Asianet Suvarna News Asianet Suvarna News

ಸನಾತನ ಧರ್ಮದ ಉತ್ತೇಜನ, ಯುವ ಜನಾಂಗ ತಿರುಪತಿಗೆ ತೆರಳುವುದು ಇನ್ನಷ್ಟು ಸುಲಭ

ಯುವಕರಲ್ಲಿ ದೈವಭಕ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ಗೋವಿಂದ ಕೋಟಿ’ ನಾಮಾವಳಿಯನ್ನು ಬರೆಯುವ ಯುವಕರಿಗೆ ವಿಐಪಿ ದರ್ಶನವನ್ನು ಒದಗಿಸಲು ಟಿಟಿಡಿ ನಿರ್ಧರಿಸಿದೆ. ಇದರ ಜೊತೆಗೆ ಹಲವು ನಿರ್ಧಾರವನ್ನು ಕೈಗೊಂಡಿದೆ.

TTD board announces  VIP darshan for youth writing Govinda Koti gow
Author
First Published Sep 8, 2023, 10:56 AM IST

ತಿರುಪತಿ (ಸೆ.8): ಯುವಕರಲ್ಲಿ ದೈವಭಕ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ಗೋವಿಂದ ಕೋಟಿ’ ನಾಮಾವಳಿಯನ್ನು ಬರೆಯುವ ಯುವಕರಿಗೆ ವಿಐಪಿ ದರ್ಶನವನ್ನು ಒದಗಿಸಲು ಟಿಟಿಡಿ ನಿರ್ಧರಿಸಿದೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ದೇವರ ಮೇಲೆ ಭಕ್ತಿ ಕಡಿಮೆಯಾಗುತ್ತಿರುವ ಅಂಶವನ್ನು ಪರಿಗಣಿಸಿರುವ ಟಿಟಿಡಿ, ಈ ನಿರ್ಧಾರಕ್ಕೆ ಬಂದಿದೆ. 25 ವರ್ಷಕ್ಕಿಂತ ಕೆಳಗಿನ ಯುವ ಜನತೆ ‘ಗೋವಿಂದ ಕೋಟಿ’ ಬರೆದಲ್ಲಿ ಅವರಿಗೆ ಹಾಗೂ ಅವರ ಕುಟುಂಬಕ್ಕೆ ವಿಐಪಿ ದರ್ಶನ ಭಾಗ್ಯ ದೊರೆಯಲಿದೆ. ಜೊತೆಗೆ 10,01,116 ಬಾರಿ ಗೋವಿಂದ ನಾಮಾವಳಿ ಬರೆದಲ್ಲಿ ಒಮ್ಮೆ ದರ್ಶನ ಭಾಗ್ಯ ದೊರೆಯಲಿದೆ ಎಂದು ಟಿಟಿಡಿ ಅಧ್ಯಕ್ಷ ಕರುಣಾಕರ ರೆಡ್ಡಿ ತಿಳಿಸಿದ್ದಾರೆ.

ಹೊಸದಾಗಿ ರಚನೆಯಾದ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಮಂಡಳಿಯು ಸೋಮವಾರ ತಿರುಮಲದ ಅನ್ನಮಯ್ಯ ಭವನದಲ್ಲಿ ತನ್ನ ಮೊದಲ ಸಭೆಯನ್ನು ನಡೆಸಿತು ಮತ್ತು ಸನಾತನ ಧರ್ಮವನ್ನು ಉತ್ತೇಜಿಸಲು ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿತು.

ಪುತ್ರಿ ಜೊತೆ ತಿರುಪತಿ ತಿಮ್ಮಪ್ಪನ ಗುಡಿಗೆ ಕಾಲಿಟ್ಟ ಶಾರುಖ್ ಖಾನ್; ನಯನತಾರಾ ನೋಡಿ ನೆಟ್ಟಿಗರು ಶಾಕ್

ರಾಮ ನಾಮದಂತೆಯೇ ಒಂದು ಕೋಟಿ ಬಾರಿ ಗೋವಿಂದಾ ನಾಮವನ್ನು ಬರೆಯುವ 25 ವರ್ಷಕ್ಕಿಂತ ಕೆಳಗಿನ ಯುವ ಜನತೆ ಮತ್ತು ಅವರ ಕುಟುಂಬಗಳಿಗೆ ವಿಐಪಿ ದರ್ಶನ ದೊರೆಯಲಿದೆ. ‘ಗೋವಿಂದ ನಾಮಾವಳಿ’ ಎಂದು 10,01,116 ಬಾರಿ ಬರೆಯುವ ಯುವಕರಿಗೆ ಒಂದು ಬಾರಿ ಒಬ್ಬರಿಗೆ  ಮಾತ್ರ ದರ್ಶನ ಸೌಲಭ್ಯ ಕಲ್ಪಿಸಲು ಶ್ರೀವಾರಿ ದೇವಸ್ಥಾನ ಟ್ರಸ್ಟ್ ನಿರ್ಧರಿಸಿದೆ.

ಸಭೆಯ ನಂತರ ಮಾತನಾಡಿದ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು ಮಂಡಳಿಯ ನಿರ್ಧಾರಗಳನ್ನು ವಿವರಿಸಿದರು. ಮಕ್ಕಳು ಮತ್ತು ಅವರ ಕುಟುಂಬಗಳಲ್ಲಿ ಭಕ್ತಿಯನ್ನು ಬೆಳೆಸಲು, ನಾವು ಗೋವಿಂದ ಕೋಟಿ ಯಜ್ಞವನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.

ಇದರ ಜೊತೆಗೆ ರಾಜ್ಯಾದ್ಯಂತ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಪವಿತ್ರ ಪಠ್ಯದ ಸಾರಾಂಶವನ್ನು ಒಳಗೊಂಡಿರುವ  ಭಗವದ್ಗೀತೆ  ಪುಸ್ತಕವನ್ನು ಉಡುಗೊರೆಯಾಗಿ ನೀಡಲು ಟಿಟಿಡಿ ಮಂಡಳಿ ನಿರ್ಧರಿಸಿದೆ.

Ayodhya Temple: ತಿರುಪತಿ ಸೇರಿ ದೇಶದ ವಿವಿಧ ತೀರ್ಥಕ್ಷೇತ್ರಗಳಿಂದ ಅಯೋಧ್ಯೆಗೆ ನೇರ ರೈಲು ಸೇವೆ!

ತಿರುಪತಿ ರೈಲು ನಿಲ್ದಾಣದ ಹಿಂದೆ ಏಳು ದಶಕಗಳಷ್ಟು ಹಳೆಯದಾದ 2 ಮತ್ತು 3 ಚೌಲ್ಟ್ರಿಗಳನ್ನು ಬದಲಿಸಿ, ಅಚ್ಯುತಮ್ ಮತ್ತು ಶ್ರೀಪಥಂ ಯಾತ್ರಿ ಸೌಕರ್ಯಗಳ ಸಂಕೀರ್ಣಗಳನ್ನು (PACs) ನಿರ್ಮಿಸಲು ದೇವಾಲಯದ ಟ್ರಸ್ಟ್ ತಲಾ 300 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ.  ಈ ಎರಡು PAC ಗಳು ಸುಮಾರು 20,000 ಯಾತ್ರಿಕರಿಗೆ ಅವಕಾಶ ಕಲ್ಪಿಸುತ್ತವೆ  ಎಂದು ಕರುಣಾಕರ್ ರೆಡ್ಡಿ ಗಮನ ಸೆಳೆದರು.

ನವಿ ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ ಶ್ರೀವಾರಿ ದೇಗುಲದ ಜೊತೆಗೆ ಬಾಂದ್ರಾದಲ್ಲಿ 1.65 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತೊಂದು ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಅನುಮೋದನೆ ನೀಡಿದೆ. ಮುಂಬೈ ಉಪನಗರದಲ್ಲಿ 5.35 ಕೋಟಿ ರೂ.ಗಳಲ್ಲಿ ಮಾಹಿತಿ ಕೇಂದ್ರವನ್ನೂ ನಿರ್ಮಿಸಲಾಗುವುದು. ಸಂಪೂರ್ಣ ಮೊತ್ತವನ್ನು ಟ್ರಸ್ಟ್ ಬೋರ್ಡ್ ಸದಸ್ಯರು ದೇಣಿಗೆಯಾಗಿ ನೀಡಲಿದ್ದಾರೆ.

ಇನ್ನು ಚಂದ್ರಗಿರಿಯಲ್ಲಿ ಜನಪದ ಅಧಿದೇವತೆ ಮೂಲಸ್ಥಾನ ಎಲ್ಲಮ್ಮನ ದೇವಸ್ಥಾನವನ್ನು ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಮಂಡಳಿ ನಿರ್ಧರಿಸಿದೆ. ಟಿಟಿಡಿ ನೌಕರರ ವಸತಿ ಗೃಹಗಳ ದುರಸ್ತಿಗೆ  49.50 ಕೋಟಿ ರೂ ಮಂಜೂರಾಗಿದೆ. ಟಿಟಿಡಿಯಲ್ಲಿ ಅರ್ಚಕರು, ಪರಿಚಾರಿಕರು, ಪ್ರಸಾದ ವಿತರಕರು, ಪೋಟು ಕೆಲಸಗಾರರು ಸೇರಿದಂತೆ ಧಾರ್ಮಿಕ ಸಿಬ್ಬಂದಿಗಾಗಿ 413 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮಂಡಳಿಯು ರಾಜ್ಯ ಸರ್ಕಾರದ ಅನುಮೋದನೆಯನ್ನು ಪಡೆಯಲಿದೆ.

Follow Us:
Download App:
  • android
  • ios