'ಪ್ಲೀಸ್.. ರೈಲಿನಲ್ಲಿ ರೀಲ್ಸ್ ಡಾನ್ಸ್ ಮಾಡ್ಬೇಡಿ..' ಪ್ರಯಾಣಿಕರಿಗೆ ದೆಹಲಿ ಮೆಟ್ರೋ ಮೀಮ್ ಮನವಿ!
ದೆಹಲಿ ಮೆಟ್ರೋ ಟ್ವಿಟರ್‌ನಲ್ಲಿ ವಿವಿಧ ರೀತಿಯ ತಲೆನೋವು ಮತ್ತು ಅವುಗಳ ಕಾರಣಗಳನ್ನು ತೋರಿಸುವ ಒಂದು ಮೀಮ್‌ಅನ್ನು ಹಂಚಿಕೊಂಡಿದೆ. ಇದಕ್ಕೆ ಟ್ವಿಟರ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನವದೆಹಲಿ (ಏ.26): ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ ಸುದ್ದಿಯಾದಷ್ಟು ಮತ್ಯಾವುದು ಸುದ್ದಿಯಾಗಿರಲಿಕ್ಕಿಲ್ಲ. ಭಿನ್ನ ಭಿನ್ನ ಪ್ರಕಾರದ ಜನರು ಹಾಗೂ ಅವರ ವರ್ತನೆಗಳಿಂದ ದೆಹಲಿ ಮೆಟ್ರೋ ಸುದ್ದಿಯಲ್ಲಿತ್ತು. ಅದರ ನಡುವೆ ಈ ರೀಲ್ಸ್ ಮಾಡುವವರ ಕಿತಾಪತಿಗಳು ಬೇರೆ. ಮೆಟ್ರೋದಲ್ಲಿ ಸಿಕ್ಕಿ ಸಿಕ್ಕ ಕಂಬಗಳನ್ನು ಹಿಡಿದು ಪೋಲ್ ಡಾನ್ಸ್ ಮಾಡೋದೇನು, ಫ್ಲಾಟ್‌ಫಾರ್ಮ್‌ನಲ್ಲಿ ನಿಂತು ಡಾನ್ಸ್ ಮಾಡೋದೇನು.. ಇದನ್ನೆಲ್ಲಾ ಕಂಡು ರೋಸಿಹೋಗಿದ್ದ ದೆಹಲಿ ಮಟ್ರೋದ ಅಧಿಕಾರಿಗಳು ಈಗ ರೀಲ್ಸ್ ಹುಚ್ಚಿನ ಇನ್‌ಫ್ಲುಯೆನ್ಸರ್‌ಗಳಿಗೆ ಅವರದೇ ಭಾಷೆಯಲ್ಲಿ ಮನವಿ ಮಾಡಿದ್ದಾರೆ. ಟ್ವಿಟರ್‌ನಲ್ಲಿ ವಿವಿಧ ರೀತಿಯ ತಲೆನೋವುಗಳ ಚಿತ್ರವನ್ನು ಹಂಚಿಕೊಂಡಿರುವ ದೆಹಲಿ ಮೆಟ್ರೋ, ಮೆಟ್ರೋದಲ್ಲಿ ಡಾನ್ಸ್ ಮಾಡುವವರನ್ನು ಕಂಡಾಗ ಆಗುವ ತಲೆನೋವು ಹೇಗಿರುತ್ತದೆ ಎನ್ನುವುದನ್ನೂ ತಿಳಿಸಿದೆ. ಆ ಮೂಲಕ ಇಂಥ ನೃತ್ಯಗಳನ್ನು ಮೆಟ್ರೋದಲ್ಲಿ ಮಾಡುವ ಮೂಲಕ ಅಲ್ಲಿನ ಅಧಿಕಾರಿಗಳಿಗೆ ತಲೆನೋವು ಕೊಡಬೇಡಿ ಎಂದು ಮೀಮ್ಸ್ ಮೂಲಕ ಮನವಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ, ಜನರು ಮೆಟ್ರೋ ಕೋಚ್‌ಗಳಲ್ಲಿ ಡ್ಯಾನ್ಸ್ ರೀಲ್‌ಗಳನ್ನು ರಚಿಸುವ ವೀಡಿಯೊಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇಂತಹ ವೀಡಿಯೊಗಳು ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ಗಳಿಗೆ ಸಾಕಷ್ಟು ವೀವ್ಸ್‌ಗಳು ಹಾಗೂ ಲೈಕ್ಸ್‌ಗಳನ್ನು ತಂದಿತ್ತು. ಆದರೆ, ಇದು ಸಹ ಪ್ರಯಾಣಿಕರಿಗೆ ಕಿರಿಕಿರಿಗೆ ಕಾರಣವಾಗಿತ್ತು. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಇತ್ತೀಚೆಗೆ ಪ್ರಯಾಣಿಕರಿಗೆ ಮೆಟ್ರೋ ಕೋಚ್‌ಗಳಲ್ಲಿ ವೀಡಿಯೊಗಳನ್ನು ಚಿತ್ರಿಸದಂತೆ ಎಚ್ಚರಿಕೆ ನೀಡಿತ್ತು. ಈ ಸಂದೇಶವನ್ನು ಹಾಸ್ಯಮಯವಾಗಿ ತಿಳಿಸುವ ಪ್ರಯತ್ನದಲ್ಲಿ, ದೆಹಲಿ ಮೆಟ್ರೋ ಟ್ವಿಟರ್‌ನಲ್ಲಿ ವಿವಿಧ ರೀತಿಯ ತಲೆನೋವು ಮತ್ತು ಅವುಗಳ ಕಾರಣಗಳನ್ನು ತೋರಿಸುವ ಒಂದು ಮೀಮ್ ಅನ್ನು ಹಂಚಿಕೊಂಡಿದೆ.
ದಿಲ್ಲಿ ಮೆಟ್ರೋದಲ್ಲಿ ಬಿಕಿನ ಫೋಟೋ ವೈರಲ್ ನಂತರ ಕೆಂಪು ಸೀರೆ, ಆಭರಣ ಧರಿಸಿ ನಾರಿ ಡಾನ್ಸ್
ಇದರಲ್ಲಿ ಕೊನೆಯ ರೀತಿಯ ತಲೆನೋವು ಹೇಗಿರುತ್ತದೆ ಎಂದರೆ, ನೋವು ಸಂಪೂರ್ಣ ತಲೆಗೆ ವ್ಯಾಪಿಸಿರುತ್ತದೆ. ಮೆಟ್ರೋದಲ್ಲಿ ನೃತ್ಯ ಮಾಡುವವರನ್ನು ಕಂಡಾಗ ಈ ರೀತಿಯ ತಲೆನೋವು ಬರುತ್ತದೆ ಎಂದು ಬರೆದಿತ್ತು. ನೆಟಿಜನ್‌ಗಳು ಈ ಪೋಸ್ಟ್ ಅದ್ಭುತವಾಗಿದೆ ಎಂದು ಹೇಳಿದ್ದಲ್ಲದೆ, ದೆಹಲಿ ಮೆಟ್ರೋದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಕೆಲವು ಪ್ರಯಾಣಿಕರು ಸಹ ಪ್ರಯಾಣಿಕರ ಬಗ್ಗೆ ಸಂವೇದನಾಶೀಲರಾಗಿರುವುದರಿಂದ ಸಾರ್ವಜನಿಕ ಸೇವಾ ಸಂದೇಶವು ಅವರಿಗೆ ಅನುರಣಿಸುತ್ತದೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದುಕೊಂಡಿದ್ದಾರೆ.
Watch: ದೆಹಲಿ ಮಟ್ರೋ ರೈಲಿನಲ್ಲಿ ಲವರ್‌ಗಳ ಕಿಸ್ಸಿಂಗ್, 'ಸ್ವಲ್ಪನಾದ್ರೂ ಸಂಸ್ಕತಿ ಉಳಿಸಿಕೊಳ್ಳಿ' ಎಂದು ಟೀಕಿಸಿದ ಜನ!
ಈ ಪೋಸ್ಟ್‌ಗೆ ಈಗಾಗಲೇ 12 ಸಾವಿರ ಲೈಕ್ಸ್‌ಗಳು ಬಂದಿದ್ದು, 1 ಸಾವಿರಕ್ಕೂ ಅಧಿಕ ರೀಟ್ವೀಟ್‌ಗಳು ಹಾಗೂ ಲೆಕ್ಕವಿಲ್ಲದಷ್ಟು ಕಾಮೆಂಟ್‌ಗಳು ಬಂದಿವೆ. ಮೀಮ್ಸ್ ಅತ್ಯಂತ ನಿಖರವಾಗಿ ತಲುಪುವವರಿಗೆ ತುಲುಪಿದೆ ಎಂದೂ ಹೆಚ್ಚಿನವರು ಶ್ಲಾಘಿಸಿದ್ದಾರೆ. 'ಇದೊಂದು ಅದ್ಭುತ ಲೇವಡಿ ಎಂದು ಒಬ್ಬರು ಬರೆದಿದ್ದರೆ, "ಕೆಲವರು ಮೆಟ್ರೋ (ರೈಲು ಮತ್ತು ಆವರಣ ಎರಡನ್ನೂ) ಜಗತ್ತಿಗೆ ಪ್ರದರ್ಶನ ನೀಡುವ ಮತ್ತು ಮನರಂಜನೆ ನೀಡುವ ಸ್ಥಳವೆಂದು ಪರಿಗಣಿಸಿದ್ದಾರೆ. ಗಮನ ಸೆಳೆಯುವವರು ವೈರಲ್ ಆಗಲು ಸುಲಭವಾದ ಮಾರ್ಗವೆಂದು ತೋರುತ್ತಿದ್ದಾರೆ. DMRC ಅಂತಹ ಅಪರಾಧಿಗಳಿಗೆ ದಂಡ ವಿಧಿಸಬೇಕು ಮತ್ತು ಪುನರಾವರ್ತಿತವಾಗಿ, ಮೆಟ್ರೋ ಪೊಲೀಸರನ್ನು ಒಳಗೊಳ್ಳಬೇಕು ಎಂದು ಬರೆದಿದ್ದಾರೆ.