ಸೂರ್ಯಾಸ್ತದಲ್ಲಿ ಕಂಡ ಅಪರೂಪದ ದೃಶ್ಯ ಕಾವ್ಯ... ಸೆರೆ ಹಿಡಿದ ಹವ್ಯಾಸಿ ಛಾಯಾಗ್ರಾಹಕ
ಹವ್ಯಾಸಿ ಫೋಟೋಗ್ರಾಫರ್ ಒಬ್ಬರು ಚಿತ್ರೀಕರಿಸಿದ ಸೂರ್ಯಸ್ತದ ಫೋಟೋವೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸೂರ್ಯಾಸ್ತದ ಸುಂದರ ದೃಶ್ಯಕಾವ್ಯ ಈಗ ಎಲ್ಲರ ಕಣ್ಮನ ಸೆಳೆಯುತ್ತಿದೆ. ಈ ಫೋಟೋದಲ್ಲಿ ರೆಕ್ಕೆಗಳಿರುವ ದೇವತೆಯಂತೆ ಕಾಣುವ ಆಕೃತಿಯೊಂದು ಸೆರೆಯಾಗಿದೆ.
ಹವ್ಯಾಸಿ ಫೋಟೋಗ್ರಾಫರ್ ಒಬ್ಬರು ಚಿತ್ರೀಕರಿಸಿದ ಸೂರ್ಯಸ್ತದ ಫೋಟೋವೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸೂರ್ಯಾಸ್ತದ ಸುಂದರ ದೃಶ್ಯಕಾವ್ಯ ಈಗ ಎಲ್ಲರ ಕಣ್ಮನ ಸೆಳೆಯುತ್ತಿದೆ. ಈ ಫೋಟೋದಲ್ಲಿ ರೆಕ್ಕೆಗಳಿರುವ ದೇವತೆಯಂತೆ ಕಾಣುವ ಆಕೃತಿಯೊಂದು ಸೆರೆಯಾಗಿದೆ.
56 ವರ್ಷದ ಸ್ಟುವರ್ಟ್ ಮುರ್ರೆ (Stuart Murray) ಅವರು ಸ್ಕಾಟ್‌ಲ್ಯಾಂಡ್‌ನ (Scotland) ಅಬರ್‌ಡೀನ್‌ಶೈರ್‌ನಲ್ಲಿರುವ (Aberdeenshire) ಕರಾವಳಿ ಪಟ್ಟಣವಾದ ಪೋರ್ಟ್‌ಸೊಯ್‌ನಲ್ಲಿರುವ (Portsoy) ತಮ್ಮ ಮನೆಯ ಸಮೀಪ ಸೂರ್ಯಾಸ್ತವನ್ನು ವೀಕ್ಷಿಸುತ್ತಿರುವಾಗ ಈ ದೃಶ್ಯ ಕಂಡಿದ್ದು, ತಮ್ಮ ಸ್ಮಾರ್ಟ್‌ಫೋನ್‌ನಿಂದ (smartphone) ಪರಿಪೂರ್ಣ ಸಮಯದ ಚಿತ್ರವನ್ನು ಕ್ಲಿಕ್ ಮಾಡಿದ್ದಾರೆ. ರಾತ್ರಿ 9:45 ರ ಸುಮಾರಿಗೆ ಸೂರ್ಯನ ಕಿರಣ ನೀರಿಗೆ ಹರಿದು ಈ ಅಪರೂಪದ ಕಲಾತ್ಮಕ ದೃಶ್ಯ ಕಾವ್ಯ ನಿರ್ಮಾಣವಾಗಿದೆ.
ಈ ಚಿತ್ರವು ದೇವತೆಯ ನೆರಳಿನಂತೆ ಕಾಣುತ್ತಿದ್ದು, ನೀರಿನಲ್ಲಿ ಹರಡಿಕೊಂಡಿದೆ. ನಾನು ವರ್ಷಗಳಿಂದ ಸೂರ್ಯಾಸ್ತದ ಚಿತ್ರವನ್ನು ಸೆರೆ ಹಿಡಿಯಲು ಬಯಸಿದೆ. ಆದರೆ ಕೆಲಸ ಅಥವಾ ಹವಾಮಾನ ಪರಿಸ್ಥಿತಿಗಳು ಸಾಮಾನ್ಯವಾಗಿ ಫೋಟೋ ತೆಗೆಯಲು ಅಡ್ಡಿಯಾಗಿದ್ದವು ಎಂದು ಸ್ಟುವರ್ಟ್ ಉಲ್ಲೇಖಿಸಿದ್ದಾರೆ. ನಾನು ಈ ಫೋಟೋವನ್ನು ತೆಗೆದ ಸ್ಥಳವು ಕರಾವಳಿ ಪಟ್ಟಣವಾದ ಪೋರ್ಟ್ಸೊಯ್‌ನಲ್ಲಿರುವ ನನ್ನ ಮನೆಯಿಂದ ಕೇವಲ ಹತ್ತು ನಿಮಿಷಗಳ ನಡಿಗೆಯ ದೂರದಲ್ಲಿದೆ. ಅಲ್ಲಿ ನಾನು ನನ್ನ ಇಡೀ ಜೀವನವನ್ನು ಕಳೆದಿದ್ದೇನೆ.
Photography Tips : ಪ್ರವಾಸದಲ್ಲಿ ಫೋಟೋ ಚೆನ್ನಾಗಿ ಬರಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ
ಇತ್ತ ದೇವತೆಯಂತೆ ಕಾಣುವ ಸ್ಟುವರ್ಟ್ ತೆಗೆದ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ ಅವರು ತಾನು ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿಯಲ್ಲ ಎಂದು ಹೇಳಿದರು. ಈ ಫೋಟೋವನ್ನು ಅವರು ನೋಡಿದರೆ ಹೆಚ್ಚಿನ ಜನರ ಮನಸ್ಸಿಗೆ ಏನಾಗುತ್ತದೆ ಎಂದು ನನಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಈ ಫೋಟೋ ಇನ್ಯಾರಿಗೋ ಖುಷಿ ನೀಡಿದರೆ ನನಗೆ ಸಂತೋಷ. ನಾನು ನಿಜವಾಗಿಯೂ ಸೂರ್ಯಾಸ್ತದ ಕ್ಲಾಸಿಕ್ ಚಿತ್ರವನ್ನು ಹುಡುಕುತ್ತಿದ್ದೆ ಎಂದು ಅವರು ಹೇಳಿದರು.
ಸೂರ್ಯಾಸ್ತ ಹಾಗೂ ಸೂರ್ಯೋದಯದ ಅನೇಕ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಸೂರ್ಯಾಸ್ತ ಅಥವಾ ಸೂರ್ಯೋದಯಕ್ಕೆ ಜನಪ್ರಿಯವಾಗಿರುವ ಸ್ಥಳಗಳಲ್ಲಿ ಅನೇಕ ಹವ್ಯಾಸಿ ಫೋಟೋಗ್ರಾಫರ್‌ಗಳು ಈಗಾಗಲೇ ಸೆರೆ ಹಿಡಿದ ಸುಂದರ ದೃಶ್ಯ ಕಾವ್ಯದ ಫೋಟೋಗಳನ್ನು ನಾವು ನೋಡಿದ್ದೇವೆ. ಸಮುದ್ರ ತೀರಗಳಲ್ಲಿ ಸೂರ್ಯಾಸ್ತದ ಸುಂದರ ಕ್ಷಣಗಳು ನೋಡಲು ತುಂಬಾ ಸೊಗಸಾಗಿರುವುದಲ್ಲದೇ ಕಣ್ಣು ನಂಬದಂತಹ ದೃಶ್ಯಕಾವ್ಯವನ್ನು ಸೆರೆ ಹಿಡಿದಿವೆ.
Bengaluru: ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದ 134ಕ್ಕೂ ಹೆಚ್ಚು ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ!