Asianet Suvarna News Asianet Suvarna News

ಭಾರತದ ಈ ಪುರಾತನ ನಗರಗಳಲ್ಲಿ ಅಡಗಿದೆ ಅಚ್ಚರಿ

ನಮ್ಮ ದೇಶ ಪುರಾತನ ನಗರಗಳಿಗೆ ಹೆಸರುವಾಸಿ. ಸಾವಿರ ಸಾವಿರ ವರುಷಗಳ ಹಿಂದೆ ನಿರ್ಮಾಣವಾದ ಈ ನಗರಗಳಿಗೆ ಒಮ್ಮೆಯಾದರು ಭೇಟಿ ನೀಡಬೇಕು.

Famous Ancient Cities in India where you can see surprises
Author
First Published Sep 30, 2022, 3:28 PM IST

ನಮ್ಮ ಭಾರತವು ವಿಶಿಷ್ಟ ಪರಂಪರೆ, ಇತಿಹಾಸ ಹೊಂದಿರುವ ದೇಶ. ಈ ರಾಷ್ಟ್ರದಲ್ಲಿ ಹತ್ತಾರು ಧರ್ಮಗಳು, ಸಾವಿರಾರು ಜಾತಿಗಳು, ಅಸಂಖ್ಯಾತ ಭಾಷೆಗಳಿವೆ. ವಿಭಿನ್ನ ಸಂಸ್ಕೃತಿಯನ್ನು ಒಳಗೊಂಡ ಜನರಿದ್ದಾರೆ. ನಮ್ಮ ದೇಶ ಹಲವಾರು ವೈಶಿಷ್ಟ್ಯಗಳಿಗೆ ಹೆಸರಾಗಿದೆ. ಅವುಗಳಲ್ಲಿ ನಮ್ಮ ದೇಶದಲ್ಲಿ ಅತ್ಯಂತ ಪ್ರಾಚೀನವಾದ ನಗರಗಳು ಅತಿ ಮುಖ್ಯ. ಸಾವಿರಾರು ವರ್ಷಗಳ ಇತಿಹಾಸವಿರುವ ಒಂದೊಂದು ನಗರಗಳು ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಸ್ಥಳ ಪುರಾಣಗಳಿಗೆ ಹೆಚ್ಚಿನ ಜನಪ್ರಿಯತೆ ಪಡೆದಿವೆ. ಇವುಗಳ ವೀಕ್ಷಣೆಗೆ ಪ್ರತಿ ದಿನ ಸಾವಿರಾರು ವಿದೇಶಿಗರು ನಮ್ಮ ದೇಶಕ್ಕೆ ಬರುತ್ತಾರೆ‌. ನಮ್ಮ ದೇಶದ ಪುರಾತನ ನಗರಗಳಿಗೆ ಭೇಟಿ ನೀಡುವುದರಿಂದ ಅಪೂರ್ವವಾದ ಜ್ಞಾನವನ್ನು ಸಂಪಾದಿಸಬಹುದು. ಇತಿಹಾಸದ ಬಗ್ಗೆ ಆಸಕ್ತಿ ಹೊಂದಿದ್ದರೆ ಭಾರತದ ಅತ್ಯಂತ ಹಳೆಯ ನಗರಗಳಿಗೆ ಒಮ್ಮೆ ಭೇಟಿ ನೀಡಬೇಕು. ಇದರಿಂದ ಪುರಾತನ ಇತಿಹಾಸದ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯುತ್ತದೆ. ಅಂತಹ ಆಕರ್ಷಕ ಪ್ರಾಚೀನ ನಗರಗಳ ಪೈಕಿ ಕೆಲವು ನಗರಗಳ ಪರಿಚಯ ಇಲ್ಲಿದೆ.

ಅಯೋಧ್ಯೆ
ಅಯೋಧ್ಯೆಯು ಭಾರತದ ಪ್ರಾಚೀನ ನಗರಗಳಲ್ಲಿ ಒಂದು. ಈ ನಗರವು ಸುಮಾರು 9000 ವರ್ಷಗಳ ಐತೀಹ್ಯವನ್ನು ಹೊಂದಿದೆ. ಅಯೋಧ್ಯೆಯು ಜಗತ್ತಿಗೆ ಮಾನವೀಯತೆ ಸಾರಿದ ಶ್ರೀರಾಮನ (Shri Ram) ಜನ್ಮಭೂಮಿ. ಇದು ಉತ್ತರ ಪ್ರದೇಶದಲ್ಲಿನ ಪೈಜಾಬಾದ್ ಜಿಲ್ಲೆಯ ಸರಯೂ ನದಿ ತೀರದಲ್ಲಿರುವ ಒಂದು ಚಾರಿತ್ರಿಕ ನಗರ. ಹಾಗೂ ಹಿಂದುಗಳ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದು. ಶ್ರೀರಾಮನಿಗೂ ಅಯೋಧ್ಯೆಗೂ (Ayodhya)ಸಾಕಷ್ಟು ಸಂಬಂಧವಿದ್ದು, ರಾವಣನಿಂದ ಸೀತೆಯನ್ನು ರಕ್ಷಿಸಿದ ನಂತರ ಶ್ರೀರಾಮನಿಗೆ ಇದು ರಾಜಧಾನಿಯಾಗಿತ್ತು. ಅಯೋಧ್ಯೆಯಲ್ಲಿ ಹಲವಾರು ಧಾರ್ಮಿಕ ಸ್ಥಳಗಳಿವೆ.

Travel Tips: ಸೋಲೋ ಟ್ರಿಪ್ ಹೋಗಿ, ನಿಮ್ಮನ್ನು ನೀವು ಅರಿಯಿರಿ

ವಾರಣಾಸಿ
ವಾರಣಾಸಿಯು (Varanasi) ಭಾರತದ ಆಧ್ಯಾತ್ಮಿಕ ರಾಜಧಾನಿ ಎಂದು ಪ್ರಖ್ಯಾತಿ ಪಡೆದ ನಗರ. ಇದು ಸಾವಿರಾರು ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದೆ. ಇದು ಹಿಂದೂಗಳ ಪವಿತ್ರ ಧಾರ್ಮಿಕ ತಾಣವಾಗಿದ್ದು, ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಉತ್ತರ ಪ್ರದೇಶದ ಗಂಗಾ ನದಿಯ ದಡದಲ್ಲಿರುವ ಸುಂದರ ನಗರ. ಇಲ್ಲಿ ಸಂಜೆಯ ಗಂಗಾ ಆರತಿ ತುಂಬಾ ಪ್ರಸಿದ್ಧಿ. ಇಲ್ಲಿ ಕಾಶಿ ಶ್ರೀ ವಿಶ್ವನಾಥ (Kashi Vishwantah) ದೇವಾಲಯವಿದ್ದು, ಹಿಂದುಗಳ ಪಾಲಿಗಂತೂ ಜೀವನದಲ್ಲೊಮ್ಮೆಯಾದರೂ ಭೇಟಿ ಮಾಡಲೇಬೇಕಾದ ಪುಣ್ಯ ಕ್ಷೇತ್ರವಾಗಿದೆ ಈ ಕಾಶಿ ಕ್ಷೇತ್ರ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಕಾಶಿ ವಿಶ್ವನಾಥ ಕೂಡ ಒಂದು. ಈ ದೇವಾಲಯವು ಕಳೆದ ಹಲವಾರು ಸಾವಿರ ವರ್ಷಗಳಿಂದ ವಾರಣಾಸಿಯಲ್ಲಿದೆ.

ತಂಜಾವೂರು
ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ತಂಜಾವೂರು (Tanjavoor) ಕೂಡ ಒಂದು. ಇದು ತಮಿಳುನಾಡು ರಾಜ್ಯದಲ್ಲಿದೆ. ಇಲ್ಲಿ ದ್ರಾವಿಡ ಇತಿಹಾಸ ಮತ್ತು ವಾಸ್ತುಶಿಲ್ಪ ನೋಡಗರಿಗೆ ಬೆರಗನ್ನುಂಟುಮಾಡುತ್ತದೆ. ತಂಜಾವೂರಿನಲ್ಲಿರುವ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಶ್ರೀ ಬೃಹದೀಶ್ವರ (Bruhadeshwar Temple) ದೇವಾಲಯವು ಒಂದು. ಇದು ಅತ್ಯಂತ ದೊಡ್ಡ ದೇವಾಲಯವಾಗಿದ್ದು, ಇಲ್ಲಿನ ವಾಸ್ತುಶಿಲ್ಪ ಅಚ್ಚರಿ ಮೂಡಿಸುತ್ತದೆ. ಈ ಅದ್ಭುತವಾದ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಭಾಗವಾಗಿದೆ. ಇನ್ನು ಇಲ್ಲಿ ತಂಜಾವೂರು ಪ್ಯಾಲೆಸ್ ಇದ್ದು,‌ ಅತ್ಯಂತ ಆಕರ್ಷಿಣೀಯ ಐತಿಹಾಸಿಕ ರಚನೆಯಾಗಿದೆ. ಅರಮನೆಯು ಬೃಹತ್‌ ಸಭಾಂಗಣ, ವಿಶಾಲವಾದ ಕಾರಿಡಾರ್‌ಗಳು, ಎತ್ತರದ ಗೋಪುರಗಳು ಒಳಗೊಂಡಿದೆ. ಇಲ್ಲಿ ಅನೇಕ ಸ್ಥಳಗಳಿದ್ದು, ನೋಡಲು ಆಕರ್ಣೀಯವಾಗಿವೆ.

ಕರ್ನಾಟಕದ ಗತಕಾಲದ ಈ ಸ್ಥಳಗಳಿಗೆ ಭೇಟಿ ನೀಡಿ, ವಾಸ್ತುಶಿಲ್ಪದ ಮೆರಗು ನೋಡಿ

ಮಧುರೈ
ಮಧುರೈ ಕೂಡ ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದಾಗಿದೆ. ಇಲ್ಲಿ ಶ್ರೀ ಮೀನಾಕ್ಷಿ ದೇವಿಯ ದೇವಸ್ಥಾನವಿದ್ದು (Meenakshi Temple), ಇದು ಐತಿಹಾಸಿಕ ಹಿಂದೂ ದೇವಾಲಯವಾಗಿದೆ. ಇದು ಬಣ್ಣ ಬಣ್ಣದ ಗೋಪುರಗಳಿಂದ ಭಕ್ತರನ್ನು ಆಕರ್ಷಿಸುವ ದೇಗುಲ. 2500 ವರ್ಷಗಳ ಇತಿಹಾಸ ಹೊಂದಿರುವ ಈ ಪವಿತ್ರ ಕ್ಷೇತ್ರ ಮಧುರೈನ (Madurai) ಹೃದಯ ಭಾಗದಲ್ಲಿದೆ. ಈ ದೇಗುಲದ ಸುತ್ತಲಿನ ಗೋಡೆಗಳು ಹಾಗೂ ರಸ್ತೆಗಳನ್ನು ಏಕ ಕೇಂದ್ರೀಯ ಕೋಟೆಯ ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ರಸ್ತೆಗಳು ತಾವರೆ ಮತ್ತು ಅದರ ದಳದಂತೆ ಹರಡಿಕೊಂಡಿವೆ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಎಲ್ಲಕ್ಕಿಂತಲೂ ವಿಶೇಷ ಅಲ್ಲಿನ ಗೋಪುರಗಳು ಗಮನ ಸೆಳೆಯುತ್ತವೆ.

Follow Us:
Download App:
  • android
  • ios