ಆಫ್ಟರ್ ಮೋದಿ ಎಫೆಕ್ಟ್: ಬಂಡೀಪುರದಲ್ಲಿ ಸಫಾರಿಗೆ ಮುಗಿಬಿದ್ದ ಹೊರ ರಾಜ್ಯದ ಪ್ರವಾಸಿಗರು..!
ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಆನೆ, ಚಿರತೆ ಹೊಂದಿರುವ ಸ್ಥಳವೆಂಬ ಹೆಗ್ಗಳಿಕೆ ಪಡೆದಿರುವ ಬಂಡೀಪುರ, ಈಗ ರೆವಿನ್ಯೂನಲ್ಲೂ ಕೂಡ ರಾಜ್ಯದಲ್ಲೇ ನಂಬರ್ ಓನ್. ಪ್ರತಿ ವರ್ಷ ಸಫಾರಿಯಿಂದ ವರ್ಷಕ್ಕೆ 8 ಕೋಟಿಯಷ್ಟು ಆದಾಯವಿತ್ತು, ಮೋದಿ ಸಫಾರಿ ಮಾಡಿದ್ದೇ ಮಾಡಿದ್ದು ಈ ಬಾರಿ 15 ಕೋಟಿ ಆದಾಯದ ನಿರೀಕ್ಷೆಯಲ್ಲಿರುವ ಅರಣ್ಯ ಇಲಾಖೆ.
ವರದಿ - ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಜ.04): ಅದು ದೇಶದ ಪ್ರತಿಷ್ಠಿತ ಹುಲಿ ಸಂರಕ್ಷಿತಾರಣ್ಯ.50 ವರ್ಷದ ಸಂಭ್ರಮಾಚರಣೆ ಹಿನ್ನಲೆ ದೇಶದ ಪ್ರಧಾನಿ ನಮೋ ಈ ಅರಣ್ಯದಲ್ಲಿ ಸಫಾರಿ ನಡೆಸಿ ಹೋಗಿದ್ದರು. ಅಲ್ಲಿಂದ ಬಂಡೀಪುರದ ಚಾರ್ಮ್ ಸಂಪೂರ್ಣ ಬದಲಾಗಿ ಹೋಗಿದೆ.ಸಫಾರಿಗೆ ಆಗಮಿಸುವರ ಸಂಖ್ಯೆಯೂ ಹೆಚ್ಚಿದ್ದು,ಆದಾಯ ಕೂಡ ಹಿಂದಿಗಿಂತಲೂ ಡಬಲ್ ಆಗ್ತಿದೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
ಹುಲಿಗಳ ನಾಡು ಎಂದು ಕರೆದಿಕೊಳ್ಳುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ದೇಶದ ಪ್ರಧಾನಿ ಮೋದಿ ಒಂದೂವರೆ ತಾಸು ಸಫಾರಿ ನಡೆಸಿ ಹೋಗಿದ್ದರು.ಇದೀಗಾ ಅವರು ಸಫಾರಿ ನಡೆಸಿ ಹೋದ ಬಳಿಕ ಬಂಡೀಪುರದ ಚಿತ್ರಣವೇ ಕಂಪ್ಲೀಟ್ ಬದಲಾಗಿದೆ.ದೇಶದ ವಿವಿಧ ರಾಜ್ಯಗಳು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದಲೂ ವನ್ಯ ಪ್ರಾಣಿ ವೀಕ್ಷಣೆಗೆ ಹಾಗೂ ಬಂಡೀಪುರದ ಸೌಂದರ್ಯ ಕಣ್ತುಂಬಿಕೊಳ್ಳಲೂ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಪ್ರವಾಸಿಗರು ಬಂಡೀಪುರಕ್ಕೆ ಬರುತ್ತಿದ್ದಾರೆ. ಕಾಡು ಕೂಡ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಒಳ್ಳೆಯ ನೇಚರ್ , ಮೈ ರೋಮಾಂಚನ ಗೊಳಿಸುವ ಮಂಜಿನ ನಡುವೆ ಸಫಾರಿ ಗೆ ಹೋದ್ರೆ ಕಾಣಾ ಸಿಗುತ್ತಿರುವ ಪ್ರಾಣಿಗಳು ಪ್ರವಾಸಿಗರಿಗೆ ಖುಷಿ ನೀಡಿದಂತೆ ಇದೆ. ಹಾಗಾಗಿ ಸಫಾರಿ ಮಾಡಿದ ಪ್ರವಾಸಿಗರು ಮತ್ತೆ ಮತ್ತೆ ನಾವು ಬಂಡೀಪುರಕ್ಕೆ ಕಾಡಿಗೆ ಬರ್ತಿವಿ, ಸ್ನೇಹಿತರನ್ನು ಕರೆದುಕೊಂಡು ಬರ್ತಾ ಇದ್ದಾರೆ. ಇದರಿಂದ ಬಂಡೀಪುರ ಆದಾಯದಲ್ಲೂ ಕೂಡ ಏರಿಕೆಯಾಗಿದ್ದು ರಾಜ್ಯದಲ್ಲಿ ನಂಬರ್ ಓನ್ ಆಗಿದೆ.ರಾಜ್ಯದಲ್ಲಿ ಐದು ಹುಲಿ ಸಂರಕ್ಷಿತಾರಣ್ಯವಿದೆ. ನಾಗರಹೊಳೆ, ಬಿಆರ್ಟಿ, ಮಲೆ ಮಹದೇಶ್ವರ ವನ್ಯಧಾಮ, ಭದ್ರಾ ಟೈಗರ್ ರಿಸರ್ವ್ ಸೇರಿ ಎಲ್ಲಾ ಕಡೆಯೂ ಸಫಾರಿ ಕೇಂದ್ರವಿದ್ದು ಬೇರೆ ಎಲ್ಲಾ ಸಫಾರಿ ಕೇಂದ್ರಗಳಿಗಿಂತ ಬಂಡೀಪುರಕ್ಕೆ ಅತಿ ಹೆಚ್ಚಿನ ಪ್ರವಾಸಿಗರು ಈ ವರ್ಷ ಸಫಾರಿಗೆ ಬಂದಿದ್ದಾರೆ.
ಪ್ರಧಾನಿ ಮೋದಿ ಸಫಾರಿ ಬಳಿಕ ಬಂಡೀಪುರದ ಚಿತ್ರಣವೇ ಬದಲು: ಪ್ರವಾಸಿಗರಿಗೆ ಸಿಗ್ತಿದೆ 1 ಕೋಟಿ ರೂ. ಇನ್ಶೂರೆನ್ಸ್..!
ಇನ್ನೂ ಹಿಂದೆ ಬಂಡೀಪುರಕ್ಕೆ ಪ್ರತಿ ವರ್ಷ 8 ಕೋಟಿ ರೂಪಾಯಿಯಷ್ಟು ಆದಾಯ ಹರಿದು ಬಂದಿದೆ.ಆದ್ರೆ ಈ ವರ್ಷ ಪ್ರಧಾನಿ ಮೋದಿ ಸಫಾರಿ ಬಳಿಕ ಆದಾಯ ಡಬಲ್ ಆಗಿದ್ದು 15 ಕೋಟಿ ಆದಾಯ ನಿರೀಕ್ಷೆಯಲ್ಲಿದೆ ಅರಣ್ಯ ಇಲಾಖೆ.ಈಗಾಗ್ಲೇ 12 ಕೋಟಿಯಷ್ಟು ಆದಾಯ ಬಂದಿದೆ.ಇನ್ನೂ ಮೂರು ತಿಂಗಳ ಅವಧಿಯಲ್ಲಿ ಮೂರು ಕೋಟಿ ಆದಾಯ ಬರುತ್ತೆ ಅಂತಾರೆ ಅಧಿಕಾರಿಗಳು.ವರಮಾನದಲ್ಲಿ ರಾಜ್ಯದ ಎಲ್ಲಾ ಸಫಾರಿ ಕೇಂದ್ರಗಳಿಗೆ ಹೋಲಿಕೆ ಮಾಡಿದ್ರೆ ಬಂಡೀಪರವೇ ನಂಬರ್ ಓನ್ ಅಂತೆ.ಕ್ರಿಸ್ ಮಸ್ ದಿನ ಕೇರಳ,ಊಟಿಗೆ ಹೋಗುವ ವಾಹನಗಳಿಂದ ಒಂದೇ ದಿನ 75 ಸಾವಿರ ರೂ ಗ್ರೀನ್ ಫೀಸ್ ಕಲೆಕ್ಷನ್ ಮಾಡಿದ್ದಾರೆ.ಹುಲಿ ಸೇರಿದಂತೆ ಪ್ರಾಣಿಗಳ ದರ್ಶನ ಪ್ರವಾಸಿಗರಿಗೆ ಸಿಕ್ತಿದ್ದು,ಬಂಡೀಪುರದ ಆದಾಯ ಮತ್ತೇ ಹೆಚ್ಚಾಗುತ್ತೆ ಅಂತಾರೆ.
ಒಟ್ನಲ್ಲಿ ಪ್ರಕೃತಿಯ ಸೌಂದರ್ಯ ಹಾಗೂ ವನ್ಯ ಪ್ರಾಣಿಗಳ ದರ್ಶನಕ್ಕೆ ಪ್ರವಾಸಿಗರ ದಂಡು ಬಂಡೀಪುರಕ್ಕೆ ಹರಿದು ಬಂದಿದ್ದು,ಪ್ರಧಾನಿ ಮೋದಿ ಸಫಾರಿ ಬಳಿಕ ರಾಜ್ಯದ ಮೂಲೆ ಮೂಲೆ ಹಾಗೂ ದೇಶದ ನಾನಾ ಭಾಗದ ಪ್ರವಾಸಿಗರಿಗೂ ಬಂಡೀಪುರದ ಸಫಾರಿ ಬಗ್ಗೆ ಗೊತ್ತಾಗಿದ್ದು,ಮುಂದಿನ ದಿನಗಳಲ್ಲಿ ಮತ್ತಷ್ಟು ಆದಾಯದ ನಿರೀಕ್ಷೆಯಲ್ಲಿದ್ದಾರೆ ಬಂಡೀಪುರ ಅರಣ್ಯಾಧಿಕಾರಿಗಳು.