Travel

ಅಬ್ಬಿ ಫಾಲ್ಸ್‌

ಕೂರ್ಗ್‌ನಲ್ಲಿ ಹೆಚ್ಚು ಫೇಮಸ್ ಆಗಿರುವುದು ಅಬ್ಬಿ ಫಾಲ್ಸ್‌. ಇದು ಕೂರ್ಗ್‌ನಲ್ಲಿರುವ ಅತೀ ಮನೋಹರವಾದ ಜಲಪಾತವಾಗಿದೆ.

ರಾಜಾಸೀಟ್‌

ಹಿಂದಿನ ಕಾಲದಲ್ಲಿ ರಾಜರು ಹಾಗೂ ರಾಣಿಯರು ಇಲ್ಲಿ ಬಂದು ಸೂರ್ಯಾಸ್ತಮಾನದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರಂತೆ.

ತಲಕಾವೇರಿ

ದಕ್ಷಿಣಭಾರತದಲ್ಲಿ ಹರಿಯುವ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ. ಇದು ಧಾರ್ಮಿಕ ಆನಂದ ಮತ್ತು ಹಿತವಾದ ಅನುಭವಕ್ಕೆ ಪರಿಪೂರ್ಣ ಸ್ಥಳವಾಗಿದೆ. 

ಇರುಪ್ಪು ಫಾಲ್ಸ್‌

170 ಅಡಿ ಎತ್ತರದಿಂದ ಬೀಳುವ ಇರುಪ್ಪು ಜಲಪಾತವು ರಮಣೀಯವಾದ ದೃಶ್ಯವಾಗಿದೆ. ಕೂರ್ಗ್‌ನಲ್ಲಿ ಭೇಟಿ ನೀಡಲು ಜನಪ್ರಿಯ ಸ್ಥಳವಾಗಿದೆ, ಈ ಜಲಪಾತವು ಎಲ್ಲರ ಗಮನವನ್ನು ಸೆಳೆಯುತ್ತದೆ. 

ತಡಿಯಂಡಮೋಲ್

ಕರ್ನಾಟಕ ರಾಜ್ಯದ ಎರಡನೇ ಅತಿ ಎತ್ತರದ ಪರ್ವತ, ತಡಿಯಂಡಮೋಲ್ ಕೊಡಗು ಜಿಲ್ಲೆಯ ಅತಿ ಎತ್ತರದ ಶಿಖರವಾಗಿದೆ. ಸಮುದ್ರ ಮಟ್ಟದಿಂದ ಸರಿಸುಮಾರು 1746 ಮೀಟರ್ ಎತ್ತರದಲ್ಲಿದೆ.

ಹೊನ್ನಮ್ಮನ ಕೆರೆ

ಹೊನ್ನಮ್ಮ ದೇವಿಯ ದೇವಸ್ಥಾನ ಹೊಂದಿರುವ ಈ ಸ್ಥಳ ತುಂಬಾ ಪವಿತ್ರವಾಗಿದೆ. ಇಲ್ಲಿ ಕೆರೆಯೂ ಇದ್ದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

Find Next One