ಮೌಂಟ್ ಎವರೆಸ್ಟ್ ಹತ್ತಿದ ಕರ್ನಾಟಕದ ಪ್ರಥಮ ಮಹಿಳೆ ಮೇಜರ್ ಸ್ಮಿತಾ ಲಕ್ಷ್ಮಣ್

ಭಾರತೀಯ ಸೇನೆಯಲ್ಲಿ ಮೇಜರ್ ಆಗಿರುವ ಸ್ಮಿತಾ ಲಕ್ಷ್ಮಣ್ ಅವರು ಜಗತ್ತಿನ ಅತಿ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಶಿಖರ ಏರಿದ ಕರ್ನಾಟಕದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Major Smita Laxman is the first woman from Karnataka who climb Mount Everest akb

ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಇಂದು ವಿಶ್ವ ಮಹಿಳಾ ದಿನಾಚರಣೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ಸಾಧನೆ ಮಾಡಿ, ತಮ್ಮ ಛಾಪು ಮೂಡಿಸಿದ್ದಾರೆ. ಅವರ ಸಾಧನೆಗಳು ಪರ್ವತಾರೋಹಣದಂತಹ ಕಠಿಣ ಕ್ಷೇತ್ರಕ್ಕೂ ಹೊರತಾಗಿಲ್ಲ. ಭಾರತೀಯ ಸೇನೆಯಲ್ಲಿ ಮೇಜರ್ ಆಗಿರುವ ಸ್ಮಿತಾ ಲಕ್ಷ್ಮಣ್ ಅವರು ಜಗತ್ತಿನ ಅತಿ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಶಿಖರ ಏರಿದ ಕರ್ನಾಟಕದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಸ್ಮಿತಾ ಲಕ್ಷ್ಮಣ್ (Smitta Laxman) ಅವರು ಎವರೆಸ್ಟ್ (Everest)ಹತ್ತುವ ಮುನ್ನ ಎರಡು ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ್ದರು. ಮೊದಲ ಶಿಬಿರದಲ್ಲಿ 659 ಅಭ್ಯರ್ಥಿಗಳಲ್ಲಿ ಸ್ಮಿತಾ 26ನೆಯವರಾಗಿದ್ದರು. ಎರಡನೆಯ ಶಿಬಿರದಲ್ಲಿ ಅವರು 22ನೆಯವರಾಗಿ ಹೊರಹೊಮ್ಮಿ, ಶಿಖರಾರೋಹಣ ನಡೆಸಲು ಆಯ್ಕೆಯಾದರು. ಅವರು ಮೂರು ಹಂತಗಳ ಶಿಖರಾರೋಹಣ ಪೂರ್ಣಗೊಳಿಸಲು ಇನ್ನೂ 40 ದಿನಗಳು ಬೇಕಿದ್ದವು. ಮೊದಲ ಇಪ್ಪತ್ತು ದಿನಗಳು ಅಕ್ಲಮಟೈಸೇಶನ್, ಅಂದರೆ ಆ ಎತ್ತರಕ್ಕೆ ದೇಹ ಹೊಂದಿಕೊಳ್ಳುವಂತೆ ಮಾಡುವುದು, 10 ದಿನಗಳ ವಿಶ್ರಾಂತಿ ಮತ್ತು ಪರ್ವತ ಏರುವಿಕೆ. ಎವರೆಸ್ಟ್ ಶಿಖರ ಏರುವ ಹಾದಿಯಲ್ಲಿ 4 ಶಿಬಿರಗಳನ್ನು (19,000 ಅಡಿ, 21,000 ಅಡಿ, 23,000 ಅಡಿ) ದಾಟಿ, ಮೇ 25, 2012ರ ಬೆಳಗಿನ 4 ಗಂಟೆಗೆ ಅವರು ಎವರೆಸ್ಟ್ ಶಿಖರ ಏರಿದ್ದರು.

ಮೌಂಟ್ ಎವರೆಸ್ಟ್ ಹತ್ತಲು ಬಯಸ್ತೀರಾ? ಕಾರು ಕೊಳ್ಳುವುದಕ್ಕಿಂತಲೂ ದುಬಾರಿ

ಇದೇ ಮೊದಲ ಬಾರಿಗೆ ಸೇನಾ ಮಹಿಳೆಯರ ತಂಡ ಸೌತ್ ರಿಡ್ಜ್ ಮಾರ್ಗದ ಮೂಲಕ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದರು. 1953ರಲ್ಲಿ ಎಡ್ಮಂಡ್ ಹಿಲರಿ ಮತ್ತು ತೇನ್ ಸಿಂಗ್ ನೋರ್ಗೆ ಅವರು ಇದೇ ಮಾರ್ಗದ ಮೂಲಕ ಶಿಖರ ಏರಿದ್ದರು. ಬೆಂಗಳೂರಿನ (Bengaluru) ದಯಾನಂದ ಸಾಗರ್ (Dayananda sagar) ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದ ಸ್ಮಿತಾ ಲಕ್ಷ್ಮಣ್ ಅವರು, ಪದವಿಯ ಬಳಿಕ ಪ್ರಮುಖ ಐಟಿ ಸಂಸ್ಥೆಯಲ್ಲಿ ಉದ್ಯೋಗಾವಕಾಶ (Job) ದೊರೆತರೂ, ಅದನ್ನು ತ್ಯಜಿಸಿ ಸೇನೆಗೆ ಸೇರ್ಪಡೆಗೊಂಡರು. ಅವರು ಸೇನಾ ಸಮವಸ್ತ್ರ (Army Uniform) ಧರಿಸಿ ದೇಶ ಸೇವೆ ನಡೆಸುವ ಮಹತ್ವಾಕಾಂಕ್ಷೆ, ಹಂಬಲ ಹೊಂದಿದ್ದರು.

ಮಾಮ್ನುಸ್ಕೋ ದಲ್ಲಿ ಅವರ ಸೇವಾ ಅವಧಿಯಲ್ಲಿ ಸ್ಮಿತಾ ಅವರು ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಸ್ಮಿತಾ (Smita) ಅವರು ಮೂಲತಃ ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದು, ಅವರ ತಂದೆ ಸರ್ಕಾರಿ ಮುದ್ರಣ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದಾರೆ. ಸ್ಮಿತಾ ಅವರು ಬೆಂಗಳೂರಿನಲ್ಲೇ ತಮ್ಮ ವ್ಯಾಸಂಗ ಪೂರ್ಣಗೊಳಿಸಿದ್ದರು.

ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗಿಂತಲೂ ಎತ್ತರದ ರಸ್ತೆ ಉಮ್ಲಿಂಗ್ ಲಾ!

Latest Videos
Follow Us:
Download App:
  • android
  • ios