ಒಂಟಿಯಾಗಿ ರೈಲಲ್ಲಿ ಪ್ರಯಾಣಿಸೋ ಮಹಿಳೆಯರಿಗೆ ಸಿಗುತ್ತೆ ಈ ಸೌಲಭ್ಯ
ರೈಲ್ವೆ ಇಲಾಖೆ ಪ್ರತಿಯೊಬ್ಬ ಪ್ರಯಾಣಿಕರ ಬಗ್ಗೆ ಗಮನ ಹರಿಸುತ್ತದೆ. ಅವರ ಸುಕ್ಷತೆಗೆ ಆದ್ಯತೆ ನೀಡುತ್ತದೆ. ಅದ್ರಲ್ಲೂ ಮಹಿಳೆಯರಿಗಾಗಿ ವಿಶೇಷ ನಿಯಮವಿದೆ. ಒಂಟಿಯಾಗಿ ರೈಲಿನಲ್ಲಿ ಪ್ರಯಾಣಿಸೋ ಮಹಿಳೆಯರು ಪ್ರಯಾಣಕ್ಕಿಂತ ಮೊದಲು ಇದನ್ನು ತಿಳಿದ್ಕೊಳ್ಳಿ.
ಭಾರತದ ಸಾರ್ವಜನಿಕ ಸಾರಿಗೆಯಲ್ಲಿ ರೈಲು ಪ್ರಮುಖ ಪಾತ್ರವಹಿಸಿದೆ. ಇದೇ ಕಾರಣಕ್ಕೆ ರೈಲನ್ನು ಭಾರತದ ಜೀವನಾಡಿ ಎಂದು ಕರೆಯಲಾಗುತ್ತದೆ. ಲಕ್ಷಾಂತರ ಜನರು ಪ್ರತಿ ದಿನ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಅಗ್ಗದ ಸಾರ್ವಜನಿಕ ವಾಹನಗಳಲ್ಲಿ ಒಂದಾಗಿರುವ ರೈಲು ಸುರಕ್ಷತೆಯಲ್ಲೂ ಮುಂದಿದೆ. ಎಲ್ಲ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಅನೇಕ ಹೊಸ ಯೋಜನೆ, ಸೌಲಭ್ಯಗಳನ್ನು ಜಾರಿಗೆ ತರ್ತಿರುತ್ತದೆ. ಅದರಂತೆ ಮಹಿಳೆಯರ ಸುರಕ್ಷತೆಗೂ ಸಾಕಷ್ಟು ಗಮನವನ್ನು ಹರಿಸಲಾಗಿದೆ.
ಭಾರತ (India) ದಲ್ಲಿ ಒಂಟಿಯಾಗಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ದೂರದೂರದ ಪ್ರದೇಶಕ್ಕೆ ಮಹಿಳೆಯರು ಒಂಟಿಯಾಗಿ ಸಂಚರಿಸುತ್ತಾರೆ. ಈ ಸಮಯದಲ್ಲಿ ಅವರಿಗೆ ಯಾವುದೇ ಸಮಸ್ಯೆ ಆಗ್ಬಾರದು. ಅವರಿಗೆ ಸುರಕ್ಷಿತ (Safe) ಹಾಗೂ ಸುಖಕರ ಪ್ರಯಾಣದ ಅನುಭವ ನೀಡುವುದು ರೈಲ್ವೆ (Railway) ಇಲಾಖೆ ಹೊಣೆ. ಇದೇ ಕಾರಣಕ್ಕೆ ರೈಲ್ವೆ ಇಲಾಖೆ ಮಹಿಳೆಯರಿಗಾಗಿಯೇ ಕೆಲ ಸೌಲಭ್ಯಗಳನ್ನು, ವಿಶೇಷ ನಿಯಮಗಳನ್ನು ಮಾಡಿದೆ. ನೀವು ರೈಲಿನಲ್ಲಿ ಪ್ರಯಾಣ ಬೆಳೆಸುವವರಾಗಿದ್ದರೆ ನಿಮಗೆ ರೈಲ್ವೆ ಇಲಾಖೆಯಿಂದ ಏನೆಲ್ಲ ಸೌಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಿ.
ಅಮ್ಮನದ್ದೇ ನೆನಪು… ಮೊದಲಿನಂತಿಲ್ಲ ಸೀರೆ, ಆದ್ರೂ ಕಡಿಮೆಯಾಗಿಲ್ಲ ಪ್ರೀತಿ ಅಂತಾರೆ ಶಬನಾ ಆಜ್ಮಿ!
ಸೀಟ್ ಕಾಯ್ದಿರಿಸುವಿಕೆ : ಇದು ಬಹುತೇಕ ಎಲ್ಲರಿಗೂ ತಿಳಿದಿದೆ. ಬಸ್, ರೈಲಿನಲ್ಲಿ ಮಹಿಳೆಯರಿಗಾಗಿ ಸೀಟ್ ಮೀಸಲಿರುತ್ತದೆ. ರೈಲಿನ ಪ್ರತಿ ಕೋಚ್‌ನಲ್ಲಿ ಕೆಲವು ಸೀಟ್ ಗಳನ್ನು ಮಹಿಳೆಯರಿಗೆ ಕಾಯ್ದಿರಿಸಲಾಗಿರುತ್ತದೆ. ಕೆಲವೊಂದು ರೈಲಿನ ಸಂಪೂರ್ಣ ಕೋಚ್ ಮಹಿಳೆಯರಿಗೆ ಮೀಸಲಿಡಲಾಗಿರುತ್ತದೆ.
ಒಂಟಿ ಮಹಿಳೆಯರು ಇದನ್ನು ನೆನಪಿಡಿ : ಐಆರ್‌ಸಿಟಿಸಿ ಮೂಲಕ ಒಂಟಿ ಮಹಿಳೆ ರೈಲಿನಲ್ಲಿ ಸೀಟು ಕಾಯ್ದಿರಿಸಿದರೆ ಆಗ ರೈಲ್ವೆ ಇಲಾಖೆ ಹೆಚ್ಚಿನ ಗಮನ ಹರಿಸುತ್ತದೆ. ಪುರುಷ ಪ್ರಯಾಣಿಕರು ಮಾತ್ರ ಇರುವ ಕಂಪಾರ್ಟ್‌ಮೆಂಟ್‌ನಲ್ಲಿ ಒಂಟಿ ಮಹಿಳೆಗೆ ಸೀಟು ನೀಡಲಾಗುವುದಿಲ್ಲ. ಉದಾಹರಣೆಗೆ ಮೀಸಲಾತಿ ವರ್ಗದಲ್ಲಿ ಒಂದು ವಿಭಾಗದಲ್ಲಿ 6 ಆಸನಗಳಿವೆ. 5 ಸೀಟ್ ನಲ್ಲಿ ಪುರುಷರಿದ್ದರೆ ಆರನೇ ಸೀಟನ್ನು ಮಹಿಳೆಗೆ ನೀಡಲಾಗುವುದಿಲ್ಲ. ಕನಿಷ್ಠ ಒಬ್ಬ ಮಹಿಳೆ ಈಗಾಗಲೇ ಕುಳಿತಿದ್ದರೆ ಆಗ ಅದೇ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳೆಗೆ ಆಸನವನ್ನು ಕಾಯ್ದಿರಿಸಲಾಗುತ್ತದೆ. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಈ ಕಾನೂನು ಜಾರಿಗೆ ತಂದಿದೆ. ಇದಲ್ಲದೆ ಇಬ್ಬರು ಪುರುಷರ ನಡುವೆ ಒಬ್ಬ ಮಹಿಳೆಗೆ ಸೀಟು ನೀಡುವುದಿಲ್ಲ. ಆನ್ಲೈನ್ ಬುಕ್ಕಿಂಗ್ ಈಗ ಸಾಮಾನ್ಯವಾಗಿದ್ದು, ಅದರಲ್ಲಿ ನೀವು ಈ ಮಧ್ಯದ ಸೀಟ್ ಬುಕ್ ಮಾಡಲು ಸಾಧ್ಯವಿಲ್ಲ. ಪುರುಷರಿಂದ ಯಾವುದೇ ತೊಂದರೆ ಆಗದಿರಲಿ ಎನ್ನುವ ಕಾರಣಕ್ಕೆ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.
ವಯಸ್ಸಿಗೆ ತಕ್ಕಂತೆ ಸೀಟು ಮೀಸಲು : ರೈಲ್ವೆ ಇಲಾಖೆ ಮಹಿಳೆಯರಿಗೆ ಸೀಟು ನೀಡುವ ಸಂದರ್ಭದಲ್ಲಿ ಅವರ ವಯಸ್ಸನ್ನು ಪರಿಗಣಿಸುತ್ತದೆ. ನಿಮ್ಮ ವಯಸ್ಸು 45 ವರ್ಷ ಮೇಲ್ಪಟ್ಟಿದ್ದರೆ ನಿಮಗೆ ಲೋವರ್ ಬರ್ತ್‌ಗೆ ಆದ್ಯತೆ ನೀಡಲಾಗುತ್ತದೆ. ಮಹಿಳೆಯರು, ವೃದ್ಧರು ಮತ್ತು ಅಂಗವಿಕಲರಿಗೆ ಈ ಸೌಲಭ್ಯವನ್ನು ರೈಲ್ವೆ ಒದಗಿಸಿದೆ.
ಯಾರಿಗೂ ತಿಳಿಯದ ಕರ್ನಾಟಕದ ಈ ಅದ್ಭುತ ತಾಣಗಳಿಗೆ ಯಾವತ್ತಾದರೂ ವಿಸಿಟ್ ಮಾಡಿದ್ದೀರಾ?
ಮಹಿಳೆಗೆ ಇದ್ರಲ್ಲೂ ರಿಯಾಯಿತಿ : ಒಂದ್ವೇಳೆ ನೀವು ತಪ್ಪಾಗಿ ಟಿಕೆಟ್ ಹೆಚ್ಚು ಬುಕ್ ಮಾಡಿದ್ದರೆ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ. ನೀವು ಟಿಸಿಯೊಂದಿಗೆ ಮಾತನಾಡಬೇಕು. ನಂತ್ರ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ರೈಲ್ವೆ ತನ್ನ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಇಂತಹ ಕ್ರಮಗಳನ್ನು ತೆಗೆದುಕೊಂಡಿದೆ.
ಟಿಕೆಟ್ ನಲ್ಲಿ ರಿಯಾಯಿತಿ : ಬಸ್ ನಂತೆ ರೈಲಿನಲ್ಲಿ ಕೂಡ ಹಿರಿಯ ನಾಗರಿಕರಿಗೆ ಟಿಕೆಟ್ ಶುಲ್ಕದಲ್ಲಿ ವಿನಾಯಿತಿ ಸಿಗುತ್ತದೆ. ನೀವು 58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯಾಗಿದ್ದರೆ, ಪ್ರತಿ ವರ್ಗದ ಟಿಕೆಟ್‌ಗಳಲ್ಲಿ ನೀವು ಶೇಕಡಾ 50 ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ. ನೀವು ಪ್ರತಿ ಬಾರಿ ರೈಲ್ವೆ ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಈ ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು.