11 ದಿನದಲ್ಲಿ ಮೌಂಟ್ ಎವರೆಸ್ಟ್ ಏರಿದ 10 ವರ್ಷದ ಬಾಲಕಿ
ಈಕೆ ಇನ್ನೂ 10ರ ಹರೆಯದ ಬಾಲಕಿ (Girl). ಆಟವಾಡಿಕೊಂಡು ಬೆಳೆಯಬೇಕಾದ ವಯಸ್ಸಿನಲ್ಲಿ ಹಿಮಾಲಯ ಪರ್ವತ ಶ್ರೇಣಿಯ ಮೌಂಟ್ ಎವರೆಸ್ಟ್ (Mount Everest) ಬೇಸ್ ಏರುವ ಮೂಲಕ ಅದ್ಭುತ ಸಾಧನೆ (Achievement) ಮಾಡಿದ್ದಾಳೆ. ಯಾರಾಕೆ ? ಸಾಧನೆಯ ಹಾದಿ ಹೇಗಿತ್ತು? ಇಲ್ಲಿದೆ ಹೆಚ್ಚಿನ ಮಾಹಿತಿ
ಸಾಧನೆ (Achievement) ಮಾಡಲು ವಯಸ್ಸು (Age) ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈಕೆ ಸ್ಪಷ್ಟ ನಿದರ್ಶನ. ಸ್ಕೂಲಿಗೆ ಹೋಗುವ ಪುಟ್ಟ ವಯಸ್ಸಿನಲ್ಲೇ ಬಾಲಕಿ ಅದ್ಭುತ ಸಾಧನೆ ಮಾಡಿದ್ದಾಳೆ. 10 ವರ್ಷದ ಭಾರತೀಯ ಬಾಲಕಿಯೊಬ್ಬಳು ಈ ತಿಂಗಳ ಆರಂಭದಲ್ಲಿ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ (Mount Everest Base camp) ಅನ್ನು ಏರಲು ಯಶಸ್ವಿಯಾಗಿದ್ದಾಳೆ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಪರ್ವತಾರೋಹಿಗಳಲ್ಲಿ ಒಬ್ಬಳಾಗಿದ್ದಾಳೆ ಎಂದು ಪಿಟಿಐ ವರದಿ ಮಾಡಿದೆ.
ಹೌದು, ಮಹಾರಾಷ್ಟ್ರದ 10 ವರ್ಷದ ಬಾಲಕಿ (Girl) ಚಾಂಪಿಯನ್ ಸ್ಕೇಟರ್ 'ರಿದಂ ಮಮಾನಿಯಾ' ಇತಿಹಾಸ ನಿರ್ಮಿಸಿದ್ದಾಳೆ. ವಿಶ್ವದ ಅತ್ಯಂತ ಎತ್ತರದ ಮೌಂಟ್ ಎವರೆಸ್ಟ್ ಅನ್ನು 10 ವರ್ಷದ ಬಾಲಕಿ ಕೇವಲ 11 ದಿನದಲ್ಲಿ ಏರಿದ್ದಾಳೆ. ಈ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಎನಿಸಿಕೊಂಡಿದ್ದಾಳೆ. ಈಕೆ ಇದೀಗ ಹಿಮಾಲಯ ಪರ್ವತ ಶ್ರೇಣಿಯ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಏರಿದ 'ಮೊಟ್ಟಮೊದಲ ಅತ್ಯಂತ ಕಿರಿಯ ಭಾರತೀಯ ಪರ್ವತಾರೋಹಿ' ಎಂದು ಗುರುತಿಸಿಕೊಂಡಿದ್ದಾಳೆ. ಅದೂ ಕೂಡಾ ಯಾವುದೇ ವಿಶೇಷ ತರಬೇತಿಯನ್ನು ಪಡೆಯದೆ ಸತತ ಪ್ರಯತ್ನದ ಮೂಲಕ ಈ ಸಾಧನೆ ಮಾಡಿದ್ದಾಳೆ.
8,000 ಮೀಟರ್ ಎತ್ತರದ 5 ಪರ್ವತಾರೋಹಣ; ಮೊದಲ ಭಾರತೀಯಳೆಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಿಯಾಂಕಾ ಮೋಹಿತೆ
ಮುಂಬೈ ಮೂಲದ ಸ್ಕೇಟರ್ ಆಗಿರುವ ರಿಧಮ್ ಮಮನಿಯಾ 5ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾಳೆ. ಮೇ 6ರಂದು ಮಧ್ಯಾಹ್ನ 1 ಗಂಟೆಗೆ ಬೇಸ್ ಕ್ಯಾಂಪ್ ನಿಂದ ಹತ್ತಲು ಶುರುವ ಮಾಡಿದ ರಿಧಮ್ ಮಮನಿಯಾ 5364 ಮೀಟರ್ ಒಂದೇ ವೇಗದಲ್ಲಿ ಟ್ರಕ್ಕಿಂಗ್ ಮಾಡಿದ್ದಾಳೆ. ಇದಕ್ಕೂ ಮುನ್ನ 21 ಕಿ.ಮೀ. ಉದ್ದದ ಧೂದ್ ಸಾಗರ್ ಮೊದಲ ಬಾರಿ ಏರಿದ್ದರು. ನಂತರ ಇದೇ ಅಭ್ಯಾಸವನ್ನು ಮುಂದುವರಿಸಿದ ರಿಧಮ್ ಮಮನಿಯಾ ಅತ್ಯಂತ ಕಡಿಮೆ ಅವಧಿಯಲ್ಲಿ ಈ ದಾಖಲೆ ಮಾಡಿದ್ದಾಳೆ.
ಬಾಂದ್ರಾ ಋಷಿಕುಲ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿನಿ ರಿದಂ ಪ್ರತಿದಿನ ಕಡಿದಾದ ಮೆಟ್ಟಿಲುಗಳನ್ನು ಹತ್ತುವ ಮೂಲಕ ಅಭ್ಯಾಸ ಮಾಡುತ್ತಿದ್ದಳಂತೆ. ಸಮುದ್ರ ಮಟ್ಟದಿಂದ 5,364 ಮೀಟರ್ ಎತ್ತರದಲ್ಲಿ ಕಡಿಮೆ ಆಮ್ಲಜನಕದ ವಾತಾವರಣ ಈ ಪೋರಿಯ ಸಾಧನೆಗೆ ಅಡ್ಡಿಯಾಗಲಿಲ್ಲ. ಮೇ 6ರಂದು ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ತಮ್ಮ ಪೋಷಕರಾದ ಊರ್ಮಿ ಮತ್ತು ಹರ್ಷಲ್ ಜತೆಗೆ ಶೃಂಗದ ತುದಿ ತಲುಪಿದಳು.'ಇಬಿಸಿ ಶೃಂಗ ತಲುಪುವುದು ನನ್ನ ಗುರಿಯಾಗಿತ್ತು. ಆದ್ದರಿಂದ ಚಳಿ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಅಪರೂಪದ ಆಲಿಕಲ್ಲು ಮಳೆ ನನಗೆ ಹೊಸದು. ಬೇಸ್ ಕ್ಯಾಂಪ್ 5,364 ಮೀಟರ್‌ನಲ್ಲಿದ್ದು, ನನ್ನ ಗುರಿಯನ್ನು ಪೂರ್ಣಗೊಳಿಸಲು 11 ದಿನಗಳು ಬೇಕಾಯಿತು' ಎಂದು ರಿದಂ ತಿಳಿಸಿದ್ದಾರೆ.
ವಿದೇಶದಲ್ಲಿ ಲಕ್ಷಗಟ್ಟಲೆ ಸಂಪಾದನೆಯ ಕೆಲಸ ಬಿಟ್ಟು ದೇಶ ಸೇವೆಗಾಗಿ ಪೊಲೀಸ್ ಆದ Neha Pachisia
'ರಿದಂ ರಾಷ್ಟ್ರಮಟ್ಟದ ಸ್ಕೇಟರ್. ಅವಳು ಪರ್ವತಾರೋಹಣ ಮಾಡುವುದನ್ನು ಇಷ್ಟಪಡುತ್ತಿದ್ದಳು. ಅವಳ ಮೊದಲ ಸುದೀರ್ಘ ಚಾರಣವು 21 ಕಿ.ಮೀ ದೂಧಸಾಗರ್ ಆಗಿತ್ತು ಮತ್ತು ಅಂದಿನಿಂದ ಆಕೆ ಮಾಹುಲಿ, ಸೊಂಡೈ, ಕರ್ನಾಲಾ ಮತ್ತು ಲೋಹಗಡ್‌ನಂತಹ ಸಹ್ಯಾದ್ರಿ ಶ್ರೇಣಿಗಳಲ್ಲಿ ಕೆಲವು ಶಿಖರಗಳನ್ನು ಏರಿದ್ದಾಳೆ. ಇಬಿಸಿ ತಲುಪಲು ಇತರರು ಹೆಲಿಕಾಪ್ಟರ್ ಆಯ್ಕೆ ಮಾಡಿಕೊಂಡರೆ ಆಕೆ ಪರ್ವತಾರೋಹಣವನ್ನೇ ಆಯ್ಕೆ ಮಾಡಿಕೊಂಡಳು' ಎಂದು ತಾಯಿ ಊರ್ಮಿ ಹರ್ಷ ವ್ಯಕ್ತಪಡಿಸಿದರು.
ಕಠ್ಮಂಡು ಮೂಲದ ಟ್ರಾವೆಲ್ ಏಜೆನ್ಸಿ ಸಟೋರಿ ಅಡ್ವೆಂಚರ್ಸ್ ಆಯೋಜಿಸಿದ್ದ ಪ್ರವಾಸದಲ್ಲಿ ರಿದಮ್ ಅವರ ಪೋಷಕರು ಉರ್ಮಿ ಮತ್ತು ಹರ್ಷ ಅವರೊಂದಿಗೆ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಬಂದಿದ್ದರು.