Travel
ಮಧುಚಂದ್ರವನ್ನು ಆಚರಿಸಲು ಭೂಮಿಯ ಮೇಲಿನ ಸ್ವರ್ಗವಾದ ಕಾಶ್ಮೀರ ಸೇಫ್ ಕೂಡಾ ಹೌದು. ಇಲ್ಲಿ ಸಂಗಾತಿಯ ಕೈಗಳನ್ನು ಹಿಡಿದುಕೊಂಡು ದಾಲ್ ಸರೋವರದ ಮೇಲೆ ರೋಮ್ಯಾಂಟಿಕ್ ರೈಡ್‌ನ್ನು ಆನಂದಿಸಿ.
ಹಿಮಾಚಲ ಪ್ರದೇಶದಲ್ಲಿರುವ ಈ ಬ್ಯೂಟಿಫುಲ್ ಹಿಲ್ ಸ್ಟೇಶನ್ ತುಂಬಾ ಪ್ರಸಿದ್ಧವಾಗಿದೆ. ಶಿಮ್ಲಾ ತುಂಬಾ ಸೇಫ್ ಮತ್ತು ಪೀಸ್‌ಫುಲ್ ಜಾಗವಾಗಿದ್ದು ಇಲ್ಲಿನ ಪ್ರಕೃತಿ ರಮಣೀಯತೆ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.
ಕೇರಳ ಅಂದ್ ಕೂಡ್ಲೇ ಅತ್ಯದ್ಭುತವಾದ ಪ್ರಾಕೃತಿಕ ಸೌಂದರ್ಯವೇ ಕಣ್ಮುಂದೆ ಬರುತ್ತದೆ. ಇಲ್ಲಿನ ಹಿನ್ನೀರಿನ ತಾಣಗಳು, ಬೀಚ್, ಪರ್ವತಗಳು ಎಲ್ಲರ ಕಣ್ಮನ ಸೆಳೆಯುತ್ತದೆ. ಹನಿಮೂನ್‌ಗೆ ಹೋಗಲು ತುಂಬಾ ಸುರಕ್ಷಿತ ತಾಣ.
ಗೋವಾ ಅಲ್ಲಿರುವ ಸುಂದರವಾದ ಬೀಚ್ ಮತ್ತು ಪ್ರಕೃತಿಯ ಸುಂದರ ಸೀನರಿ ದೃಶ್ಯಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಹಾಗೆಯೇ ಗೋವಾ ಪ್ರವಾಸಿಗರಿಗೆ ಸೇಫೆಸ್ಟ್ ಪ್ಲೇಸ್ ಎಂದು ಗುರುತಿಸಿಕೊಂಡಿದೆ.
ಇದು ಭೂಮಿ ಮೇಲಿನ ಸ್ವರ್ಗ. ಸುಂದರವಾದ ದ್ವೀಪವಾಗಿರುವ ಅಂಡೋಮಾನ್ ನಿಕೋಬಾರ್‌ನಲ್ಲಿ ಪ್ರವಾಸಿಗರಿಗೆ ಹಲವು ಸಾಹಸಕಾರ್ಯಗಳನ್ನು ಮಾಡಲು ಅವಕಾಶವಿದೆ.
ರಾಜಸ್ಥಾನದಲ್ಲಿರುವ ಉದಯಪುರ ಸರೋವರಗಳ ನಗರವೆಂದೇ ಹೆಸರುವಾಸಿಯಾಗಿದೆ. ರಾಜಸ್ಥಾನ ಸುಂದರವಾದ ಅರಮನೆಗಳು ಮತ್ತು ಸರೋವರಗಳನ್ನು ಒಳಗೊಂಡಿದೆ.