ಚಳಿಗಾಲದಲ್ಲಿ ಕಡಿಮೆ ಬಜೆಟ್‌ನಲ್ಲಿ ಹನಿಮೂನ್‌ ಹೋಗೋಕೆ ಬೆಸ್ಟ್‌ ಜಾಗಗಳಿವು

ಮದುವೆ ಸೀಸನ್‌ ಶುರುವಾಗಿದೆ. ಜೊತೆಗೆ ಚಳಿಗಾಲವೂ ಆರಂಭವಾಗಿದೆ. ಮದುವೆಯಾದವರು ಹನಿಮೂನ್‌ಗೆ ಹೋಗುತ್ತಿದ್ದಾರೆ. ಆದ್ರೆ ಹೆಚ್ಚಿನವರು ಹನಿಮೂನ್‌ಗೆ ಹೋಗಲು ಹೆಚ್ಚು ಬಜೆಟ್ ಬೇಕಾಗುವ ಕಾರಣ ಹೋಗೋದನ್ನು ಅವಾಯ್ಡ್ ಮಾಡುತ್ತಾರೆ. ಆದ್ರೆ ಚಳಿಗಾಲದಲ್ಲಿ ಕಡಿಮೆ ಬಜೆಟ್‌ನಲ್ಲಿ ಹನಿಮೂನ್‌ ಹೋಗೋಕೆ ಬೆಸ್ಟ್‌ ಜಾಗಗಳಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ. 

Travel Tips, Best places to go on a budget honeymoon in winter Vin

ಮದುವೆ ಸೀಸನ್ ಆಗಿರುವುದರಿಂದ ಅನೇಕರು ಮದುವೆ ಆಗುತ್ತಿದ್ದಾರೆ.ಮದುವೆಯ ನಂತರ ಅವರು ಖಂಡಿತವಾಗಿಯೂ ಹನಿಮೂನ್‌ಗೆ ಹೋಗುತ್ತಾರೆ. ಆದರೆ ನಮ್ಮ ದೇಶದಲ್ಲಿ ಈ ಚಳಿಗಾಲದಲ್ಲಿ ಹನಿಮೂನ್‌ಗೆ ಹೋಗಲು ಹಲವಾರು ಅತ್ಯುತ್ತಮ ಸ್ಥಳಗಳಿವೆ. ಆದರೆ ಬಜೆಟ್‌ ಹೆಚ್ಚಾಗುತ್ತೆ ಅನ್ನೋ ಕಾರಣಕ್ಕೆ ಹೆಚ್ಚಿನವರು ಹನಿಮೂನ್ ಹೋಗೋದನ್ನು ಅವಾಯ್ಡ್ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಕಡಿಮೆ ಬಜೆಟ್‌ನಲ್ಲೂ ಹನಿಮೂನ್‌ಗೆ ಹೋಗಬಹುದಾದ ಹಲವಾರು ಅತ್ಯುತ್ತಮ ಸ್ಥಳಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಹನಿಮೂನ್‌ಗೆ ಪರಿಪೂರ್ಣ ರೊಮ್ಯಾಂಟಿಕ್ ಆಗಿರುವ ತಾಣವನ್ನು ಆಯ್ಕೆ ಮಾಡುವುದು ಸುಲಭವಲ್ಲ. ಆದರೆ ಅನೇಕ ಜನರು ತಮ್ಮ ಹನಿಮೂನ್‌ಗಾಗಿ ಶಿಮ್ಲಾ-ಮನಾಲಿ, ರಾಜಸ್ಥಾನದಂತಹ ಸ್ಥಳಗಳಿಗೆ ಹೋಗುತ್ತಾರೆ. ಆದರೆ ಇವೆಲ್ಲವೂ ದುಬಾರಿಯಾಗಿರುತ್ತದೆ. ನೀವು ಕಡಿಮೆ ಬಜೆಟ್‌ನಲ್ಲಿ ಬೇರೆ ಸ್ಥಳಗಳಿಗೆ ಹೋಗಲು ಬಯಸಿದರೆ ಇಲ್ಲಿ ಮಾಹಿತಿಯಿದೆ.

ಹನಿಮೂನ್‌ಗೆ ದೇಶ-ವಿದೇಶ ಸುತ್ಬೇಕಾಗಿಲ್ಲ, ರಾಜ್ಯದಲ್ಲೇ ಎಂಥಾ ಮಸ್ತ್‌ ಪ್ಲೇಸ್ ಇದೆ ನೋಡಿ

ಲಾಚೆನ್, ಟಂಗು ಕಣಿವೆ
ಸಿಕ್ಕಿಂನ ಉತ್ತರ ಭಾಗದಲ್ಲಿರುವ ಈ ಸ್ಥಳವು ಹನಿಮೂನ್‌ನ್ನು ಸ್ಮರಣೀಯವಾಗಿಸುತ್ತದೆ. ಇಲ್ಲಿಗೆ ಹೋದ ಅನುಭವವನ್ನು ನೀವು ಎಂದಿಗೂ ಮರೆಯುವುದಿಲ್ಲ. ಈ ಟಂಗು ಕಣಿವೆಯು 3950 ಮೀಟರ್ ಎತ್ತರದಲ್ಲಿ 13000 ಅಡಿ ಎತ್ತರದಲ್ಲಿದೆ. ಗುರುಡೊಂಗ್ಮಾರ್ ಸರೋವರ ಮತ್ತು ಚೋಪ್ತಾ ಸರೋವರಕ್ಕೆ ಹೋಗುವ ಮಾರ್ಗದಲ್ಲಿ ನೀವು ಈ ಕಣಿವೆಯನ್ನು ನೋಡಬಹುದು. ಈ ಸ್ಥಳಕ್ಕೆ ಅಕ್ಟೋಬರ್‌ನಿಂದ ಮಾರ್ಚ್ ತಿಂಗಳುಗಳಲ್ಲಿ ಹೋಗುವುದು ಉತ್ತಮ. ಈ ಸ್ಥಳವು ಚೀನಾದ ಗಡಿಗೆ ಹತ್ತಿರವಾಗಿದ್ದರೂ, ಭಾರತೀಯರಿಗೆ ಮಾತ್ರ ಭೇಟಿ ನೀಡಲು ಅವಕಾಶವಿದೆ. ಇಲ್ಲಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಚೋಪ್ತಾ ಗ್ರಾಮಕ್ಕೂ ನೀವು ಹೋಗಬಹುದು. ಟಂಗು ಕಣಿವೆಯ ಮೇಲೆ ಹೋಗುವಾಗ, ಮರಗಳ ಸಾಲುಗಳ ಅದ್ಭುತ ನೋಟವನ್ನು ಆನಂದಿಸಬಹುದು. 

ತವಾಂಗ್, ಹಿಮಾಲಯ
ತವಾಂಗ್ ಹಿಮಾಲಯದಲ್ಲಿರುವ ಒಂದು ಸಣ್ಣ ಪಟ್ಟಣ. ಈ ಸ್ಥಳವು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ಬಹಳ ಹೆಸರುವಾಸಿಯಾಗಿದೆ. ತವಾಂಗ್ ಮಠ ಈ ನಗರದಲ್ಲಿದೆ. ಇದು ಭಾರತದ ಅತಿ ದೊಡ್ಡ ಮಠ. 6ನೇ ದಲೈಲಾಮಾ ಅವರ ಜನ್ಮಸ್ಥಳ ಕೂಡಾ ಹೌದು. ತವಾಂಗ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಚಳಿಗಾಲ. ಹೀಗಾಗಿಯೇ ನ್ಯೂ ಕಪಲ್‌ ಇಲ್ಲಿ ಹನಿಮೂನ್‌ಗೆ ಬಂದು ಸಮಯ ಕಳೆಯಬಹುದು. ನೈಸರ್ಗಿಕ ಸೌಂದರ್ಯ ಮತ್ತು ಪ್ರವಾಸಿ ತಾಣಕ್ಕೆ ಹೆಸರುವಾಸಿಯಾದ ಈ ಪ್ರದೇಶವು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಹನಿಮೂನ್‌ಗಾಗಿ ಇಲ್ಲಿಗೆ ಹೋಗಲು ಬಯಸಿದರೆ ನೀವು ಗೋರಿಚೆನ್ ಪೀಕ್, ಸೆಲಾ ಪಾಸ್, ತವಾಂಗ್ ಮೊನಾಸ್ಟರಿ, ನುರಾನಾಂಗ್ ಫಾಲ್ಸ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

ಹನಿಮೂನ್‌ ಹೋಗೋಕೆ ಭಾರತದಲ್ಲಿರೋ ಸೇಫ್ ಜಾಗಗಳಿವು

ಡಾರ್ಜಿಲಿಂಗ್
ಶಿಮ್ಲಾ-ಮನಾಲಿ ಪರ್ವತಗಳಿಂದ ದೂರವಿರುವ ವಿಶೇಷ ಸ್ಥಳದಲ್ಲಿ ಮಧುಚಂದ್ರವನ್ನು ಕಳೆಯಲು ನೀವು ಬಯಸಿದರೆ, ಡಾರ್ಜಿಲಿಂಗ್‌ಗೆ ಹೋಗಲು ಪ್ಲಾನ್ ಮಾಡಬಹುದು. ಮಧುಚಂದ್ರಕ್ಕೆ ತಂಪಾದ ಹವಾಮಾನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹೀಗಾಗಿಯೇ ಡಾರ್ಜಿಲಿಂಗ್ ಯಾರಿಗಾದರೂ ಇಷ್ಟವಾಗುವುದು ಖಂಡಿತ. ಡಾರ್ಜಿಲಿಂಗ್‌ನಲ್ಲಿರುವ ಅತಿ ಎತ್ತರದ 'ಟೈಗರ್ ಹಿಲ್' ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.

ಅಂಡಮಾನ್ ನಿಕೋಬಾರ್‌
ಭಾರತದ ಬಜೆಟ್ ಹನಿಮೂನ್ ತಾಣಗಳಲ್ಲಿ ಅಂಡಮಾನ್‌ ನಿಕೋಬಾರ್‌ ಸಹ ಒಂದಾಗಿದೆ. ಪೋರ್ಟ್ ಬ್ಲೇರ್, ಹ್ಯಾವ್ಲಾಕ್, ರಾಸ್ ಐಲ್ಯಾಂಡ್, ರೆಡ್ ಸ್ಕಿನ್ ಅಥವಾ ಜಾಲಿ ಬಾಯ್ ಅತ್ಯಂತ ರೋಮಾಂಚನಕಾರಿ ಚಟುವಟಿಕೆಗಳನ್ನು ನೀಡುವ ಅದ್ಭುತ ಸ್ಥಳಗಳಾಗಿವೆ. ಜಲ ಕ್ರೀಡೆಗಳು, ಕಡಲತೀರಗಳು ಮತ್ತು ದಟ್ಟವಾದ ಮಳೆಕಾಡುಗಳೊಂದಿಗೆ ಇಲ್ಲಿ ಹನಿಮೂನ್ ಎಂಜಾಯ್ ಮಾಡಬಹುದು. ಅಂಡಮಾನ್‌ನಲ್ಲಿ ಸಂಗಾತಿಯೊಂದಿಗೆ ರಾಧಾನಗರ ಬೀಚ್‌ನಲ್ಲಿ ಸಂಜೆಯ ವಿಹಾರ ನಡೆಸಬಹುದು. ರೆಡ್ ಸ್ಕಿನ್ ಅಥವಾ ಜಾಲಿ ಬಾಯ್ ದ್ವೀಪದಲ್ಲಿ ಸ್ನಾರ್ಕ್ಲಿಂಗ್; ಹ್ಯಾವ್ಲಾಕ್ ನಲ್ಲಿ ಬೀಚ್ ಡಿನ್ನರ್; ಮತ್ತು ಹ್ಯಾವ್‌ಲಾಕ್‌ನಲ್ಲಿ ಮುಂಜಾನೆ ಸ್ಕೂಬಾ ಮಾಡಬಹುದು.

Latest Videos
Follow Us:
Download App:
  • android
  • ios