Travel Tips : ನೈಸರ್ಗಿಕ ಸೌಂದರ್ಯದ ನೆಲೆಬೀಡು ಸಿಕ್ಕಿಂ

ದೇಶ ಸುತ್ತು, ಕೋಶ ಓದು ಎನ್ನುವ ಮಾತಿದೆ. ಅನೇಕರು ನಮ್ಮ ದೇಶದ ಪ್ರವಾಸಿ ತಾಣಗಳನ್ನೇ ನೋಡಿರೋದಿಲ್ಲ. ಭಾರತದಲ್ಲಿ ಪ್ರವಾಸಿ ತಾಣಗಳು ಸಾಕಷ್ಟಿದೆ. ಅದ್ರಲ್ಲಿ ಸಿಕ್ಕಿಂ ಕೂಡ ಒಂದು. ಅಲ್ಲಿನ ಸೌಂದರ್ಯ ಪ್ರತಿಯೊಬ್ಬರನ್ನೂ ಸೆಳೆಯುತ್ತದೆ.
 

Sikkim Best Places To Visit beautiful places for travel

ರಜೆ (Vacation) ಪ್ರವಾಸ ಎಂದಾಗ ಬಹುತೇಕರು ಆಯ್ಕೆ ಮಾಡಿಕೊಳ್ಳೋದು ವಿದೇಶವನ್ನು. ಆದ್ರೆ ನಮ್ಮ ಭಾರತದಲ್ಲಿ ಸುಂದರ ಸ್ಥಳಗಳಿವೆ. ಬೇಸಿಗೆ, ಮಳೆಗಾಲ, ಚಳಿಗಾಲ ಹೀಗೆ ಪ್ರತಿಯೊಂದು ಕಾಲದಲ್ಲೂ ನೀವು ಬೇರೆ ಬೇರೆ ಪ್ರದೇಶಗಳ ಸೌಂದರ್ಯವನ್ನು ಸವಿಯಬಹುದು. ಭಾರತ ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದೆ. ಪರ್ವತ ಪ್ರದೇಶಗಳಲ್ಲಿ ಸುತ್ತಾಡಬೇಕು ಎನ್ನುವವರು ಸಿಕ್ಕಿಂ ಆಯ್ಕೆ ಮಾಡಿಕೊಳ್ಳಬಹುದು. ಸಿಕ್ಕಿಂ (Sikkim) ನಲ್ಲಿ ಕಣ್ಮನ ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿ ಸ್ಥಳ (Tourist place) ಗಳಿವೆ. 

ಸಿಕ್ಕಿಂ, ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಒಂದು ಸುಂದರವಾದ ಸ್ಥಳವಾಗಿದೆ. ಅಲ್ಲಿ ನಾವು ಭಾರತದ ನೆರೆಯ ರಾಷ್ಟ್ರಗಳ ಮಿಶ್ರ ಸಂಸ್ಕೃತಿಯನ್ನು  ನೋಡಬಹುದು. ಸಿಕ್ಕಿಂ, ನೇಪಾಳ, ಭೂತಾನ್ ಮತ್ತು ಚೀನಾದಂತಹ ದೇಶಗಳ ಗಡಿಯಲ್ಲಿರುವ ಭಾರತೀಯ ಪ್ರದೇಶವಾಗಿದೆ.  ಈ ಸ್ಥಳದ ಸೌಂದರ್ಯ ಮತ್ತು ಬಿಳಿ ಹಿಮದಿಂದ ಆವೃತವಾದ ಬೆಟ್ಟಗಳು ಜನರನ್ನು ಆಕರ್ಷಿಸುತ್ತವೆ. ವಿಶೇಷವೆಂದರೆ ಯಾವ ಋತುವಿನಲ್ಲಿ ಬೇಕಾದ್ರೂ ನೀವು ಸಿಕ್ಕಿಂಗೆ ಬರಬಹುದು.  ಇಲ್ಲಿನ ಹವಾಮಾನವು ವರ್ಷವಿಡೀ ಆಹ್ಲಾದಕರವಾಗಿರುತ್ತದೆ. ಇಂದು ಸಿಕ್ಕಿಂ ಬಗ್ಗೆ ಒಂದಿಷ್ಟು ಮಾಹಿತಿ ನೀಡ್ತೇವೆ. ಪ್ರವಾಸದ ಪ್ಲಾನ್ ಮಾಡಿದ್ದರೆ ಕಡಿಮೆ ಖರ್ಚಿನಲ್ಲಿ ಸಿಕ್ಕಿಂ ಸುತ್ತಾಡಿ ಬನ್ನಿ. 

ಕಾಲಿಲ್ಲದಿದ್ದರೂ ಕಿಲಿಮಂಜಾರೋ ಏರಿದ ಬಾಂಬ್‌ ಬ್ಲಾಸ್ಟ್ ಗಾಯಾಳು

ಸಿಕ್ಕಿಂನಲ್ಲಿ ನೋಡಬಹುದಾದ ಸ್ಥಳಗಳು : ಸಿಕ್ಕಿಂನಲ್ಲಿ ಭೇಟಿ ನೀಡಲು ಅನೇಕ ಪ್ರವಾಸಿ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಬಹುದು.  ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್‌ನಿಂದ ನಿಮ್ಮ ಪ್ರಯಾಣವನ್ನು ನೀವು ಪ್ರಾರಂಭಿಸಬಹುದು. ಗ್ಯಾಂಗ್ಟಾಕ್ ವಿಶ್ವದ ಅತ್ಯಂತ ಎತ್ತರದ ಶಿಖರಗಳಲ್ಲಿ ಒಂದಾಗಿದೆ. ಕಾಂಚನಜುಂಗಾದ ಸುಂದರ ನೋಟಗಳನ್ನು ಇಲ್ಲಿಂದ ನೋಡಬಹುದು. ಗ್ಯಾಂಗ್ಟಾಕ್ನಲ್ಲಿ ನೀವು ನಾಥುಲಾ ಪಾಸ್, ಎಂಜಿ ರಸ್ತೆ, ತಾಶಿ ವ್ಯೂ ಪಾಯಿಂಟ್, ಹನುಮಾನ್ ಟೋಕ್, ರೇಶಿ ಹಾಟ್ ಸ್ಪ್ರಿಂಗ್ಸ್, ಹಿಮಾಲಯನ್ ಝೂಲಾಜಿಕಲ್ ಪಾರ್ಕ್, ಬಾಬಾ ಹರ್ಭಜನ್ ಸಿಂಗ್ ದೇವಸ್ಥಾನ, ಗಣೇಶ್ ಟೋಕ್ ಗೆ ಭೇಟಿ ನೀಡಬಹುದು. 

ಸಿಕ್ಕಿಂಗೆ ಭೇಟಿ ನೀಡಲು ಉತ್ತಮ ಸಮಯ : ಅನೇಕ ಐತಿಹಾಸಿಕ ಸ್ಮಾರಕಗಳು, ಪುರಾತನ ಮಠಗಳು, ಜಲಪಾತಗಳು ಮತ್ತು ಸರೋವರಗಳು ಇಲ್ಲಿವೆ. ಬೇಸಿಗೆ ಇಲ್ಲಿಗೆ ಭೇಟಿ ನೀಡಲು ಉತ್ತಮವಾದ ಸಮಯ. ಪೆಲ್ಲಿಂಗ್ ಎಂಬ ಸುಂದರವಾದ ನಗರವು ಸಿಕ್ಕಿಂನ ಪಶ್ಚಿಮ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಇದು ಗ್ಯಾಂಗ್ಟಾಕ್ ನಂತರ ಎರಡನೇ ಅತಿ ದೊಡ್ಡ ಪ್ರವಾಸಿ ಸ್ಥಳವಾಗಿದೆ. ಇಲ್ಲಿ ನೀವು ಟ್ರೆಕ್ಕಿಂಗ್, ಮೌಂಟೇನ್ ಬೈಕಿಂಗ್, ರಾಕ್ ಕ್ಲೈಂಬಿಂಗ್ ಮುಂತಾದ ಚಟುವಟಿಕೆಗಳನ್ನು ಆನಂದಿಸಬಹುದು.

ಸೂರ್ಯಾಸ್ತದಲ್ಲಿ ಕಂಡ ಅಪರೂಪದ ದೃಶ್ಯ ಕಾವ್ಯ... ಸೆರೆ ಹಿಡಿದ ಹವ್ಯಾಸಿ ಛಾಯಾಗ್ರಾಹಕ 

ಸಿಕ್ಕಿಂಗೆ ಪ್ರಯಾಣ ಹೇಗೆ ? :  ಸಿಕ್ಕಿಂಗೆ ಪ್ರಯಾಣ ಬೆಳೆಸಲು ಅನೇಕ ಮಾರ್ಗಗಳಿವೆ. ವಿಮಾನ, ರೈಲು ಮತ್ತು ಬಸ್ ಮೂಲಕ ಸಿಕ್ಕಿಂ ತಲುಪಬಹುದು. ವಿಮಾನದಲ್ಲಿ ಸಿಕ್ಕಿಂಗೆ ಹೋದರೆ, ಗ್ಯಾಂಗ್ಟಾಕ್ ವಿಮಾನ ನಿಲ್ದಾಣ ಹತ್ತಿರದಲ್ಲಿದೆ. ಬಾಗ್ಡೋಗ್ರಾ ವಿಮಾನ ನಿಲ್ದಾಣದಿಂದ ನೀವು ದೇಶದ ವಿವಿಧ ಸ್ಥಳಗಳಿಗೆ ವಿಮಾನ ಸೇವೆಯನ್ನು ಪಡೆಯಬಹುದು. ನೀವು ರಸ್ತೆ ಮೂಲಕ ಸಿಕ್ಕಿಂಗೆ ಹೋಗಲು ಬಯಸಿದರೆ ಸಿಲಿಗುರಿಯಿಂದ ನಿಮಗೆ ಬಸ್ ಸೌಲಭ್ಯ ಸಿಗುತ್ತದೆ. ದೆಹಲಿ, ಕೋಲ್ಕತ್ತಾದ ಬಸ್ಸುಗಳೂ ಇಲ್ಲಿಗೆ ತಲುಪುತ್ತವೆ. ರೈಲು ಮಾರ್ಗದ ಮೂಲಕ ಸಿಕ್ಕಿಂ ತಲುಪಬಹುದು. ಸಿಕ್ಕಿಂನ ಜನಪ್ರಿಯ ರೈಲು ನಿಲ್ದಾಣವೆಂದರೆ ನ್ಯೂ ಜಲ್ಪೈಗುರಿ.  

ಎಷ್ಟು ದಿನಗಳ ಪ್ರವಾಸ ? : ಸಿಕ್ಕಿಂ ಸಾಕಷ್ಟು ದೊಡ್ಡದಾಗಿದೆ. ಭೇಟಿ ನೀಡಲು ಪ್ರವಾಸಿ ಸ್ಥಳ ಸಾಕಷ್ಟಿದೆ. ಹಾಗಾಗಿ ನೀವು ಐದರಿಂದ ಎಂಟು ದಿನಗಳ ಪ್ರವಾಸವನ್ನು ಪ್ಲಾನ್ ಮಾಡ್ಬಹುದು.  ಸಿಕ್ಕಿಂಗೆ ಭೇಟಿ ನೀಡುವ ವೆಚ್ಚವು ಡಾರ್ಜಿಲಿಂಗ್ ಪ್ರವಾಸದ ಪ್ಯಾಕೇಜ್‌ಗೆ ಸಮಾನವಾಗಿರುತ್ತದೆ. ಸಿಕ್ಕಿಂ ಪ್ರವಾಸದ ಪ್ಯಾಕೇಜ್‌ ನಲ್ಲಿ ಪ್ರತಿ ವ್ಯಕ್ತಿ 15 ಸಾವಿರಕ್ಕೂ ಹೆಚ್ಚು ವೆಚ್ಚ ಮಾಡ್ಬೇಕು.  ಇದರಲ್ಲಿ ಸಿಕ್ಕಿಂಗೆ ವಿಮಾನ ಟಿಕೆಟ್ 7 ರಿಂದ 10 ಸಾವಿರದವರೆಗೆ ಬರಲಿದೆ. ವಸತಿ ಮತ್ತು ಆಹಾರಕ್ಕಾಗಿ ಸುಮಾರು 5 ರಿಂದ 10 ಸಾವಿರ ಖರ್ಚು ಬರುತ್ತದೆ. 

Sikkim Best Places To Visit beautiful places for travel


 

Latest Videos
Follow Us:
Download App:
  • android
  • ios