Asianet Suvarna News Asianet Suvarna News

ಬೆಂಗಳೂರು ಟ್ರಾಫಿಕ್‌ ಕಥೆ-ವ್ಯಥೆ; ಆಟೋಗಾಗಿ 71 ನಿಮಿಷ ಕಾಯುವ ಪೋಸ್ಟ್‌ ವೈರಲ್‌

ಬೆಂಗಳೂರಿನ ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅರ್ಧಗಂಟೆಯ ದಾರಿ ಟ್ರಾಫಿಕ್‌ನಲ್ಲಿ ತಲುಪೋಕೆ ಒಂದು ಗಂಟೆ ಹಿಡಿಯೋದು ಇದೆ. ಹೀಗಿರುವಾಗ ವ್ಯಕ್ತಿಯೊಬ್ಬ ಆಟೋಗಾಗಿ 71 ನಿಮಿಷ ಕಾಯುವ ಟೈಮ್‌ ತೋರಿಸುವ ಪೋಸ್ಟ್ ವೈರಲ್ ಆಗಿದೆ.

Peak Bengaluru, Mans Post On Auto is 71 Minutes Waiting Time Goes Viral Vin
Author
First Published May 17, 2023, 11:49 AM IST

ಬೆಂಗಳೂರು..ಇಲ್ಲಿನ ಸುಂದರವಾದ ವಾತಾವರಣದಿಂದಾಗಿ ಜನರು ಈ ಮಹಾನಗರವನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಬೆಂಗಳೂರು ಕಿಕ್ಕಿರಿದ ಟ್ರಾಫಿಕ್‌ನಿಂದಾಗಿ ಹೆಚ್ಚು ಫೇಮಸ್ ಆಗುತ್ತಿದೆ. ಇಲ್ಲಿನ ಸಂಚಾರ ದಟ್ಟಣೆಯಿಂದಾಗಿಯೇ ಜನರು ಈ ನಗರವನ್ನು ದ್ವೇಷಿಸಲು ತೊಡಗಿದ್ದಾರೆ. ಪೀಕ್ ಅವರ್‌ಗಳಲ್ಲಂತೂ ರಸ್ತೆ ವಾಹನಗಳಿಂದ ಕಿಕ್ಕಿರಿದು ತುಂಬುತ್ತದೆ. ಕ್ಯಾಬ್‌, ಆಟೋ ರಿಕ್ಷಾಗಳು ಸಹ ಲಭ್ಯವಾಗುವುದಿಲ್ಲ. ಇದರಿಂದಾಗಿ ಪ್ರಯಾಣಿಕರು ವಿವಿಧ ಸ್ಥಳಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಉದ್ದೇಶಿತ ಸ್ಥಳಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ತಲುಪಲಾಗಿದೆ ತೊಂದರೆ ಅನುಭವಿಸುತ್ತಾರೆ.

ಇತ್ತೀಚೆಗೆ, ನಗರದ ನಿವಾಸಿಯೊಬ್ಬರು ಟ್ವಿಟರ್‌ನಲ್ಲಿ ಮಾಡಿರುವ ಪೋಸ್ಟ್‌ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ (Traffic problem) ಚಿತ್ರಣವನ್ನು ಮುಂದಿಟ್ಟಿದೆ. ಅನುಶಾಂಕ್ ಜೈನ್ ಎಂಬ ಬಳಕೆದಾರರು (User) ಟ್ವಿಟ್ಟರ್‌ನಲ್ಲಿ ಉಬರ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಿದ ಆಟೋ ರೈಡ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಪೀಕ್ ಅವರ್‌ನಲ್ಲೂ ಬುಕ್‌ ಮಾಡಿದಾಗ ಹೇಗೋ ಆಟೋ ಸಿಕ್ಕಿತು. ಆದರೆ ಆಟೋಗಾಗಿ ಕಾಯಬೇಕಾದ ಸಮಯವನ್ನು ನೋಡಿ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ. ಜೈನ್ ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ, ವ್ಯಕ್ತಿಯ ಪ್ರಯಾಣವನ್ನು (Travel) ಸ್ವೀಕರಿಸಿದ ಆಟೋ 71 ನಿಮಿಷಗಳ ದೂರದಲ್ಲಿದೆ. ಅಂದರೆ ನಿಖರವಾಗಿ 24 ಕಿಮೀ ದೂರದಲ್ಲಿದೆ. 

ಕೊನೆಗೂ ಬೆಂಗಳೂರಲ್ಲಿ ಮನೆ ಸಿಕ್ತು ಎಂದು ಪೋಸ್ಟ್ ಮಾಡಿದ ವ್ಯಕ್ತಿ, ರೂಮಾ, ಜೈಲಾ ಎಂದ ನೆಟ್ಟಿಗರು!

ಉಬರ್‌ನಲ್ಲಿ ಬುಕ್ ಮಾಡಿದ ಆಟೋ ಸ್ಥಳಕ್ಕೆ ತಲುಪಲು ಬರೋಬ್ಬರಿ 71 ನಿಮಿಷ
ನಂಬಲು ಕಷ್ಟವಾದರೂ ಇದು ನಿಜ. ಆಟೋ, ವ್ಯಕ್ತಿ ಬುಕ್ ಮಾಡಿದ ಜಾಗಕ್ಕೆ ತಲುಪಲು ಬರೋಬ್ಬರಿ 71 ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಉಬರ್ ತೋರಿಸಿದೆ. ಆ ಸಮಯದೊಳಗೆ ಒಂದು ಚಲನಚಿತ್ರವನ್ನು ನೋಡಿ ಮುಗಿಸಬಹುದು ಅಥವಾ ದೆಹಲಿಯಿಂದ ಜೈಪುರಕ್ಕೆ ವಿಮಾನದಲ್ಲಿ ಪ್ರಯಾಣಿಸಬಹುದು.  #peakbengaluru ಎಂಬ ಶೀರ್ಷಿಕೆಯಡಿ ಈ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ದೀರ್ಘಾವಧಿಯ ಕಾಯುವಿಕೆ ಬೆಂಗಳೂರಿನ ನಿವಾಸಿಗಳಿಗೆ ಹೊಸತೇನಲ್ಲ. ಆದರೂ ಇಷ್ಟು ಹೊತ್ತು ಕಾಯುವುದು (Waiting) ನಿಜಕ್ಕೂ ಆಘಾತಕಾರಿ ಎಂದು ಹಲವರು ಪೋಸ್ಟ್ ಮಾಡಿದ್ದಾರೆ.

ರೈಡ್ ಬುಕ್ ಮಾಡಿದ ವ್ಯಕ್ತಿ, 'ಆಟೋ ಚಾಲಕ (Auto driver) ಸ್ಥಳಕ್ಕೆ ತಲುಪಿದರೆ ನಿಜವಾಗಿಯೂ ಅವರಿಗೆ ಅಪಾರ ಗೌರವ ಸಲ್ಲುತ್ತದೆ' ಎಂದು ಹೇಳಿದ್ದಾರೆ.  ಎಂದಿನಂತೆ ನೆಟಿಜನ್‌ಗಳು ಈ ಪೋಸ್ಟ್‌ಗೆ ಉತ್ಸಾಹದಿಂದ ಕಾಮೆಂಟ್ ಮಾಡಿದ್ದಾರೆ. ಕೆಲವರು 'ನೀವು ಅದೃಷ್ಟವಂತರು, ಕಳೆದ ವಾರದಿಂದ ಬೆಂಗಳೂರಿನಲ್ಲಿ ಒಂದೇ ಒಂದು #uberauto ಅನ್ನು ಸಹ ಬುಕ್ ಮಾಡಲು ನನಗೆ ಸಾಧ್ಯವಾಗಲಿಲ್ಲ' ಎಂದು ಬರೆದಿದ್ದಾರೆ. ಇನ್ನೊಬ್ಬರು 'ಆಟೋಗಾಗಿ ಇಷ್ಟು ಹೊತ್ತು ಕಾಯುವುದು ನಿಜಕ್ಕೂ ಶೋಚನೀಯ' ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಪೀಕ್ ಅವರ್‌ಗಳಲ್ಲಿ ಓಲಾ, ಊಬರ್‌ಗಳ ಚಾಲಕರು ರೈಡ್ ರದ್ದುಗೊಳಿಸುವುದು ಸಾಮಾನ್ಯ' ಎಂದಿದ್ದಾರೆ.

ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆಯೋಕು ಡಿಸ್ಟಿಂಕ್ಷನ್ ತಗೋಬೇಕಾ? ಮಾರ್ಕ್ಸ್ ನೋಡಿ ಮನೆ ಕೊಡಲ್ಲ ಎಂದ ಓನರ್

ಪೀಕ್‌ ಬೆಂಗಳೂರು, ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್‌
ಇದರ ನಡುವೆಯೇ ಮತ್ತೊಬ್ಬ ವ್ಯಕ್ತಿ ಟ್ವೀಟ್‌ ಮಾಡಿದ್ದು, ಬೆಂಗಳೂರಿನಲ್ಲಿ ಯಾವಾಗಲೂ ಟ್ರಾಫಿಕ್‌ ಸಮಸ್ಯೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತಿದ್ದಿಲ್ಲ. ಆದರೆ, ಇವತ್ತು ನಾನು ಕೂಡ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೇನೆ. ಟ್ರಾಫಿಕ್‌ ಅನ್ನು ತಪ್ಪಿಸಲು ನೀವು ಬೇಗ ಮನೆ ಬಿಡಿ ಎಂಬ ನನ್ನ ವಾದವನ್ನು ಇಲ್ಲಿನ ಸಂಚಾರ ದಟ್ಟಣೆ ತಳ್ಳಿಹಾಕಿದೆ. ಮನೆಯಿಂದ ಬೆಳಗ್ಗೆ 7:40ಕ್ಕೆ ಬಿಟ್ಟಿದ್ದೀನಿ. ಆದರೆ, 6 ಕಿಮೀ ಪ್ರಯಾಣಕ್ಕಾಗಿ ಇನ್ನೂ ರಸ್ತೆಯಲ್ಲಿಯೇ ಇದ್ದೇನೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಡಚ್ ಲೊಕೇಶನ್ ಟೆಕ್ನಾಲಜಿ ಪರಿಣಿತ ಕಂಪನಿ ಟಾಮ್‌ ಟಾಮ್ ಪ್ರಕಟಿಸಿದ ಟ್ರಾಫಿಕ್ ಇಂಡೆಕ್ಸ್‌ 2022ರ ಪ್ರಕಾರ, ಬೆಂಗಳೂರು ಸಿಟಿ, ವಿಶ್ವದ ಎರಡನೇ ಅತಿ ಹೆಚ್ಚಿನ ಜನದಟ್ಟಣೆಯ ಪ್ರದೇಶವಾಗಿದೆ. ಬೆಂಗಳೂರಿನಲ್ಲಿ 10 ಕಿಮೀ ಕ್ರಮಿಸಲು ಪ್ರಯಾಣಿಕರಿಗೆ ಸರಾಸರಿ 29 ನಿಮಿಷ 10 ಸೆಕೆಂಡುಗಳ ಅಗತ್ಯ ಇದೆ ಎಂದು ವರದಿ ತೋರಿಸಿದೆ. ಅದಲ್ಲದೇ, ಬೆಂಗಳೂರು ಸಿಟಿ ಸೆಂಟರ್‌ನಲ್ಲಿ ಪೀಕ್‌ ಅವರ್‌ ಸಮಯದಲ್ಲಿ ಇಲ್ಲಿನ ಸರಾಸರಿ ವೇಗ ಗಂಟೆಗೆ 18 ಕಿಮೀಯಾಗಿದೆ.

Follow Us:
Download App:
  • android
  • ios