Asianet Suvarna News Asianet Suvarna News

ಜನ ಜಂಗುಳಿಯಿಂದ ದೂರವಿದ್ದು ಹೊಸ ವರ್ಷ ಸ್ವಾಗತಿಸಲು ಈ ಪ್ಲೇಸಸ್ ಬೆಸ್ಟ್!

ಹೊಸ ವರ್ಷದ ಆರಂಭ ಯಾವಾಗ್ಲೂ ವಿಶೇಷವಾಗಿರಬೇಕು. ಹಾಗಾಗಿಯೇ ಜನರು ಪ್ರವಾಸದ ಪ್ಲಾನ್ ಮಾಡ್ತಾರೆ. ಹೋದ ಜಾಗದಲ್ಲಿ ಗಲಾಟೆ, ಗಿಜಿಬಿಜಿ ಇದ್ರೆ ಪ್ರವಾಸ ಮಜ ನೀಡೋದಿಲ್ಲ. ಶಾಂತ ಪ್ರದೇಶದಲ್ಲಿ ಹೊಸ ವರ್ಷ ಎಂಜಾಯ್ ಮಾಡ್ಬೇಕು ಎನ್ನುವವರು ಇದನ್ನು ಆಯ್ಕೆ ಮಾಡಿಕೊಳ್ಳಿ. 
 

These Five Best Places Away From The Crowd On New Year roo
Author
First Published Dec 21, 2023, 2:18 PM IST

2023 ಮುಗಿದು 2024 ಬರ್ತಿದೆ. ಹೊಸ ವರ್ಷದ ಸ್ವಾಗತಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಗೆ ಈಗಾಗಲೇ ಸಿದ್ಧತೆ ನಡೆದಿದೆ. ಪ್ರತಿ ವರ್ಷ ಹೊಟೇಲ್ ಗೆ ಹೋಗಿ ಹೊಸ ವರ್ಷವನ್ನು ಸ್ವಾಗತಿಸುವವರು ಅನೇಕರು. ಕೆಲವರು ಮನೆಯಲ್ಲೇ ಪಾರ್ಟಿ ಮಾಡ್ತಾರೆ. ಮತ್ತೆ ಕೆಲವರು ವಿದೇಶಕ್ಕೆ ಹೋಗ್ತಾರೆ. ಹೊಟೇಲ್, ಪಬ್ ನಲ್ಲಿ ಪಾರ್ಟಿ ಬೇಡ, ಮನೆಯಲ್ಲೇ ಪಾರ್ಟಿ ಮಾಡೋಕೆ ಮೂಡ್ ಇಲ್ಲ, ಜನಸಂಖ್ಯೆ ಹೆಚ್ಚಿರುವ ಜಾಗ ಬೇಡ, ವಿದೇಶ ದುಬಾರಿ ಎನ್ನುವವರು ನೀವಾಗಿದ್ದು, ಎಲ್ಲಿಗೆ ಹೋಗೋದು ಅನ್ನೋ ಪ್ಲಾನ್ ನಲ್ಲೇ ಇನ್ನು ಇದ್ರೆ ನಿಮಗೊಂದಿಷ್ಟು ಜಾಗಗಳ ಮಾಹಿತಿಯನ್ನು ನಾವು ನೀಡ್ತೇವೆ. ಶಾಂತವಾದ ಹಾಗೂ ಸುಂದರ ಪರಿಸರದಲ್ಲಿ ನೀವು ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಬಹುದು.  

ಹೊಸ ವರ್ಷ (New Year ) ದ ಸಂಭ್ರಮಾಚರಣೆಗೆ ಬೆಸ್ಟ್ ಪ್ಲೇಸ್ :

ಚಂದ್ರತಾಲ (Chandratala) :  ಗೋವಾ, ಊಟಿ, ಕೇರಳ, ಶಿಮ್ಲಾದಂತಹ ಪ್ರಸಿದ್ಧ ಸ್ಥಳಗಳಲ್ಲಿ ಹೊಸ ವರ್ಷದ ವೇಳೆ ಜನ ಸಂಖ್ಯೆ ಹೆಚ್ಚಿರುತ್ತದೆ. ಎಲ್ಲಿ ನೋಡಿದ್ರೂ ಟ್ರಾಫಿಕ್ ಜಾಮ್ ಮಾಮೂಲಿ. ಅದೇ  ಕಡಿಮೆ ಜನರನ್ನು ಹೊಂದಿರುವ ಹಾಗೂ ಪ್ರಕೃತಿ ಸೌಂದರ್ಯದ ಖಣಿಯಾಗಿರುವ ಚಂದ್ರತಾಲವು ಹೊಸ ವರ್ಷದ ಆಚರಣೆಗೆ ಒಳ್ಳೆಯ ಸ್ಥಳವಾಗಿದೆ. ಈ ಸರೋವರವು ಹಿಮಾಚಲಪ್ರದೇಶದ ಲಾಹೋರ್ ನ ಸ್ಪೀತಿ ಜಿಲ್ಲೆಯಲ್ಲಿದೆ. ಚಂದ್ರತಾಳದ ಸುತ್ತ ಹಸಿರಾದ ಪರ್ವತಗಳು ಮತ್ತು ಹಿಮಾಲಯದ ಬಿಳಿ ಶಿಖರಗಳನ್ನು ಕಾಣಬಹುದು. ಇದು ಕಡಿಮೆ ಜನಸಂದಣಿಯನ್ನು ಹೊಂದಿದ್ದು, ಶುದ್ಧ ಗಾಳಿ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ.

ವಾರಣಾಸಿಯಲ್ಲಿ ಒಲವಿನ ನಿಲ್ದಾಣ ನಟಿ ಅಮಿತಾ ಕುಲಾಲ್, ಹೋಗಿದ್ದು ಮೊದಲಲ್ಲ!

ಕಾಜಾ :  ಚಿಕ್ಕ ನಾಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಕಾಜಾ ಜಲಪಾತ ಅತ್ಯಂತ ಆಕರ್ಷಕವಾಗಿದೆ. 200 ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರಿನ ನೋಟ ನೋಡುಗರ ಕಣ್ಣಿಗೆ ಆನಂದ ತರುತ್ತದೆ. ಈ ನೀರು ಮುಂದೆ ಕಾಜಾ ಘಾಟಿಯಲ್ಲಿ ಚಿಕ್ಕ ಸರೋವನ್ನು ನಿರ್ಮಿಸಿದೆ. ಕಾಜಾದ ಸುತ್ತಮುತ್ತಲ ಪ್ರಾಕೃತಿಕ ನೋಟವೂ ಅದ್ಭುತವಾಗಿದೆ. ಇಲ್ಲಿ ಜನಸಂದಣಿಯೂ ಕಡಿಮೆ ಇದೆ. ನೀವು ಹೊಸ ವರ್ಷವನ್ನು ಇಲ್ಲಿ ಯಾವುದೇ ಗಲಾಟೆ, ಸದ್ದಿಲ್ಲದೆ ಆಚರಿಸಬಹುದು.

ಮಲಾನಾ : ಮಲಾನಾ ಗ್ರಾಮವು ಹಿಮಾಚಲ ಪ್ರದೇಶದ ಕಸೌಲಿ ನಗರದ ಸಮೀಪದಲ್ಲಿರುವ ಅತ್ಯಂತ ಸುಂದರ ಸ್ಥಳವಾಗಿದೆ. ಈ ಹಳ್ಳಿ ಕಿನ್ನೌರ್ ಕಾದರ್ ಕಣಿವೆಯ ದಡದಲ್ಲಿದೆ. ಈ ಹಳ್ಳಿಯಿಂದ ಕಾದರ್ ಕಣಿವೆಯ ನೋಡ ಮನಮೋಹಕವಾಗಿ ಕಾಣುತ್ತದೆ. ಇಲ್ಲಿ ಸುತ್ತಲೂ ಹಚ್ಚಹಸಿರಿನಿಂದ ಕೂಡಿದ ಬೆಟ್ಟಗಳು ಹಾಗೂ ಹೂವಿನಿಂದ ಕೂಡಿದ ಹೊಲಗಳನ್ನು ಕಾಣಬಹುದು. ಮಲಾನಾ ಗ್ರಾಮದಲ್ಲಿ ಪ್ರವಾಸಿಗರ ಸಂಖ್ಯೆ ತೀರ ಕಡಿಮೆ. ಆದ್ದರಿಂದ ಹೊಸ ವರ್ಷವನ್ನು ಇಲ್ಲಿ ಶಾಂತಿಯುತವಾಗಿ ಕಳೆಯಬಹುದು.

ಈ ಊರಿನವರನ್ನು ಮದ್ವೆಯಾಗ್ಬೇಕಂದ್ರೆ ಮಾಂಸಾಹಾರ ಸೇವಿಸಬಾರದು, ಮದ್ಯ ವರ್ಜಿಸಬೇಕು!

ಭರ್ಮೌರ್ :  ಭರ್ಮೌರ್ ಚಂಬಾ ಕಣಿವೆಯಲ್ಲಿರುವ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿ ಅನೇಕ ಹಳೆಯ ದೇವಾಲಯಗಳು ಹಾಗೂ ಕೋಟೆಗಳಿವೆ. ಭರ್ಮೌರ್ ದಟ್ಟವಾದ ಕಾಡು ಮತ್ತು ಹಚ್ಚ ಹಸಿರಿನ ಪರ್ವತಗಳಿಂದ ಆವೃತವಾಗಿದೆ. ಜನಜಂಗುಳಿಯಿಂದ ದೂರವಿದ್ದು ಹೊಸವರ್ಷವನ್ನು ಆಚರಿಸುವವರಿಗೆ ಇದು ಯೋಗ್ಯ ಸ್ಥಳವಾಗಿದೆ.

ಕಲ್ಪಾ :  ಕಲ್ಪಾ ಶಿಮ್ಲಾದಿಂದ 225 ಕಿಲೋಮೀಟರ್ ದೂರದಲ್ಲಿರುವ ಕಿನ್ನೌರ್ ಜಿಲ್ಲೆಯಲ್ಲಿದೆ. ಇದು ತನ್ನ ನೈಸರ್ಗಿಕ ಸೌಂದರ್ಯದಿಂದಲೇ ಹೆಸರುವಾಸಿಯಾಗಿದೆ. ಕಲ್ಪಾದಲ್ಲಿನ ಹಚ್ಚಹಸಿರಿನ ಕಣಿವೆಗಳು ಹಾಗೂ ಎತ್ತರದ ಶಿಖರಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇದು ಜನರಿಗೆ ಅಪರಿಚಿತ ಸ್ಥಳವಾಗಿದ್ದು ಇಲ್ಲಿ ತೀರ ಕಡಿಮೆ ಪ್ರವಾಸಿಗರು ಬರುತ್ತಾರೆ.

Latest Videos
Follow Us:
Download App:
  • android
  • ios