ಮೆಟ್ರೋದಲ್ಲಿ ಅಹಿತಕರ ಘಟನೆಗಳು ಆಗಿಂದಾಗೆ ನಡೆಯುತ್ತಲೇ ಇರುತ್ತವೆ. ಬಾತ್ ಟವೆಲ್, ಬಿಕಿನಿ ಹಾಕ್ಕೊಂಡು ಜನರು ಮೆಟ್ರೋ ಹತ್ತಿರೋ ವೀಡಿಯೋ ಈ ಹಿಂದೆಯೇ ವೈರಲ್ ಆಗಿದೆ. ಈ ಬಾರಿ ವ್ಯಕ್ತಿಯೊಬ್ಬ ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಂಡ ವೀಡಿಯೋ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನವದೆಹಲಿ: ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರು ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ವ್ಯಕ್ತಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 'ಇದು ತುಂಬಾ ಗಂಭೀರವಾದ ವಿಷಯ' ಎಂದು ದೆಹಲಿ ಮಹಿಳಾ ಆಯೋಗ ಹೇಳಿತ್ತು. ಈ ವಿಷಯದ ಬಗ್ಗೆ ನಗರ ಮಹಿಳಾ ಸಮಿತಿಯು ನೋಟಿಸ್ ನೀಡಿದ ಗಂಟೆಗಳ ನಂತರ ಪ್ರಕರಣ ದಾಖಲಿಸಲಾಯಿತು.
ವೈರಲ್ ಆದ ವೀಡಿಯೋದಲ್ಲಿ ಒಬ್ಬ ವ್ಯಕ್ತಿ ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ (Masturbation) ಮಾಡುವುದನ್ನು ನೋಡಬಹುದು. ಈ ಬಗ್ಗೆ ದೆಹಲಿ ಮಹಿಳಾ ಆಯೋಗದ ಮುಖಸ್ಥೆ ಸ್ವಾತಿ ಮಲಿವಾಲ್ ಮಾತನಾಡಿ, 'ಇದು ಸಂಪೂರ್ಣವಾಗಿ ಅಸಹ್ಯಕರ ಮತ್ತು ಅನಾರೋಗ್ಯಕರವಾಗಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು. 'ದೆಹಲಿ ಮೆಟ್ರೋದಲ್ಲಿ ಇಂಥಾ ಹೆಚ್ಚು ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಮೆಟ್ರೋದಲ್ಲಿ ಮಹಿಳೆಯರ (Woman) ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಂಥಾ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದ್ದರು. ಇದಕ್ಕೆ ಟ್ವೀಟ್ ಮಾಡಿ ಪ್ರತಿಕ್ರಯಿಸಿರುವ DMRC,ಮೆಟ್ರೋದಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳ ನಿಯೋಜನೆಯನ್ನು ತೀವ್ರಗೊಳಿಸುವುದಾಗಿ ಹೇಳಿದೆ.
'ಪ್ಲೀಸ್.. ರೈಲಿನಲ್ಲಿ ರೀಲ್ಸ್ ಡಾನ್ಸ್ ಮಾಡ್ಬೇಡಿ..' ಪ್ರಯಾಣಿಕರಿಗೆ ದೆಹಲಿ ಮೆಟ್ರೋ ಮೀಮ್ ಮನವಿ!
ಫ್ಲೈಯಿಂಗ್ ಸ್ಕ್ವಾಡ್ ಸಂಖ್ಯೆ ಹೆಚ್ಚಿಸಲಾಗುವುದು ಎಂದ ದೆಹಲಿ ಮೆಟ್ರೋ ಸಂಸ್ಥೆ
'ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು (Passengers) ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ನಾವು ವಿನಂತಿಸುತ್ತೇವೆ. ಇತರ ಪ್ರಯಾಣಿಕರು ಯಾವುದೇ ಆಕ್ಷೇಪಾರ್ಹ ನಡವಳಿಕೆಯನ್ನು ಗಮನಿಸಿದರೆ, ಅವರು ತಕ್ಷಣವೇ DMRC ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ಕಾರಿಡಾರ್, ನಿಲ್ದಾಣ, ಸಮಯ ಇತ್ಯಾದಿಗಳನ್ನು ವಿವರಿಸಬೇಕು' ಎಂದು ಅಧಿಕಾರಿಗಳು (Officers) ತಿಳಿಸಿದ್ದಾರೆ. 'ಮೆಟ್ರೋದಲ್ಲಿ ಇಂಥಾ ನಡವಳಿಕೆಯನ್ನು ಮೇಲ್ವಿಚಾರಣೆ ಮಾಡಲು ಮೆಟ್ರೋ ಮತ್ತು ಭದ್ರತಾ ಸಿಬ್ಬಂದಿಯನ್ನು ಒಳಗೊಂಡಿರುವ ಫ್ಲೈಯಿಂಗ್ ಸ್ಕ್ವಾಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಮತ್ತು ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ದೆಹಲಿ ಮೆಟ್ರೋ ಟ್ವೀಟ್ ಮಾಡಿದೆ.
ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿರುವ ವೀಡಿಯೊದಲ್ಲಿ, ಯುವಕನೊಬ್ಬ (ಮೊಬೈಲ್ ಫೋನ್‌ನಲ್ಲಿ ಏನನ್ನೋ ನೋಡುತ್ತಿದ್ದಾರೆ) ದೆಹಲಿ ಮೆಟ್ರೋದಲ್ಲಿ ಉದ್ದೇಶಪೂರ್ವಕವಾಗಿ ಹಸ್ತಮೈಥುನ ಮಾಡುತ್ತಿರುವುದನ್ನು ತೋರಿಸಿದೆ ಮತ್ತು ಅವನ ಸುತ್ತಲಿನ ಇತರ ಪ್ರಯಾಣಿಕರು ಆತನಿಂದ ದೂರ ಹೋಗುತ್ತಿರುವ ದೃಶ್ಯಗಳು ಕೂಡ ದಾಖಲಾಗಿದೆ.
ದಿಲ್ಲಿ ಮೆಟ್ರೋದಲ್ಲಿ ಬಿಕಿನ ಫೋಟೋ ವೈರಲ್ ನಂತರ ಕೆಂಪು ಸೀರೆ, ಆಭರಣ ಧರಿಸಿ ನಾರಿ ಡಾನ್ಸ್
ಈ ಘಟನೆಯನ್ನು ಮತ್ತೊಬ್ಬ ಪ್ರಯಾಣಿಕರು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ, ಆದರೆ, ಅವರು ಆತನ ಈ ಕೃತ್ಯವನ್ನು ತಡೆಯಲು ಅಥವಾ ಎಚ್ಚರಿಸುವ ಪ್ರಯತ್ನ ಮಾಡಿಲ್ಲ. ಇನ್ನು ದೆಹಲಿ ಮೆಟ್ರೋದಲ್ಲಿ ಇಂಥ ಘಟನೆಗಳು ಆಗುತ್ತಿರುವುದು ಇದು ಮೊದಲೇನಲ್ಲ. ತೀರಾ ಇತ್ತೀಚೆಗೆ ಮಹಿಳೆಯೊಬ್ಬಳು ಬ್ರಾ ಹಾಗೂ ಮಿನಿಸ್ಕರ್ಟ್ ಧರಿಸಿ ರೈಲಿನಲ್ಲಿ ಪ್ರಯಾಣ ಮಾಡಿದ್ದಳು ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಲು ಡಿಎಂಆರ್‌ಸಿ ಪ್ರಯಾಣಿಕರನ್ನು ಒತ್ತಾಯಿಸಿದೆ.
ನ್ಯೂಯಾರ್ಕ್ ಸಬ್ ವೇ ರೈಲಿನಲ್ಲಿ ಸ್ನಾನ ಮಾಡಿದ ಯುವಕ
ಕೆಲ ತಿಂಗಳುಗಳ ಹಿಂದೆ ನ್ಯೂಯಾರ್ಕ್ ಸಬ್ ವೇ ರೈಲಿನಲ್ಲಿ ಯುವಕನೋರ್ವ ಸ್ನಾನ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಟಿಪ್‌ಟಾಪ್ ಆಗಿ ಡ್ರೆಸ್ ಮಾಡಿದ್ದ ಯುವಕನೋರ್ವ ಜನರಿರುವ ರೈಲಿನಲ್ಲಿ ಒಂದೊಂದಾಗಿ ತನ್ನ ಶರ್ಟ್ ಪ್ಯಾಂಟ್ ಬಿಚ್ಚಿ ಸ್ನಾನ ಮಾಡಿದ್ದಾನೆ. ತನ್ನ ಮುಂದೆ ಹಿಂದೆ ಅತ್ತಿತ್ತ ಸಾಕಷ್ಟು ಜನರಿದ್ದರೂ ಕ್ಯಾರೇ ಮಾಡದ ಯುವಕ ತನ್ನ ಬಟ್ಟೆಯನ್ನೆಲ್ಲಾ ಬಿಚ್ಚಿ ಸ್ನಾನ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಪ್ರಿನ್ಸ್‌ಝಿ ಎಂಬ ಫೇಸ್‌ಬುಕ್ (Facebook) ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ.
