Asianet Suvarna News Asianet Suvarna News

25 ಲಕ್ಷ ರೂ. ವ್ಯಯಿಸಿ, 18 ದೇಶಗಳ ದಾಟಿ ಎಸ್‌ಯುವಿಯಲ್ಲಿ ಕೆನಡಾದಿಂದ ಭಾರತಕ್ಕೆ ಬಂದ ಕಾರುಪ್ರಿಯ!

ಸೋಲೊ ಪ್ರವಾಸಕ್ಕೆ ಹೋಗುವವರೆಲ್ಲ ಜಸ್ಮೀತ್ ಅವರ ಮಾರ್ಗವನ್ನೇ ಅನುಸರಿಸಿದರೆ ಬಹಳಷ್ಟು ದೇಶಗಳು ಅಂತಾರಾಷ್ಟ್ರೀಯ ಪ್ರವಾಸಿಗರಿಂದಲೇ ತುಂಬಿಹೋಗಿಬಿಡಬಹುದು. ಕೆನಡಾದಿಂದ ಭಾರತಕ್ಕೆ ಆಗಮಿಸಿದ ಜಸ್ಮೀತ್ ಸಿಂಗ್ ಒಬ್ಬರೇ ತಮ್ಮದೇ ಎಸ್ ಯುವಿಯಲ್ಲಿ 18 ದೇಶಗಳನ್ನು ದಾಟಿಕೊಂಡು ಬಂದಿದ್ದಾರೆ. 
 

This man drove 19000 km from Canada to India spending 25 laksh sum
Author
First Published Dec 21, 2023, 5:13 PM IST

ಪ್ರವಾಸ ಮಾಡುವುದೆಂದರೆ ಎಲ್ಲರಿಗೂ ಇಷ್ಟ. ಪ್ರವಾಸದ ಆಸಕ್ತರು ಮಕ್ಕಳ ರಜಾದಿನಗಳು ಆಗಮಿಸುವ ತಿಂಗಳುಗಳ ಮುನ್ನವೇ ಪ್ರವಾಸದ ಯೋಜನೆಗೈದು, ಫ್ಲೈಟ್, ಟ್ರೇನ್ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳುತ್ತಾರೆ. ಕೆಲವು ಜನ ತಮ್ಮದೇ ವಾಹನದಲ್ಲಿ ಪ್ರವಾಸಕ್ಕೆ ಹೋಗಲು ಇಚ್ಛಿಸುತ್ತಾರೆ. ಇತ್ತೀಚೆಗೆಂತೂ ಪ್ರವಾಸ ಗೈಯಲು ಹಲವು ಉತ್ಸುಕರು ನಿಗದಿತ ಸಮಯಕ್ಕಾಗಿ ಕೂಡ ಕಾಯುವುದಿಲ್ಲ. ತೀರ ನಮ್ಮ ದೇಶದ ಹಿಮಾಲಯ ಪ್ರದೇಶ, ಯುರೋಪಿನ ಕೆಲವು ರಾಷ್ಟ್ರಗಳಿಗೆ ಪ್ರವಾಸ ಮಾಡುವವರು ಮಾತ್ರ ಚಳಿಗಾಲ, ಬೇಸಿಗೆಯ ಕಾಲದ ಬಗ್ಗೆ ಯೋಚಿಸಬೇಕಷ್ಟೆ. ಇಲ್ಲವಾದರೆ, ಯಾವುದೇ ಸಮಯವಾದರೂ ಜೈ ಎನ್ನುತ್ತಾರೆ. ಇನ್ನು, ಸಿಂಗಲ್ಲಾಗಿ ಪ್ರವಾಸ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಯಾರೇ ಆದರೂ ವಿದೇಶ ಅಥವಾ ವಿವಿಧ ದೇಶಗಳ ಪ್ರವಾಸ ಮಾಡುವವರು ವಿಮಾನ ಪ್ರಯಾಣವನ್ನೇ ಆಯ್ಕೆ ಮಾಡುತ್ತಾರೆ. ಆದರೆ, ಕೆನಡಾದಿಂದ ಭಾರತಕ್ಕೆ ಆಗಮಿಸಿರುವ ವ್ಯಕ್ತಿಯೊಬ್ಬರು ತಮ್ಮದೇ ಎಸ್ ಯುವಿಯಲ್ಲಿ ಬಂದಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ. ಅಲ್ಲಿಂದ ಇಲ್ಲಿಯವರೆಗೂ ತಮ್ಮದೇ ಸ್ವಂತ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಮೂಲಕ ಒಬ್ಬರೇ ಡ್ರೈವ್ ಮಾಡಿಕೊಂಡು ಬಂದಿದ್ದಾರೆ ಎಂದರೆ ಇನ್ನಷ್ಟು ರೋಮಾಂಚವೆನಿಸುತ್ತದೆ.

ಕೆನಡಾದಿಂದ (Canada) ಭಾರತಕ್ಕೆ (India) ಬಂದಿರುವ ಈ ಉತ್ಸಾಹಿ ಪ್ರವಾಸಿಗ (Traveller) ಜಸ್ಮೀತ್ ಸಿಂಗ್ ಸಾಹ್ನಿ (Jasmeet Singh Sahni). ತಮ್ಮ ಪ್ರವಾಸದ ಮಾದರಿಯಿಂದ ಇವರು ಈಗ ಎಲ್ಲೆಡೆ ಸಖತ್ ಜನಪ್ರಿಯರಾಗಿದ್ದಾರೆ.

ಒಂಟಿಯಾಗಿ ರೈಲಲ್ಲಿ ಪ್ರಯಾಣಿಸೋ ಮಹಿಳೆಯರಿಗೆ ಸಿಗುತ್ತೆ ಈ ಸೌಲಭ್ಯ

ಇವರು ಪ್ರಯಾಣ (Travel) ಮಾಡಿದ ದೂರ ಬರೋಬ್ಬರಿ 19 ಸಾವಿರ ಕಿಲೋಮೀಟರ್! ಇಷ್ಟನ್ನೂ ತಮ್ಮ ಎಸ್ ಯುವಿಯಿಂದಲೇ ಪೂರೈಸಿದ್ದಾರೆ. ಅಂದ ಹಾಗೆ, ಕೆನಡಾದಿಂದ ಭಾರತಕ್ಕೆ ಇವರ ಪ್ರಯಾಣಕ್ಕೆ 40 ದಿನಗಳು ಬೇಕಾಗಿವೆ. ಇವರ ಎಸ್ ಯುವಿ (SUV) ಫೋರ್ಡ್ ಬ್ರಾಂಕೊ. 

18 ದೇಶಗಳನ್ನು ದಾಟಿ
ಜಸ್ಮೀತ್ ಸಿಂಗ್ ಸಾಹ್ನಿ ಅವರ 40 ದಿನಗಳ (Days) ಪ್ರಯಾಣದಲ್ಲಿ 18 ದೇಶಗಳನ್ನು (Nations) ದಾಟಿ ಬಂದಿದ್ದಾರೆ ಎಂದರೆ ಮೈನವಿರೇಳುತ್ತದೆ. ಈ ಪ್ರವಾಸದ ಮಾರ್ಗವನ್ನು ಅವರು ಸುಮಾರು 2.5 ವರ್ಷಗಳ ಹಿಂದೆಯೇ ಯೋಜಿಸಿದ್ದರು. ಅಂತಿಮವಾಗಿ ಹೊರಟು ತಮ್ಮ ಗುರಿ (Destination) ತಲುಪಿದ್ದಾರೆ. ಈ ಅವಧಿಯಲ್ಲಿ ಅವರು ಎಷ್ಟೋ ಬಾರಿ ತಮ್ಮ ವಾಹನದಲ್ಲೇ ಮಲಗಿ ನಿದ್ರಿಸಿದ್ದಾರೆ. ಕೆಲವೊಮ್ಮೆ ಅತ್ಯಂತ ಎಚ್ಚರಿಕೆಯಲ್ಲಿ ಅಪಾಯವನ್ನು ಹಿಂದಿಕ್ಕಿ ಬಂದಿದ್ದಾರೆ. ಪಾಕಿಸ್ತಾನದ ಮೂಲಕ (Via Pakistan) ಭಾರತಕ್ಕೆ ಬಂದಿರುವುದು ಮತ್ತೊಂದು ವಿಶೇಷ. ಈ ಪ್ರಯಾಣಕ್ಕಾಗಿ ಅವರು ವೆಚ್ಚ ಮಾಡಿರುವ ಹಣ 25 ಲಕ್ಷ ರೂಪಾಯಿ. 
ಭಾರತ-ಪಾಕಿಸ್ತಾನದ ಅಟ್ಟಾರಿ ವಾಘಾ ಗಡಿಯ ಮೂಲಕ ದೇಶಕ್ಕೆ ಬಂದು ತಲುಪಿದ ಅವರನ್ನು ಕುಟುಂಬ ಸದಸ್ಯರು ಅತ್ಯಂತ ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಅವರ ಪ್ರವಾಸದ ಕಥಾನಕಗಳು ರೋಚಕವಾಗಿ ತೆರೆದುಕೊಂಡಿವೆ. ಟ್ರೆಂಡ್ ಸೃಷ್ಟಿಸಿವೆ. 

ಕಾರುಪ್ರಿಯ ಜಸ್ಮೀತ್
ಅಮೆರಿಕ ಮತ್ತು ಕೆನಡಾಗಳಲ್ಲಿ ಅವರ ಫೋರ್ಡ್ ಬ್ರಾಂಕೊ ಎಸ್ ಯುವಿ ಪ್ರವಾಸಿಗರ ಅಚ್ಚುಮೆಚ್ಚಿನ ವಾಹನವಾಗಿವೆ. ಅತ್ಯಂತ ಸುಖಕರ ರಸ್ತೆ ಪ್ರಯಾಣಕ್ಕೆ ಇದು ಜನಪ್ರಿಯವಾಗಿದೆ. ಜಸ್ಮೀತ್ ಅವರು ಸಹ ಕಾರುಪ್ರಿಯರಾಗಿದ್ದು, ಅಮೆರಿಕದ ಕಾರುಗಳನ್ನು (Cars) ಇಷ್ಟಪಡುತ್ತಾರೆ.

ಜನ ಜಂಗುಳಿಯಿಂದ ದೂರವಿದ್ದು ಹೊಸ ವರ್ಷ ಸ್ವಾಗತಿಸಲು ಈ ಪ್ಲೇಸಸ್ ಬೆಸ್ಟ್!

ಭಾರತದಲ್ಲಿ 6 ತಿಂಗಳ ಕಾಲ ತಂಗಲಿರುವ ಜಸ್ಮೀತ್ ಈ ಅವಧಿಯಲ್ಲಿ ದೇಶ ಸುತ್ತಲಿದ್ದಾರೆ. ಕೆಲ ಸಮಯದಲ್ಲಿ ಅವರು ನಿಮ್ಮೂರಿಗೂ ಬಂದರೆ ಅಚ್ಚರಿಯಿಲ್ಲ. ಮತ್ತೆ ತಿರುಗಿ ಕೆನಡಾಕ್ಕೆ ಮತ್ತೊಂದು ಮಾರ್ಗದ ಮೂಲಕ ತೆರಳುವ ಉದ್ದೇಶ ಹೊಂದಿದ್ದಾರೆ. ಮತ್ತೆ ತಾವೇ ಡ್ರೈವ್ (Drive) ಮಾಡಿಕೊಂಡು, ಮತ್ತೆ ಅಷ್ಟೊಂದು ಹಣ ವೆಚ್ಚ ಮಾಡಿ, ಮತ್ತೆ ಹಲವು ದೇಶಗಳನ್ನು ದಾಟುವ ಅವರ ಉತ್ಸಾಹಕ್ಕೆ ನಿಜಕ್ಕೂ ಸಲಾಂ. 
 

Follow Us:
Download App:
  • android
  • ios