Penis Bags: ಶಿಶ್ನ ಆಕಾರದ ಚೀಲಗಳಲ್ಲಿ ಪಾನೀಯ ಮಾರಾಟ, ಛೀ ಬೇಡ್ಬೇ ಬೇಡ ಅಂದ್ರು ಗ್ರಾಹಕರು !

ಗುಪ್ತಾಂಗಳ ಬಗ್ಗೆ ಮಾತನಾಡೋದು ಅಂದ್ರೇನೆ ತಪ್ಪೆಂದು (Wrong) ಪರಿಗಣಿಸಲಾಗುತ್ತದೆ. ಹೀಗಿರುವಾಗ ಇಲ್ಲೊಂದೆಡೆ ಖುಲ್ಲಾಂಖುಲ್ಲ ಅಗಿ ಶಿಶ್ನದ (Penis) ಆಕಾರದ ಚೀಲಗಳಲ್ಲಿ ಪಾನೀಯಗಳನ್ನು (Drinks) ಮಾರಾಟ ಮಾಡಲಾಗ್ತಿತ್ತು. ಕೆಫೆ ಜನ್ರನ್ನು ಸೇರಿಸೋಕೆ ಈ ರೀತಿಯಾ ಐಡಿಯಾ ಮಾಡಿದ್ರೆ ಗ್ರಾಹಕರು (Customers) ಮಾತ್ರ ಛೀ ಇಂಥಾ ಚೀಲದಲ್ಲಿ ಪಾನೀಯಾನ ಬೇಡ್ಬೇ ಬೇಡ ಅಂತಿದ್ದಾರೆ.

Thai Cafe Forced To Stop Selling Drinks In Penis Bags Due to Sensitive Issues Vin

ಇತ್ತೀಚಿನ ಹಲವು ವರ್ಷಗಳಲ್ಲಿ ಆಹಾರವು ಅತಿ ದೊಡ್ಡ ಉದ್ಯಮವಾಗಿ ಬೆಳೆದಿದೆ. ಬೆಲೆ ಅದೆಷ್ಟು ಹೆಚ್ಚಾದರೂ ಜನರು ವೆರೈಟಿ ವೆರೈಟಿ (Variety) ಆಹಾರ (Food) ತಿನ್ನೋದನ್ನು ಮಾತ್ರ ಬಿಡುವುದಿಲ್ಲ. ಹೀಗಾಗಿಯೇ ಸ್ಟ್ರೀಟ್‌ ಫುಡ್‌ಗಳಿಂದ ಹಿಡಿದು ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಹೊಟೇಲ್, ರೆಸ್ಟೋರೆಂಟ್‌ಗಳು ಸಹ ಹೆಚ್ಚು ಗ್ರಾಹಕರನ್ನು (Customers) ತಮ್ಮತ್ತ ಸೆಳೆಯಲು ನಾನಾ ಟೆಕ್ನಿಕ್ ಯೂಸ್ ಮಾಡುತ್ತವೆ. ಅಟೋಮ್ಯಾಟಿಕ್ ಟ್ರೇಯಲ್ಲಿ ಸರ್ವ್ ಆಗುವ ಫುಡ್, ರೊಬೋಟ್ ನ್ನು ಬಳಸಿ ಫುಡ್ ಸರ್ವ್ ಹೀಗೆ ಹಲವು ಟೆಕ್ನಿಕ್‌ಗಳನ್ನು ಅನುಸರಿಸುತ್ತಾರೆ. ಇದನ್ನೇ ಮಾರ್ಕೆಟಿಂಗ್ ಟೆಕ್ನಿಕ್ ಎನ್ನುತ್ತಾರೆ. ಥೈಲ್ಯಾಂಡ್‌ನ ಸಾಂಗ್‌ಖ್ಲಾಲ್ಲಿರುವ ಕೆಫೆ (Cafe)ಯೊಂದು ಹೀಗೆ ಜನರನ್ನು ಸೆಳೆಯೋಕೆ ವಿಚಿತ್ರ ಐಡಿಯಾ ಮಾಡಿದೆ. ಕೆಫೆಯ ಈ ಐಡಿಯಾದಿಂದ ಜನರು ಮಾತ್ರ ಇಲ್ಲಿ ಆಹಾರ ತಿನ್ನೋದಕ್ಕೆ ಹಿಂಜರಿಯುತ್ತಿದ್ದಾರೆ.

ರೆಸ್ಟೋರೆಂಟ್ ಗಳ ಹೊಸ ಐಡಿಯಾದಿಂದ ಗ್ರಾಹಕರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಬರ್ಬೇಕು. ಅದು ಬಿಟ್ಟು ಜನರೇ ಬರ್ತಿಲ್ವಾ ? ಅಷ್ಟಕ್ಕೂ ಆ ಕೆಫೆಯವ್ರು ಮಾಡಿದ್ದಾದ್ರೂ ಏನು ಅಂತೀರಾ ? ಇಲ್ಲಿದೆ ನೋಡಿ ಬೆಚ್ಚಿ ಬೀಳಿಸೋ ಮಾಹಿತಿ.

ಜಪಾನ್‌ನಲ್ಲಿ Penis Festival ! ಈ ವಿಚಿತ್ರ ಆಚರಣೆ ಬಗ್ಗೆ ನಿಮಗ್ಗೊತ್ತಾ?

ಥೈಲ್ಯಾಂಡ್‌ನ (Thailand) ಸಾಂಗ್‌ಖ್ಲಾ ಪ್ರಾಂತ್ಯದ ಕೆಫೆಯು ಒಂದು ತುದಿಯಲ್ಲಿ ಶಿಶ್ನದ (Penis) ಆಕಾರದ ಪ್ಲಾಸ್ಟಿಕ್ ಚೀಲಗಳಲ್ಲಿ ಪಾನೀಯಗಳನ್ನು ನೀಡುತ್ತಿದೆ. ಹೌದು ನೀವು ಕೇಳಿರುವುದು ನಿಜ. ಅಚ್ಚರಿಯೆನಿಸಿದರೂ ಇದು ನಿಜ. ಕೆಫೆಯು ಫೇಸ್‌ಬುಕ್‌ನಲ್ಲಿ ಈ ಕುರಿತಾದ ಫೋಟೋ (Photo)ಗಳನ್ನು ಅಪ್‌ಲೋಡ್ ಮಾಡಿದೆ. ಇಲ್ಲಿನ ಚಾದೀನ್ ಕೆಫೆ ಶಿಶ್ನದ ಚೀಲಗಳಲ್ಲಿ ಆಹಾರ ವಿತರಿಸಿ ಜನಪ್ರಿಯವಾಗಲು ಯತ್ನಿಸಿದೆ. ಫೋಟೋದಲ್ಲಿ ಥಾಯ್ ಹಾಲು ಚಹಾ, ಹಸಿರು ಚಹಾ ಮತ್ತು ಸೋಡಾ ಚಿತ್ರಗಳ ಮೂಲಕ ವ್ಯಕ್ತಿಯೊಬ್ಬರು ಶಿಶ್ನದ ಆಕಾರದ ಚೀಲಗಳನ್ನು ಹಿಡಿದಿದ್ದಾರೆ. ಆದರೆ ಕೆಫೆ ಫೇಸ್‌ಬುಕ್‌ಗೆ ಶಿಶ್ನದ ಆಕಾರದ ಚೀಲಗಳ ಪೋಟೋವನ್ನು ಅಪ್‌ಲೋಡ್ ಮಾಡಿದ ನಂತರ ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ರಿಫ್ರೆಶ್ ಪಾನೀಯವನ್ನು ಜಾಹೀರಾತು ಮಾಡುವುದು ಇನ್ನೂ ಪ್ರಾಥಮಿಕ ಉದ್ದೇಶವಾಗಿದ್ದರೂ, ಪೆನಿಸ್ ಬ್ಯಾಗ್'ಗಳ ಸ್ಪಷ್ಟ ಆಕಾರವನ್ನು ಹಿಂದೆ ನೋಡುವುದು ಕಷ್ಟಕರವಾಗಿತ್ತು. ಅದಕ್ಕಿಂತ ಹೆಚ್ಚಾಗಿ, ಥಾಯ್ ಕೆಫೆಯು ಪೋಸ್ಟ್‌ನ ಶೀರ್ಷಿಕೆಯಲ್ಲಿ ಲೈಂಗಿಕ ಒಳನೋಟಗಳಿಂದ ತುಂಬಿರುವ ಕೆನ್ನೆಯ ವಿವರಣೆಯನ್ನು ಸೇರಿಸಿದೆ. ಮಾತ್ರವಲ್ಲ ಇದನ್ನು ಹೆಚ್ಚಾಗಿ ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಗೋಣ. ನಿಮ್ಮ ಕೈಯಲ್ಲಿ ನಮ್ಮ ಪಾನೀಯಗಳು ಇದ್ದಾಗ, ಎಲ್ಲರೂ ನಿಮ್ಮತ್ತ ನೋಡುತ್ತಾರೆ ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

Diphallia Disease: 2 ಶಿಶ್ನಗಳೊಂದಿಗೆ ಮಗು ಜನನ: ಶಸ್ತ್ರಚಿಕಿತ್ಸೆ ಮೂಲಕ ದೊಡ್ಡದನ್ನು ಕತ್ತರಿಸಿದ ವೈದ್ಯರು

ಜನರನ್ನು ಸೆಳೆಯೋಕೆ ಕೆಫೆ ಈ ಐಡಿಯಾ ಮಾಡಿದ್ದರೂ ಸ್ಪಲ್ಪ ದಿನದಲ್ಲೇ ಈ ಶಿಶ್ನದ ಆಕಾರದ ಚೀಲಗಳಲ್ಲಿ ಪಾನೀಯ ವಿತರಿಸುವುದನ್ನು ನಿಲ್ಲಿಸಲಾಯಿತು. ಕೆಫೆಯ ಯಶಸ್ವಿ ಅಭಿಯಾನವು ಹೆಚ್ಚು ಕಾಲ ಉಳಿಯಲಿಲ್ಲ.ಯಾಕೆಂದರೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಲ್ಲಿಲ್ಲ. ಕೆಲವೊಬ್ಬರು ಇಂಥಾ ಚೀಲಗಳಲ್ಲಿ ದೊರಕುವ ಪಾನೀಯಗಳನ್ನು ಖರೀದಿಸಲು ಹಿಂದೇಟು ಹಾಕಿದರು. ಕೆಫೆಗೆ ಬರುವುದನ್ನೇ ನಿಲ್ಲಿಸಿದರು ಎಂದು ತಿಳಿದುಬಂದಿದೆ.

ಕೆಫೆ, ಕೆಲವು ದಿನಗಳ ನಂತರ, ವಿಶಿಷ್ಟವಾದ ಶಿಶ್ನ-ಆಕಾರದ ಪಾನೀಯಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಏಕೆಂದರೆ ಈ ವಿಚಿತ್ರ ಐಡಿಯಾವನ್ನು ಜನರು ಸ್ವೀಕರಿಸಲ್ಲಿಲ್ಲ. 'ನಾವು ಎಲ್ಲಾ ಗ್ರಾಹಕರಲ್ಲಿ ಕ್ಷಮೆಯಾಚಿಸಬೇಕು. ನಾವು ಇನ್ನು ಮುಂದೆ  ಶಿಶ್ನ ಚೀಲವನ್ನು ಮಾರಾಟ ಮಾಡುವುದಿಲ್ಲ. ಇದು ಅನೇಕ ಸೂಕ್ಷ್ಮ ವಿಷಯಗಳನ್ನು ಒಳಗೊಂಡಿರುತ್ತದೆ. ನಿಮ್ಮೆಲ್ಲರ ಆಸಕ್ತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ಕೆಫೆ ಮಾಲೀಕರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios