Asianet Suvarna News Asianet Suvarna News

ಪುತ್ರಿ ಜೊತೆ ತಿರುಪತಿ ತಿಮ್ಮಪ್ಪನ ಗುಡಿಗೆ ಕಾಲಿಟ್ಟ ಶಾರುಖ್ ಖಾನ್; ನಯನತಾರಾ ನೋಡಿ ನೆಟ್ಟಿಗರು ಶಾಕ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಶಾರುಖ್ ಮತ್ತು ನಯನತಾರಾ ವಿಡಿಯೋ. ತಿಮ್ಮಪ್ಪನ ಮೊರೆ ಹೋಗಿದ್ದು ಯಾಕೆ? 

Shah Rukh Khan Suhana Khan Nayanthara in Venkateshwara Swamy temple Tirupati vcs
Author
First Published Sep 5, 2023, 9:20 AM IST

ಬಾಲಿವುಡ್ ಕಿಂಗ್ ಶಾರುಖ್ ಖಾನ್, ಪುತ್ರಿ ಸುಹಾನಾ ಖಾನ್, ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ಪತಿ ನಿರ್ದೇಶಕ ವಿಘ್ನೇಶ್ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರಿಂದ ಮಿಶ್ರ ಅಭಿಪ್ರಯಾ ವ್ಯಕ್ತವಾಗುತ್ತಿದೆ. ಖಾನ್ ಕುಟುಂಬದವರು ತಿಮ್ಮಪ್ಪನ ಮೊರೆ ಹೋಗಿರುವುದು ಯಾಕೆಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. 

ವಿಘ್ನೇಶ್ ನಿರ್ದೇಶನ ಮಾಡಿರುವ ಜವಾನ್ ಸಿನಿಮಾ ಸೆಪ್ಟೆಂಬರ್ 7ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಪತಿ ನಿರ್ದೇಶನಕ್ಕೆ ಪತ್ನಿ ನಯನತಾರಾ ಬಂಡವಾಳ ಹಾಕಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಬೇಕು ಎಂದು ತಿರುಪತಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ ಪಡೆದು ಶಾರುಖ್ ಹೊರ ಬರುತ್ತಿದ್ದಂತೆ ಅಲ್ಲಿದ್ದ ಭಕ್ತಾದಿಗಳಿಗೆ ಹಾಯ್ ಹೇಳಿ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ, ಬಿಳಿ ಬಣ್ಣದ ಸೆಲ್ವಾರ್‌ನಲ್ಲಿ ನಯನತಾರಾ ಮತ್ತು ಸುಹಾನಾ ಖಾನ್‌ ಮಿಂಚಿದ್ದಾರೆ ಹಾಗೂ ರೇಶ್ಮೆ ಪಂಚೆ ಶಲ್ಯೆಯಲ್ಲಿ ಶಾರುಖ್ ಮತ್ತು ವಿಘ್ನೇಶ್ ಕಾಣಿಸಿಕೊಂಡಿದ್ದಾರೆ.

ಬಾಯ್​ಫ್ರೆಂಡ್​​ ಜೊತೆ ತಿರುಪತಿಗೆ ಹೋದ ಜಾಹ್ನವಿ ಕಪೂರ್​ ಬೆರಳಲ್ಲಿ ವಜ್ರದ ಉಂಗುರ! ಆಗಿದ್ದೇನು?

ಕಳೆದ ತಿಂಗಳು ಜವಾನ್ ಚಿತ್ರತಂಡ ಜಮ್ಮು ಕಾಶ್ಮೀರದ ವೈಷ್ಟೋ ದೇವಿ ದೇಗುಲದಲ್ಲಿ ಕಾಣಿಸಿಕೊಂಡಿದ್ದರು. ಇದಾದ ತಕ್ಷಣ ಚೆನ್ನೈನಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪಠಾನ್‌ ಸಿನಿಮಾ ರಿಲೀಸ್ ಸಮಯದಲ್ಲೂ ವೈಷ್ಣೋ ದೇವಿ ದರ್ಶನ ಪಡೆದಿದ್ದು ಹಿಟ್‌ಗೆ ಕಾರಣವಾಯ್ತು ಎನ್ನುತ್ತಾರೆ ಖಾನ್ ಆಪ್ತರು. 

ತಿರುಪತಿ: ಮುಡಿ ಕೊಡುವುದಕ್ಕೂ, ಸಪ್ತಗಿರಿಯ ನೀಲಾದ್ರಿ ಬೆಟ್ಟಕ್ಕೂ ಇದೆ ಲಿಂಕ್!

ಪಠಾನ್ ಬ್ಲಾಕ್ ಬಸ್ಟರ್ ಆಗಿ ಸುಮಾರು 8 ತಿಂಗಳ ನಂತರ ಶಾರುಖ್ ಖಾನ್ ಜವಾನ್ ಸಿನಿಮಾ ರಿಲೀಸ್ ಆಗುತ್ತಿರುವುದು. ಪಠಾನ್‌ ಪ್ರಚಾರ ಮಾಡಲು ಮಾಧ್ಯಮಗಳ ಮುಂದೆ ಕಿಂಗ್ ಬರಲೇ ಇಲ್ಲ ಆದರೆ ಜವಾನ್‌ ಸಿನಿಮಾ ವಿಚಾರದಲ್ಲಿ ಫುಲ್ ಆಪೋಸಿಟ್. ಚೆನ್ನೈನಲ್ಲಿ ಆಡಿಯೋ ಲಾಂಚ್ ಮತ್ತು ಪ್ರೀ-ರಿಲೀಸ್ ಕಾರ್ಯಕ್ರಮದ ನಂತರ ಆಗಸ್ಟ್‌ 31ರಂದು ಬುರ್ಜ್‌ ಕಲಿಫಾದಲ್ಲಿ ಜವಾನ್ ಸ್ಕ್ರೀನಿಂಗ್ ನೋಡಲು ಕುಟುಂಬ ಸಮೇತರಾಗಿ ಖಾನ್ ಹೋಗಿದ್ದಾರೆ. 
ಪಠಾನ್ ಬ್ಲಾಕ್ ಬಸ್ಟರ್ ಆಗಿ ಸುಮಾರು 8 ತಿಂಗಳ ನಂತರ ಶಾರುಖ್ ಖಾನ್ ಜವಾನ್ ಸಿನಿಮಾ ರಿಲೀಸ್ ಆಗುತ್ತಿರುವುದು. ಪಠಾನ್‌ ಪ್ರಚಾರ ಮಾಡಲು ಮಾಧ್ಯಮಗಳ ಮುಂದೆ ಕಿಂಗ್ ಬರಲೇ ಇಲ್ಲ ಆದರೆ ಜವಾನ್‌ ಸಿನಿಮಾ ವಿಚಾರದಲ್ಲಿ ಫುಲ್ ಆಪೋಸಿಟ್. ಚೆನ್ನೈನಲ್ಲಿ ಆಡಿಯೋ ಲಾಂಚ್ ಮತ್ತು ಪ್ರೀ-ರಿಲೀಸ್ ಕಾರ್ಯಕ್ರಮದ ನಂತರ ಆಗಸ್ಟ್‌ 31ರಂದು ಬುರ್ಜ್‌ ಕಲಿಫಾದಲ್ಲಿ ಜವಾನ್ ಸ್ಕ್ರೀನಿಂಗ್ ನೋಡಲು ಕುಟುಂಬ ಸಮೇತರಾಗಿ ಖಾನ್ ಹೋಗಿದ್ದಾರೆ. 

 

Follow Us:
Download App:
  • android
  • ios