ಚಿಂದ್ವಾರಾದಲ್ಲಿ ಜೆಕ್ ರಾಜಕುಮಾರಿ ಜಿಟ್ಕಾ ಕಳೆದುಕೊಂಡಿದ್ದ 22 ಲಕ್ಷ ಮೌಲ್ಯದ ಉಂಗುರವನ್ನು ಆದಿವಾಸಿಗಳು ಹುಡುಕಿಕೊಟ್ಟರು. ಐದು ಲಕ್ಷ ಬಹುಮಾನ ಘೋಷಿಸಿದ್ದ ರಾಜಕುಮಾರಿಯಿಂದ ಕೇವಲ  41 ಸಾವಿರ ಸ್ವೀಕರಿಸಿ ಪ್ರಾಮಾಣಿಕತೆ ಮೆರೆದರು. ರಾಜಕುಮಾರಿಯನ್ನು ಸಹೋದರಿ ಎಂದು ಕರೆದ ಈ ಘಟನೆ ವಿದೇಶದಲ್ಲೂ ಸುದ್ದಿ ಮಾಡಿತು.

ಮಧ್ಯಪ್ರದೇಶ (Madhya Pradesh)ದ ಚಿಂದ್ವಾರಾದಲ್ಲಿ ಜೆಕ್ ಗಣರಾಜ್ಯದ ರಾಜಕುಮಾರಿ ಜಿಟ್ಕಾ ಕ್ಲೆಟ್ ಕಳೆದುಕೊಂಡಿದ್ದ ಉಂಗುರ ಸಿಕ್ಕಿದೆ. ಆದಿವಾಸಿಗಳು ರಾಜಕುಮಾರಿ ಜಿಟ್ಕಾ ಕ್ಲೆಟ್ (Princess Jitka Klet) ಕಳೆದುಕೊಂಡಿದ್ದ ಉಂಗುರವನ್ನು ಹುಡುಕಿಕೊಟ್ಟಿದ್ದಾರೆ. ಇಪ್ಪತ್ತೆರಡು ಲಕ್ಷದ ಈ ಉಂಗುರವನ್ನು ಹುಡುಕಿಕೊಟ್ರೆ ಐದು ಲಕ್ಷ ಬಹುಮಾನ ನೀಡೋದಾಗಿ ರಾಜಕುಮಾರಿ ಹೇಳಿದ್ದರು. ಆದ್ರೆ 

ಆದಿವಾಸಿಗಳು ಪ್ರಾಮಾಣಿಕತೆ ಮರೆದಿದ್ದಾರೆ. ಸಿಕ್ಕ ಉಂಗುರವನ್ನು ರಾಜಕುಮಾರಿಗೆ ನೀಡಿದ್ದಾರೆ. ಅಷ್ಟೇ ಅಲ್ಲ, ರಾಜಕುಮಾರಿ ಕೈನಿಂದ ಐದು ಲಕ್ಷ ಹಣ ಪಡೆಯುವ ಬದಲು, ರಾಜಕುಮಾರಿಯನ್ನು ಅತಿಥಿ ಮತ್ತು ಸಹೋದರಿ ಎಂದು ಪರಿಗಣಿಸಿ ಕೇವಲ 41 ಸಾವಿರ ರೂಪಾಯಿ ಪಡೆದಿದ್ದಾರೆ. ಈ ವಿಷ್ಯ ದೇಶ – ವಿದೇಶದಲ್ಲಿ ಸುದ್ದಿ ಮಾಡಿದೆ. 

ಕೆಲ ಸೆಕೆಂಡ್ ಬಾತ್ ರೂಮ್ ಬಳಸಿದ್ದಕ್ಕೆ 850 ರೂ. ಬಿಲ್ !

ಈ ಘಟನೆ ಚಿಂದ್ವಾರದ ಪ್ರಸಿದ್ಧ ಆಯುರ್ವೇದ ವೈದ್ಯ ಪ್ರಕಾಶ್ ಇಂಡಿಯನ್ ಟಾಟಾ ಅವರಿಗೆ ಸಂಬಂಧಿಸಿದೆ. ಪಾತಾಳಕೋಟೆಯ ಗಿಡಮೂಲಿಕೆಗಳಿಂದ ರೋಗಿಗಳಿಗೆ ಪ್ರಕಾಶ್ ಚಿಕಿತ್ಸೆ ನೀಡ್ತಾರೆ. ಪ್ರಕಾಶ್ ಟಾಟಾ ಅವರು ಆರು ತಿಂಗಳ ಹಿಂದೆ ಯುರೋಪ್ ಪ್ರವಾಸಕ್ಕೆ ತೆರಳಿದ್ದರು. ಮ್ಯಾಕ್ಸ್ ಇನ್ ದಿ ವರ್ಲ್ಡ್ ಕಂಪನಿಯು ಆರು ದೇಶಗಳಲ್ಲಿ ಆಯುರ್ವೇದ ಮತ್ತು ಯೋಗ ಶಿಬಿರಗಳನ್ನು ಆಯೋಜಿಸಲು ಅವರನ್ನು ಆಹ್ವಾನಿಸಿತ್ತು. ಈ ಸಮಯದಲ್ಲಿ ಅವರು ಪ್ರೇಗ್ ಮೂಲದ ರಾಜಕುಮಾರಿ ಮತ್ತು ಜೆಕ್ ಗಣರಾಜ್ಯದ ಫ್ಯಾಷನ್ ಡಿಸೈನರ್ ಜಿಟ್ಕಾ ಕ್ಲೆಟ್ ಅವರನ್ನು ಭೇಟಿಯಾಗಿದ್ರು. ಜಿಟ್ಕಾ ಕ್ಲೆಟ್, ವೈಜ್ಞಾನಿಕ ಔಷಧದಿಂದ ಚಿಕಿತ್ಸೆ ನೀಡಲಾಗದ ಗಂಭೀರ ಬೆನ್ನುಮೂಳೆಯ ಕಾಯಿಲೆಯಿಂದ ಬಳಲುತ್ತಿದ್ದರು. ಪ್ರಕಾಶ್ ಟಾಟಾ, ಜಿಟ್ಕಾ ಕ್ಲೆಟ್ ಆಯುರ್ವೇದ ಔಷಧಿಗಳಿಂದ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದರು.

ಮೇ.1ರಿಂದ ಜೋಗ ಜಲಪಾತ ವೀಕ್ಷಣೆಗೆ ಮುಕ್ತ ಪ್ರವೇಶ: ಡೀಸಿ ಆದೇಶ

ಜಿಟ್ಕಾ ಪ್ರಕಾಶ್ ಟಾಟಾ ಅವರಿಂದ ಪಾತಾಳಕೋಟೆಯ ಅಮೂಲ್ಯ ಗಿಡಮೂಲಿಕೆಗಳ ಬಗ್ಗೆ ಕೇಳಿದ್ದರು. ಅದನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಇದಾದ ನಂತರ, ಏಪ್ರಿಲ್ 16, 2025 ರಂದು, ಅವರು ದೆಹಲಿಯಿಂದ ನಾಗ್ಪುರಕ್ಕೆ ಮತ್ತು ನಂತರ ಚಿಂದ್ವಾರಕ್ಕೆ ಬಂದಿದ್ರು. ಪ್ರಕಾಶ್ ಟಾಟಾ, ಜಿಟ್ಕಾಗೆ ತಮ್ಮ ಮನೆಯಲ್ಲಿಯೇ ವ್ಯವಸ್ಥೆ ಮಾಡಿದ್ದರು. ಮರುದಿನ ಏಪ್ರಿಲ್ 17 ರಂದು ಜಿಲ್ಲೆಯ ಪ್ರವಾಸಿ ತಾಣಗಳ ಪ್ರವಾಸಕ್ಕೆ ಕರೆದೊಯ್ದಿದ್ದರು. ಪ್ರಕಾಶ್ ಟಾಟಾ , ಮಧ್ಯಪ್ರದೇಶದ ಪಾತಾಳಕೋಟ್, ತಮಿಯಾ ಮತ್ತು ಛೋಟಾ ಮಹಾದೇವ್ನಂತಹ ಪ್ರಮುಖ ಪ್ರವಾಸಿ ಸ್ಥಳಗಳನ್ನು ಜಿಟ್ಕಾಗೆ ತೋರಿಸಿದ್ದರು. ಛೋಟಾ ಮಹಾದೇವ್ ನೈಸರ್ಗಿಕ ಜಲಪಾತವನ್ನು ಹೊಂದಿದ್ದು, ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜಿಟ್ಕಾಗೆ ಜಲಪಾತ ನೋಡಿ ಖುಷಿಯಾಯ್ತು. ಅಲ್ಲಿ ಜಿಟ್ಕಾ ಆಟ ಆಡಲು ಶುರು ಮಾಡಿದ್ದಾರೆ. ಈ ಸಮಯದಲ್ಲಿ ಜಿಟ್ಕಾ ಉಂಗುರ ಕೆಳಗೆ ಬಿದ್ದಿದೆ. ಕಳೆದ ವಜ್ರದ ಉಂಗುರ 22 ಲಕ್ಷ ರೂಪಾಯಿ ಮೌಲ್ಯದ್ದು. ಮದುವೆ ಉಂಗುರ ಅದಾಗಿದ್ದು, ಉಂಗುರ ಕಳೆದುಕೊಂಡಾಗ ಜಿಟ್ಕಾಳ ಕಣ್ಣುಗಳಲ್ಲಿ ನೀರು ತುಂಬಿತ್ತು. ಜಿಟ್ಕಾ ಹಾಗೂ ಅಲ್ಲಿದ್ದ ಪ್ರವಾಸಿಗರು ಎಂಟು ಗಂಟೆಗಳ ಕಾಲ ಉಂಗುರ ಹುಡುಕುವ ಪ್ರಯತ್ನ ನಡೆಸಿದ್ದರು. ಚಿಂತೆ ಮಾಡ್ಬೇಡಿ, ದೇವರ ಕೃಪೆಯಿಂದ ನಿಮ್ಮ ಉಂಗುರ ಸಿಗುತ್ತೆ ಎಂದು ಧೈರ್ಯ ಹೇಳಿದ್ದರು ಪ್ರಕಾಶ್. ಇದೇ ಸಮಯದಲ್ಲಿ ಜಿಟ್ಕಾ, ಉಂಗುರ ಹುಡುಕಿಕೊಟ್ಟರೆ ಐದು ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದರು. ಚಿಂದ್ವಾರಕ್ಕೆ ಬಂದ ಜಿಟ್ಕಾ, ಚಿಂತೆಯಲ್ಲಿದ್ದರು.

ಮರುದಿನ ಅಲ್ಲಿನ ಆದಿವಾಸಿಗಳು ಉಂಗುರ ಹುಡುಕುವ ಪ್ರಯತ್ನ ಶುರು ಮಾಡಿದ್ದರು. ಆರಂಭದಲ್ಲಿ ಮರದ ಎಲೆಗಳನ್ನು ತೆಗೆದು ಅಲ್ಲಿ ಸ್ವಚ್ಛಗೊಳಿಸಿದ್ರು. ಆದ್ರೆ ಉಂಗುರ ಸಿಗಲಿಲ್ಲ. ನಂತ್ರ ಮರಳಿನಲ್ಲಿ ಹುಡುಕಾಟ ಶುರು ಮಾಡಿದ್ರು. ಅನೇಕ ಗಂಟೆಗಳ ಪ್ರಯತ್ನದ ನಂತ್ರ ಆದಿವಾಸಿ ಯುವಕನಿಗೆ ಉಂಗುರ ಸಿಕ್ತು. ಅದನ್ನು ಆತ ಪ್ರಕಾಶ್ ಟಾಟಾಗೆ ಹೇಳಿದೆ. ಅಲ್ಲಿಗೆ ಬಂದ ಜಿಟ್ಕಾ, ಖುಷಿಯಾಗಿ ಆದಿವಾಸಿಗೆ ಐದು ಲಕ್ಷ ನೀಡಲು ಮುಂದಾಗಿದ್ದರು. ಆದ್ರೆ ಯುವಕ ಇದನ್ನು ನಿರಾಕರಿಸಿದ್ದ. ಜಿಟ್ಕಾ ಸಹೋದರಿ ಎನ್ನುವ ಕಾರಣ ನೀಡಿ ಕೇವಲ 41 ಸಾವಿರ ರೂಪಾಯಿ ಪಡೆದಿದ್ದ.