ರೈಲಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೆ ಸಿಗುತ್ತಾ ಟಿಕೆಟ್ ರಿಯಾಯಿತಿ? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್!
ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ, ಭಾರತೀಯ ರೈಲ್ವೆಯು ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುತ್ತಿತ್ತು. ಆದರೆ, ಕೊರೊನಾ ಬಂದಾಗ ದೇಶದಲ್ಲಿದ್ದ ಆರ್ಥಿಕ ಸಂಕಷ್ಟದಿಂದಾಗಿ ಈ ಸೌಲಭ್ಯವನ್ನು ನಿಲ್ಲಿಸಲಾಗಿತ್ತು.

ಭಾರತೀಯ ರೈಲ್ವೆ ನೀಡುವ ಸೌಲಭ್ಯ
ಹಿರಿಯ ನಾಗರಿಕರಿಗೆ ದರ ರಿಯಾಯಿತಿ
ಬಜೆಟ್‌ನಲ್ಲಿ ಸಿಗದ ಸಿಹಿ ಸುದ್ದಿ
ಕೇಂದ್ರ ಸರ್ಕಾರ ಹೇಳಿದ್ದೇನು?
ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ, 'ರೈಲುಗಳಲ್ಲಿ ಈಗಾಗಲೇ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲೇ ಟಿಕೆಟ್ ನೀಡಲಾಗುತ್ತಿದೆ. ದರಗಳು ಈಗಾಗಲೇ ಕಡಿಮೆ ಇವೆ. ಹಿರಿಯ ನಾಗರಿಕರಿಗೆ ಮತ್ತೆ ರಿಯಾಯಿತಿ ನೀಡಿದರೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತದೆ' ಎಂದು ಹೇಳಿತ್ತು.
ಇದನ್ನೂ ಓದಿ: ಗುಜರಾತಿನ ವಿಶಿಷ್ಟ ಗ್ರಾಮ… ಇಲ್ಲಿ ಯಾವ ಮನೆಯಲ್ಲೂ ಒಲೆ ಉರಿಯಲ್ಲ, ಅಡುಗೆ ಮಾಡಲ್ಲ…
ರೈಲ್ವೆ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ
ಕೇಂದ್ರ ಸರ್ಕಾರ ಮತ್ತು ರೈಲ್ವೆ ಮಂಡಳಿ ಈ ಬಗ್ಗೆ ಚರ್ಚಿಸುತ್ತಿವೆ ಎಂಬ ವರದಿಗಳಿವೆ. ಮಾರ್ಚ್‌ನಲ್ಲಿ ನಡೆಯಲಿರುವ ರೈಲ್ವೆ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ಆ ನಂತರವೇ ಹಿರಿಯ ನಾಗರಿಕರಿಗೆ ದರ ರಿಯಾಯಿತಿ ಸಿಗುವುದೋ ಇಲ್ಲವೋ ಎಂಬುದು ತಿಳಿಯಲಿದೆ.
ಇದನ್ನೂ ಓದಿ: ಬೀಚ್ ನೋಡಲೆಂದು ಹೋದವರು ಅಕಸ್ಮಾತ್ ಈ 5 ವಸ್ತುಗಳನ್ನ ಮನೆಗೆ ತಂದ್ರೆ ಜೈಲೂಟ ಗ್ಯಾರಂಟಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

