MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಪ್ರಪಂಚದ ಈ ಸ್ಥಳಗಳ ರಹಸ್ಯ ಕಂಡು ಹಿಡಿಯೋಕೆ ಯಾರಿಂದಲೂ ಆಗೋಲ್ಲ

ಪ್ರಪಂಚದ ಈ ಸ್ಥಳಗಳ ರಹಸ್ಯ ಕಂಡು ಹಿಡಿಯೋಕೆ ಯಾರಿಂದಲೂ ಆಗೋಲ್ಲ

ಜಗತ್ತಿನಲ್ಲಿ ಹಲವಾರು ನಿಗೂಢ ತಾಣಗಳಿವೆ ಒಂದು ಸ್ಥಳದಲ್ಲಿ ರಕ್ತದ ಜಲಪಾತ ಹರಿದರೆ, ಮತ್ತೊಂದು ದ್ವೀಪದಲ್ಲಿ ಪೂರ್ತಿಯಾಗಿ ಹಾವುಗಳೇ ತುಂಬಿವೆ, ಮತ್ತೊಂದೆಡೆ ವಿಮಾನಗಳನ್ನೆ ಸೆಳೆಯುವಂತಹ ಟ್ರೈ ಆಂಗಲ್. ಈ ನಿಗೂಢ ಸ್ಥಳಗಳ ಬಗ್ಗೆ ತಿಳಿಯೋಣ. 

2 Min read
Pavna Das
Published : Jun 13 2023, 05:32 PM IST
Share this Photo Gallery
  • FB
  • TW
  • Linkdin
  • Whatsapp
18

ಇಡೀ ಜಗತ್ತಿನಲ್ಲಿ ಅನೇಕ ಸ್ಥಳಗಳಿವೆ, ಅವುಗಳ ರಹಸ್ಯವನ್ನು ಇಂದಿಗೂ ಯಾರಿಂದಲೂ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ.. ಇದನ್ನು ನಂಬಲು ಕಷ್ಟ. ಆದರೆ ಇದು ನಿಜ. ವಿಜ್ಞಾನಿಗಳು ಸಹ ಈ ರಹಸ್ಯಗಳನ್ನು ಪರಿಹರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇಂದು ನಾವು ಅಂತಹ ಸ್ಥಳಗಳ ಬಗ್ಗೆ ನಿಮಗೆ ಹೇಳುತ್ತೇವೆ. 
 

28

ಹಾವುಗಳ ದ್ವೀಪ (Snake Island)
ಬ್ರೆಜಿಲ್ನಲ್ಲಿ ಒಂದು ದ್ವೀಪವಿದೆ, ಅದು ಸಾವಿರಾರು ವಿಷಕಾರಿ ಹಾವುಗಳಿಂದ ತುಂಬಿದೆ. ಈ ದ್ವೀಪದ ಹೆಸರು ಇಲಾಹ ಡಾ ಕ್ವಿಮಡಾ. ಇಲ್ಲಿ ಇಷ್ಟೊಂದು ಹಾವುಗಳ ಯಾಕಿವೆ? ಅನ್ನೋದನ್ನು, ಇಲ್ಲಿಯವರೆಗೆ ಯಾರಿಗೂ ತಿಳಿಯಲು ಸಾಧ್ಯವಾಗಿಲ್ಲ. ಈ ದ್ವೀಪವನ್ನು ಹಾವುಗಳ ದ್ವೀಪ ಎಂದೂ ಕರೆಯಲಾಗುತ್ತದೆ. 

38

ಬರ್ಮುಡಾ ಟ್ರೈ ಆಂಗಲ್ (Bermuda Triangle)
ಬರ್ಮುಡಾ ಟ್ರೈ ಆಂಗಲ್ ನ್ನು ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ನಿಗೂಢ ಸ್ಥಳವೆಂದು ಪರಿಗಣಿಸಲಾಗಿದೆ. ಈ ನಿಗೂಢ ಸ್ಥಳದ ಬಗ್ಗೆ ಅನೇಕ ಚಲನಚಿತ್ರಗಳನ್ನು ಸಹ ಮಾಡಲಾಗಿದೆ. ಇಲ್ಲಿ ಸಾಕಷ್ಟು ಗುರುತ್ವಾಕರ್ಷಣೆ ಇದೆ. ಅದರ ಮೇಲೆ ಏನಾದರೂ ಹಾದು ಹೋದರೆ, ಈ ತ್ರಿಕೋನವು ಅದನ್ನು ತನ್ನೊಳಗೆ ಸೆಳೆದುಕೊಳ್ಳುತ್ತೆ. ಹಲವಾರು ಅಪಘಾತಗಳು ಸಹ ಇಲ್ಲಿ ನಡೆದಿವೆ.

48

ಡೆಡ್ ಸಿ (Dead sea)
ಜೋರ್ಡಾನ್ ನಲ್ಲಿ ಡೆಡ್ ಸೀ ಎಂದು ಕರೆಯಲ್ಪಡುವ ಒಂದು ಸರೋವರ ಇದೆ. ಇದು ಯಾರೂ ಈಜಲು ಸಾಧ್ಯವಿಲ್ಲದ ಸರೋವರ. ಯಾಕಂದ್ರೆ ಒಬ್ಬ ವ್ಯಕ್ತಿಯು ಅದರಲ್ಲಿ ಈಜಲು ಹೋದ ತಕ್ಷಣ, ಅವನು ಸ್ವಯಂಚಾಲಿತವಾಗಿ ಮೇಲಕ್ಕೆ ಬರುತ್ತಾನೆ. ಈ ಸರೋವರ ಸತ್ತಂತೆ ನಿಶ್ಚಲವಾಗಿರೋದ್ರಿಂದ ಇದನ್ನ ಡೆಡ್ ಸಿ ಎನ್ನಲಾಗುತ್ತೆ. ಅಲ್ಲದೇ ಇಲ್ಲಿನ ನೀರು ಎಷ್ಟೊಂದು ಉಪ್ಪಾಗಿರುತ್ತೆ ಅಂದ್ರೆ ಇಲ್ಲಿ ಜಲಚರಗಳು, ಗಿಡಗಳು ಸಹ ಬೆಳೆಯೋದಿಲ್ಲ.             

58

ಬ್ಲಡ್ ಫಾಲ್ಸ್ (Blood Falls)
ಈ ಸ್ಥಳವು ಅಂಟಾರ್ಕ್ಟಿಕಾದಲ್ಲಿದೆ. ಇಲ್ಲಿ ಕಬ್ಬಿಣದ ಪ್ರಮಾಣವು ತುಂಬಾ ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ, ಈ ಕಾರಣದಿಂದಾಗಿ ಈ ಜಲಪಾತದಿಂದ ಬೀಳುವ ನೀರಿನ ಬಣ್ಣ ರಕ್ತದಂತೆ ಕೆಂಪು ಬಣ್ಣದ್ದಾಗಿದೆ. ಹಾಗಾಗಿ ಇದನ್ನ ಬ್ಲಡ್ ಫಾಲ್ಸ್ ಎನ್ನಲಾಗುತ್ತೆ.

68

ಚೋಲುಲಾದ ಗ್ರೇಟ್ ಪಿರಮಿಡ್ (Cholula pyramid)
ಈ ಪಿರಮಿಡ್ ಮೆಕ್ಸಿಕೊದಲ್ಲಿದೆ. ಅದರ ನಿಗೂಢ, ರಹಸ್ಯಮಯ ವಿಷಯ ಏನಂದ್ರೆ ಅದನ್ನು ಯಾರು ಮತ್ತು ಏಕೆ ನಿರ್ಮಿಸಿದರು ಅನ್ನೋದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ. ಅದಕ್ಕೆ ಯಾವುದೇ ಇತಿಹಾಸವಿಲ್ಲ. ಇದು ಪಿರಮಿಡ್ ದೇವಾಲಯವಿದ್ದಂತೆ ಕಾಣುತ್ತೆ.

78

ಡೆತ್ ವ್ಯಾಲಿ (Death Valley)
ಡೆತ್ ವ್ಯಾಲಿಯನ್ನು ವಿಶ್ವದ ಅತ್ಯಂತ ಬಿಸಿಯಾದ ಸ್ಥಳವೆಂದು ಕರೆಯಲಾಗುತ್ತದೆ, ಅಲ್ಲಿ ಯಾರೂ ವಾಸಿಸಲು ಸಾಧ್ಯವೇ ಇಲ್ಲ. ಯಾಕಂದ್ರೆ ಇಲ್ಲಿನ ತಾಪಮಾನವು 130 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಇಲ್ಲಿ ಯಾರಾದ್ರೂ ಹೇಗೆ ವಾಸಿಸ್ತಾರೆ ಅಲ್ವಾ?

88

ದಾನಕಿಲ್ ಮರುಭೂಮಿ (Danakil desert)
ದಾನಕಿಲ್ ಮರುಭೂಮಿಯಲ್ಲಿ ಕನಿಷ್ಠ ತಾಪಮಾನವು ವರ್ಷಪೂರ್ತಿ 48 ಡಿಗ್ರಿ ಸೆಲ್ಸಿಯಸ್ ಇರುತ್ತದೆ. 40 ಇದ್ರೇನೆ ನಮಗೆ ತಡೊಯೋಕೆ ಆಗಲ್ಲ, ಆದರೆ ಈ ಜಾಗದ  ಕನಿಷ್ಠ ತಾಪಮಾನ 48 ಡಿಗ್ರಿಯಂತೆ. ಇನ್ನು ಕೆಲವೊಮ್ಮೆ ಇಲ್ಲಿನ ತಾಪಮಾನವು 145 ಡಿಗ್ರಿ ಸೆಲ್ಸಿಯಸ್ ವರೆಗೆ ಹೋಗುತ್ತದೆ. ಅಷ್ಟೇ ಅಲ್ಲ, ಇಲ್ಲಿನ ಕೊಳಗಳ ನೀರು ಯಾವಾಗಲೂ ಕುದಿಯುತ್ತಲೇ ಇರುತ್ತದೆ ಎನ್ನಲಾಗುತ್ತೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜೀವನಶೈಲಿ
ಪ್ರವಾಸ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved