ಎರಡು ಬಾರಿ ಸ್ನಾನ ಮಾಡ್ತೀರಾ..? ಖಾಲಿಯಾಗ್ಬಹುದು ಜೇಬು!
ಬೇಸಿಗೆಯಲ್ಲಿ ಎರಡು ಸ್ನಾನ ಅನಿವಾರ್ಯ. ಮನೆಯಿಂದ ಹೊರಗೆ ಹೋದಾಗ ಕೊಳಕಾಗಿದೆ ಅಂತಾ ಕೆಲವರು ದಿನಕ್ಕೆರಡು ಸ್ನಾನ ಮಾಡ್ತಾರೆ. ನಿಮ್ಮ ಈ ರೂಢಿ ನಿಮ್ಮ ಹಣ ಖಾಲಿ ಮಾಡಿಸ್ಬಹುದು.

ಹೊಟೇಲ್ ರೂಮ್ ನಲ್ಲಿ ನಾವು ತಂಗಿದ್ದೇವೆ ಅಂದ್ರೆ ಉಚಿತವಾಗಿ ಬಂದಿರೋದನ್ನೇನೂ ಬಿಡೋದಿಲ್ಲ. ಅಲ್ಲಿನ ಶಾಂಪೂ, ಟಾವೆಲ್, ಸೋಪ್ ಎಲ್ಲವನ್ನು ತೆಗೆದುಕೊಂಡು ಬರೋ ಜನರಿದ್ದಾರೆ. ಮತ್ತೆ ಕೆಲವರು ಹೊಟೇಲ್ ಏನೆಲ್ಲ ಉಚಿತ ಸೇವೆ ನೀಡುತ್ತೋ ಅದನ್ನೆಲ್ಲ ತಪ್ಪದೆ ತೆಗೆದುಕೊಳ್ತಾರೆ. ಹೊಟೇಲ್ ರೂಮಿನಲ್ಲಿ ಸ್ನಾನ ಮಾಡಿದ್ರೆ ನಮ್ಮ ಗಂಟೇನು ಖರ್ಚಾಗ್ಬೇಕು ಅಂತಾ ಸೆಖೆ ನೆಪದಲ್ಲಿ ಎರಡು ಮೂರು ಬಾರಿ ಸ್ನಾನ ಮಾಡೋರಿದ್ದಾರೆ. ಗೋವಾ, ಮಂಗಳೂರು ಸೇರಿದಂತೆ ಬೀಚ್ ಪ್ರದೇಶಕ್ಕೆ ಹೋದಾಗ ಎರಡು ಸ್ನಾನ ಅನಿವಾರ್ಯ. ಆದ್ರೆ ಚೀನಾದ ಈ ಹೊಟೇಲ್ ಗೆ ಹೋಗಿ ಇಲ್ಲಿ ಮಾಡಿದಂತೆ ಎರಡು ಸ್ನಾನ ಮಾಡ್ಬೇಡಿ. ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ಯಾಕೆಂದ್ರೆ ಆ ಹೊಟೇಲ್ ನಲ್ಲಿ ದಿನಕ್ಕೆ ಎರಡು ಸ್ನಾನ ಮಾಡಿದ ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗ್ತಿದೆ.
ದಿನಕ್ಕೆರಡು ಸ್ನಾನ (Bathing) ಮಾಡೋರಿಗೆ ಈ ನಿಮಯ : ನೈಋತ್ಯ ಚೀನಾ (China) ದ ಯುನ್ನಾನ್ ಪ್ರಾಂತ್ಯದಲ್ಲಿ ಈ ಹೋಟೆಲ್ ಇದೆ. ಅತ್ಯಂತ ದುಬಾರಿ ಹೊಟೇಲ್ ಗಳಲ್ಲಿ ಈ ಹೊಟೇಲ್ (Hotel) ಕೂಡ ಸೇರಿದೆ. ಇಲ್ಲಿ ಒಂದು ರಾತ್ರಿ ತಂಗಬೇಕೆಂದ್ರೆ 2500 ಯುವಾನ್ (Yuan) ಅಂದ್ರೆ ಸುಮಾರು 28,850 ರೂಪಾಯಿ ಪಾವತಿ ಮಾಡ್ಬೇಕು. ಇಷ್ಟು ಹಣ ವಸೂಲಿ ಮಾಡುವ ಹೊಟೇಲ್ ನಲ್ಲಿಯೇ ಎರಡು ಸ್ನಾನ ಮಾಡಿದ್ರೆ ಹೆಚ್ಚವರಿ ಶುಲ್ಕ ಎಂಬ ನಿಯಮ ತಂದಿರೋದು ಜನರ ಕೋಪಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಇದನ್ನು ವಿರೋಧಿಸಿದ್ದಾರೆ.
ಈ ದೇವಾಲಯದಲ್ಲಿ, ಭಕ್ತರಿಗೆ ಪ್ರಸಾದ ರೂಪದಲ್ಲಿ ಸಿಗುತ್ತೆ ಚಿನ್ನ, ಬೆಳ್ಳಿ
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಮಹಿಳೆ : ಹೊಟೇಲ್ ನಲ್ಲಿ ಎರಡು ಬಾರಿ ಸ್ನಾನ ಮಾಡಿದ್ರೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗ್ತಿದೆ ಎಂಬ ಫೋಟೋವನ್ನು ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಆಕೆ ಹೊಟೇಲ್ ರೂಮಿಗೆ ಹೋಗ್ತಿದ್ದಂತೆ ಈ ಪೋಸ್ಟರ್ ನೋಡಿದ್ದಾಳೆ. ಇದು ಆಕೆಯನ್ನು ಅಚ್ಚರಿಗೊಳಿಸಿದೆ. ತಕ್ಷಣ ಪೋಸ್ಟರ್ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಅದಾದ್ಮೇಲೆ ಈ ವಿಷ್ಯದ ಬಗ್ಗೆ ಚರ್ಚೆ ಶುರುವಾಗಿದೆ. ಜನರು ಇದನ್ನು ವಿರೋಧ ಮಾಡ್ತಿದ್ದಾರೆ. ನೀರನ್ನು ಉಳಿಸಲು ಹೊಟೇಲ್ ಬೇರೆ ಮಾರ್ಗವನ್ನು ಅನುಸರಿಸಬೇಕು, ಜನರಿಂದ ಹಣ ವಸೂಲಿ ಮಾಡೋದು ತಪ್ಪು ಎನ್ನುತ್ತಿದ್ದಾರೆ.
ಭಾರತದ ಉಪಹಾರ ಉದ್ಯಮದಲ್ಲಿ ಬದಲಾವಣೆ ತರ್ತಿದ್ದಾರೆ ಜಿನ್ ಝೆಡ್
ನೀರನ್ನು ಉಳಿಸಲು ಈ ನಿಮಯ ಜಾರಿಗೆ ತಂದ ಹೊಟೇಲ್ : ಹೊಟೇಲ್ ನಲ್ಲಿ ತಂಗುವವರು ಎರಡನೇ ಬಾರಿ ಸ್ನಾನ ಮಾಡಿದ್ರೆ ಹೆಚ್ಚುವರಿ ಶುಲ್ಕ ವಸೂಲಿ ಮಾಡ್ತಾನೆ ಎಂಬ ಬೋರ್ಡ್ ಹಿಂದೆ ನೀರಿನ ರಕ್ಷಣೆ ಉದ್ದೇಶ ಅಡಗಿದೆ. ಈ ಹೊಟೇಲ್ ಗೆ ಬರುವ ಗ್ರಾಹಕರು ಹೆಚ್ಚು ನೀರು ಖರ್ಚು ಮಾಡ್ತಾರೆ. ಹೆಚ್ಚುವರಿ ಶುಲ್ಕದ ನಿಯಮತಂದ್ರೆ ಗ್ರಾಹಕರು ಮೂರ್ನಾಲ್ಕು ಬಾರಿ ಸ್ನಾನ ಮಾಡೋದು ನಿಲ್ಲುತ್ತೆ. ಆಗ ನೀರು ಪೋಲಾಗೋದಿಲ್ಲ ಎಂಬುದು ಹೊಟೇಲ್ ಪ್ಲಾನ್. ಬೇಸಿಗೆಯಲ್ಲಿ ಈ ರೂಲ್ಸ್ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೊಟೇಲ್ ಸಿಬ್ಬಂದಿ ಹೇಳಿದ್ದಾರೆ.
ಈವರೆಗೆ ಯಾರಿಂದಲೂ ಹಣ ವಸೂಲಿ ಮಾಡಿಲ್ಲ : ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯದ ಬಗ್ಗೆ ವಿಶೇಷ ಚರ್ಚೆಯಾಗ್ತಿದ್ದಂತೆ ಹೊಟೇಲ್ ಸ್ಪಷ್ಟನೆ ನೀಡಿದೆ. ಒಂದು ತಿಂಗಳ ಹಿಂದಷ್ಟೆ ಹೊಟೇಲ್ ನಲ್ಲಿ ಎಚ್ಚರಿಕೆ ಬೋರ್ಡ್ ಹಾಕಲಾಗಿದೆ. ಆದ್ರೆ ಈವರೆಗೂ ಯಾರಿಂದಲೂ ಹಣ ವಸೂಲಿ ಮಾಡಲಾಗಿಲ್ಲ. ಹೊಟೇಲ್ ಗೆ ಬರುವ ಗ್ರಾಹಕರು ನೀರನ್ನು ಕಡಿಮೆ ಖರ್ಚು ಮಾಡಲಿ ಎಂಬುದೇ ಈ ಬೋರ್ಡ್ ಉದ್ದೇಶವೆಂದು ಹೊಟೇಲ್ ಮಾಹಿತಿ ನೀಡಿದೆ.