ಮೌಂಟ್ ಎವರೆಸ್ಟ್‌ಗೆ ಪ್ಲಾಟಿನಂ ಜುಬಿಲಿ ಸಂಭ್ರಮ, ವಿಶ್ವದ ಅತೀ ಎತ್ತರ ಶಿಖರ ಏರಿದ ಭಾರತದ ಸಾಧಕರ ಪಟ್ಟಿ!

ಮೇ.29, 1953ರಲ್ಲಿ ಎಡ್ಮಂಡ್ ಹಿಲರಿ ಹಾಗೂ ತೆನ್‌ಜಿಂಗ್ ನಾರ್ಗೆ ವಿಶ್ವದ ಅತೀ ಎತ್ತರ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿ ಇತಿಹಾಸ ಸೃಷ್ಟಿಸಿದ್ದರು. ಇದೀಗ ಈ ಸಾಧನೆಗೆ 70 ವರ್ಷ ಸಂದಿದೆ. ಬಳಿಕ ಹಲವರು ಪರ್ವತಾರೋಹಣ ಮಾಡಿದ್ದಾರೆ. ಇದರಲ್ಲಿ ಭಾರತೀಯ ಸಾಧಕರ ಪಟ್ಟಿ ದೊಡ್ಡದಿದೆ.

Platinum jubilee celebration of first ascent of mount Everest list of Indian mountaineer achieved highest feet ckm

ನವದೆಹಲಿ(ಮೇ.30): ಪರ್ವತಾರೋಹಿಗಳಿಗೆ ಮೌಂಟ್ ಎವರೆಸ್ಟ್ ಶಿಖರ ಅಚ್ಚುಮೆಚ್ಚಿನ ತಾಣ. ಅತ್ಯಂತ ಕಠಿಣ, ಸಾವಿರ ಸಾವಲು, ಹೆಜ್ಜೆ ಹೆಜ್ಜೆಗೂ ಅಪಾಯ ಸೇರಿದಂತೆ ಹಲವು ಮಹತ್ವದ ಘಟ್ಟ ಸಾಗಿದರೆ ಮಾತ್ರ ಎವರೆಸ್ಟ್ ಪರ್ವತಾರೋಹಣ ಸಂಪನ್ನಗೊಳ್ಳಲಿದೆ. ವಿಶ್ವದ ಅತ್ಯಂತ ಎತ್ತರದ ಶಿಖರವನ್ನು ಮೇ.29, 1953ರಲ್ಲಿ ಎಡ್ಮಂಡ್ ಹಿಲರಿ ಹಾಗೂ ತೆನ್‌ಜಿಂಗ್ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಶಿಖರ ಏರಿ ಹೊಸ ಇತಿಹಾಸ ಸೃಷ್ಟಿಸಿದರು. ಎವರೆಸ್ಟ್ ಶಿಖರ ಏರಿದೆ ಮೊದಲಿಗರು ಅನ್ನೋ ದಾಖಲೆ ಹಿಲರಿ ಹಾಗೂ ತೆನ್‌ಜಿಂಗ್ ಹೆಸರಿನಲ್ಲಿದೆ. ಇವರ ಈ ಸಾಧನೆಗೆ ಇದೀಗ 70 ವರ್ಷ ಸಂದಿದೆ. ಮೌಂಟ್ ಎವೆರೆಸ್ಟ್ ಪರ್ವತಾರೋಹಣ ಪ್ಲಾಟಿನಂ ಜುಬಿಲಿ ಸಂಭ್ರಮದಲ್ಲಿದೆ. ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಪರ್ವತಾರೋಹಣ ಘಟಕ ಈ ಸಂಭ್ರಮ ಆಚರಿಸಲು ಸಿದ್ಧತೆ ನಡೆಸಿದೆ. 

ಎಡ್ಮಂಡ್ ಹಿಲರಿ ಹಾಗೂ ತೆನ್‌ಜಿಂಗ್ ಸಾಧನೆಗೆ 50 ವರ್ಷ ತುಂಬುತ್ತಿದ್ದಂತೆ ಭಾರತದ ಮೌಂಟೆನರ್ ಫೌಂಡಶೇಷನ್(IMF)  2003ರಲ್ಲಿ ಗೋಲ್ಡನ್ ಜುಬಿಲಿ ಸಂಭ್ರಮ ಆಚರಿಸಿತ್ತು. ಈ ಕಾರ್ಯಕ್ರಮವನ್ನು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉದ್ಘಾಟಿಸಿದ್ದರು. ಇದೀಗ ಪ್ಲಾಟಿನಂ ಜುಬಿಲಿ ಸಂಭ್ರಮ ಆಚರಿಸಲು IMF ಸಜ್ಜಾಗಿದೆ. ಜೂನ್ 5 ರಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶೇಷ ಅಂದರೆ ಈ ಕಾರ್ಯಕ್ರಮಕ್ಕೆ ಹಿಲರಿ ಹಾಗೂ ತೆನ್‌ಜಿಂಗ್ ಕುಟುಂಬಸ್ಥರು ಪಾಲ್ಗೊಳ್ಳುತ್ತಿದ್ದಾರೆ.

Achiever : 26ನೇ ಬಾರಿ ಮೌಂಟ್ ಎವರೆಸ್ಟ್ ಏರಿ ವ್ಯಕ್ತಿದ ಸಾಧನೆಗೆ ಬೇಷೆ ಎಂದ ನೆಟ್ಟಿಗರು!

ಎವರೆಸ್ಟ್ ಶಿಖರ ಏರಿದ ಸಾಧಕರಲ್ಲಿ ಭಾರತೀಯರ ಪಟ್ಟಿಯೂ ದೊಡ್ಡದಿದೆ. ಹಲವು ಸಾಧಕರು ಮೌಂಟ್ ಎವರೆಸ್ಟ್ ಶಿಖರ ಏರಿ ಹೊಸ ಇತಿಹಾಸ ರಚಿಸಿದ್ದಾರೆ. ಎಡ್ಮಂಡ್ ಹಿಲರಿ ಹಾಗೂ ತೆನ್‌ಜಿಂಗ್ ಎವರೆಸ್ಟ್ ಶಿಖರ ಏರಿದ ವಿಶ್ವದ ಮೊದಲಿಗರಾಗಿದ್ದಾರೆ. ಲೆಫ್ಟಿನೆಂಟ್ ಎಸ್ ಅವತಾರ್ ಎಸ್ ಚೀಮಾ ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಮೇ.20, 1965ರಲ್ಲಿ ಚೀಮಾ ಎವರೆಸ್ಟ್ ಪರ್ವತಾರೋಹಣ ಸಾಧನೆ ಮಾಡಿದ್ದಾರೆ.

ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ ಅನ್ನೋ ಹೆಗ್ಗಳಿಕೆಗೆ ಬಚೇಂದ್ರಿ ಪಾಲ್ ಪಾತ್ರರಾಗಿದ್ದಾರೆ. ಬಚೇಂದ್ರಿ ಪಾಲ್ ಮೇ 23, 1984ರಲ್ಲಿ ಎವರೆಸ್ಟ್ ಏರಿದ ಸಾಧನೆ ಮಾಡಿದ್ದಾರೆ. ಗರಿಷ್ಠ ಬಾರಿ ಪರ್ವತಾರೋಹಣ ಮಾಡಿದ ಸಾಧನೆ, ಅತೀ ಕಿರಿಯ ವಯಸ್ಸಿನಲ್ಲಿ ಸಾಧನೆ, ಎವರೆಸ್ಟ್ ಏರಿದ ವಿಶೇಷ ಚೇತನ, ಎವರೆಸ್ಟ್ ಏರಿದ ಐಎಎಸ್ ಅಧಿಕಾರಿ ಸೇರಿದಂತೆ ಹಲವು ಸಾಧನೆಗಳನ್ನು ಭಾರತೀಯರು ಮಾಡಿದ್ದಾರೆ. ಈ ಸಾಧಕರ ಪಟ್ಟಿ ಇಲ್ಲಿದೆ.

ಮೌಂಟ್ ಎವರೆಸ್ಟ್ ಹತ್ತಿದ ಕರ್ನಾಟಕದ ಪ್ರಥಮ ಮಹಿಳೆ ಮೇಜರ್ ಸ್ಮಿತಾ ಲಕ್ಷ್ಮಣ್

ಲೆಫ್ಟಿನೆಂಟ್ ಕರ್ನಲ್ ಅವತಾರ್ ಎಸ್ ಚೀಮಾ: ಎವರೆಸ್ಟ್ ಹತ್ತಿದ ಮೊದಲ ಭಾರತೀಯ(ಮೇ,20, 1965)
ಸೋಮನ್ ಗ್ಯಸ್ಟೋ, ಸೋನಂ ವ್ಯಂಗ್ಯಾಲ್: ಎವೆರೆಸ್ಟ್ ಹತ್ತಿದ ಮೊದಲ ಭಾರತೀಯ ಸಹೋದರರು(ಮೇ 22, 1965)
ಬಚೇಂದ್ರಿ ಪಾಲ್:  ಎವರೆಸ್ಟ್ ಹತ್ತಿದ ಮೊದಲ ಭಾರತೀಯ ಮಹಿಳೆ(ಮೇ 23, 1984)
ಸಂತೋಷ್ ಯಾದವ್ :  ಎರಡು ಬಾರಿ ಎವರೆಸ್ಟ್ ಹತ್ತಿದ ಮೊದಲ ಭಾರತೀಯ ಮಹಿಳೆ(ಮೇ 10, 1993)
ತಶಿ, ನುಂಗ್ಶಿ ಮಲಿಕ್:  ಎವರೆಸ್ಟ್ ಹತ್ತಿದ ಭಾರತದ ಮೊದಲ ಅವಳಿ ಸಹೋದರಿಯರು(ಮೇ 19, 2013)
ಅರುಣಿಮಾ ಸಿನ್ಹಾ:   ಎವರೆಸ್ಟ್ ಹತ್ತಿದ ಭಾರತದ ಮೊದಲ ವಿಶೇಷ ಚೇತನ ಮಹಿಳೆ(ಮೇ.21, 2013)
ಮಲವತ್ ಪೂರ್ಣ:  ಅತೀ ಕಿರಿಯವಯಸ್ಸಿನಲ್ಲಿ ಎವೆರೆಸ್ಟ್ ಏರಿದ ಸಾಧನೆ(13 ವರ್ಷ 11 ತಿಂಗಳು) ಮೇ.24, 2014)
ಅಜೀತ್ ಬಜಾಜ್, ದಿಯಾ ಸುಸಾನ: ಎವೆರೆಸ್ಟ್ ಏರಿದ ಭಾರತದ ಮೊದಲ  ತಂದೆ-ಮಗಳು(ಮೇ.16, 2018)
ಲವ್ ರಾಜ್ ಸಿಂಗ್ ಧರ್ಮಶಕ್ತು:   7 ಬಾರಿ ಎವರೆಸ್ಟ್ ಹತ್ತಿದ ಭಾರತೀಯ(ಮೇ.20, 2018)
ಸಂಗೀತಾ ಸಿಂಧ್ ಬಾಲ್:   ಎವರೆಸ್ಟ್ ಹತ್ತಿದ ಹಿರಿಯ ಮಹಿಳೆ(53 ವರ್ಷ) 2018)
ರವೀಂದ್ರ ಕುಮಾರ್ :  ಎವರೆಸ್ಚ್ ಹತ್ತಿದ ಭಾರತದ ಮೊದಲ ಐಎಎಸ್ ಅಧಿಕಾರಿ(ಮೇ 23, 2019)

11 ದಿನದಲ್ಲಿ ಮೌಂಟ್ ಎವರೆಸ್ಟ್ ಏರಿದ 10 ವರ್ಷದ ಬಾಲಕಿ

Latest Videos
Follow Us:
Download App:
  • android
  • ios