ಫಾರಿನ್ ಟ್ರಿಪ್ ಹೋಗೋಕೆ ದುಡ್ಡು ಬೇಕಿಲ್ಲ, ಇಲ್ಲಿಗೆ ಹೋದ್ರೆ ನಿಮ್ಗೇ 71 ಲಕ್ಷ ರೂ. ಸಿಗುತ್ತೆ!

ಟ್ರಾವೆಲ್ ಮಾಡೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಹೀಗೆ ಟ್ರಾವೆಲ್ ಮಾಡೋಕೆ ದುಡ್ಡು ಬೇಕು ಅನ್ನೋದೆ ಹೆಚ್ಚಿನವರ ಸಮಸ್ಯೆ. ಆದ್ರೆ ಈ ದೇಶದಿಂದ ಟ್ರಾವೆಲ್ ಮಾಡೋಕೆ ದುಡ್ಡು ಬೇಕಿಲ್ಲ. ಬದಲಿಗೆ ಟ್ರಾವೆಲ್ ಮಾಡಿದ್ರೆ ನಿಮ್ಗೇನೆ 71 ಲಕ್ಷ ರೂ. ಸಿಗುತ್ತೆ. ಏನಪ್ಪಾ ಹೀಗೆಲ್ಲಾ ಹೇಳ್ತಿದ್ದಾರೆ ಅಂದ್ಕೊಂಡ್ರಾ. ಹೆಚ್ಚಿನ ಮಾಹಿತಿ ಇಲ್ಲಿದೆ. 

This country will pay you 71 Rs lakh to move there Vin

ಇರೋ ಜಾಗ ಬಿಟ್ಟು ದೇಶ-ವಿದೇಶಗಳಿಗೆ ಟ್ರಾವೆಲ್ ಮಾಡೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೊಸ ಜಾಗ, ಹೊಸ ಸಂಸ್ಕೃತಿ, ಹೊಸ ಜನರನ್ನು ನೋಡೋಕೆ ಖುಷಿಯಾಗುತ್ತೆ. ಆದ್ರೆ ಹೀಗೆ ಟ್ರಾವೆಲ್ ಮಾಡೋಕೆ ದುಡ್ಡು ಬೇಕು ಅನ್ನೋದೆ ಹೆಚ್ಚಿನವರ ಸಮಸ್ಯೆ. ಆದ್ರೆ ಈ ದೇಶದಿಂದ ಟ್ರಾವೆಲ್ ಮಾಡೋಕೆ ದುಡ್ಡು ಬೇಕಿಲ್ಲ. ಬದಲಿಗೆ ಟ್ರಾವೆಲ್ ಮಾಡಿದ್ರೆ ನಿಮ್ಗೇನೆ 71 ಲಕ್ಷ ರೂ. ಸಿಗುತ್ತೆ. ಏನಪ್ಪಾ ಹೀಗೆಲ್ಲಾ ಹೇಳ್ತಿದ್ದಾರೆ ಅಂದ್ಕೊಂಡ್ರಾ. ಹೆಚ್ಚಿನ ಮಾಹಿತಿ ಇಲ್ಲಿದೆ. 

ಅನೇಕ ಜನರು ಟ್ರಾವೆಲ್ ಮಾಡೋಕೆ ಇಷ್ಟಪಡುತ್ತಾರೆ. ತಮ್ಮ ಸ್ವಂತ ಊರುಗಳನ್ನು ತೊರೆದು ಸಂಪೂರ್ಣವಾಗಿ ಹೊಸ ದೇಶಕ್ಕೆ (Country) ತೆರಳಲು ಬಯಸುತ್ತಾರೆ. ಹಲವಾರು ಜನರು ಇತರ ಸಂಸ್ಕೃತಿಗಳು (Culture) ಮತ್ತು ಜೀವನ ವಿಧಾನಗಳನ್ನು ಅನುಭವಿಸಲು ಬಯಸುತ್ತಾರೆ. ಆದರೆ, ಹೊಸ ಸ್ಥಳಕ್ಕೆ ಹೋಗುವುದು ತುಂಬಾ ದುಬಾರಿ (Costly)ಯಾಗಿದೆ. ಅದಕ್ಕಾಗಿ ಸೇವಿಂಗ್ಸ್ ಮಾಡುತ್ತಾ ಕೋರಬೇಕಾಗುತ್ತದೆ. ಆದರೆ ಹೀಗೆ ಹೋಗೋಕೆ ದುಡ್ಡು ಬೇಡ. ಬದಲಿಗೆ ನೀವು ಟ್ರಾವೆಲ್‌ ಮಾಡಿದ್ರೆ ನಿಮ್ಗೇನೆ ದುಡ್ಡು ಸಿಗುತ್ತೆ ಅಂದ್ರೆ ಹೇಗಿರುತ್ತೆ. ಹೌದು ಇಂಥಾ ಒಂದು ಆಫರ್‌ನ್ನು ಐರ್ಲೆಂಡ್ ಕೊಡ್ತಿದೆ. ಅಲ್ಲಿಗೆ ತೆರಳುವ ಯಾರಿಗಾದರೂ ಐರ್ಲೆಂಡ್ €80,000 (ಸುಮಾರು 71 ಲಕ್ಷ) ಕ್ಕಿಂತ ಹೆಚ್ಚು ಪಾವತಿಸುತ್ತಿದೆ.

ಸೌತ್ ಇಂಡಿಯಾ ಟ್ರಿಪ್‌ ಪ್ಲಾನ್ ಮಾಡ್ತಿದ್ದೀರಾ? ಬಜೆಟ್ ಫ್ರೆಂಡ್ಲೀ ಸ್ಥಳಗಳ ಮಾಹಿತಿ ಇಲ್ಲಿದೆ

ದೇಶದ ಕಡಲಾಚೆಯ ಸಮುದಾಯಗಳಲ್ಲಿ ಒಂದಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸುವವರಿಗೆ ಗಣನೀಯ ಆರ್ಥಿಕ ಪ್ರೋತ್ಸಾಹವನ್ನು ನೀಡುವ ಕಾರ್ಯಕ್ರಮವನ್ನು (Programme) ಐರ್ಲೆಂಡ್ ಪರಿಚಯಿಸಿದೆ. ಕಾರ್ಯಕ್ರಮವು ಅವರ್ ಲಿವಿಂಗ್ ಐಲ್ಯಾಂಡ್ಸ್ ನೀತಿಯ ಒಂದು ಅಂಶವಾಗಿದೆ, ಇದು ಐರ್ಲೆಂಡ್‌ನ ದ್ವೀಪಗಳ ಜನಸಂಖ್ಯೆಯನ್ನು ಹೆಚ್ಚಿಸಲು ಐರಿಶ್ ಸರ್ಕಾರದ ಪ್ರಯತ್ನವಾಗಿದೆ ಎಂದು ಯುರೋ ನ್ಯೂಸ್ ವರದಿ ಮಾಡಿದೆ.

ಐರ್ಲೆಂಡ್‌ನ ಅಧಿಕೃತ ಸರ್ಕಾರಿ ವೆಬ್‌ಸೈಟ್‌ನ ಪ್ರಕಾರ, 'ಈ ಯೋಜನೆಯ ಉದ್ದೇಶ, ಕಡಲಕರೆಯಾಚೆಯ ನಡುಗಡ್ಡೆಗಳಲ್ಲಿ ಸುಸ್ಥಿರವಾದ ಸ್ಪಂದನಶೀಲ ಸಮುದಾಯಗಳು ಮುಂಬರುವ ವರ್ಷಗಳಲ್ಲಿ ಬೆಳೆದು ಅಭಿವೃದ್ಧಿ ಹೊಂದಲಿ ಎಂಬುದಾಗಿದೆ. ನಮ್ಮ ದ್ವೀಪಗಳನ್ನು ಸಂದರ್ಶಿಸುವವರು ಅಲ್ಲಿನ ಅನನ್ಯ ಸಂಸ್ಕೃತಿ, ಪರಂಪರೆ, ಹಾಗೂ ನೈಸರ್ಗಿಕ ಸಂಪತ್ತಿನ ಕೊಡುಗೆಗಳನ್ನು ಅನುಭವಿಸಲಿ, ಆನಂದಿಸಲಿ ಎಂಬುದು ನಮ್ಮ ಆಕಾಂಕ್ಷೆಯಾಗಿದೆ." ಎಂದು ಸರಕಾರದ ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿದೆ. ಈ ಯೋಜನೆಯಡಿ ಜುಲೈ 1ರಿಂದ ಅರ್ಜಿ ಸಲ್ಲಿಸಬಹುದು ಎಂದು ತಿಳಿದುಬಂದಿದೆ

ನಮ್ಮಲ್ಲಿ ಜನಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದ್ದರೂ ಜಗತ್ತಿನ ಮುಂದುವರಿದ ಅನೇಕ ದೇಶಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಐರ್ಲೆಂಟ್ ಇಂಥಾ ಯೋಜನೆಯೊಂದನ್ನು ಘೋಷಿಸಿದೆ. ಇಟಲಿಯ ಒಂದು ಪಟ್ಟಣದಲ್ಲೂ ಇದೇ ರೀತಿಯ ಯೋಜನೆ ಘೋಷಿಸಲಾಗಿದೆ. 

ಉಡುಪಿಯ ವರಂಗ ಕುರಿತ ಮಹೀಂದ್ರಾ ಟ್ವೀಟ್ ಗೆ ಕರಾವಳಿಗರ ಸಂತಸ, ಏನಿದು ವರಂಗ

Latest Videos
Follow Us:
Download App:
  • android
  • ios