ನ್ಯೂಯಾರ್ಕ್ ಗಾರ್ಡನ್‌ನಲ್ಲಿ ಅರಳುತ್ತೆ ಅಪರೂಪ ಶಿಶ್ನದ ಹೂವು !
ಗುಪ್ತಾಂಗಳ ಬಗ್ಗೆ ಮಾತನಾಡೋದು ಅಂದ್ರೇನೆ ತಪ್ಪೆಂದು (Wrong) ಪರಿಗಣಿಸಲಾಗುತ್ತದೆ. ಆದ್ರೆ ಇಲ್ಲೊಂದೆಡೆ ಉದ್ಯಾನದಲ್ಲಿ ಅಪರೂಪದ ಶಿಶ್ನ ಹೂವುಗಳು (Penis Flower) ಅರಳಿ ನಿಂತಿವೆ. ಅರೆ ಇದೇನು ವಿಚಿತ್ರ ಅಂತೀರಾ ? ಇಲ್ಲಿದೆ ಹೆಚ್ಚಿನ ಮಾಹಿತಿ.
ಗಂಡು-ಹೆಣ್ಣಿನ ಗುಪ್ತಾಂಗದ ಬಗ್ಗೆ ಮುಕ್ತವಾಗಿ ಮಾತನಾಡಲು ಎಲ್ಲರೂ ಹಿಂಜರಿಯುತ್ತಾರೆ. ಮಾತನಾಡಬೇಕಿದ್ದರೂ ಪಿಸುಮಾತಿನಲ್ಲಿ ಯಾರಿಗೂ ಕೇಳದಂತೆ ಮಾತನಾಡಿಕೊಳ್ಳುತ್ತಾರೆ. ಆದರೆ ನ್ಯೂಯಾರ್ಕ್‌ನಲ್ಲಿ ಗುಪ್ತ್ ಗುಪ್ತ್ ಏನಿಲ್ಲ. ಇಲ್ಲಿ ಅಪರೂಪದ ಶಿಶ್ನ (Penis) ಹೂಗಳು ಗಾರ್ಡನ್ (Garden) ನಲ್ಲೇ ಬೆಳೆಯುತ್ತವೆ. ಹೌದು, ಅಪರೂಪದ ಲಿಂಗದ ಹೂವುಗಳ ಚಿತ್ರಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಹರಿದಾಡುತ್ತಿವೆ. ಕಳೆದ ವಾರ ಕ್ಯಾಲಿಫೋರ್ನಿಯಾ ಉದ್ಯಾನದಲ್ಲಿ ಅಪರೂಪದ ಶಿಶ್ನ ಹೂವುಗಳು ಅರಳಿದ್ದವು. ಉದ್ಯಾನದಲ್ಲಿ ನೋಡುಗರು 12 ಅಡಿ ಎತ್ತರದ ಈ ದೈತ್ಯ ಗಿಡವನ್ನು ನೋಡಿ ಬೆಚ್ಚಿಬಿದ್ದರು. ಈ ಸಸ್ಯವು ಸಾಂದರ್ಭಿಕವಾಗಿ ಮಾತ್ರ ಹೂಬಿಡುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ವರ್ಷಕ್ಕೊಮ್ಮೆ ಅರಳುವ ಅಪರೂಪದ ಹೂವು
ನ್ಯೂಯಾರ್ಕ್ ಬೊಟಾನಿಕಲ್ ಗಾರ್ಡನ್ಸ್‌ನ ಶಿಶ್ನ ಹೂವು 2019, 2018 ಮತ್ತು 2016 ರಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ಅರಳಿತು. ಅದೇ ಸಮಯದಲ್ಲಿ, ಈ ಹೂವು ಅರಳುತ್ತಿರುವ ದೃಶ್ಯವು ಜಾಗತಿಕವಾಗಿ ಉದ್ಯಾನಕ್ಕೆ ಭೇಟಿ ನೀಡುವವರಲ್ಲಿ ಹೆಚ್ಚು ಬೇಡಿಕೆಯಿರುವ ಆಕರ್ಷಣೆಯಾಗಿದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವರು ಈ ಹೂವಿಗೆ ಅಮಾರ್ಫೋಫಾಲಸ್ ಎಂಬ ಹೆಸರನ್ನು ನೀಡಿದ್ದಾರೆ. ಹೆಸರಿನ ಅರ್ಥ 'ನಿರಾಕಾರ ಲೈಂಗಿಕತೆ' ಎಂಬುದಾಗಿದೆ. ಈ ಸಸ್ಯದಲ್ಲಿ ಶಿಶ್ನದ ಆಕಾರವನ್ನು ನೋಡಬಹುದು. ಇದು ವಾಸ್ತವವಾಗಿ ಉದ್ದವಾದ ಕಾಂಡವನ್ನು ಹೊಂದಿದೆ. ಮಧ್ಯದಲ್ಲಿ ದಪ್ಪ ಬಿಳಿ ಸ್ಪ್ಯಾಡಿಕ್ಸ್ ಇದೆ ಎಂದು ಗ್ರೀನ್‌ಹೌಸ್ ಮ್ಯಾನೇಜರ್ ರೋಜಿಯರ್ ವ್ಯಾನ್ ವುಗ್ಟ್ ಹೇಳಿದರು.
Penis Bags: ಶಿಶ್ನ ಆಕಾರದ ಚೀಲಗಳಲ್ಲಿ ಪಾನೀಯ ಮಾರಾಟ, ಛೀ ಬೇಡ್ಬೇ ಬೇಡ ಅಂದ್ರು ಗ್ರಾಹಕರು !
ಶಿಶ್ನದ ಆಕಾರವನ್ನು ಹೊಂದಿರುವ ಹೂವು
ಈ ಹಿಂದೆ ಪ್ರವಾಸಿಗರು ಅಳಿವಿನಂಚಿನಲ್ಲಿರುವ ಸಸ್ಯವನ್ನು ವ್ಯಾಪಕವಾಗಿ ಕೀಳುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಘಟನೆ ನಡೆದಿರುವುದು ಕಾಂಬೋಡಿಯಾದಲ್ಲಿ. ಇದು ‘ನೆಪೆಂಟಿಸ್ ಹೋಲ್ಡೆನಿ’ ಎಂಬ ಸಸ್ಯ. ಈ ಸಸ್ಯವು ನೆಟ್ಟಗೆ ಶಿಶ್ನದ ಆಕಾರವನ್ನು ಹೊಂದಿದೆ. ಇದೇ ಕಾರಣಕ್ಕೆ ಜನ ಆಕರ್ಷಿತರಾಗಿದ್ದಾರೆ. ಆದರೆ ಇದು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಸಸ್ಯವಾದ್ದರಿಂದ, ಕಾಂಬೋಡಿಯಾದ ಸರ್ಕಾರವು ಅದರ ಬಗ್ಗೆ ತುಂಬಾ ಕಾಳಜಿ ವಹಿಸುತ್ತದೆ. 'ಪೆನಿಸ್ ಪ್ಲಾಂಟ್' ಎಂದು ಕರೆಯಲ್ಪಡುವ ಸಸ್ಯವನ್ನು ನೋಡಲು ಅನೇಕ ಪ್ರವಾಸಿಗರು ಬರುತ್ತಾರೆ.
ಈ ಮಧ್ಯೆ, ಕೇವಲ ಮಹಿಳೆಯರನ್ನು ಒಳಗೊಂಡ ಪ್ರವಾಸಿಗರ ತಂಡವು ಸಸ್ಯವನ್ನು ನೋಡಲು ಆಗಮಿಸಿತು ಮತ್ತು ಅದನ್ನು ವ್ಯಾಪಕವಾಗಿ ಕಿತ್ತು, ವೀಡಿಯೊ ಮತ್ತು ಫೋಟೋಗಳನ್ನು ತೆಗೆದುಕೊಂಡಿತು. ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಕಾಂಬೋಡಿಯಾ ಸರ್ಕಾರವು ಎಚ್ಚರಿಕೆಯನ್ನು ನೀಡಿದೆ.
Men Health: ನಿಮ್ಮ ಶಿಶ್ನದಿಂದ ವಾಸನೆ ಬರ್ತಿದ್ರೆ ಎಚ್ಚರ
ಜಪಾನ್‌ನಲ್ಲಿ ನಡೆಯುತ್ತೆ Penis Festival !
ಹೀಗೆಯೇ ಜಪಾನಿನ (Japan) ಕವಾಸಾಕಿ (Kavasaki) ನಗರದ ಪ್ರಜೆಗಳು ವಿಚಿತ್ರ ಉತ್ಸವವನ್ನು ನಡೆಸುತ್ತಾರೆ. ಅದೇ 'ಶಿಶ್ನ ಉತ್ಸವ'. ಇಂಗ್ಲಿಷ್‌ನಲ್ಲಿ ಇದು 'ಪೆನಿಸ್ ಫೆಸ್ಟಿವಲ್.' (Penis Festival) ಇದನ್ನು ಜಪಾನಿ ಭಾಷೆಯಲ್ಲಿ 'ಕನಮಾರಾ ಮತ್ಸುರಿ' (Kanamara Matsuri) ಎಂದು ಕರೆಯುತ್ತಾರೆ. 'ಕನಮಾರಾ ಮತ್ಸುರಿ' ಎಂದರೆ 'ಉಕ್ಕಿನ ಶಿಶ್ನದ ಉತ್ಸವ' ಎಂದೂ ಹೇಳಬಹುದು. ಪ್ರತಿ ವರ್ಷ ಏಪ್ರಿಲ್ ಮೊದಲ ಭಾನುವಾರದಂದು ಕವಾಸಕಿಯ ಕನಯಾಮಾ (Kanayama) ದೇಗುಲದಲ್ಲಿ ಇದು ನಡೆಯುತ್ತದೆ. ಜಪಾನಿನಲ್ಲಿ ಶಿಂಟೋ (Shinto) ಪಂಥದವರು ಅಧಿಕ. ಈ ಶಿಂಟೋಗಳು ಆರಾಧಿಸುವ 'ಕನಯಾಮಾ-ಹಿಕೊ' ಮತ್ತು 'ಕನಯಾಮಾ-ಹಿಮ್' ದೇವತೆಗಳ ಸುತ್ತ ಈ ಹಬ್ಬ ಕೇಂದ್ರೀಕೃತವಾಗಿದೆ. ಈ ದೇವತೆಗಳು ಮನುಷ್ಯನ ಲೈಂಗಿಕ ಆರೋಗ್ಯ (Sexual Health) ಮತ್ತು ಲೋಹಶಾಸ್ತ್ರದ ಜೊತೆಗೆ ಸಂಬಂಧ ಹೊಂದಿದವರಂತೆ.
ಈ ಹಬ್ಬದಲ್ಲಿ ಸಂಭ್ರಮಿಸುವವರು ಹೆಚ್ಚಾಗಿ ಫಲವತ್ತತೆ ಮತ್ತು ಆರೋಗ್ಯಕರ ಮಕ್ಕಳಿಗಾಗಿ ಪ್ರಾರ್ಥಿಸುವ ವಿವಾಹಿತ ದಂಪತಿಗಳು, ಲೈಂಗಿಕ ಕಾರ್ಯಕರ್ತರು, ಲೈಂಗಿಕ ಮುಕ್ತತೆಯನ್ನು ಪ್ರತಿಪಾದಿಸುವ LGBTQ ಗುಂಪಿನ ಜನರು. ಇತ್ತೀಚೆಗೆ ಈ ಹಬ್ಬದ ವೈಶಿಷ್ಟ್ಯವನ್ನು ನೋಡಲು ಬರುವವರಿಂದಾಗಿ ಇದು ಭಾರಿ ಜನಸಂದಣಿಯನ್ನು ಕಾಣುತ್ತದೆ.