Asianet Suvarna News Asianet Suvarna News

ಚುಮು-ಚುಮು ಚಳಿಯಲ್ಲಿ ಟ್ರಿಪ್: ಧರೆಗಿಳಿದ ಸ್ವರ್ಗದಂತಿವೆ ಈ ಸುಂದರ ತಾಣಗಳು!

ನಮ್ಮ ದೇಶದಲ್ಲಿ ಚಳಿಗಾಲದಲ್ಲಿ ಭೇಟಿ ನೀಡಬಹುದಾದ ಅನೇಕ ಅದ್ಭುತ ಸ್ಥಳಗಳಿವೆ.  ಚುಮು-ಚುಮು ಚಳಿಯಲ್ಲಿ ಅಲ್ಲಿನ ಸೌಂದರ್ಯ ಸವಿಯುವುದು ಕಣ್ಣಿಗೆ ಹಬ್ಬ. ಚಳಿಗಾಲಕ್ಕೆ ಪ್ರವಾಸ ಹೋಗುವವರು ಒಮ್ಮೆ ಈ ಸ್ಥಳಗಳಿಗೆ ಹೋಗಿ.

Places to visit in India during winter including Gulmargh of Kashmir
Author
First Published Oct 2, 2022, 12:21 PM IST

ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗುವುದು ಒಂಥರಾ ಮಜಾ. ಕಚಗುಳಿ ಇಡುವ ಚಳಿಯಲ್ಲಿ ಸುತ್ತುವುದು ಒಂದು ಅದ್ಭುತ ಅನುಭವ. ಗದಗುಟ್ಟುವ ಚಳಿ, ಹಿಮವಾಗಿ ನಿಂತ ಪ್ರಕೃತಿ, ಹೆಪ್ಪುಗಟ್ಟಿದ ನೀರು ಇವೆಲ್ಲವುಗಳ ಸವಿ ಸವಿಯುವುದು ಕಣ್ಣಿಗೆ ಹಬ್ಬ. ನಮ್ಮ ದೇಶದಲ್ಲಿ ಒಂದೊಂದು ಕಾಲಕ್ಕೆ ಒಂದೊಂದು ಸ್ಥಳಗಳಿಗೆ ಭೇಟಿ ನೀಡಬಹುದಾದ ಪ್ರವಾಸಿ ತಾಣಗಳು ಇವೆ. ಅದೇ ರೀತಿ ಭಾರತದಲ್ಲಿ ಚಳಿಗಾಲದ ಸಮಯದಲ್ಲಿ ಭೇಟಿ ನೀಡಬೇಕಾದ ಹಲವಾರು ಪ್ರವಾಸಿ ತಾಣಗಳಿವೆ. ಈ ವೇಳೆ ಆ ಸ್ಥಳಗಳಲ್ಲಿನ ಹಿಮ, ಮಂಜು, ಮೈಕೊರೆವ ಚಳಿ ವಿಶಿಷ್ಟ ಅನುಭವ ನೀಡುತ್ತವೆ. ಅಂತಹ ಕೆಲ ಸುಂದರ ತಾಣಗಳ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಕಾಶ್ಮೀರದ ಗುಲ್ಮಾರ್ಗ್
ಹಿಮಪಾತವನ್ನು ನೋಡಲು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗುಲ್ಮಾರ್ಗ್ (Gulmarg) ಅತ್ಯುತ್ತಮ ಸ್ಥಳ. ಚಳಿಗಾಲದಲ್ಲಿ ಇಲ್ಲಿನ ಗಿರಿಧಾಮಗಳು ಹಿಮದ ಹೊದಿಕೆಯನ್ನು ಹೊಂದಿರುತ್ತವೆ. ಇಲ್ಲಿ ಕಾಂಚನ ಗಂಗಾ ಪರ್ವತದ ವಿಹಂಗಮ ನೋಟವನ್ನು ಸವಿಸಬಹುದು. ಇಲ್ಲಿನ ಪರ್ವತಗಳು ವರ್ಷಪೂರ್ತಿ ಮಾಂತ್ರಿಕವಾಗಿರುತ್ತವೆ. ಅದರಲ್ಲಿಯೂ ಚಳಿಗಾಲ ಬಂದಾಗ ಅವಗಳ ಆಕರ್ಷಣೆ ಹೆಚ್ಚುತ್ತದೆ. ಹಿಮದಿಂದ ಕೂಡಿದ ಇಲ್ಲಿನ ಭೂದೃಶ್ಯ ಮತ್ತು ಹೆಪ್ಪುಗಟ್ಟಿದ ಸರೋವರಗಳು (Frozen lakes) ನೋಡುಗರನ್ನು ಸೆಳೆಯುತ್ತವೆ.

ಶ್ರೀನಗರದ ದಾಲ್ ಸರೋವರ
ಚಳಿಗಾಲದಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರವಾಸ ಹೋಗುವುದರ ಮಜಾನೇ ಬೇರೆ. 'ಭೂಮಿಯ ಮೇಲಿನ ಸ್ವರ್ಗ' ಎಂಬಂತಿರುವ ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಎರಡು ಕಣ್ಣುಗಳು ಸಾಲದು. ಇಲ್ಲಿನ ಹೌಸ್‌ಬೋಟ್‌ಗಳು ಮತ್ತು ಶಿಕಾರಗಳಿಂದ ಸುತ್ತುವರೆದಿರುವ ಹೊಳೆಯುವ ಸರೋವರಗಳು ಮತ್ತು ವಾಸ್ತುಶಿಲ್ಪವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇನ್ನು ಇಲ್ಲಿನ ದಾಲ್ ಸರೋವರವು (Dal Lake) ನೋಡುಗರನ್ನು ಉಬ್ಬೇರಿಸುವಂತೆ ಮಾಡುತ್ತದೆ. ಅದು ‘ಶ್ರೀನಗರದ ರತ್ನ’ ಎಂದು ಖ್ಯಾತಿ ಪಡೆದಿದ್ದು, ಕಾಶ್ಮೀರದ ಎರಡನೆಯ ದೊಡ್ಡ ಸರೋವರವಾಗಿದೆ. ಇಲ್ಲಿನ ರಮ್ಯವಾದ ನಿಸರ್ಗ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತದೆ. ಇಲ್ಲಿ ದೋಣಿ ಮನೆಗಳ (boat house) ಮೇಲೆ ಕುಳಿತು ನೋಡಬಹುದಾದ ಸೂರ್ಯಾಸ್ತದ ದೃಶ್ಯವು ಬಹಳ ಸುಂದರವಾಗಿರುತ್ತದೆ. ಶಾಂತ ನೀರಿನ ಮೇಲೆ ಮರದ ದೋಣಿಗಳು ಮೊಘಲ್ ಉದ್ಯಾನಗಳ ನೋಟವನ್ನು ನೀಡುತ್ತವೆ. ಯಾವುದೋ ಲೋಕಕ್ಕೆ ಹೋದ ಅನುಭವವನ್ನು ದಾಲ್ ಸರೋವರ ನೀಡುತ್ತದೆ.

ಭಾರತದ ಈ ಪುರಾತನ ನಗರಗಳಲ್ಲಿ ಅಡಗಿದೆ ಅಚ್ಚರಿ

ಹಿಮಾಚಲ ಪ್ರದೇಶದ ಶಿಮ್ಲಾ
ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾವು (Shimla) ಬೆಟ್ಟಗಳ ರಾಣಿ ಎಂದೇ ಜನಪ್ರಿಯವಾಗಿದೆ. ಇಲ್ಲಿನ ಹಿಮದಿಂದ ಆವೃತವಾದ ಪರ್ವತಗಳು, ಬೆರಗುಗೊಳಿಸುವ ಸರೋವರಗಳು ನೋಡುಗರನ್ನು ವಿಸ್ಮಯಗೊಳಿಸುತ್ತವೆ. ಶಿಮ್ಲಾವು ಪ್ರವಾಸಿಗರನ್ನು ಮೋಡಿ ಮಾಡಿ, ನೋಡುಗರಿಗೆ ಅದ್ಭುತವಾದ ಸೊಬಗನ್ನು ನೀಡುವುದರಲ್ಲಿ ಸಂದೇಹವಿಲ್ಲ. ಇಲ್ಲಿನ ಗಿರಿಧಾಮವು (hill station), ಹಿಮದಿಂದ ಆವೃತವಾದ ಹಿಮಾಲಯ ಶ್ರೇಣಿಗಳ ಅದ್ಭುತವಾದ ನೋಟವನ್ನು ನೀಡುತ್ತದೆ. ಶಿಮ್ಲಾದಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳಿದ್ದು, ಹಿಮವನ್ನು ಅನುಭವಿಸಲು ಬಯಸುವವರು ಚಲಿಗಾಲಕ್ಕೆ ಇಲ್ಲಿಗೆ ಭೇಟಿ ನೀಡಬಹುದು.

ರಾಜಸ್ಥಾನದ ಉದಯಪುರ
ರಾಜಸ್ಥಾನದಲ್ಲಿರುವ ಒಂದು ಸುಂದರ ನಗರ ಉದಯಪುರ (Udayapur). ಇದು ದೇಶದ ಅತ್ಯಂತ ಹಳೆಯ ನಗರಗಳಲ್ಲಿ ಒಂದು. ಸುಂದರವಾದ ಸರೋವರಗಳಿಗೆ ಉದಯಪುರವು ಹೆಸರುವಾಸಿಯಾಗಿದ್ದು, ಚಳಿಗಾಲದಲ್ಲಿ ಪ್ರವಾಸ (Winter Travel) ಕೈಗೊಳ್ಳಲು ಉತ್ತಮ ಸ್ಥಳವಾಗಿದೆ. ಉದಯಪುರದ ಕೋಟೆಗಳು ಮತ್ತು ಅರಮನೆಗಳು (Palace) ಅದ್ಭುತವಾದ ರಜಪೂತ ರಾಜಮನೆತನದ ನೋಟವನ್ನು ನೋಡಲು ಬರುವ ಪ್ರವಾಸಿಗರನ್ನು ಸೆಳೆಯುತ್ತವೆ. ಇನ್ನು ಉದಯಪುರ ಸಿಟಿ ಪ್ಯಾಲೇಸ್ (City Palace) ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಈ ಸುಂದರವಾದ ಸ್ಥಳವು ಪಿಚೋಲಾ ಸರೋವರದ ಪಕ್ಕದಲ್ಲಿದ್ದು, ಸುಂದರವಾದ ಕಮಾನಿನ ಬಾಲ್ಕನಿಗಳು ಮತ್ತು ವರಾಂಡಾಗಳ ಮೇಲೆ ನಿಂತು ಅದ್ಭುತ ದೃಶ‌್ಯಗಳನ್ನು ನೋಡಬಹುದು. ಈ ಅಮೃತಶಿಲೆಯ ಕಟ್ಟಡವು ಪಿಚೋಲಾ ಸರೋವರದ ನೀರಿನ ಮೇಲೆ ಹಿತವಾದ ಹೊಳಪನ್ನು ನೀಡುತ್ತದೆ.

ಕರ್ನಾಟಕದ ಗತಕಾಲದ ಈ ಸ್ಥಳಗಳಿಗೆ ಭೇಟಿ ನೀಡಿ, ವಾಸ್ತುಶಿಲ್ಪದ ಮೆರಗು ನೋಡಿ

ಕೇರಳದ ವಯನಾಡ್‌
ವಯನಾಡ್ (Wayanad) ಕೇರಳ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರಕೃತಿ ಮಡಿಲಿನಲ್ಲಿರುವ ವಯನಾಡಿನ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಭಾಗ್ಯ. ಇಲ್ಲಿನ ಪ್ರಕೃತಿ ಸೌಂದರ್ಯ (Beauty of Nature), ಪರ್ವತ ಶ್ರೇಣಿಗಳು, ಜಲಪಾತಗಳು (Water Falls) ಜನರನ್ನು ಆಕರ್ಷಿಸುತ್ತವೆ. ಹಚ್ಚ ಹಸಿರಿನಿಂದ ಕೂಡಿರುವ ವಯನಾಡು ಚಳಿಗಾಲದಲ್ಲಿ ಹೋಗಲು ಸೂಕ್ತ ಸ್ಥಳವಾಗಿದೆ. ಇಲ್ಲಿನ ತಿರುವು ಮುರುವಿನ ಘಾಟಿಯ ರಸ್ತೆಗಳು, ಕಾಫಿ-ಚಹಾದ ಬೆಳೆಗಳು, ತಂಗಾಳಿಯಲ್ಲಿ ತೇಲಿ ಬರುವ ಸುಗಂಧವನ್ನು ವಾವ್ ಎನಿಸುತ್ತದೆ. ಅಭಯಾರಣ್ಯ (Conservative Forest), ಕುರುವ ದ್ವೀಪಗಳು, ಚೆಂಬ್ರಾ ಪಾರ್ಕ್ ಸೇರಿದಂತೆ ಮುಂತಾದ ಸುಂದರ ಸ್ಥಳಗಳನ್ನು ವಯನಾಡ್‌ ಪ್ರವಾಸದಲ್ಲಿ ನೋಡಬಹುದು.

Follow Us:
Download App:
  • android
  • ios