MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಸೌತ್ ಇಂಡಿಯಾ ಟ್ರಿಪ್‌ ಪ್ಲಾನ್ ಮಾಡ್ತಿದ್ದೀರಾ? ಬಜೆಟ್ ಫ್ರೆಂಡ್ಲೀ ಸ್ಥಳಗಳ ಮಾಹಿತಿ ಇಲ್ಲಿದೆ

ಸೌತ್ ಇಂಡಿಯಾ ಟ್ರಿಪ್‌ ಪ್ಲಾನ್ ಮಾಡ್ತಿದ್ದೀರಾ? ಬಜೆಟ್ ಫ್ರೆಂಡ್ಲೀ ಸ್ಥಳಗಳ ಮಾಹಿತಿ ಇಲ್ಲಿದೆ

ಸೌತ್‌ ಇಂಡಿಯಾದಲ್ಲಿ ನೋಡಲೇಬೇಕಾದ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ದೇವಾಲಯಗಳು, ಜಲಪಾತಗಳು, ಕೋಟೆಗಳು ಮೊದಲಾದ ಜಾಗಗಳಿವೆ. ಅದರಲ್ಲಿ ಬಜೆಟ್ ಫ್ರೆಂಡ್ಲೀ ಯಾವುದು? ದಕ್ಷಿಣ ಭಾರತದಲ್ಲಿ ನೀವು ನೋಡಬಹುದಾದ ಬಜೆಟ್ ಫ್ರೆಂಡ್ಲೀ ಸ್ಥಳಗಳ ಮಾಹಿತಿ ಇಲ್ಲಿದೆ. 

2 Min read
Vinutha Perla
Published : Jun 15 2023, 01:37 PM IST
Share this Photo Gallery
  • FB
  • TW
  • Linkdin
  • Whatsapp
16

ಹಂಪಿ, ಕರ್ನಾಟಕ
ಹಂಪಿ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಪುರಾತನ ಗ್ರಾಮವಾಗಿದೆ. 1336ರಿಂದ 1565ರ ವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲ ಮಹಲ್, ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.

26

ಪಾಂಡಿಚೇರಿ, ತಮಿಳುನಾಡು
ಪಾಂಡಿಚೇರಿ ಅಥವಾ ಪುದುಚೇರಿ ಎಂದು ಕರೆಯಲ್ಪಡುವ ನಗರವು ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. ಈ ನಗರವು ಭಾರತದ ಆಗ್ನೇಯ ಕರಾವಳಿಯಲ್ಲಿರುವ ಪುದುಚೇರಿ ಜಿಲ್ಲೆಯಲ್ಲಿದೆ. ತಮಿಳುನಾಡು ರಾಜ್ಯದ  ಸಂಸ್ಕೃತಿ, ಪರಂಪರೆ ಮತ್ತು ಭಾಷೆಯ ಹೆಚ್ಚಿನ ಭಾಗವನ್ನು ಹಂಚಿಕೊಳ್ಳುತ್ತದೆ. ಇಲ್ಲಿ ಸುಂದರವಾದ ಕಡಲತೀರಗಳು, ಫ್ರೆಂಚ್ ಆರ್ಕಿಟೆಕ್ಚರ್‌ನ ಸೌಂದರ್ಯವನ್ನು ಸವಿಯಬಹುದು. ವಸತಿ ಸೌಕರ್ಯ ಸಹ ಹೆಚ್ಚು ಕಾಸ್ಟ್ಲೀಯಾಗಿಲ್ಲ. ನೀವು ಸುಮಾರು 800ರಿಂದ 1500 ರೂ. ಬಜೆಟ್‌ನಲ್ಲಿ ಪಾಂಡಿಚೇರಿ ವಿಸಿಟ್ ಮಾಡಿ ಬರಬಹುದು

36

ಮುನ್ನಾರ್, ಕೇರಳ
ಮುನ್ನಾರ್, ದಕ್ಷಿಣ ಭಾರತದ ಪ್ರಸಿದ್ಧ ಗಿರಿಧಾಮವಾಗಿದ್ದು, ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಮುನ್ನಾರ್, ಮುಥಿರಾಪುಝಾ, ನಲ್ಲತನ್ನಿ ಮತ್ತು ಕುಂದಾಲ ಎಂಬ ಮೂರು ಪರ್ವತ ಶ್ರೇಣಿಗಳ ಸಂಗಮ ಸ್ಥಾನವಾಗಿದೆ. ಸಮುದ್ರ ಮಟ್ಟದಿಂದ 1600 ಮೀ. ಎತ್ತರವಿರುವ ಈ ಗಿರಿ ಧಾಮವು ಹಿಂದೊಮ್ಮೆ ದಕ್ಷಿಣಭಾರತದಲ್ಲಿ ಬ್ರಿಟೀಶ್ ಸರ್ಕಾರದ ಬೇಸಿಗೆಕಾಲದ ರೆಸಾರ್ಟ್ ಆಗಿತ್ತು. ಚಿತ್ತಾಕರ್ಷಕ ಟೀ ಪ್ಲಾಂಟೇಶನ್‌ಗಳು, ನಯನ ಮನೋಹರ ಪಟ್ಟಣಗಳು, ತಂಗಾಳಿ ಬೀಸುವ ನೌಕಾಪಥಗಳು ಮತ್ತು ರಜಾದಿನದ ಸೌಕರ್ಯಗಳು ಇದನ್ನು ಜನಪ್ರಿಯ ರೆಸಾರ್ಟ್ ಅನ್ನಾಗಿ ಮಾಡಿದೆ. ಬಜೆಟ್ ಫ್ಲೆಂಡ್ಲೀಯಾಗಿರುವ ಮುನ್ನಾರ್‌,  ಪ್ರವಾಸಿಗರಿಗೆ ಉತ್ತಮ ರಜೆಯ ಅನುಭವದ ಭಾಗವಾಗಿದೆ. ಮುನ್ನಾರ್ ನೀಲಕುರಿಂಜಿಗೆ ಹೆಸರುವಾಸಿಯಾಗಿದೆ, ಇದು ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಹೂಬಿಡುವ ಅಪರೂಪದ ಸಸ್ಯವಾಗಿದೆ.

46

ಊಟಿ, ತಮಿಳುನಾಡು
ಊಟಿ, ಭಾರತದ ತಮಿಳುನಾಡು ರಾಜ್ಯದಲ್ಲಿದೆ. ಊಟಕಮಂಡ್‌ ನೀಲಗಿರಿ ಬೆಟ್ಟಗಳಲ್ಲಿರುವ ಒಂದು ಪ್ರಸಿದ್ಧ ಗಿರಿಧಾಮವಾಗಿದೆ. ಊಟಿಯು ಸಮುದ್ರ ಮಟ್ಟಕ್ಕಿಂತ ಸುಮಾರು 7,500 ಅಡಿ (2, 286 ಮೀ) ಎತ್ತರದಲ್ಲಿದೆ. ಊಟಿ ನಗರವು ತಮಿಳುನಾಡಿನ ಪ್ರಮುಖ ಮತ್ತು ಆಸಕ್ತಿದಾಯಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಭಾರತದ ಅತ್ಯುತ್ತಮ ಹಿಲ್ ರೆಸಾರ್ಟ್‌ಗಳಲ್ಲಿ ಒಂದಾಗಿದೆ. ಊಟಿಯ ಇನ್ನೊಂದು ಹೆಸರು ಉದಗಮಂಡಲಂ ಅಥವಾ ಊಟಕಮಂಡ್. ಇದನ್ನು ಗಿರಿಧಾಮಗಳ ರಾಣಿ ಎಂದೂ ಕರೆಯುತ್ತಾರೆ.

56

ಗೋಕರ್ಣ, ಕರ್ನಾಟಕ
ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ, ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು 65 ಕಿ.ಮಿ. ದೂರದಲ್ಲಿದೆ. ಶಿವನು ಪಟ್ಟಣದಲ್ಲಿ ಹೆಚ್ಚು ಪೂಜಿಸಲ್ಪಡುವ ದೇವರು ಮತ್ತು ಅದರ ಮುಖ್ಯ ದೇವಾಲಯವನ್ನು ಮಹಾಬಲೇಶ್ವರ ಎಂದೂ ಕರೆಯುತ್ತಾರೆ. ಗೋಕರ್ಣವು ಹಿಂದೂ ಧರ್ಮದ ಏಳು ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ನೋಡಲು ಅತೀ ಸುಂದರವಾಗಿರುವ ಈ ಜಾಗವು ಬಜೆಟ್‌ ಫ್ಲೆಂಡ್ಲೀ ಸಹ ಆಗಿದೆ. 

66

ಅಲೆಪ್ಪಿ, ಕೇರಳ
ಆಲಪ್ಪುಳ ಅಥವಾ ಅಲೆಪ್ಪಿ, ಕೇರಳ ರಾಜ್ಯದಲ್ಲಿ ನೋಡಲೇಬೇಕಾದ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳವಾಗಿದೆ. ಈ ಅದ್ಭುತ ಸ್ಥಳವನ್ನು ಅನೇಕ ಪ್ರವಾಸಿಗರು 'ಪೂರ್ವದ ವೆನಿಸ್' ಎಂದು ಕರೆಯುತ್ತಾರೆ. ಈ ಹಿನ್ನೀರಿನ ಸ್ಥಳವು ಕೇರಳದ ಅತ್ಯಂತ ಸುಂದರವಾದ ರಾಜ್ಯವಾಗಿದೆ. ಕೇರಳದ ಅತ್ಯುತ್ತಮ ಪ್ರವಾಸೋದ್ಯಮ ನಗರಗಳಲ್ಲಿ ಒಂದಾದ ಅಲೆಪ್ಪಿ, ಒಟ್ಟಾರೆಯಾಗಿ ಸುಂದರವಾದ ಮತ್ತು ಪ್ರಾಚೀನ ಸ್ಥಳವಾಗಿದೆ. ಇಲ್ಲಿ ಅಡ್ವೆಂಚರ ಆಕ್ಟಿವಿಟೀಸ್‌ನ್ನು ಸಹ ಮಾಡಬಹುದು.

About the Author

VP
Vinutha Perla
ಪ್ರವಾಸ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved