Asianet Suvarna News Asianet Suvarna News

ಪವಿತ್ರ ದೇವಿರಮ್ಮ ಬೆಟ್ಟದಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳ ರಾಶಿ !

ಎಲ್ಲಾ ಪ್ರವಾಸಿತಾಣಗಳು ಆರಂಭದಲ್ಲಿ ವಿಸಿಟ್ ಮಾಡಲು ತುಂಬಾ ಚೆನ್ನಾಗಿರುತ್ತವೆ. ಆದ್ರೆ ಆ ಸ್ಥಳಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಸುತ್ತಮುತ್ತಲಿನ ಪ್ರದೇಶವೆಲ್ಲಾ ಮಾಲಿನ್ಯದಿಂದ ತುಂಬಾ ತುಳುಕುತ್ತದೆ. ಸದ್ಯ ಪವಿತ್ರ ದೇವಿರಮ್ಮ ಬೆಟ್ಟದಲ್ಲಿಯೂ ಹಾಗೆಯೇ ಆಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Plastic covers, Bottles At Pavitra Deviramma Hill Chikamagalore Vin
Author
First Published Oct 26, 2022, 5:12 PM IST

ವರದಿ : ಆಲ್ದೂರು ಕಿರಣ್, ಚಿಕ್ಕಮಗಳೂರು 

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ ವರ್ಷಕ್ಕೆ ಒಂದು ದಿನ ಮಾತ್ರ ಬೆಟ್ಟದ ತಪ್ಪಲಿನಲ್ಲಿ ದರ್ಶನ ನೀಡುವ ಪವಿತ್ರ ದೇವಿರಮ್ಮ ದೇವಿಯ ದರ್ಶನ ಪಡೆದು ಲಕ್ಷಾಂತರ ಮಂದಿ ಪುನೀತರಾದರು. ಮಧ್ಯರಾತ್ರಿಯಿಂದಲೇ ಹತ್ತಾರು ಕಿಲೋಮೀಟರ್ ದೂರ ಕಡಿದಾದ ಬೆಟ್ಟವನ್ನು ಬರಿಗಾಲಿನಲ್ಲಿ ಏರಿದ ಭಕ್ತರು (Devotees) ನೂಕುನುಗ್ಗಲಿನ ನಡುವೆ ತಾಯಿಯ ದರ್ಶನ ಪಡೆದು ಧನ್ಯರಾದರು, ಆದರೆ ಕೆಲ ಭಕ್ತರು ಮಾತ್ರ ಬೆಟ್ಟದ ತುಂಬಾ ಬಳಸಿದ ಪ್ಲಾಸ್ಟಿಕ್ ಕವರ್ ಗಳು, ಬಾಟಲಿಗಳನ್ನು ಎಸೆದು ಗಲೀಜು ಮಾಡುವ ಮೂಲಕ ತಮ್ಮ ವಕ್ರಬುದ್ಧಿಯನ್ನು ತೋರ್ಪಡಿಸಿದ್ದಾರೆ.

ಸಂಸ್ಕೃತಿ ಹೀನರು ಪ್ರಕೃತಿ ಮಾತೆಯ ಮಡಿಲಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದ ದೇವಿರಮ್ಮ ಬೆಟ್ಟಕ್ಕೆ ಬಂದು ಲೆಕ್ಕವಿಲ್ಲದಷ್ಟು ಪ್ಲಾಸ್ಟಿಕ್ ಹಾಗೂ ಇತರೆ ಕಸವನ್ನು ಎಸೆಯುವ ಮೂಲಕ ತಮ್ಮ ಅನಾಗರಿಕ ವರ್ತನೆ ತೋರಿಸಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ (Social media) ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಲ್ಲಿ ಪಕ್ಷಿಧಾಮಕ್ಕೆ ವನ್ಯಜೀವಿ ಮಂಡಳಿ ಗ್ರೀನ್ ಸಿಗ್ನಲ್​

ಬೆಟ್ಟದಲ್ಲಿ ರಾಶಿ ರಾಶಿ ಕಸ 
ಲಕ್ಷಾಂತರ ಭಕ್ತರು ಬಂದಿದ್ದು ಬಹಳಷ್ಟು ಮಂದಿ ತಾವು ಬಳಸಿ ಎಸೆಯಬಹುದಾದ ನಿರುಪಯುಕ್ತ ವಸ್ತುಗಳನ್ನು ತಮ್ಮ ಬ್ಯಾಗಿನಲ್ಲಿ ವಾಪಾಸು ಕೊಂಡೊಯ್ದಿದ್ದಾರೆ. ಇದು ಸಭ್ಯ ನಾಗರಿಕನಿಗೆ ಇರಬೇಕಾದ ಕನಿಷ್ಠ ತಿಳುವಳಿಕೆ. ದೇವರ ಸನ್ನಿಧಿಗೆ ತೆರಳಿದ್ದಕ್ಕೆ ಸಾರ್ಥಕ ಸಹ. ಆದರೆ ಉಳಿದವರಿಗೆ ತಿಳಿ ಹೇಳುವುದು ಹೇಗೆ?. ದೇವಿರಮ್ಮ ಬೆಟ್ಟ (Deviramma hill) ಮಾತ್ರವಲ್ಲದೆ ಹತ್ತಿರದ ಮುಳ್ಳಯ್ಯನಗಿರಿಯಲ್ಲೂ ಸಹ ಇದೇ ಸಮಸ್ಯೆ, ವಾರಾಂತ್ಯದಲ್ಲಿ ಪ್ರವಾಸಿಗರ ಸೋಗಿನಲ್ಲಿ ಬರುವವರಿಂದ ಬೆಟ್ಟ ಸಂಪೂರ್ಣ ಗಲೀಜುಮಯವಾಗಿ ಹೋಗಿರುತ್ತದೆ.

ಚೆಕ್ ಪೋಸ್ಟ್ ನಲ್ಲಿ ಕಠಿಣ ನಿಯಮಗಳನ್ನು (Rules) ಜಾರಿಗೆ ತಂದು ಯಾವುದೇ ಪ್ಲಾಸ್ಟಿಕ್ ವಸ್ತುಗಳು, ಬಾಟಲಿ, ಮುಂತಾದ ಹಾನಿಕಾರಕ ವಸ್ತುಗಳನ್ನು ತಡೆಹಿಡಿಯಬೇಕಿದೆ. ಮನುಷ್ಯರೇ ಹಾಗೆ, ತಮ್ಮ ಮನೆಯಲ್ಲಿ ಸದಾ ಸ್ವಚ್ಛತೆಯ (Clean) ಬಗ್ಗೆ ನಿಗಾ ವಹಿಸುತ್ತಾರೆ. ತಾನು ತೊಡುವ ಬಟ್ಟೆಯ ಮೇಲೆ ಒಂದೇ ಒಂದು ಕಲೆ ಆಗಬಾರದು. ಅಕಸ್ಮಾತ್ ಆದರೆ ಅದನ್ನು ತೊಟ್ಟು ಹೊರಗೇ ಬರುವುದಿಲ್ಲ. ತಾವು ಬಳಸುವ ವಾಹನವನ್ನು ಸಹ ಸದಾ ಸ್ವಚ್ಛತೆಯಲ್ಲಿ ಇಟ್ಟುಕೊಳ್ಳುವವರು ಸಾರ್ವಜನಿಕ ಸ್ಥಳಗಳು, ಪಾರಂಪರಿಕ ತಾಣಗಳಲ್ಲಿ ಮಾತ್ರ ಪ್ರಕೃತಿಯ ಬಗ್ಗೆ ಮಾತ್ರ ಕನಿಷ್ಠ ಜ್ಞಾನ ಇಲ್ಲದವರಂತೆ ಪ್ರಾಣಿಗಳಿಗಿಂತ ಕೀಳಾಗಿ ವರ್ತಿಸುತ್ತಾರೆ.

Chikkamagaluru Neelakurinji ಬೆಟ್ಟಕ್ಕೆ ನೀಲಿ ರಗ್ಗು, ಅದು ನೀಲಕುರಿಂಜಿ ಹಿಗ್ಗು!

ಎಲ್ಲವನ್ನೂ ನಿಯಂತ್ರಿಸಲು  ಕಾನೂನಿನಿಂದ ಸಾಧ್ಯವಿಲ್ಲ 
ಎಲ್ಲವನ್ನೂ ನಿಯಂತ್ರಿಸಲು, ಬದಲಾಯಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ, ಮನೆಯಂತೆ ದೇಶವೂ ನಮ್ಮದೇ ಎಂಬ ಭಾವನೆ ಇದ್ದಾಗ ಮಾತ್ರ ಜನರಲ್ಲಿ ಬದಲಾವಣೆ ಸಾಧ್ಯ. ಸ್ವಚ್ಛತೆ ಎಂಬುದು ಮನುಷ್ಯನಿಗೆ ಊಟ ನಿದ್ರೆಯಷ್ಟೇ ಬಹುಮುಖ್ಯವಾದದ್ಧು ಎಂಬ ಶಿಕ್ಷಣವನ್ನು ಶಾಲಾ ಹಂತದಿಂದ ಪದವಿಯವರೆಗೂ ಅಳವಡಿಸಿಕೊಂಡಿರುವ ಅನಿವಾರ್ಯತೆ ಇದೆ. ಇಂದು ಬಹಳಷ್ಟು ಜನ ವಿದ್ಯಾವಂತರೇ ಈ ಅನಾಗರಿಕರ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹಾಗಾಗಿ ಕೇವಲ ವಿದ್ಯೆ ಹುದ್ದೆಗಳು ಸಾಮಾಜಿಕ ಜವಾಬ್ದಾರಿ ರೂಪಿಸಲಾರವು. ನೈತಿಕ ಶಿಕ್ಷಣ ಬಹಳ ಮುಖ್ಯವಾದದ್ದಾಗಿದೆ.

Sleeping village: ಈ ಹಳ್ಳಿಯವರು ಕುಂಭಕರ್ಣನಿಗೇ ಸೆಡ್ಡು ಹೊಡೀತಾರೆ; ತಿಂಗಳುಗಟ್ಟೆ ನಿದ್ರಿಸುತ್ತಾರೆ

Follow Us:
Download App:
  • android
  • ios