳಿಲ್ಲದ ದೇಶವೆಂದು ಸಹ ಹೆಸರುವಾಸಿಯಾಗಿದೆ.
ನಾರ್ವೆಯಲ್ಲಿ ಸುಮಾರು 76 ದಿನಗಳವರೆಗೆ ಸೂರ್ಯ ಮುಳುಗುವುದಿಲ್ಲ. ನಾರ್ವೆಯ ಸ್ವಾಲ್‌ಬಾರ್ಡ್‌ನಲ್ಲಿ ಏಪ್ರಿಲ್ 10 ರಿಂದ ಆಗಸ್ಟ್ 23 ರವರೆಗೆ ಸೂರ್ಯಾಸ್ತ ಆಗಲ್ಲ. ಈ ಸಮಯದಲ್ಲಿ ರಾತ್ರಿಯಿಲ್ಲದ ದಿನಗಳನ್ನು ನೋಡಲು ಅನೇಕ ಜನರು ಹೋಗುತ್ತಾರೆ.
ಇದು ಆರ್ಕ್ಟಿಕ್ ವೃತ್ತದಿಂದ ಸುಮಾರು ಎರಡು ಡಿಗ್ರಿಗಳಷ್ಟು ಎತ್ತರದಲ್ಲಿದೆ. ಇಲ್ಲಿ ಬೇಸಿಗೆಯಲ್ಲಿ ಸುಮಾರು ಎರಡು ತಿಂಗಳ ಕಾಲ ಸೂರ್ಯಾಸ್ತವೇ ಆಗಲ್ಲ. ಹಾಗೂ ಚಳಿಗಾಲದಲ್ಲಿ ಈ ಸ್ಥಳವು ಸತತ 30 ದಿನಗಳ ಸಂಪೂರ್ಣ ಕತ್ತಲೆಯಲ್ಲಿರುತ್ತದೆ.
ಸ್ವೀಡನ್‌ನಲ್ಲಿ ಮೇ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಮಧ್ಯರಾತ್ರಿಯಲ್ಲಿ ಸೂರ್ಯ ಮುಳುಗುತ್ತಾನೆ. ಇನ್ನು ಸ್ಪೀಡನ್‌ನ ಉತ್ತರದ ನಗರವಾದ ಕಿರುನಾದಲ್ಲಿ ಮೇ ನಿಂದ ಆಗಸ್ಟ್ ವರೆಗೆ ಸುಮಾರು 100 ದಿನಗಳ ಕಾಲ ಸೂರ್ಯ ಮುಳುಗುವುದಿಲ್ಲ.
ಬಾರೌ, ಇದು ಯುಎಸ್‌ನ ಅಲಸ್ಕಾದ ಉತ್ತರದಲ್ಲಿರುವ ಸಣ್ಣ ನಗರ. ಇದು ಆರ್ಕ್ಟಿಕ್ ವೃತ್ತದ ಉತ್ತರಕ್ಕೆ ಇದೆ, ಹಾಗಾಗಿ ಇಲ್ಲಿ ಮೇ ಅಂತ್ಯದಿಂದ ಜುಲೈ ಅಂತ್ಯದವರೆಗೆ ಸೂರ್ಯಾಸ್ತವಾಗುವುದಿಲ್ಲ. ನವೆಂಬರ್ ಆರಂಭದಿಂದ 30 ದಿನಗಳವರೆಗೆ ಇಲ್ಲಿ ಸೂರ್ಯೋದಯವೂ ಆಗುವುದಿಲ್ಲ.