ಡ್ರಗ್ ಹೀರಿ ಫ್ಲೈಟ್ ಏರಿದ: ಗಗನಸಖಿಯೊಂದಿಗೆ ಗಬ್ಬು ಗಬ್ಬಾಗಿ ವರ್ತಿಸಿದ

ವಿಮಾನ ಪ್ರಯಾಣಿಕರ ಅಸಭ್ಯ ವರ್ತನೆಗಳು ಅನೇಕ ಬಾರಿ ಈ ಹಿಂದೆಯೂ ವರದಿ ಆಗಿವೆ. ಅದೇ ರೀತಿ ಇಲ್ಲೊಬ್ಬ ವಿಮಾನ ಪ್ರಯಾಣಿಕರ ಡ್ರಗ್ ಸೇವಿಸಿ ವಿಮಾನ ಏರಿದ್ದು ನಂತರ ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ.

Magic Mushrooms consumed United Airlines flight passenger arrested for misbehaving in flight akb

ಮಿಯಾಮಿ: ವಿಮಾನ ಪ್ರಯಾಣ ಬಹಳ ಸುಖದಾಯಕ, ಜೀವನದಲ್ಲೊಮ್ಮೆಯಾದರು ವಿಮಾನದಲ್ಲಿ ಪಯಣಿಸಬೇಕು. ಆಕಾಶದಿಂದ ವಿಮಾನ ಲ್ಯಾಂಡ್ ಆಗುತ್ತಿರಬೇಕಾದರೆ ಭೂಮಿಯನ್ನು ನೋಡಬೇಕು. ಮೋಡಗಳೆಡೆಯಲ್ಲಿ ವಿಮಾನ ಸಾಗುವುದನ್ನು ನೋಡಬೇಕು ಎಂಬುದು ಬಹುತೇಕರ ಕನಸು. ಆದರೆ ಅದಕ್ಕಾಗಿ ಕೆಲವು ಸಣ್ಣ ಮಾಧ್ಯಮ ವರ್ಗದ ಜನ ಹಣವನ್ನು ಕೂಡಿಡುತ್ತಾರೆ. ಆದರೆ ಈ ವಿಮಾನ ಪ್ರಯಾಣ ನಿರೀಕ್ಷಿಸಿದಷ್ಟು ಖುಷಿ ನೀಡುತ್ತಾ ಇಲ್ಲ ಎಂಬುದು ಬಹುತೇಕರ ಉತ್ತರ. ಅದಕ್ಕೆ ವಿಮಾನದಲ್ಲಿರುವ ಕೆಲ ಸಹ ಪ್ರಯಾಣಿಕರ ವರ್ತನೆಯೂ ಕಾರಣ. ವಿಮಾನ ಪ್ರಯಾಣಿಕರ ಅಸಭ್ಯ ವರ್ತನೆಗಳು ಅನೇಕ ಬಾರಿ ಈ ಹಿಂದೆಯೂ ವರದಿ ಆಗಿವೆ. ಅದೇ ರೀತಿ ಇಲ್ಲೊಬ್ಬ ವಿಮಾನ ಪ್ರಯಾಣಿಕರ ಡ್ರಗ್ ಸೇವಿಸಿ ವಿಮಾನ ಏರಿದ್ದು ನಂತರ ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ.

ಬಾನೆತ್ತರದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಈತನ ಕಿತಾಪತಿಗೆ ವಿಮಾನ ಸಿಬ್ಬಂದಿಯೇ ದಂಗಾಗಿದ್ದಾರೆ. ಡ್ರಗ್ ಮತ್ತಿನಲ್ಲಿ ಆತ ವಿಮಾನದ ಬಾತ್‌ರೂಮ್‌ನ ಬಾಗಿಲು ಒಡೆದಿದ್ದಲ್ಲದೇ, ಗಗನಸಖಿಯ ಎದೆಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಕ್ಟೋಬರ್ 4 ರಂದು ಯುನೈಟೆಡ್ ಏರ್‌ಲೈನ್ಸ್‌ಗೆ (United Airlines flight) ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ವಿಮಾನವೂ ಫ್ಲೋರಿಡಾದ(Florida) ಮಿಯಾಮಿಯಿಂದ (Miami) ವಾಷಿಂಗ್ಟನ್ ಡಿಸಿಗೆ (Washington DC) ಆಗಮಿಸುತ್ತಿತ್ತು. 

ವಿಮಾನದಲ್ಲಿ ಪಾಕಿಸ್ತಾನ ಪ್ರಜೆಯ ಕಿತಾಪತಿ: ಫ್ಲೈಟ್ ವಿಂಡೋ ಒಡೆಯಲು ಯತ್ನ: ದುಬೈನಲ್ಲಿ ಬಂಧನ

ಈತನ ಕಿತಾಪತಿಯನ್ನು ಸಹ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಈತ ಡ್ರಗ್ ನಶೆಯಲ್ಲಿ ತೇಲಾಡುತ್ತಾ ಸಹ ಪ್ರಯಾಣಿಕರಿಗೆ ವಿಮಾನದ ಸಿಬ್ಬಂದಿಗೆ ಕಿರುಕುಳ ನೀಡಿದ್ದಾನೆ. ಹೀಗೆ ಕಿರುಕುಳ ನೀಡಿದ ವಿಮಾನ ಪ್ರಯಾಣಿಕನನ್ನು ಚೆರ್ರಿ ಲೋಗನ್ ಸೆವಿಲ್ಲಾ (Cherruy Loghan Sevilla) ಎಂದು ಗುರುತಿಸಲಾಗಿದೆ. ಮಾದಕ ದ್ರವ್ಯ ಎನಿಸಿರುವ ಮ್ಯಾಜಿಕ್ ಮಶ್ರೂಮ್ ಅನ್ನು ಈತ ಹೀರಿದ ಬಳಿಕ ಹೀಗೆ ಕಪಿಯಂತೆ ವರ್ತಿಸಿದ್ದಾನೆ.

ಈತ ವಿಮಾನ ಪ್ರಯಾಣಿಕರೊಬ್ಬರು ವಿಮಾನದ ಬಾತ್‌ರೂಮ್‌ನಲ್ಲಿ (bathroom door) ಇದ್ದಂತಹ ಸಂದರ್ಭದಲ್ಲೇ ಈತ ವಿಮಾನದ ಬಾತ್‌ರೂಮ್ ತೆರೆದು ಅದರ ಬಾಗಿಲಿನ ತುಂಡೊಂದನ್ನು ಒಡೆದು ಹಾಕಿದ್ದಾನೆ. ಅಲ್ಲದೇ ವಿಮಾನದಲ್ಲಿ ಉದ್ದಕ್ಕೂ ಓಡಾಡುತ್ತಾ ಸಹ ಪ್ರಯಾಣಿಕರ ವೈಯಕ್ತಿಕ ಜಾಗದಲ್ಲೆಲ್ಲಾ ಪ್ರವೇಶಿಸಲು ಯತ್ನಿಸಿದ್ದಾನೆ. ಅದಲ್ಲದೇ ವಿಮಾನದ ಕಾಕ್‌ಪಿಟ್ ಬಳಿಯೂ ಜೋರಾಗಿ ಚಪ್ಪಾಳೆ ತಟ್ಟಿ ಕೂಗಾಡಿ ಅಶ್ಲೀಲ ಪದಗಳಿಂದ ಕಿರುಚಿದ್ದಾನೆ. 

ಈ ವೇಳೆ ಗಗನಸಖಿಯರು ಹಾಗೂ ವಿಮಾನದ ಇತರ ಫ್ಲೈಟ್ ಎಟೆಂಡೆಂಟ್‌ಗಳು ಈತನನ್ನು ಶಾಂತಗೊಳಿಸಲು ಆತನ ಸೀಟಿನಲ್ಲಿಯೇ ಕುಳಿತುಕೊಳ್ಳಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಆತ ಫ್ಲೈಟ್‌fನ ನಡುವೆ ಇರುವ ಖಾಲಿ ಜಾಗದಲ್ಲಿ ಮಲಗಲು ಪ್ರಯತ್ನಿಸಿದ್ದಲ್ಲದೇ ಗಗನಸಖಿಯೊಬ್ಬಳ ಎದೆಗೆ ಕೈ ಹಾಕಿ ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದ. 

ವಿಮಾನದಲ್ಲಿ ಪಯಣಿಗರಿಗೆ ಸೆಲೆಬ್ರಿಟಿಯಂತೆ ವಿಶ್ ಮಾಡಿ ಚಿಲ್ ಮಾಡಿದ ಪುಟ್ಟ ಬಾಲಕ

ಈ ಸಂದರ್ಭದಲ್ಲಿ ವಿಮಾನದ ಇತರ ಸಿಬ್ಬಂದಿ ಹಾಗೂ ಕಾನೂನು ಜಾರಿ ಅಧಿಕಾರಿ ಆತನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಈ ಕಿಡಿಗೇಡಿ ಸೆವಿಲ್ಲಾ ವಿಮಾನದ ಇನ್ನೊಬ್ಬ ಮೇಲ್ವಿಚಾರಕನ ತೋಳನ್ನು ಹಿಡಿದು ತಿರುಚಿದ್ದಾನೆ. ನಂತರ ವಿಮಾನ ಡಲ್ಲಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ನಂತರ ಸೆವಿಲ್ಲಾವನ್ನು ಎಫ್‌ಬಿಐ ಪೊಲೀಸರಿಗೆ ವಿಮಾನದ ಸಿಬ್ಬಂದಿ ಹಸ್ತಾಂತರಿಸಿದ್ದಾರೆ. ಈ ವೇಳೆ ಆತ ತಾನು ವಿಮಾನ ಏರುವ ಮೊದಲು ಸೈಲೋಸಿಬಿನ್ (ಮ್ಯಾಜಿಕ್ ಮಶ್ರೂಮ್ ಎನ್ನುವ ಮಾದಕ ದ್ರವ್ಯ) ಎಂದು ಆತ ಒಪ್ಪಿಕೊಂಡಿದ್ದಲ್ಲದೇ ತನ್ನ ವರ್ತನೆಗೆ ಆತ ಕ್ಷಮೆ ಯಾಚಿಸಿದ್ದಾನೆ ಎಂದು ತಿಳಿದು ಬಂದಿದೆ.


 ಲ್ಯಾಂಡಿಂಗ್ ನಂತರ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (Dulles International Airport) ಎಫ್‌ಬಿಐ (FBI)ಕಚೇರಿಗೆ ಸಾಗಿಸಲಾಯಿತು. ನಂತರ ಅವರು ಏಜೆಂಟರೊಬ್ಬರಿಗೆ ತಾನು ಹತ್ತುವ ಮೊದಲು ಸೈಲೋಸಿಬಿನ್ ಸೇವಿಸಿದ್ದೆ ಮತ್ತು ವಿಮಾನದಲ್ಲಿ ಅಡ್ಡಿಪಡಿಸುವುದನ್ನು ನೆನಪಿಸಿಕೊಳ್ಳಬಹುದು ಎಂದು ಹೇಳಿದರು. ಮ್ಯಾಜಿಕ್ ಮಶ್ರೂಮ್ ತೆಗೆದುಕೊಳ್ಳುವುದು ಅವರ ಮೊದಲ ಬಾರಿಗೆ ಅಲ್ಲ ಎಂದು ಡಾಕ್ಯುಮೆಂಟ್ ಗಮನಿಸಿದೆ ಮತ್ತು ಅವರ ವರ್ತನೆಗೆ ಅವರು ಕ್ಷಮೆಯಾಚಿಸಿದರು. ಇದೇ ವೇಳಿ ಈತನ ಮಿತಿ ಮೀರಿದ ವರ್ತನೆಯ ಮಧ್ಯೆಯೂ ವಿಮಾನದ ಸಿಬ್ಬಂದಿ ತಾಳ್ಮೆಯಿಂದ ವೃತ್ತಿಪರರಂತೆ ವರ್ತಿಸಿದ್ದಕ್ಕೆ ವಿಮಾನ ಸಿಬ್ಬಂದಿಗೆ (flight attendants) ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
 

Latest Videos
Follow Us:
Download App:
  • android
  • ios