Interesting Facts : ಮಧ್ಯರಾತ್ರಿ 12 ಗಂಟೆಗೆ ಹೌರಾ ಸೇತುವೆ ಬಂದ್ ಆಗೋದೇಕೆ?
ಪ್ರತಿಯೊಂದು ಪ್ರವಾಸಿ ತಾಣವೂ ತನ್ನದೇ ವಿಶೇಷತೆಯನ್ನು ಹೊಂದಿರುತ್ತದೆ. ಹಾಗೆಯೇ ಕೆಲ ಪ್ರವಾಸಿ ತಾಣಗಳಲ್ಲಿ ಸಾಕಷ್ಟು ಕೌತುಕದ ವಿಷ್ಯ ಅಡಗಿರುತ್ತದೆ. ಕೊಲ್ಕತ್ತಾದ ಹೌರಾ ಸೇತುವೆ ಕೂಡ ಇದ್ರಲ್ಲಿ ಒಂದು.
ಪ್ರವಾಸಿಗರಿಗೆ ಇಷ್ಟವಾಗುವ ಪ್ರದೇಶಗಳಲ್ಲಿ ಕೊಲ್ಕತ್ತಾ ಕೂಡ ಒಂದು. ಕೊಲ್ಕತ್ತಾ ಇಷ್ಟವಾಗಲ್ಲ ಎನ್ನುವವರ ಸಂಖ್ಯೆ ಬಹಳ ಕಡಿಮೆ. ನೀವು ಇನ್ನು ಕೊಲ್ಕತ್ತಾಗೆ ಹೋಗಿಲ್ಲವೆಂದ್ರೆ ಒಮ್ಮೆ ಹೋಗಿ ಬನ್ನಿ. ಅಲ್ಲಿ ವೀಕ್ಷಣೆ ಮಾಡಲು ಸಾಕಷ್ಟು ಸ್ಥಳಗಳಿವೆ. ಕೊಲ್ಕತ್ತಾದ ಆಕರ್ಷಣೀಯ ಕೇಂದ್ರಗಳಲ್ಲಿ ಹೌರಾ ಸೇತುವೆ ಕೂಡ ಸೇರಿದೆ.
ಹೌರಾ (Howrah) ಸೇತುವೆ ಕೇವಲ ಸುಂದರವಾಗಿ ಮಾತ್ರವಿಲ್ಲ. ಅದು ಪ್ರವಾಸಿಗ (Tourist) ರನ್ನು ಆಕರ್ಷಿಸುವ ಶಕ್ತಿ ಹೊಂದಿದೆ. ದೇಶದ ಪ್ರವಾಸಿಗರು ಮಾತ್ರವಲ್ಲ ವಿದೇಶದಿಂದ ಸಾವಿರಾರು ಮಂದಿ ಈ ಹೌರಾ ಸೇತುವೆ ನೋಡಲು ಬರ್ತಾರೆ. ಈ ಹೌರಾ ಸೇತುವೆಯ ವಿಶೇಷವೊಂದಿದೆ. ಮಧ್ಯರಾತ್ರಿ ನೀವು ಈ ಸೇತುವೆ (Bridge) ವೀಕ್ಷಣೆ ಮಾಡಲು ಸಾಧ್ಯವಿಲ್ಲ. 12 ಗಂಟೆಗೆ ಈ ಸೇತುವೆ ಮೇಲೆ ಸಂಚಾರ ಸಂಪೂರ್ಣ ಬಂದ್ ಆಗಿರುತ್ತದೆ. ಅದು ಏಕೆ ಅನ್ನೋದನ್ನು ನಾವು ಹೇಳ್ತೇವೆ.
Travel Tips : ವಿಮಾನ ನಿಲ್ದಾಣದಲ್ಲಿ ಕಾಯೋದು ಬೋರ್ ಅಲ್ವಾ? ಹೀಗ್ ಮಾಡ್ಬಹುದು
ಹೌರಾ ಸೇತುವೆ ವಿಶೇಷವೇನು? : ಹೌರಾ ಸೇತುವೆಯನ್ನು ಕ್ಯಾಂಟಿಲಿವರ್ ಸೇತುವೆ ಎಂದು ಹೇಳಲಾಗುತ್ತದೆ. ಇದು ಪಶ್ಚಿಮ ಬಂಗಾಳದ ಹೂಗ್ಲಿ ನದಿಯನ್ನು ವ್ಯಾಪಿಸಿದೆ. ಹೌರಾ ಮತ್ತು ಕೊಲ್ಕತ್ತಾ ನಗರವನ್ನು ಈ ಸೇತುವೆ ಸಂಪರ್ಕಿಸುತ್ತದೆ. ಕ್ಯಾಂಟಿಲಿವರ್ ಬಳಸಿ ನಿರ್ಮಿಸಲಾದ ಕ್ಯಾಂಟಿಲಿವರ್ ಸೇತುವೆ ಇದಾಗಿದೆ. 1943ರಲ್ಲಿ ಇದು ಕಾರ್ಯಾರಂಭಗೊಂಡಿತು. ಈ ಸೇತುವೆಯ ರಚನೆಯು ದೂರದಿಂದ ಗಣಿತದ ರಚನೆಯನ್ನು ಪ್ರಸ್ತುತಪಡಿಸುತ್ತದೆ. ಇದರ ವಿಶೇಷತೆಯೆಂದರೆ ಈ ಸೇತುವೆಯು 280 ಅಡಿ ಎತ್ತರದ ಎರಡು ಕಂಬಗಳ ಮೇಲೆ ನಿಂತಿದೆ. ಈ ಎರಡು ಕಂಬಗಳ ನಡುವಿನ ಅಂತರ ಒಂದೂವರೆ ಸಾವಿರ ಅಡಿ.
12 ಗಂಟೆಗೆ ಹೌರಾ ಸೇತುವೆ ಬಂದ್ ಆಗೋದು ಏಕೆ? : ಹೌರಾ ಸೇತುವೆಯನ್ನು ಮಧ್ಯರಾತ್ರಿ 12 ಗಂಟೆಯಿಂದ ಸ್ವಲ್ಪ ಸಮಯದವರೆಗೆ ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಸೇತುವೆ ಕುಸಿಯುವ ಅಪಾಯ ಹೆಚ್ಚು ಎಂದು ಸ್ಥಳೀಯ ಜನರು ನಂಬಿದ್ದಾರೆ. 12 ಗಂಟೆಗೇ ಸೇತುವೆ ಯಾಕೆ ಕುಸಿಯುತ್ತೆ ಎಂಬ ಪ್ರಶ್ನೆ ಎಲ್ಲರನ್ನು ಕಾಡೋದು ಸಾಮಾನ್ಯ. ಅದಕ್ಕೂ ಸ್ಥಳೀಯರ ಬಳಿ ಉತ್ತರವಿದೆ. ಬ್ರಿಟಿಷರು ಈ ಸೇತುವೆಯನ್ನು ನಿರ್ಮಾಣ ಮಾಡಿದ್ದಾರೆ. ವಾಸ್ತುಶಿಲ್ಪಕ್ಕೆ ಇದು ಪ್ರಸಿದ್ಧಿಯಾಗಿದೆ. ಈ ಹೌರಾ ಸೇತುವೆಗೆ ಸಂಬಂಧಿಸಿದಂತೆ ಅನೇಕ ಕಥೆಗಳು ಪ್ರಸಿದ್ಧಿಯಲ್ಲಿವೆ. ಮಧ್ಯರಾತ್ರಿ 12 ಗಂಟೆಯಿಂದ ಸ್ವಲ್ಪ ಸಮಯ ಟ್ರೈನ್ ಸಂಚಾರ, ಕಾರಿನ ಸಂಚಾರ ಹಾಗೂ ಕೆಳಗೆ ದೋಣಿ ಸಂಚಾರವನ್ನು ಬಂದ್ ಮಾಡಲಾಗುತ್ತದೆ. ಬ್ರಿಟಿಷ್ ಪ್ರಕಾರ, ಹೌರಾ ಸೇತುವೆಯನ್ನು ಕೇವಲ ಎರಡು ಕಂಬಗಳಲ್ಲಿ ನಿರ್ಮಾಣ ಮಾಡಲಾಗಿದೆ. ಭಾರ ಹೆಚ್ಚಾದ್ರೆ ಸೇತುವೆ ಕುಸಿಯುವ ಸಾಧ್ಯತೆ ಹೆಚ್ಚಿರುತ್ತದೆ. ಹೌರಾ ಸೇತುವೆಯನ್ನು ನಿರ್ಮಾಣ ಮಾಡಿದ್ದ ಇಂಜಿನಿಯರ್, ಒಂದ್ವೇಳೆ ಹೌರಾ ಸೇತುವೆ ಕುಸಿಯೋದಾದ್ರೆ ರಾತ್ರಿ 12 ಗಂಟೆಗೆ ಕುಸಿಯುತ್ತೆ ಎಂದಿದ್ದರಂತೆ. ಇದೇ ಕಾರಣಕ್ಕೆ ಸೇತುವೆಯನ್ನು ಆ ಸಮಯದಲ್ಲಿ ಬಂದ್ ಮಾಡಲಾಗುತ್ತದೆ.
ಕೇರಳದ ಈ ದೇಗುಲಕ್ಕೆ ನಾಯಿಯೂ ಪ್ರವೇಶಿಸಬಹುದು, ಸಿಗೋದು ಮೀನಿನ ಪ್ರಸಾದ
ಸೇತುವೆ ಮೇಲೆ ಸಂಚರಿಸುವ ಜನರೆಷ್ಟು? : ಈ ಸೇತುವೆ ಲಕ್ಷಾಂತರ ಮಂದಿಗೆ ಆಸರೆಯಾಗಿದೆ. ಕೇಳಿದ್ರೆ ಅಚ್ಚರಿ ಎನ್ನಿಸಬಹುದು, ಪ್ರತಿ ದಿನ ಈ ಸೇತುವೆ ಮೇಲೆ 1 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. 1.5 ಲಕ್ಷಕ್ಕೂ ಹೆಚ್ಚು ಪಾದಾಚಾರಿಗಳು ಸೇತುವೆ ದಾಟುತ್ತಾರೆ. ಸೇತುವೆಯನ್ನು ಬಳಸಿದ ಮೊದಲ ವಾಹನ ಟ್ರಾಮ್. ಅದರ ನಿರ್ಮಾಣದ ಸಮಯದಲ್ಲಿ ಇದು ಮೂರನೇ ಅತಿ ಉದ್ದದ ಕ್ಯಾಂಟಿಲಿವರ್ ಸೇತುವೆಯಾಗಿತ್ತು. ಇದು ಈಗ ವಿಶ್ವದ ಎಂಟನೇ ಅತಿ ಉದ್ದದ ಸೇತುವೆಗಳಲ್ಲಿ ಒಂದಾಗಿದೆ. ನೀವು ಸೇತುವೆ ನೋಡಲು ಬೆಳಿಗ್ಗೆ ಅಥವಾ ಸಂಜೆ ಹೋಗುವುದು ಸೂಕ್ತ. ಮಧ್ಯಾಹ್ನದ ಸಮಯದಲ್ಲಿ ಜನರ ಸಂಖ್ಯೆ ಹೆಚ್ಚಿರುತ್ತದೆ. ರಾತ್ರಿ, ಸೇತುವೆ ಝಗಮಗಿಸುವ ಕಾರಣ ನೋಡಲು ಸುಂದರವಾಗಿರುತ್ತದೆ.