Asianet Suvarna News Asianet Suvarna News

India Lover : ಒಮ್ಮೆ ಭಾರತಕ್ಕೆ ಬಂದ ಇವರಿಗೆ ವಾಪಸ್ ಹೋಗೋ ಮನಸ್ಸಾಗ್ಲಿಲ್ಲ..

ಭಾರತ , ಭಾರತೀಯರಿಗೆ ಬೇಡವಾದ್ರೂ ವಿದೇಶಿಗರಿಗೆ ಇಷ್ಟವಾಗುತ್ತೆ. ಭಾರತವನ್ನು ತೆಗೆಳುವ ಭಾರತೀಯರ ಸಂಖ್ಯೆ ಹೆಚ್ಚಿದೆ. ಅದೇ ರೀತಿ ಭಾರತವನ್ನು ಪ್ರೀತಿಸುವ ವಿದೇಶಿಗರಿದ್ದಾರೆ. ಇಲ್ಲಿಯೇ ನೆಲೆನಿಂತು ಭಾರತೀಯರನ್ನು ಪ್ರೀತಿಸಿದ ಕೆಲವರ ಮಾಹಿತಿ ಇಲ್ಲಿದೆ. 
 

Travel Foreigners Those Come To For Once But Never Go Back roo
Author
First Published Jun 14, 2023, 1:37 PM IST

ಭಾರತದಲ್ಲಿ ಶಿಕ್ಷಣ ಸರಿಯಾಗಿಲ್ಲ, ನಿರುದ್ಯೋಗಿಗಳ ಸಂಖ್ಯೆ ಹೆಚ್ಚು, ಸಾರಿಗೆ ವ್ಯವಸ್ಥೆ, ರಸ್ತೆ ಸರಿಯಾಗಿಲ್ಲ, ಆಡಳಿತ ವ್ಯವಸ್ಥೆ ಭ್ರಷ್ಟತೆಯಿಂದ ಕೂಡಿದೆ, ಬಡತನ ಹೆಚ್ಚು, ಜನಸಂಖ್ಯೆ ಹೆಚ್ಚು ಹೀಗೆ ನಾನಾ ಕಾರಣಗಳನ್ನು ಹೇಳಿ ಭಾರತವನ್ನು ತೊರೆದು ಬೇರೆ ದೇಶಕ್ಕೆ ಹೋಗಿ ನೆಲೆ ನಿಲ್ಲುವ ಭಾರತೀಯರ ಸಂಖ್ಯೆ ಹೆಚ್ಚಿದೆ. ಸುಸಂಸ್ಕೃತ ದೇಶದ ಮಹತ್ವ ನಮ್ಮವರಿಗೆ ತಿಳಿದಿಲ್ಲ. ಅದೇ ವಿದೇಶಿಗರಿಗೆ ಭಾರತದ ನೆಲ ಸದಾ ಆಕರ್ಷಣೆ. ನಾವು ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಳ್ತಿದ್ದರೆ ಅವರು ಭಾರತದ ಪದ್ಧತಿಯನ್ನು ಮೆಚ್ಚಿ, ಅದನ್ನು ಪಾಲಿಸಲು ಹಾತೊರೆಯುತ್ತಿದ್ದಾರೆ. 

ಭಾರತ (India) ತನ್ನ ಸಂಸ್ಕೃತಿ, ನೈಸರ್ಗಿಕ ಸೌಂದರ್ಯದಿಂದ ಎಲ್ಲರನ್ನು ಸೆಳೆಯುತ್ತದೆ. ಒಮ್ಮೆ ಭಾರತಕ್ಕೆ ಬಂದವರು ಮರಳಿ ಹೋಗುವ ಮನಸ್ಸು ಮಾಡೋದಿಲ್ಲ. ಭಾರತಕ್ಕೆ ಪ್ರವಾಸಕ್ಕೆಂದು ಬಂದವರು ಭಾರತದಲ್ಲಿಯೇ ನೆಲೆ ಊರಿದ ಅನೇಕ ವಿದೇಶಿಗರು ನಮ್ಮಲ್ಲಿದ್ದಾರೆ. ಇಂದು ನಾವು ಭಾರತವನ್ನು ಮೆಚ್ಚಿಕೊಂಡ ಕೆಲ ವಿದೇಶಿಗರ ಬಗ್ಗೆ ನಿಮಗೆ ಹೇಳ್ತೇವೆ.

ಪ್ರಪಂಚದ ಈ ಸ್ಥಳಗಳ ರಹಸ್ಯ ಕಂಡು ಹಿಡಿಯೋಕೆ ಯಾರಿಂದಲೂ ಆಗೋಲ್ಲ

ಭಾರತದವನ್ನು ಪ್ರೀತಿಸಿದ ವಿದೇಶಿ ಸೆಲೆಬ್ರಿಟಿ (Celebrity) ಗಳು ಯಾರು ಗೊತ್ತಾ? : 

ಮದರ್ ತೆರೇಸಾ : ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಭಾರತ ರತ್ನ ಮದರ್ ತೆರೇಸಾ ಯಾರಿಗೆ ತಿಳಿದಿಲ್ಲ. ಮದರ್ ತೆರೇಸಾ ಜನಿಸಿದ್ದು ಯುಗೊಸ್ಲಾವಿಯಾದಲ್ಲಿ. ಮದರ್ ತೆರೇಸಾ 1929 ರಲ್ಲಿ ಭಾರತಕ್ಕೆ ಬಂದಿದ್ದರು. ಅವರು 1931 ರಲ್ಲಿ ರೋಮನ್ ಕ್ಯಾಥೋಲಿಕ್ ಸನ್ಯಾಸಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ರು. ನಂತರ ಭಾರತದಲ್ಲಿ ನೆಲೆ ನಿಂತ ಮದರ್ ತೆರೇಸಾ, ಬಡ ಮಹಿಳೆಯರ ಅಭಿವೃದ್ಧಿ ಮತ್ತು ಉನ್ನತಿಗಾಗಿ ಸಾಕಷ್ಟು ಕೆಲಸ ಮಾಡಿದ್ದರು. 

ಗ್ರೆಗೊರಿ ಡೇವಿಡ್ ರಾಬರ್ಟ್ಸ್: ಗ್ರೆಗೊರಿ ಡೇವಿಡ್ ರಾಬರ್ಟ್ಸ್ ಆಸ್ಟ್ರೇಲಿಯಾದ ಲೇಖಕರು. ಅವರು ಬ್ಯಾಂಕ್ ದರೋಡೆ ಮಾಡಿದ್ದರು. ಆಸ್ಟ್ರೇಲಿಯಾ ಜೈಲಿನಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದರು. 1980ರಲ್ಲಿ ಭಾರತಕ್ಕೆ ಬಂದ ಗ್ರೆಗೊರಿ, ಭಾರತದಲ್ಲಿ ತಮ್ಮ ಸ್ವಭಾವ ಸುಧಾರಿಸಿಕೊಳ್ಳುವ ಕೆಲಸ ಮಾಡಿದ್ದರು ಅಂದ್ರೆ ತಪ್ಪಾಗೋದಿಲ್ಲ.  ಭಾರತದಲ್ಲಿ ಹತ್ತು ವರ್ಷಗಳ ಕಾಲ ವಾಸವಾಗಿದ್ದ ಇವರು ಶಾಂತಾರಾಮ್ ಎಂಬ ಪುಸ್ತಕವನ್ನು ಇಲ್ಲಿಯೇ ಬರೆದಿದ್ದರು. ಭಾರತದಲ್ಲಿದ್ದ ಸಂದರ್ಭದಲ್ಲಿ ಗ್ರೆಗೊರಿ, ಬಡವರಿಗಾಗಿ ತಮ್ಮ ಸೇವೆ ಸಲ್ಲಿಸಿದ್ದರು.

Interesting Facts : ಮಧ್ಯರಾತ್ರಿ 12 ಗಂಟೆಗೆ ಹೌರಾ ಸೇತುವೆ ಬಂದ್ ಆಗೋದೇಕೆ?

ಬಾಬ್ ಕ್ರಿಸ್ಟೋ : ತವರು ತೊರದು, ಭಾರತದಲ್ಲಿ ನೆಲೆಕಂಡುಕೊಂಡವರಲ್ಲಿ ಬಾಬ್ ಕ್ರಿಸ್ಟೋ ಒಬ್ಬರು. ಅವರು ಆಸ್ಟ್ರೇಲಿಯಾವನ್ನು ತೊರೆದು ಭಾರತಕ್ಕೆ ಬಂದ್ಮೇಲೆ ಮತ್ತೆ ಆಸ್ಟ್ರೇಲಿಯಾಕ್ಕೆ ಹೋಗುವ ಮನಸ್ಸು ಮಾಡಲಿಲ್ಲ. 1980 ಮತ್ತು 90 ರ ದಶಕದಲ್ಲಿ ಅನೇಕ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ಬಾಬ್. ಬಹುತೇಕ ಚಿತ್ರಗಳಲ್ಲಿ ಬಾಬ್, ಖಳನಾಯಕನಾಗಿ ಮಿಂಚಿದ್ದರು. ಆಸ್ಟ್ರೇಲಿಯನ್ – ಭಾರತೀಯ ಸಿವಿಲ್ ಇಂಜಿನಿಯರ್ ಆಗಿದ್ದ ಬಾಬ್ ಕ್ರಿಸ್ಟೋ, 2011ರಲ್ಲಿ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ್ರು.

ರೊಮಿಲಸ್ ವಿಟ್ಟೇಕರ್ :  ರೊಮಿಲಸ್ ವಿಟ್ಟೇಕರ್ ಮೂಲ ನ್ಯೂಯಾರ್ಕ್‌. ಮಳೆಕಾಡು ಸಂರಕ್ಷಣೆ ಮತ್ತು ಪರಿಸರವನ್ನು ಅರ್ಥಮಾಡಿಕೊಳ್ಳಲು ಮತ್ತು ರಕ್ಷಿಸುವ ಉತ್ಸಾಹದಿಂದ ಭಾರತಕ್ಕೆ ಬಂದ ರೊಮಿಲಸ್ ವಿಟ್ಟೇಕರ್ ಇಲ್ಲಿಯೇ ದೀರ್ಘಕಾಲ ನೆಲೆಸಿದ್ದರು. ಮದ್ರಾಸ್ ಸ್ನೇಕ್ ಪಾರ್ಕ್, ಅಂಡಮಾನ್-ನಿಕೋಬಾರ್ ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಮದ್ರಾಸ್ ಸ್ಟೇಟ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್ ಸ್ಥಾಪನೆ ಮಾಡಿದ ಕೀರ್ತಿ ರೊಮಿಲಸ್ ವಿಟ್ಟೇಕರ್ ಗೆ ಸಲ್ಲುತ್ತದೆ.

ಜಿಮ್ ಕಾರ್ಬೆಟ್ : ಭಾರತವನ್ನು ಪ್ರೀತಿಸಿದ ಇನ್ನೊಬ್ಬ ವ್ಯಕ್ತಿ ಜಿಮ್ ಕಾರ್ಬೆಟ್. ಐರಿಶ್ ಮೂಲದ ಜಿಮ್ ಕಾರ್ಬೆಟ್ ಗೆ ಕಾಡು ಮತ್ತು ಕಾಡು ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಇತ್ತು. ಭಾರತದ ಕಾಡುಗಳ ಆಳವನ್ನು ಅರ್ಥಮಾಡಿಕೊಳ್ಳಲು ಅವರು ಇಲ್ಲಿಗೆ ಬಂದಿದ್ದರು.  

ಮಾರ್ಕ್ ಟುಲ್ಲಿ : ಭಾರತದ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಪ್ರೇಮಿ ಬ್ರಿಟನ್‌ನ ಮಾರ್ಕ್ ಟುಲ್ಲಿ. ಬಿಬಿಸಿ ಬ್ಯೂರೋದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಸ್ಥರಲ್ಲಿ ಮಾರ್ಕ್ ಟುಲ್ಲಿ ಒಬ್ಬರು.

Follow Us:
Download App:
  • android
  • ios