ಎರಡು ದಿನದ ಪ್ರವಾಸ ಎಂದಾಗ ಉಳಿದುಕೊಳ್ಳೋದೆಲ್ಲಿ ಎಂಬ ಪ್ರಶ್ನೆ ಮೂಡುತ್ತದೆ. ಹಾಗಾಗಿಯೇ ಜನರು ಹೊಟೇಲ್ ಹುಡುಕಾಟ ನಡೆಸ್ತಾರೆ. ಪ್ರವಾಸಿಗರಿಂದಲೇ ಹೊಟೇಲ್ ಉದ್ಯಮ ನಡೆಯುತ್ತಿದೆ. ಹೊಟೇಲ್, ಪ್ರವಾಸಿಗರಿಗೆ ಆಸರೆಯಾಗಿದೆ. ಯಾವ ನಗರದಲ್ಲಿ ಹೆಚ್ಚು ಹೊಟೇಲ್ ಇದೆ ಎಂಬುದು ನಿಮಗೂ ತಿಳಿದಿರಲಿ. 

ವರ್ಷಕ್ಕೊಮ್ಮೆಯಾದ್ರೂ ಪ್ರವಾಸಕ್ಕೆ ಹೋಗುವ ಜನರಿದ್ದಾರೆ. ನಾವು – ನೀವೆಲ್ಲರೂ ಈ ಪಟ್ಟಿಯಲ್ಲಿ ಸೇರಿದ್ದೇವೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಕಣ್ಮನ ಸೆಳೆಯುವ ಅನೇಕ ಪ್ರವಾಸಿ ತಾಣಗಳಿವೆ. ನಮ್ಮೂರನ್ನು ಬಿಟ್ಟು ನಾವು ಬೇರೆ ಊರಿಗೆ ಹೋದಾಗ ವಾಸಕ್ಕೆ ಹೊಟೇಲ್ ಆಸರೆ ಪಡೆಯುತ್ತೇವೆ. ಗಮ್ಯ ಸ್ಥಾನಕ್ಕೆ ಹೋಗುವ ಮೊದಲೇ ಹೊಟೇಲ್ ಬುಕ್ ಮಾಡಿಕೊಳ್ತೇವೆ. ನಾವು ಹೋಗ್ತಿರುವ ಜಾಗದಲ್ಲಿ ಯಾವುದು ಬೆಸ್ಟ್ ಹೊಟೇಲ್ ಅಂತಾ ಸರ್ಚ್ ಮಾಡಿ, ಮಾಹಿತಿ ಪಡೆದು, ಕಡಿಮೆ ಬೆಲೆಗೆ ಉತ್ತಮ ಹೊಟೇಲ್ ಬುಕ್ ಮಾಡ್ತೇವೆ. ನಿಮ್ಮೂರಲ್ಲಿ ಎಷ್ಟೆಲ್ಲ ಹೊಟೇಲ್ ಇದೆ ಅಂತಾ ಕೇಳಿದ್ರೆ ಸರಿಯಾಗಿ ಲೆಕ್ಕ ಹೇಳೋಕೆ ಬರೋದಿಲ್ಲ. ಇನ್ನು ಬೇರೆ ಊರಿನಲ್ಲಿ ಹೊಟೇಲ್ ಸಂಖ್ಯೆ ಎಷ್ಟು ಅಂತಾ ಗೊತ್ತಾಗೋದು ಕಷ್ಟದ ಮಾತು. ನಾವಿಂದು ಯಾವ ದೇಶದಲ್ಲಿ ಹೆಚ್ಚು ಹೊಟೇಲ್ ಇದೆ, ನಮ್ಮ ದೇಶದಲ್ಲಿ ಇರುವ ಹೊಟೇಲ್ ಸಂಖ್ಯೆ ಎಷ್ಟು ಎಂಬುದನ್ನು ನಿಮಗೆ ಹೇಳ್ತೇವೆ.

ಜಗತ್ತಿನಲ್ಲಿ ಅತಿ ಹೆಚ್ಚು ಹೋಟೆಲ್‌ ಎಲ್ಲಿವೆ? : ಹೋಟೆಲ್ ಮಾರುಕಟ್ಟೆ ದತ್ತಾಂಶ ಕಂಪನಿ ಎಸ್ ಟಿಆರ್ ಈ ಬಗ್ಗೆ ವರದಿ ನೀಡಿದೆ. ಅದ್ರ ಪ್ರಕಾರ, ಶಾಂಘೈ (Shanghai) ಮತ್ತು ಬೀಜಿಂಗ್ (Beijing) ವಿಶ್ವದ ಅತಿ ಹೆಚ್ಚು ಹೋಟೆಲ್‌ಗಳನ್ನು ಹೊಂದಿರುವ ತಾಣವಾಗಿದೆ. ಶಾಂಘೈನಲ್ಲಿ 26 ಮಿಲಿಯನ್ ಜನಸಂಖ್ಯೆ ಇದೆ. ಅಲ್ಲಿ 13,46,000 ಹೋಟೆಲ್ ಕೊಠಡಿಗಳಿವೆ. ಬೀಜಿಂಗ್ ನಲ್ಲಿ 22 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯಿದೆ. ಬೀಜಿಂಗ್ ನಲ್ಲಿ ಒಟ್ಟೂ 323,500 ಹೋಟೆಲ್ ಕೊಠಡಿಗಳಿವೆ. ಈ ಪಟ್ಟಿಯಲ್ಲಿ ಲಂಡನ್ (London) ಮೂರನೇ ಸ್ಥಾನದಲ್ಲಿದೆ. ಲಂಡನ್ ನಲ್ಲಿ 1,55,600 ಹೋಟೆಲ್ ಕೊಠಡಿಗಳಿವೆ. ಈ ಹೊಟೇಲ್ ಕೊಠಡಿಗಳ ಸಂಖ್ಯೆ 2025 ರ ಹೊತ್ತಿಗೆ ಶೇಕಡಾ 18 ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಲಂಡನ್ ನಲ್ಲಿ ಒಟ್ಟು 1,83,608ರಷ್ಟು ಜನಸಂಖ್ಯೆಯಿದೆ. 

ವಿಮಾನದ ಶೌಚಾಲಯ ಬಳಸಿ ಫ್ಲಶ್ ಮಾಡಿದಾಗ ತ್ಯಾಜ್ಯ ಏನಾಗುತ್ತೆ ಗೊತ್ತಾ?

ಭಾರತ (India) ದಲ್ಲಿದೆ ಇಷ್ಟು ಹೊಟೇಲ್ : ಪ್ರವಾಸಿತಾಣ, ಹೊಟೇಲ್ ವಿಷ್ಯದಲ್ಲಿ ಭಾರತ ಹಿಂದೆ ಬಿದ್ದಿಲ್ಲ. ಭಾರತದಲ್ಲಿ ಅತಿ ಹೆಚ್ಚು ಹೊಟೇಲ್ ಕೊಠಡಿ ಹೊಂದಿರುವ ರಾಜ್ಯ ಮುಂಬೈ. ವಾಣಿಜ್ಯ ನಗರಿ ಮುಂಬೈನಲ್ಲಿ ಸದ್ಯ 13,500 ಹೋಟೆಲ್ ಕೊಠಡಿಗಳಿವೆ. 2025ರ ಹೊತ್ತಿಗೆ ಇದ್ರ ಸಂಖ್ಯೆ ಶೇಕಡಾ 38ರಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿದೆ. ಬೆಂಗಳೂರಿನಲ್ಲಿ 14,200 ಹೋಟೆಲ್ ಕೊಠಡಿಗಳಿವೆ. ಇನ್ನೆರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಹೋಟೆಲ್ ಕೊಠಡಿಗಳ ಸಂಖ್ಯೆ 22,000 ಮೀರಬಹುದು ಎಂದು ಅಂದಾಜಿಸಲಾಗಿದೆ.

ಕೂರ್ಗ್‌ನಲ್ಲಿ ನೋಡಲೇಬೇಕಾದ ಅತ್ಯದ್ಭುತ ಸ್ಥಳಗಳು

ಪ್ರವಾಸಿಗರಿಗೆ ಭಾರತ ಸ್ವರ್ಗ : ಭಾರತ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಜಾಗವಾಗಿದೆ. ಭಾರತೀಯರು ಪ್ರವಾಸಕ್ಕೆಂದು ಬೇರೆ ದೇಶಕ್ಕೆ ಹೋದ್ರೆ, ವಿದೇಶಿಗರು ಭಾರತವನ್ನು ಅರಸಿ ಬರ್ತಾರೆ. ಬೇಸಿಗೆ ರಜಾ ದಿನಗಳಲ್ಲಿ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಧರ್ಮ ಹಾಗೂ ಆಧ್ಯಾತ್ಮಿಕ ಸಂಬಂಧ ಹೊಂದಿರುವ ಭಾರತ ಎಲ್ಲ ಜನಾಂಗದವರನ್ನು ಸೆಳೆಯುತ್ತದೆ. ಭಾರತದಲ್ಲಿರುವ ಪ್ರವಾಸಿ ತಾಣಗಳು ಈಗಿನ ದಿನಗಳಲ್ಲಿ ತುಂಬಿ ತುಳುಕುತ್ತಿವೆ. ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದಾಗಿ 2023 ರ ಆರ್ಥಿಕ ವರ್ಷದಲ್ಲಿ ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ಶೇಕಡಾ 60 ರಷ್ಟು ಬೆಳವಣಿಗೆಯನ್ನು ದಾಖಲಿಸಲಾಗಿದೆ. ಭಾರತದ ದೊಡ್ಡ ನಗರಗಳ ಹೊಟೇಲ್ ಗಳಿಗೆ ಬೇಡಿಗೆ ಹೆಚ್ಚಾಗುತ್ತಲೇ ಇದೆ. ಹೊಟೇಲ್ ಉದ್ಯಮ ಶುರು ಮಾಡಲು ಬಯಸುವವರಿಗೆ ಭಾರತ ಅತ್ಯುತ್ತಮ ಸ್ಥಳವೆಂದ್ರೆ ತಪ್ಪೇನಿಲ್ಲ. ಭಾರತದ ಪ್ರವಾಸಿ ತಾಣಗಳಲ್ಲಿ ಈಗ್ಲೂ ಹೊಟೇಲ್ ಕೊಠಡಿಗಳಿಗೆ ಕೊರತೆಯಿದ್ದು, ದೀರ್ಘ ರಜೆ, ವೀಕೆಂಡ್ ಸಂದರ್ಭದಲ್ಲಿ ಕೊಠಡಿ ಸಿಗದೆ ವಾಪಸ್ ಹೋಗುವ ಪ್ರವಾಸಿಗರಿದ್ದಾರೆ.