ಭಾರತದ ಉಪಹಾರ ಉದ್ಯಮದಲ್ಲಿ ಬದಲಾವಣೆ ತರ್ತಿದ್ದಾರೆ ಜಿನ್ ಝೆಡ್

ಬೆಳಿಗ್ಗೆ ಎದ್ದು ಇಡ್ಲಿ, ದೋಸೆ ಮಾಡಿ ತಿನ್ನಲು ಪುರುಸೊತ್ತಿಲ್ಲ ಅಂದ್ಮೇಲೆ ದೋಸೆ ಹಿಟ್ಟು ಸಿದ್ಧಮಾಡೋಕೆ ಟೈಂ ಎಲ್ಲಿರಬೇಕು? ಈಗ ಕಾಲ ಬದಲಾಗ್ತಿದೆ. ಜೆನ್ ಝೆಡ್ ಜನರ ಆಹಾರದಲ್ಲಿ ಆಗ್ತಿರುವ ಬದಲಾವಣೆ ತಿಂಡಿ ಉದ್ಯಮದ ರೂಪಾಂತರಕ್ಕೆ ಕಾರಣವಾಗಿದೆ.
 

Gen Z All Set To Cause Major Disruptions In Indias Breakfast Market Dynamics roo

ಭಾರತದ ಬೆಳಗಿನ ಉಪಾಹಾರ ವ್ಯಾಪಾರದಲ್ಲಿ ಬಹುದೊಡ್ಡ ಬದಲಾವಣೆಯಾಗ್ತಿದೆ. ಉಪಹಾರದ ಅತಿದೊಡ್ಡ ಗ್ರಾಹಕರಾದ ಜಿನ್ ಝೆಡ್ ತಮ್ಮ ಉಪಹಾರದಲ್ಲಿ ರೂಪಾಂತರಗೊಂಡಿರುವ ಕಾರಣ ವ್ಯಾಪಾರಸ್ಥರಿಗೆ ಬದಲಾವಣೆ ಅನಿವಾರ್ಯವಾಗಿದೆ. ಹದಿಹರೆಯದವರು ಮತ್ತು 20 ವರ್ಷ ಮೇಲ್ಪಟ್ಟ ಯುವಕರ ಅಗತ್ಯಗಳನ್ನು ಪೂರೈಸಲು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮರುಸ್ಥಾಪಿಸಲು ಮುಂದಾಗಿದೆ. ಈ ಬಗ್ಗೆ ವರದಿಯೊಂದು ಬಿಡುಗಡೆಯಾಗಿದೆ. ಜೆನ್ ಝೆಡ್ ಜನರು ಉಪಹಾರವನ್ನು ಸ್ನ್ಯಾಕಿಪೈಯಿಂಗ್ ಮಾಡ್ತಿದ್ದಾರೆ. ಅಂದ್ರೆ ಭೋಜನವನ್ನು ಅವರು ಉಪಹಾರವನ್ನಾಗಿ ಬದಲಿಸ್ತಿದ್ದಾರೆ ಇಲ್ಲವೆ ಭೋಜನದ ಜೊತೆಯೇ ಉಪಹಾರ ಸೇವನೆ ಮಾಡ್ತಿದ್ದಾರೆ. 

ಮಾರುಕಟ್ಟೆ (Market) ಗುಪ್ತಚರ ಸಂಸ್ಥೆ ಮಿಂಟೆಲ್‌ನ ಸಂಶೋಧನೆ (Research ) ಈ ಬಗ್ಗೆ ಮಾಹಿತಿ ಬಿಚ್ಚಿಟ್ಟಿದೆ. ಅದ್ರ ಪ್ರಕಾರ, ಆರೋಗ್ಯಕರ ಆಹಾರ ತಿನ್ನುವ ಉದ್ದೇಶವನ್ನು ಜೆನ್ ಝೆಡ್ ಹೊಂದಿಲ್ಲ. ಅವರ ಉದ್ದೇಶ ಮತ್ತು ನಿಜವಾದ ಕ್ರಿಯೆಯ ನಡುವೆ ಅಂತರವಿದೆ.  ಆಹಾರ ಉದ್ಯಮಕ್ಕೆ ಖುಷಿ ಸುದ್ದಿ : ಜೆನ್ ಝೆಡ್ ನ ಈ ನಿರ್ದಿಷ್ಟ ಅಭ್ಯಾಸವು ಲಘು ಆಹಾರ ಉದ್ಯಮಕ್ಕೆ ಒಳ್ಳೆಯ ಸುದ್ದಿ. ಯಾಕೆಂದ್ರೆ ಹೆಚ್ಚಿನ ಕಂಪನಿಗಳು ಈಗಾಗಲೇ ಜೆನ್ ಝೆಡ್ ಆಸಕ್ತಿಗೆ ತಕ್ಕಂತೆ ಆಹಾರದಲ್ಲಿ ಬದಲಾವಣೆ ಮಾಡಿವೆ. ಕೆಲವು ಕಂಪನಿಗಳು ಬದಲಾವಣೆ ಮಾಡುವ ಪ್ರಯತ್ನದಲ್ಲಿವೆ. 

ಮೋದಿ ಮನ್ ಕೀ ಬಾತ್ ಐಡಿಯಾ : ಬಾಳೆ ದಿಂಡಿನಿಂದ ರಸವಾಯ್ತು ಬದುಕು !

2022 ಮತ್ತು 2026 ರ ನಡುವೆ ದೇಶದ ತಿಂಡಿ ಕ್ಷೇತ್ರವು ಶೇಕಡಾ 7 ಕ್ಕಿಂತ ಹೆಚ್ಚು ದರದಲ್ಲಿ ಬೆಳೆಯುತ್ತದೆ ಎಂದು ಮಿಂಟೆಲ್ ರಿಪೋರ್ಟ್ ಇಂಡಿಯಾ ಅಂದಾಜಿಸಿದೆ. ಜೆನ್ ಝೆಡ್ (Gen Z) ಗ್ರಾಹಕರು ಈ ಬೆಳವಣಿಗೆಯನ್ನು ಪ್ರಾಥಮಿಕವಾಗಿ ಚಾಲನೆ ಮಾಡುತ್ತಾರೆ ಎಂದು ವರದಿ ಹೇಳಿದೆ. 

ಜೆನ್ ಝೆಡ್ ಖರೀದಿದಾರರೊಂದಿಗೆ ಹೆಚ್ಚು ತೊಡಗಿಸಿಕೊಳ್ಳದ ಕಂಪನಿಗಳು ಈಗ ಕೆಲವು ರೀತಿಯ ಪರಿಷ್ಕರಿಸಲು ಮುಂದಾಗ್ತಿವೆ. 60 ವರ್ಷ ಹಳೆಯ ಬ್ರಾಂಡ್ Gits ನ ಉದಾಹರಣೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಮೂಲತಃ ಜೆನ್ ಝೆಡ್ ಗ್ರಾಹಕರೊಂದಿಗೆ ಸೀಮಿತ ಸಂಪರ್ಕ ಹೊಂದಿತ್ತು. ಆದರೆ ಈಗ ಈ ವಯಸ್ಸಿನವರಿಗೆ ಪೂರೈಸುವ 'ರೆಡಿ-ಟು-ಈಟ್' ಉತ್ಪನ್ನಗಳೊಂದಿಗೆ Gits ತನ್ನ ಕ್ಷೇತ್ರವನ್ನು ವಿಸ್ತರಿಸಿದೆ. ಬ್ರ್ಯಾಂಡ್ ಗಳು ಈಗ ರುಚಿ ಮತ್ತು ಆರೋಗ್ಯವನ್ನು ಸಮತೋಲನಗೊಳಿಸುವ ಬೆಟರ್ ಫಾರ್ ಯು ಪಾಕವಿಧಾನಗಳಿಗೆ ಆದ್ಯತೆ ನೀಡುತ್ತಿವೆ. ರುಚಿಯಿಲ್ಲದ, ಆರೋಗ್ಯಕರ ವ್ಯಾಪಾರ ವಹಿವಾಟಿನಿಂದ ಹಿಂದೆ ಸರಿಯುತ್ತಿವೆ. 

Phonepe, Gpay ಮೂಲಕ ಮನೆಯಲ್ಲಿ ಕುಳಿತು ಹಣ ಗಳಿಸಿ; ಇಲ್ಲಿದೆ ಉತ್ತಮ ಮಾರ್ಗ..!

ಜೆನ್ ಝೆಡ್  ಕೆಲಸ ಮಾಡಲು ಪ್ರಾರಂಭಿಸಿದಾಗ ಮತ್ತು ಬಿಡುವಿಲ್ಲದ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಅವರು ಸಮಯ ಉಳಿತಾಯ ಮಾಡುವ, ಅನುಕೂಲಕರವಾದ ತಿಂಡಿಗಳನ್ನು ಹುಡುಕುತ್ತಾರೆ. ಅಲ್ಲದೆ ಆ ತಿಂಡಿ ದೀರ್ಘಕಾಲದವರೆಗೆ ಬರಬೇಕೆಂದು ಅವರು ಬಯಸ್ತಾರೆ. ಹಾಗಾಗಿ ಅವರ ಇಚ್ಛೆ ಅರಿತು ತಿಂಡಿ ತಯಾರಿಸೋದು ಕಂಪನಿಗಳ ಗುರಿಯಾಗಿದೆ.  ಜೆನ್ ಎಕ್ಸ್ ಹಾಗೂ ಜೆನ್ ವೈ ತುಲನೆ ಮಾಡಿದ್ರೆ ಜೆನ್ ಝೆಡ್ ನ ದೊಡ್ಡ ಗುಂಪು ಹೆಚ್ಚು ಆಹಾರ ಸೇವನೆ ಮಾಡುತ್ತದೆ ಎಂಬ ಸಂಗತಿಯೂ ಹೊರ ಬಿದ್ದಿದೆ. 

ಆರೋಗ್ಯಕರ ತಿಂಡಿ ಹಾಗೂ ಜಿನ್ ಝೆಡ್ ಕಥೆ ಭಿನ್ನವಾಗಿರುತ್ತದೆ ಎಂದು ಆಹಾರ ತಜ್ಞರು ಹೇಳ್ತಾರೆ. ಆರೋಗ್ಯಕ ಆಹಾರವೆಂದಾಗ ಅವರು ಬೇಸರದಿಂದ ಲಘುವಾಗಿ ಆಹಾರ ಸೇವನೆ ಮಾಡ್ತಾರೆ. ಅದೇ ಅವರಿಗೆ ಪರಿಚಿತವಾದ ಆಹಾರ ಸೇವನೆ ಮಾಡೋವಾಗ ಖುಷಿಯಾಗಿರುವ ಕಾರಣ ಅವರ ಒತ್ತಡ ಕಡಿಮೆಯಾಗುತ್ತದೆ. ಮನಸ್ಥಿತಿ ಉತ್ತೇಜನಗೊಳ್ಳುತ್ತದೆ. ಹಾಗಾಗಿ ತಿಂಡಿಯಲ್ಲಿ ಸಿಗುವ ಆನಂದ ಜೆನ್ ಝೆಡ್ ಜನರಿಗೆ ಬಹಳ ಮುಖ್ಯವೆಂದು ತಜ್ಞರು ಹೇಳಿದ್ದಾರೆ.

ಜೆನ್ ಝೆಡ್ ನಲ್ಲಿ ಭಾವನಾತ್ಮಕ ಮತ್ತು ದೈಹಿಕ ಶಕ್ತಿ ಕಡಿಮೆ. ಎಲ್ಲಾ ತಲೆಮಾರುಗಳಿಗೆ ಹೋಲಿಕೆ ಮಾಡಿದ್ರೆ ಜಿನ್ ಝೆಡ್ ಜನರಲ್ಲಿ ಒತ್ತಡ, ಆತಂಕ, ಆಯಾಸ ಹೆಚ್ಚು ಎಂದು ಸಂಶೋಧನೆ ಪತ್ತೆ ಮಾಡಿದೆ. ಕೋಪದಂತಹ ಭಾವನೆಯನ್ನು ಅವರು ಹೆಚ್ಚು ಪ್ರದರ್ಶನ ಮಾಡ್ತಾರೆ. ಒತ್ತಡ ಕಡಿಮೆ ಮಾಡಲು ಶೇಕಡಾ 67ರಷ್ಟು ಜಿನ್ ಝೆಡ್ ಜನರು ವಿಡಿಯೋ ವೀಕ್ಷಣೆ ಮಾಡ್ತಾರೆ. ಇದು ಅವರ ಏಕಾಗ್ರತೆಯನ್ನು ಹಾಳು ಮಾಡುತ್ತದೆ.   

Latest Videos
Follow Us:
Download App:
  • android
  • ios