ವಿಮಾನದಲ್ಲಿ ಗಗನಸಖಿಯ ಚಿತ್ರ ಬಿಡಿಸಿ ಗಿಫ್ಟ್ ನೀಡಿದ ಪ್ರಯಾಣಿಕ: ವಿಡಿಯೋ ವೈರಲ್
ವಿಮಾನದೊಳಗಿನ ಸುಂದರವಾದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರ ಮನ ಸೆಳೆದಿದೆ.
ಮುಂಬೈ: ವಿಮಾನ ಪ್ರಯಾಣ ಅನೇಕ ಸಂದರ್ಭಗಳಲ್ಲಿ ಪ್ರಯಾಣಿಕರ ಅತಿರೇಕದ ವರ್ತನೆಯ ಕಾರಣಕ್ಕೆ ಸುದ್ದಿಯಾಗುತ್ತಿರುತ್ತದೆ. ವಿಮಾನದೊಳಗೆ ವಿಮಾನದ ಸಿಬ್ಬಂದಿಯೊಂದಿಗೆ ಪ್ರಯಾಣಿಕರು ತೋರುವ ವಿಚಿತ್ರ ವರ್ತನೆಗಳ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಈ ಬಾರಿ ವಿಮಾನದೊಳಗಿನ ಸುಂದರವಾದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರ ಮನ ಸೆಳೆದಿದೆ.
ಈ ವಿಡಿಯೋದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ವ್ಯಕ್ತಿಯೊಬ್ಬರು ವಿಮಾನದಲ್ಲಿದ್ದ ಗಗನಸಖಿಯ (flight attendant) ಚಿತ್ರ ಬಿಡಿಸಿ ಅದನ್ನು ಆಕೆಗೆ ಗಿಫ್ಟ್ ನೀಡಿದ್ದಾರೆ. ಅಪರಿಚಿತ (Unknown Passenger) ಪ್ರಯಾಣಿಕರೊಬ್ಬರು ನೀಡಿದ ಅಚ್ಚರಿಯ ಉಡುಗೊರೆ ನೋಡಿ ಗಗನಸಖಿ ಅಚ್ಚರಿಯ ಜೊತೆ ಭಾವುಕರಾಗಿದ್ದಾರೆ. ಜೊತೆಗೆ ತಮ್ಮ ಭಾವಚಿತ್ರ ಬಿಡಿಸಿದ ಆ ಮಹಾನುಭವನಿಗೆ ಪುಟ್ಟದೊಂದು ಗಿಫ್ಟ್ (Gift) ನೀಡಿ ಧನ್ಯವಾದ ಹೇಳಿದ್ದಾರೆ.
50 ಸೆಕೆಂಡ್‌ಗಳ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ (Social Media) ರೆಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಮಾನದಲ್ಲಿ ಆಹಾರದ ಬಗ್ಗೆ ವಿಚಾರಿಸಿಕೊಳ್ಳಲು ಈ ಪ್ರಯಾಣಿಕನ ಬಳಿ ಗಗನಸಖಿ ಬಂದು ಮೆನು ತೋರಿಸಿ ಏನು ಆಹಾರ ಬೇಕು ಎಂದು ಕೇಳಿದ್ದಾರೆ. ಈ ಒಂದು ಕ್ಷಣ ಆಕೆಯ ಭಾವಚಿತ್ರವನ್ನು ಕಣ್ಣಲ್ಲೇ ಸೆರೆ ಹಿಡಿದುಕೊಂಡ ಸ್ಮಾರ್ಟ್ ಕಲಾವಿದ ಆಕೆಯ ಚಿತ್ರವನ್ನು ಬಿಳಿಯ ಹಾಳೆಯ ಮೇಲೆ ಚಿತ್ರಿಸಿದ್ದಾನೆ. ಅಲ್ಲದೇ ಆಕೆ ಇದ್ದ ಸ್ಥಳಕ್ಕೆ ತೆರಳಿ ಆ ಪುಟ್ಟ ಉಡುಗೊರೆಯನ್ನು ಆಕೆಗೆ ನೀಡಿದ್ದಾನೆ. ಗಗನಸಖಿ ಮುಖಕ್ಕೆ ಫೇಸ್‌ಮಾಸ್ಕ್ (FaceMask) ಧರಿಸಿದ್ದು, ಹಾಗೆಯೇ ಈತ ಹಾಳೆಯ ಮೇಲೆ ಆಕೆಯನ್ನು ಚಿತ್ರಿಸಿದ್ದಾನೆ.
ಡ್ರಗ್ ಹೀರಿ ಫ್ಲೈಟ್ ಏರಿದ: ಗಗನಸಖಿಯೊಂದಿಗೆ ಗಬ್ಬು ಗಬ್ಬಾಗಿ ವರ್ತಿಸಿದ
ಅಚ್ಚರಿಯ ಉಡುಗೊರೆ ಪಡೆದ ಆಕೆ ಖುಷಿಯಿಂದ ಆ ಚಿತ್ರವನ್ನು ತನ್ನ ಸಹೋದ್ಯೋಗಿ ಬಳಿ ಆಕೆ ತೋರಿಸುತ್ತಾಳೆ. ಅಲ್ಲದೇ ಆತನಿಗೆ ಧನ್ಯವಾದ ತಿಳಿಸಿ ಪುಟ್ಟದಾದ ಗಿಫ್ಟ್‌ನ್ನು ಆತನಿಗೆ ನೀಡುತ್ತಾಳೆ. ಇವರಿಬ್ಬರ ಈ ಮಧುರವಾದ ವಿಡಿಯೋ ಈಗ ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ವೈರಲ್ ಆಗಿದ್ದು, ನೋಡುಗರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗಗನಸಖಿ ನೀಡಿದ ಗಿಫ್ಟ್‌ಗೆ ಈ ಪ್ರಯಾಣಿಕ ಸಂತಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಇದು ಜಪಾನ್ ಏರ್‌ಲೈನ್ಸ್‌ಗೆ (Japan Airlines) ಸೇರಿದ ವಿಮಾನದಲ್ಲಿ ನಡೆದ ಘಟನೆ ಆಗಿದ್ದು, ಈ ವಿಮಾನ ಟೋಕಿಯೋದಿಂದ (Tokyo) ಡಲ್ಲಾಸ್‌ಗೆ (Dallas) ತೆರಳುತ್ತಿತ್ತು. "ವ್ಯಕ್ತಿಯೊಬ್ಬ ಗಗನಸಖಿಯ ಚಿತ್ರ ಬಿಡಿಸಿದ, ಆಕೆ ಅದಕ್ಕೆ ಪ್ರತಿಯಾಗಿ ಉಡುಗೊರೆ ನೀಡಿದಳು' ಎಂದು ಈ ವಿಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ. ಎರಡು ದಿನಗಳ ಹಿಂದೆ ಪೋಸ್ಟ್ ಆಗಿರುವ ಈ ವಿಡಿಯೋವನ್ನು 85 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ವಿಮಾನದಲ್ಲಿ ಪಾಕಿಸ್ತಾನ ಪ್ರಜೆಯ ಕಿತಾಪತಿ: ಫ್ಲೈಟ್ ವಿಂಡೋ ಒಡೆಯಲು ಯತ್ನ: ದುಬೈನಲ್ಲಿ ಬಂಧನ
ಈ ದೃಶ್ಯವನ್ನು ನೋಡಲು ಖುಷಿಯಾಗುತ್ತಿದೆ. ಈ ವಿಮಾನದಲ್ಲಿ ಬೊಬ್ಬೆ ಹೊಡೆಯುವ ಕಿತ್ತಾಡುವ ಜನರಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರಂಪಂಚ ಎಷ್ಟು ಸುಂದರವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಮ್ಮ ಸಣ್ಣದೊಂದು ಸುಂದರವಾದ ವರ್ತನೆ ಹೇಗೆ ಇತರರನ್ನು ಖುಷಿ ಪಡಿಸಬಲ್ಲದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅಪರಿಚಿತನೋರ್ವನ ಈ ಸುಂದರ ಗಿಫ್ಟ್ ಗಗನಸಖಿಯನ್ನು ಖುಷಿ ಪಡಿಸಿದೆ.