ಒಳ್ಳೆ ನೀರು ಯಾವುದು ಕೆಟ್ಟ ನೀರು ಯಾವುದು ಎಂದು ಮೇಲ್ನೋಟಕ್ಕೆ ಎಂಥ ದಡ್ಡರಿಗಾದರೂ ತಿಳಿಯುತ್ತೆ. ಆದರೆ ಇಲ್ಲೊಬ್ಬರು ಇನ್‌ಫ್ಲುಯೆನ್ಸರ್ ತಿಳಿಯದೇ ಬೀಚ್‌ನಲ್ಲಿ ಕೊಳಕು ನೀರಿನಲ್ಲಿ ಸ್ನಾನ ಮಾಡಿ ಈಗ ಬಾಯ್ಬಾಯಿ ಬಡ್ಕೊಂಡಿದ್ದಾಳೆ.

ಸಮುದ್ರಕ್ಕೆ ನದಿಗಳು ಬಂದು ಸೇರುತ್ತವೆ. ಬರೀ ನದಿಗಳು ಮಾತ್ರವಲ್ಲ, ಕೆಲವು ಕಾರ್ಖಾನೆಯ ಕೊಳಕು ನೀರು ಮೋರಿ ನೀರು ಕೂಡ ಸಮುದ್ರ ಸೇರುತ್ತದೆ. ಸ್ಥಳೀಯರ ಹೊರತಾಗಿ ಹೊರಗಿನಿಂದ ಪ್ರವಾಸಿಗರಾಗಿ ಬಂದವರಿಗೆ ಇದು ತಿಳಿದಿರುವುದಿಲ್ಲ, ಆದರೂ ಒಳ್ಳೆ ನೀರು ಯಾವುದು ಕೆಟ್ಟ ನೀರು ಯಾವುದು ಎಂದು ಮೇಲ್ನೋಟಕ್ಕೆ ಎಂಥ ದಡ್ಡರಿಗಾದರೂ ತಿಳಿಯುತ್ತೆ. ಆದರೆ ಇಲ್ಲೊಬ್ಬರು ಇನ್‌ಫ್ಲುಯೆನ್ಸರ್ ತಿಳಿಯದೇ ಬೀಚ್‌ನಲ್ಲಿ ಕೊಳಕು ನೀರಿನಲ್ಲಿ ಸ್ನಾನ ಮಾಡಿ ಈಗ ಬಾಯ್ಬಾಯಿ ಬಡ್ಕೊಂಡಿದ್ದಾಳೆ.

ದಕ್ಷಿಣ ಆಫ್ರಿಕಾ ಪ್ರಸಿದ್ಧ ಕೇಪ್ ಟೌನ್‌ ಬೀಚ್‌ ಸಮೀಪ ನೀರಿನಲ್ಲಿ ಮಹಿಳೆ ಈಜಾಡಿದ್ದಾಳೆ. ಆಕೆಯ ಬಾಯಿಗೆ ನೀರು ಹೋದರೂ ಆಕೆಗೆ ಅದು ಕೊಳಚೆ ನೀರು ಎಂಬುದೇ ತಿಳಿದಿಲ್ಲ, ಇತ್ತ ಈ ವೀಡಿಯೋವನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಂತರವೇ ಆಕೆಗೆ ತಾನು ಸ್ನಾನ ಮಾಡಿದ್ದು ಬೀಚ್ ನೀರಲ್ಲಿ ಅಲ್ಲ ಮೋರಿಯ ಕೊಳಕು ನೀರಿನಲ್ಲಿ ಎಂಬುದು ಆಕೆಗೆ ತಿಳಿದಿದೆ. ವೃತ್ತಿಯಲ್ಲಿ ಕೈಟ್ ಸರ್ಫರ್ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ಮಿಚೆಲ್ ಸೈ ಹೈವರ್ಡ್ ಎಂಬಾಕೆ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನಗೆ ಆಫ್ರಿಕಾದ ಜನಪ್ರಿಯ ಬೀಚ್‌ನಲ್ಲಾದ ಆಘಾತಕಾರಿ ಅನುಭವವನ್ನು ಹೇಳಿಕೊಂಡಿದ್ದಾಳೆ.

ಜುಲೈ 9ರಂದು ಈಕೆ ಬ್ಲೂಬರ್ಗ್‌ಸ್ಟ್ರಾಂಡ್ ಬೀಚ್‌ನಲ್ಲಿ ತನ್ನ ಎಂದಿನ ಬೆಳಗಿನ ಸ್ನಾನ ಮಾಡುತ್ತಿದ್ದಾಗ ನೀರು ಸಾಮಾನ್ಯಕ್ಕಿಂತ ಭಿನ್ನವಾಗಿ ಕಾಣುತ್ತಿರುವುದನ್ನು ಗಮನಿಸಿದ್ದಾಳೆ. ಹೀಗಾಗಿ ತಮ್ಮ ಈಜಾಟದ ವೀಡಿಯೊವನ್ನು ರೆಕಾರ್ಡ್ ಮಾಡಿ ನಂತರ ಅದನ್ನುಆಕೆ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಜೊತೆಗೆ ಈ ನೀರು ಏಕೆ ಹೀಗೆ ಎಂದು ತನ್ನ ಫಾಲೋವರ್ಸ್‌ಗಳ ಬಳಿ ಕೇಳಿದ್ದಾಳೆ. ಆಗ ಫಾಲೋವರ್ಸ್ಗಳ ಮಾತು ಕೇಳಿ ಆಕೆ ಪ್ರಜ್ಞೆ ಕಳೆದುಕೊಳ್ಳೋದು ಬಾಕಿ. ಅಂದಹಾಗೆ ಆಕೆಗೆ ಕನಿಷ್ಠ ನೀರಿನ ವಾಸನೆಯ ವ್ಯತ್ಯಾಸವೂ ತಿಳಿಯದೇ ಹೋಗಿದ್ದು ವಿಚಿತ್ರವೇ ಸರಿ.

ಅದು ಚರಂಡಿ ನೀರು ಎಂದು ನನಗೆ ತಿಳಿದಿರಲಿಲ್ಲ, ನಾನು ಕಾರನ್ನು ಹತ್ತಿದಾಗ, ನನ್ನ ಪತಿ ನನ್ನ ಮುಖದ ಮೇಲೆ ಚರಂಡಿ ನೀರು ಇದ್ದಂತೆ ಕಾಣುತ್ತಿದೆ ಎಂದು ಹೇಳಿದರು ಮತ್ತು ಅದು ನಿಜವೆಂದು ತಿಳಿಯದೆ ನಾವು ಅದರ ಬಗ್ಗೆ ತಮಾಷೆ ಮಾಡಿದೆವು. ನೀರು ಸಾಮಾನ್ಯಕ್ಕಿಂತ ಗಾಢವಾಗಿ ಕಾಣುತ್ತಿರುವುದನ್ನು ನಾನು ಗಮನಿಸಿದೆ, ವಿಶೇಷವಾಗಿ ಆ ನಿರ್ದಿಷ್ಟ ಸ್ಥಳದಲ್ಲಿ, ನಾನು ಮೊದಲು ಹಲವು ಬಾರಿ ಅಲ್ಲಿ ಈಜಾಡಿದ್ದೆ, ಮತ್ತು ನೀರು ಸಾಮಾನ್ಯವಾಗಿ ಯಾವಾಗಲೂ ತುಂಬಾ ತಿಳಿಯಾಗಿತ್ತು. ಆದರೆ ಈ ಬಾರಿ ಅದು ಕಂದು ಮತ್ತು ಕೆಸರುಮಯವಾಗಿತ್ತು. ಇದು ಸಾಮಾನ್ಯಕ್ಕಿಂತ ಸ್ವಲ್ಪ ಬೆಚ್ಚಗಿತ್ತು, ಆದ್ದರಿಂದ ನಾನು ಸಾಮಾನ್ಯವಾಗಿ ಇರುವುದಕ್ಕಿಂತ ಹೆಚ್ಚು ಸಮಯ ಅಲ್ಲಿ ಕಳೆದೆ.

ಆ ನೀರು ನನ್ನ ಬಾಯಿಗೂ ಹೋಗಿದೆ.ನಾನು ನೀರಿನೊಳಗೆ ಹೋಗಿ ನೊರೆಯಲ್ಲಿ ಆಟವಾಡುತ್ತಿದ್ದೆ, ನನ್ನ ಬಳಿ ಅಲೆ ಬೀಸುತ್ತಿದ್ದಾಗ ನಾನು ಸ್ವಲ್ಪ ರುಚಿ ನೋಡಿದೆ ಮತ್ತು ಅದು ಸಾಮಾನ್ಯಕ್ಕಿಂತ ಹೆಚ್ಚು ಉಪ್ಪಿನ ರುಚಿಯನ್ನು ಹೊಂದಿತ್ತು ಎಂದು ಆಕೆ ಹೇಳಿಕೊಂಡಿದ್ದಾಳೆ. ಹೇವರ್ಡ್ ಅವರ ವೀಡಿಯೊದಲ್ಲಿ ಅವರ ಮುಖ ಮತ್ತು ಕುತ್ತಿಗೆಯ ಮೇಲೆ ಕಂದು ಬಣ್ಣದಂತಹ ವಸ್ತು ಅಂಟಿರುವುದು ಅವರ ಸುತ್ತ ನೊರೆ ಸುತ್ತುತ್ತಿರುವಾಗ ಅವರು ಫೋನ್ ಅನ್ನು ಮೇಲಕ್ಕೆತ್ತಿ ಹಿಡಿದಿರುವುದನ್ನು ಕಾಣಬಹುದು. ಅವರು ರುಚಿಯ ಬಗ್ಗೆ ತಮಾಷೆ ಮಾಡುವಾಗ ಅದರಲ್ಲಿ ಸ್ವಲ್ಪ ದ್ರವ ಬಾಯಿಗೆ ನುಸುಳಿದೆ.

ಆದರೆ ವೀಡಿಯೋವನ್ನು ಪೋಸ್ಟ್ ಮಾಡಿದ ಮೇಲೆ ವೀಕ್ಷಕರು ಮಾಡಿದ ಕಾಮೆಂಟ್ ನೋಡಿದ ನಂತರವೇ ಅವರಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದೆ. ಅನೇಕರು ಇದು ಚರಂಡಿ ನೀರು ಎಂದು ಕಾಮೆಂಟ್ ಮಾಡಿದ್ದಾರೆ.

ಅದೇನೆ ಇರಲಿ ನಮ್ಮ ಬೆಂಗಳೂರಿನ ವೃಷಭಾವತಿಯೂ ಒಂದು ಕಾಲದಲ್ಲಿ ಸುಂದರ ನದಿ ಆದರೆ ಈಗ ಹೇಗಿದೆ. ಈಜಾಡೋದು ಬಿಡಿ ಅದರ ಸಮೀಪದಲ್ಲಿಯೂ ಸುಳಿಯಲಾಗದು ಅದರ ಸಮೀಪದ ರಸ್ತೆಯಲ್ಲಿ ಸಾಗುತ್ತಿದ್ದರೆ ಕೆಟ್ಟ ವಾಸನೆಯಿಂದ ವಾಂತಿ ಮಾಡುವಂತಾಗುತ್ತದೆ. ಬೆಂಗಳೂರಿನ ಪಾಲಿಗೆ ಇದು ಕೊಳಕು ಮೋರಿ ಎನಿಸಿದರು ಅದು ನದಿಯೇ ಅದರೆ ಹೊರಗಿನವರಿಗೆ ಗೂಗಲ್‌ನಲ್ಲಿ ಇದು ಮೋರಿಯಂತೆ ಕಾಣಿಸಲ್ಲ. ಆದರೆ ಸಾಮಾನ್ಯರಿಗೂ ಇದು ಸ್ನಾನಕ್ಕೆ ಯೋಗ್ಯವಲ್ಲ ಎಂಬುದು ತಿಳಿದಿರುತ್ತದೆ. ಹೀಗಿರುವಾಗ ಈ ಇನ್‌ಫ್ಲುಯೆನ್ಸರ್‌ ಕೊಳಕು ನೀರು ಯಾವುದು ಒಳ್ಳೆ ನೀರು ಯಾವುದು ಎಂಬುದನ್ನು ತಿಳಿಯದಷ್ಟು ದಡ್ಡಿಯ ಎಂಬುದು ಎಲ್ಲರ ಪ್ರಶ್ನೆ.

View post on Instagram